Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
10 ವರ್ಷಗಳ ಬಳಿಕ ಶನಿ ನಕ್ಷತ್ರಕ್ಕೆ ಮಂಗಳ ಸಂಚಾರ: 3 ರಾಶಿಯವರ ಕಷ್ಟಗಳಿಗೆ ಗುಡ್‌ಬೈ!
ಜ್ಯೋತಿಷ್ಯದ ಪ್ರಕಾರ 9 ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಗಳ ಬದಲಾಯಿಸುವುದು ನೋಡಬಹುದು. ಹಾಗೆ ಗ್ರಹಗಳು ಆಗಾಗ ನಕ್ಷತ್ರಗಳನ್ನು ಕೂಡ ಬದಲಾಯಿಸುತ್ತವೆ. ಈ ರೀತಿ ಅಪರೂಪವಾಗಿ ಗ್ರಹಗಳು ನಕ್ಷತ್ರಗಳ ಬದಲಾಯಿಸಿದಾಗ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಸದ್ಯ ಗ್ರಹಗಳು ಅಪರೂಪಕ್ಕೆ ನಕ್ಷತ್ರಗಳ ಬದಲಾಯಿಸಲಿವೆ.
ಈಗ ಗ್ರಹಗಳಲ್ಲಿ ಬಹಳ ಪ್ರಮುಖ ಎಂದು ಪರಿಗಣಿಸಲಾದ ಮಂಗಳ ಗ್ರಹವು ತನ್ನ ನಕ್ಷತ್ರ ಬದಲಾಯಿಸಲಿದೆ. ಶನಿ ಅಧಿಪತ್ಯ ಇರುವ ಅನುರಾಧ ನಕ್ಷತ್ರಕ್ಕೆ ಮಂಗಳನು ಸಂಚರಿಸಲಿದ್ದಾನೆ. ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಆಗಿರುವ ಮಂಗಳನು ಒಂದೇ ರಾಶಿಯಲ್ಲಿ 45 ದಿನ ಪ್ರಯಾಣಿಸುತ್ತಾನೆ. ಹಾಗೆ ಒಂದು ನಕ್ಷತ್ರದಲ್ಲಿ 20 ದಿನ ಸಂಚರಿಸುತ್ತಾನೆ.

ಮಂಗಳನು ಒಂದೇ ರಾಶಿಯಲ್ಲಿ ಎರಡು ನಕ್ಷತ್ರ ಬದಲಾಯಿಸುತ್ತಾನೆ. ಈಗ ಶನಿಯ ಆಡಳಿತ ಇರುವ ಅನುರಾಧ ನಕ್ಷತ್ರಕ್ಕೆ ಮಂಗಳನು ಸಂಚರಿಸಲಿದ್ದಾನೆ. ಇದರಿಂದ ಮಂಗಳನು ಶನಿಯ ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಈ ಮಂಗಳನ ಚಲನೆ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಸಾಮಾನ್ಯವಾಗಿ ಮಂಗಳನು ಅದೃಷ್ಟ, ಸಂಪತ್ತು, ಕುಟುಂಬ, ಆಸ್ತಿ ವಿಚಾರವಾಗಿ ಶುಭವನ್ನು ತರುವ ಗ್ರಹ ಎಂದು ಪರಿಗಣಿಸಲಾಗಿದೆ. ಈಗ ತನ್ನ ನಕ್ಷತ್ರ ಬದಲಾವಣೆಯ ಕಾರಣದಿಂದಾಗಿ ಹಲವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಮಂಗಳನ ಈ ಸಂಚಾರದಿಂದ ಯಾವೆಲ್ಲಾ ರಾಶಿಯವರು ಅದೃಷ್ಟವಂತರು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಲಾ ರಾಶಿ
ಮಂಗಳ ಗ್ರಹದ ಸಂಚಾರವು ತುಲಾ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭವನ್ನು ತರುತ್ತದೆ. ನಿಮ್ಮೆಲ್ಲಾ ಆಸ್ತಿ ಸಂಬಂಧಿತ ವಿಚಾರಗಳು ಸುಗಮವಾಗಲಿವೆ. ಅದ್ರಲ್ಲೂ ಬಹಳ ಸಮಯದಿಂದ ನಿಮ್ಮ ಪಿತ್ರಾರ್ಜಿತ ಆಸ್ತಿ ಕುರಿತಾದ ವಿಚಾರ ಹಾಗೆ ಜಮೀನು ವಿಚಾದಗಳು ನಡೆಯುತ್ತಿದ್ದರೆ ಧನಾತ್ಮಕ ಬದಲಾವಣೆಗಳ ನೋಡಬಹುದು. ಮನೆ ಕುರಿತಾದ ದೀರ್ಘಕಾಲದ ಪರಿಶ್ರಮಗಳಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು. ಜೀವನದಲ್ಲಿ ನೀವು ಉತ್ತಮ ಪ್ರಗತಿಯನ್ನು ನೋಡುತ್ತೀರಿ. ನಿಮ್ಮ ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ದಾಂಪತ್ಯದಲ್ಲಿ ಸುಖವಿದೆ.
ಮಕರ ರಾಶಿ
ಮಂಗಳ ಗ್ರಹದ ಸಂಚಾರವು ಮಕರ ರಾಶಿಯವರಿಗೆ ಹೊಸ ರೀತಿಯ ಲಾಭಗಳ ತರಲಿದೆ. ಮನೆ ನಿರ್ಮಾಣ, ನವೀಕರಣದಂತಹ ವಿಚಾರಕ್ಕೆ ಕೈ ಹಾಕಿರುವ ಮಂದಿಗೆ ಅತ್ಯಂತ ಶುಭವಿದೆ. ಹೊಸ ವಾಹನ ಖರೀದಿ, ಚಿನ್ನ ಬೆಳ್ಳಿ ಖರೀದಿಯಂತಹ ವಿಚಾರದಲ್ಲೂ ಲಾಭವಿದೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿನ ಸ್ಥಿತಿಯಲ್ಲಿ ಸುಧಾರಣೆ ಇದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಮಂಗಳನ ಆಶೀರ್ವಾದದಿಂದಾಗಿ ಬಯಸಿದ ಕೆಲಸ ಪಡೆಯಬಹುದು. ಆಸ್ತಿ ವಿಚಾರವಾಗಿ ನಿಮ್ಮ ನಿರ್ಧಾರಗಳು ಉತ್ತಮ ಫಲಿತಾಂಶ ತರಲಿದೆ.
ಮಿಥುನ ರಾಶಿ
ಮಂಗಳ ಗ್ರಹವು ಅನುರಾಧ ನಕ್ಷತ್ರಕ್ಕೆ ಚಲಿಸುವ ಕಾರಣದಿಂದ ಮಿಥುನ ರಾಶಿಯ ಜನರಿಗೆ ಉತ್ತಮ ಲಾಭದಾಯಕವಾಗಲಿದೆ. ಉತ್ತಮ ವೇತನದ ಉದ್ಯೋಗ ಸಿಗುವಂತಹ ಸಾಧ್ಯತೆ ಅಧಿಕವಾಗಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಪ್ರೀತಿಪಾತ್ರರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಇದು ವೃತ್ತಿಪರವಾಗಿ ಅದ್ಭುತವಾಗಿರುತ್ತದೆ. ಅವಿವಾಹಿತರಲ್ಲಿ ವಿವಾಹ ಸಂಬಂಧವಾಗಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ. ಸರ್ಕಾರಿ ದಾಖಲೆಗಳ ಸಂಬಂಧವಾಗಿ ಓಡಾಡುತ್ತಿದ್ದರೆ ಶುಭ ಗಳಿಗೆಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











