Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷ ರಾಶಿಗೆ ಮಂಗಳ ಸಂಚಾರ: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಜೂನ್ ತಿಂಗಳ ಮೊದಲ ದಿನದಂದು ಮಂಗಳ ಮೇಷ ರಾಶಿಗೆ ಸಂಚರಿಸಿದೆ. ಈ ಮಂಗಳ ಸಂಚಾರವು ಕೆಲವು ರಾಶಿಗಳಿಗೆ ತುಂಬಾನೇ ಅದೃಷ್ಟಕರ, ಇನ್ನು ಕೆಲವರು ಕುಟುಂಬ, ಆರೋಗ್ಯ ಈ ರೀತಿ ಜಾಗ್ರತೆವಹಿಸಿ:

ಮೇಷ ರಾಶಿ
ಮಂಗಳ ಗ್ರಹದ ಈ ಸಂಚಾರ ಮೇಷ ರಾಶಿಯವರಿಗೆ ಈ ರಾಶಿಯವರಿಗೆ ವರದಾನವಾಗಿದೆ, ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಸಿಗಲಿದೆ, ನೀವು ಸೋಮಾರಿತನ ದೂರವಿಟ್ಟು ಕೆಲಸ ಮಾಡಿದರೆ, ನೀವು ಹೆಚ್ಚು ಯಶಸ್ವಿಯಾಗುತ್ತೀರಿ.
ವೃಷಭ ರಾಶಿ
ಈ ಮಂಗಳ ಸಂಚಾರ ವೃಷಭ ರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶ ನೀಡುತ್ತದೆ. ವಿದೇಶ ಪ್ರವಾಸದ ಲಾಭವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಯಾರಿಗೂ ಹೆಚ್ಚು ಸಾಲ ನೀಡಬೇಡಿ, ಇಲ್ಲದಿದ್ದರೆ ಹಣವನ್ನು ಸಮಯಕ್ಕೆ ಪಡೆಯಲು ಸಾಧ್ಯವಾಗಲ್ಲ.
ಮಿಥುನ ರಾಶಿ
ವೃತ್ತಿ ಬದುಕಿಗೆ ಅನುಕೂಲಕರ, ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧವೂ ಗಟ್ಟಿಯಾಗುತ್ತದೆ. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗುವುದು. ನವ ದಂಪತಿಗಳಿಗೆ ಮಗುವಿನ ಆಗಮನದ ಶುಭ ಸುದ್ದಿ ಪಡೆಯಬಹುದು.
ಕರ್ಕ ರಾಶಿ
ಮಂಗಳ ಈ ಸಂಚಾರದ ಸಮಯದಲ್ಲಿ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸಕ್ಕೆ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಭೂಮಿ ಮತ್ತು ಆಸ್ತಿ ವಿಚಾರಗಳು ಬಗೆಹರಿಯಲಿವೆ. ನೀವು ಮನೆ ಅಥವಾ ವಾಹನವನ್ನು ಸಹ ಖರೀದಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗಲಿದೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ, ಆದರೆ ನೀವು ಅತಿಯಾದ ಖರ್ಚು ಮಾಡಬೇಡಿ. ನಿಮ್ಮ ತಂತ್ರಗಳು ಮತ್ತು ಯೋಜನೆಗಳನ್ನು ಗೌಪ್ಯವಾಗಿಟ್ಟುಕೊಂಡು ಕೆಲಸ ಮಾಡಿದರೆ ನೀವು ಹೆಚ್ಚು ಯಶಸ್ವಿಯಾಗುತ್ತೀರಿ. ರಾಜಕಾರಣಿಗಳಿಗೆ ಈ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಮಂಗಳ ಮೇಷ ರಾಶಿಗೆ ಸಂಚರಿಸಿದಾಗ ವೃತ್ತಿ ಬದುಕಿನಲ್ಲಿ ಅನೇಕ ಏರಿಳಿತಗಳು ಮತ್ತು ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯನ್ನು ನೀವು ಧೈರ್ಯದಿಂದ ಎದುರಿಸಬೇಕು. ಕಾನೂನು ಸಂಬಂಧಿತ ವಿಷಯಗಳನ್ನು ನ್ಯಾಯಾಲಯದ ಹೊರಗೆ ಪರಿಹರಿಸಿದರೆ ಒಳ್ಳೆಯದು.
ತುಲಾ ರಾಶಿ
ಈ ಮಂಗಳ ಸಂಚಾರ ತುಲಾ ರಾಶಿಯವರಿಗೆ ಎಲ್ಲಾ ರೀತಿಯಲ್ಲೂ ಲಾಭದಾಯಕವಾಗಿರುತ್ತದೆ, ನೀವು ಉದ್ಯೋಗದಲ್ಲಿ ಬದಲಾವಣೆಗೆ ಪ್ರಯತ್ನಿಸಲು ಬಯಸಿದರೆ, ಈ ಸಮಯ ಉತ್ತಮವಾಗಿರುತ್ತದೆ. ವೈವಾಹಿಕ ಮಾತುಕತೆ ಯಶಸ್ವಿಯಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯುತ್ತದೆ.
ವೃಶ್ಚಿಕ ರಾಶಿ
ಈ ಮಂಗಳ ಸಂಚಾರ ನಿಮಗೆ ತುಂಬಾನೇ ಅದೃಷ್ಟಕರವಾಗಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ. ನ್ಯಾಯಾಲಯದ ಪ್ರಕರಣಗಳಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ. ಈ ಸಮಯದಲ್ಲಿ ಯಾರಿಗೂ ಹಣ ಸಾಲ ನೀಡಲು ಹೋಗಬೇಡಿ.
ಧನು ರಾಶಿ
ಧನು ರಾಶಿಯವರಿಗೆ ಮಂಗಳನ ಪ್ರಭಾವವು ಅತ್ಯುತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ, ಅವಕಾಶ ಉತ್ತಮವಾಗಿದೆ, ನೀವು ಪ್ರಯತ್ನಿಸಬಹುದು. ನವ ವಿವಾಹಿತರು ಮಗುವಿನ ಆಗಮನದ ಖುಷಿಯನ್ನು ಪಡೆಯುತ್ತೀರಿ, ಪ್ರೇಮಿಗಳು ತಮ್ಮ ಸಂಗಾತಿಯ ಬಾವನೆ ಗೌರವಿಸಬೇಕು.
ಮಕರ ರಾಶಿ
ಈ ಸಂಚಾರ ನಿಮಗೆ ಮಿಶ್ರಫಲಿತಾಂಶ ನೀಡಲಿದೆ. ಈ ಅವಧಿಯಲ್ಲಿ ಹೆತ್ತವರ ಆರೋಗ್ಯದ ಬಗ್ಗೆ ಯೋಚಿಸಬೇಕು. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಆ ದೃಷ್ಟಿಯಿಂದ ಗ್ರಹಗಳ ಸಂಚಾರವು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ.
ಕುಂಭ ರಾಶಿ
ರಾಶಿಈ ಸಮಯದಲ್ಲಿ ನಿಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತೀರಿ. ಕುಟುಂಬದಲ್ಲಿ ಹೊಸ ಅತಿಥಿಯ ಆಗಮನದಿಂದ ವಾತಾವರಣವು ಆಹ್ಲಾದಕರವಾಗಿರುತ್ತದೆ. ರ ಹಣಕಾಸಿನ ವಂಚನೆಗೆ ಬಲಿಯಾಗದಂತೆ ಜಾಗ್ರತೆವಹಿಸಿ.
ಮೀನ ರಾಶಿ
ಎರಡನೇ ಧನಾತ್ಮಕ ಮನೆಯಲ್ಲಿ ಮಂಗಳ ಸಂಚಾರದ ಪರಿಣಾಮವು ಮಿಶ್ರ ಫಲಿತಾಂಶ ನೀಡಲಿದೆ. ಅದರಲ್ಲೂ ಕಣ್ಣು, ಕಿವಿ, ಮೂಗಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ಪಿತೂರಿಗೆ ಬಲಿಯಾಗುವುದನ್ನು ತಪ್ಪಿಸಿ. ಹಳೆಯ ಆಸ್ತಿ ಸಂಬಂಧಿತ ವಿವಾದ ಬಗೆಹರಿಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications