Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ರಾಶಿಯಲ್ಲಿ ಮಂಗಳನ ಸಂಚಾರ: ಇನ್ನು 43 ದಿನಗಳವರೆಗೆ ಈ 4 ರಾಶಿಯವರಿಗೆ ಸಮಯ ತುಂಬಾನೇ ಮಂಗಳಕರ
ಮಂಗಳ ಈಗ ಮಕರ ರಾಶಿಯಲ್ಲಿದೆ, ಫೆಬ್ರವರಿ 5ಕ್ಕೆ ಮಕರ ರಾಶಿಗೆ ಸಂಚರಿಸಿದ ಮಂಗಳ ಮಾರ್ಚ್ 15ರವರೆಗೆ ಇರಲಿದೆ, ಈ ಮಂಗಳ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಿದ್ದು ಈ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ:

ಮೇಷ ರಾಶಿ
ಮಂಗಳ ಮಕರ ರಾಶಿಗೆ ಸಂಚರಿಸಿದೆ. ಮಾರ್ಚ್ 15ರವರೆಗೆ ಮಕರ ರಾಶಿಯಲ್ಲಿ ಇರುವಾಗ ಮೇಷ ರಾಶಿಯವರಿಗೆ ಮಂಗಳಕರ ಸಮಯ. ಈ ಅವಧಿಯಲ್ಲಿ ನೀವು ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಶೀಘ್ರವೇ ಶುಭ ಸುದ್ದಿ ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರಬಹುದು, ಈ ಅವಧಿಯಲ್ಲಿ ನಿಮ್ಮ ಅಪೂರ್ಣವಾಗಿದ್ದ ಕೆಲಸ ಪೂರ್ಣವಾಗಲಿದೆ, ನೀವು ಯಾವುದೇ ರೀತಿಯ ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಆ ದೃಷ್ಟಿಯಿಂದಲೂ ಸಹ ಗ್ರಹಗಳ ಸ್ಥಾನಗಳು ಅನುಕೂಲಕರವಾಗಿರುತ್ತದೆ.
ಕರ್ಕ ರಾಶಿ
ಮಂಗಳ ಮಕರ ರಾಶಿ ಇರುವುದರಿಂದ ಕರ್ಕ ರಾಶಿಯವರಿಗೂ ಈ ಅವಧಿ ಮಂಗಳಕರವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯಿಂದ ಉಡುಗೊರೆಯನ್ನು ಪಡೆಯಬಹುದು. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಿಗಳು ಈ ಅವಧಿಯಲ್ಲಿ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರಲಿದೆ. ಈ ಸಂಚಾರ ಅವಧಿಯು ಕೆಲಸ ಮತ್ತು ವ್ಯವಹಾರದ ದೃಷ್ಟಿಯಿಂದ ಉತ್ತಮವಾಗಿರುತ್ತದೆ, ನೀವು ಯಾವುದೇ ರೀತಿಯ ಸರ್ಕಾರಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಥವಾ ಆಡಳಿತಾತ್ಮಕ ಇಲಾಖೆಗಳಲ್ಲಿ ಕೆಲಸ ಪಡೆಯಲು ಪ್ರಯತ್ನಿಸುತ್ತಿದ್ದರೆ, ಅವಕಾಶವು ಉತ್ತಮವಾಗಿರುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಮಕರ ರಾಶಿಯಲ್ಲಿ ಮಂಗಳದ ಸಂಕ್ರಮಣವು ಉತ್ತಮವೆಂದು ಪರಿಗಣಿಸಲಾಗಿದೆ. ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಯಾವುದೇ ರೀತಿಯ ಸರ್ಕಾರಿ ಟೆಂಡರ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಆ ದೃಷ್ಟಿಯಿಂದಲೂ ಗ್ರಹಗಳ ಸ್ಥಾನಗಳು ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಟ್ಟುಕೊಂಡು ಮುನ್ನಡೆದರೆ ನೀವು ಹೆಚ್ಚು ಯಶಸ್ವಿಯಾಗುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಮಂಗಳನ ರಾಶಿಯ ಬದಲಾವಣೆಯು ರಾಜಕಾರಣಿಗಳಿಗೆ ತುಂಬಾ ಒಳ್ಳೆಯದು, ನಿಮ್ಮ ಗೌರವ ಹೆಚ್ಚಾಗುವುದು. ಧಾರ್ಮಿಕ ಪ್ರಯಾಣದ ಸಾಧ್ಯತೆಗಳಿವೆ, ವ್ಯಾಪಾರ ಮಾಡುವವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. . ಕೆಲಸದ ವ್ಯಾಪ್ತಿ ವಿಸ್ತರಿಸುತ್ತದೆ, ತೆಗೆದುಕೊಂಡ ನಿರ್ಧಾರಗಳು ಮತ್ತು ಮಾಡಿದ ಕೆಲಸವು ಮೆಚ್ಚುಗೆ ಪಡೆಯುತ್ತದೆ. ಮದುವೆಗೆ ಸಂಬಂಧಿಸಿದ ಮಾತುಕತೆಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳ ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದ ಅದೇ ಜನರು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications