Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿತ್ತಾ ನಕ್ಷತ್ರಕ್ಕೆ ಮಂಗಳನ ಸಂಚಾರ: ಸೆ.3ರಿಂದ ಇವರಿಗೆ ಎರಡು ಪಟ್ಟು ಲಾಭದಾಯಕ ದಿನಗಳಿವೆ!
ಜ್ಯೋತಿಷ್ಯದಲ್ಲಿ ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳವು ಧೈರ್ಯ, ಶೌರ್ಯ, ಶಕ್ತಿ ಮತ್ತು ಧೈರ್ಯದ ಅಂಶವಾಗಿದೆ. ಅಂತಹ ಮಂಗಳವು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ. ಗ್ರಹಗಳಲ್ಲಿ ಮಂಗಳವು ಒಂದೇ ರಾಶಿಯಲ್ಲಿ 45 ದಿನಗಳ ಕಾಲ ಪ್ರಯಾಣ ಮಾಡುತ್ತಾನೆ. ಇದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ಆಗಾಗ ತನ್ನ ನಕ್ಷತ್ರದಲ್ಲೂ ಬದಲಾವಣೆ ಮಾಡುವುದು ನೋಡಬಹುದು.
ಮಂಗಳನ ಸ್ಥಾನದಲ್ಲಿ ಬದಲಾವಣೆಯಾದಾಗ ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಎಲ್ಲರ ಜೀವನದಲ್ಲೂ ಅದರ ಪ್ರಭಾವ ನೋಡಬಹುದು. ಸದ್ಯ ಈಗ ಮಂಗಳನು ಕನ್ಯಾ ರಾಶಿಯಲ್ಲಿ ಚಲಿಸುತ್ತಿದ್ದು ಸೆಪ್ಟೆಂಬರ್ 3ರಂದು ಆತ ತನ್ನ ನಕ್ಷತ್ರ ಬದಲಾಯಿಸುತ್ತಿದ್ದಾನೆ.

ಸೆಪ್ಟೆಂಬರ್ 3ರಂದು ಮಂಗಳನು ಚಿತ್ತಾ ನಕ್ಷತ್ರದಲ್ಲಿ ಚಲಿಸಲಿದ್ದಾನೆ. ಈ ಚಿತ್ರಾ ನಕ್ಷತ್ರವು ಜ್ಯೋತಿಷ್ಯದಲ್ಲಿ 14ನೇ ನಕ್ಷತ್ರವಾಗಿದೆ. ಕನ್ಯಾ ಹಾಗೂ ತುಲಾ ರಾಶಿಯ ನಡುವಿನಲ್ಲಿ ಬರುವ ಇದರಲ್ಲಿ ಈಗ ಮಂಗಳನ ಸಂಚಾರವಾಗುವುದು ನೋಡಬಹುದು. ಮಂಗಳನು ಸೆಪ್ಟೆಂಬರ್ 23ರ ವರೆಗೂ ಇದೇ ನಕ್ಷತ್ರದಲ್ಲಿ ಚಲಿಸುವುದು ನೋಡಬಹುದು.
ಹಾಗಾದ್ರೆ ಮಂಗಳನ ಈ ನಕ್ಷತ್ರ ಬದಲಾವಣೆಯಿಂದಾಗಿ ಯಾರಿಗೆಲ್ಲಾ ಶುಭಕರವಾಗುತ್ತಿದೆ. ಇದರಿಂದ ಯಾರಿಗೆಲ್ಲಾ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಯಾವ ಮೂರು ರಾಶಿಯವರು ಈ ಚಲನೆಯಿಂದ ಲಾಭ ಪಡೆದುಕೊಳ್ಳುತ್ತಾರೆ ಎಂಬುದನ್ನು ಇಲ್ಲಿ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಮಂಗಳನ ಸಂಚಾರವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ತರುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಪುಗಳು ಅನುಕೂಲಕರವಾಗಿರುತ್ತವೆ. ನಿಮ್ಮ ಹಲವು ಆರ್ಥಿಕ ಸಮಸ್ಯೆಗೆ ಸಂಬಂಧಿಸಿದ ವಿಚಾರವಾಗಿ ಲಾಭದಾಯಕ ದಿನಗಳಿವೆ. ಹೊಸ ಜವಾಬ್ದಾರಿಗಳು ನಿಮಗೆ ಸಿಗಬಹುದು, ಹಾಗೆ ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸಿನ ದಾರಿ ಸಿಗಲಿದೆ. ಆಪ್ತರೊಬ್ಬರು ನಿಮಗೆ ಹಣ ನೀಡುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಮರಳಿ ಪಡೆಯುವ ಸಾಧ್ಯತೆ ಹೆಚ್ಚಾಗಿರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಮಂಗಳ ಗ್ರಹದ ನಕ್ಷತ್ರ ಬದಲಾವಣೆಯು ಹಲವು ರೀತಿಯಲ್ಲಿ ಶುಭ ಫಲ ನೀಡಲಿದೆ. ನಿಮ್ಮ ವೃತ್ತಿ ಸಂಬಂಧಿತ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಇರಲಿದೆ. ಹಾಗೆ ಅನಿರೀಕ್ಷಿತ ಫಲಗಳು ಹೆಚ್ಚಾಗುವ ನಿರೀಕ್ಷೆ ಇದೆ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಉತ್ತಮ ಉದ್ಯೋಗವು ಹುಡುಕಿ ಬರಬಹುದು. ಸ್ವಂತ ಉದ್ಯಮದಲ್ಲಿವವರು, ಸಣ್ಣ ಪುಟ್ಟ ವ್ಯಾಪಾರಿ ವಲಯವು ಚೇತರಿಸಿಕೊಳ್ಳುವುದು ನೋಡಬಹುದು. ದೀರ್ಘಕಾಲದ ಅನಾರೋಗ್ಯದಿಂದ ನೀವು ಮುಕ್ತಿ ಪಡೆಯಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಬಹುದು. ಬಹುದಿನದ ಬಯಕೆಯೊಂದನ್ನು ನೀವು ಈಡೇರಿಸಿಕೊಳ್ಳಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಂಗಳನ ನಕ್ಷತ್ರ ಬದಲಾವಣೆಯು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗಬಹುದು. ಕುಟುಂಬ ಜೀವದಲ್ಲಿ ಸಂತೋಷಕ್ಕೆ ಕಾರಣವಾಗುವ ಅಂಶಗಳ ನೋಡಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳು ಲಾಭ ಮಾಡುವ ಸಮಯ, ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭಕರ. ವಾಹನ ಖರೀದಿಯ ಲಾಭವಿದೆ. ಕುಟುಂಬಸ್ಥರೊಂದಿಗಿನ ವ್ಯವಹಾರದಲ್ಲಿ ಶುಭವಿದೆ. ದಾಂಪತ್ಯದಲ್ಲಿನ ಸಮಸ್ಯೆಗಳು ನಿವಾರಣೆಗೆ ಅವಕಾಶ ಪಡೆಯಲಿದ್ದೀರಿ. ನಿಮ್ಮ ವ್ಯವಹಾರ ಸಂಬಂಧಿ ವಿಚಾರದಲ್ಲಿ ಲಾಭಕರ ದಿನಗಳಿವೆ. ದುಂದು ವೆಚ್ಚಗಳಿಗೆ ಕಡಿವಾಣ ಬೀಳಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications










