Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಂಹ ರಾಶಿಯಿಂದ ಕನ್ಯಾಗೆ ಮಂಗಳ ಸಂಚಾರ: 45 ದಿನಗಳ ಕಾಲ ಅದೃಷ್ಟದ ಸಮಯ
ಒಂಬತ್ತು ಗ್ರಹಗಳಲ್ಲಿ ಎಲ್ಲಾ ಗ್ರಹಗಳನ್ನು ಕೂಡ ನಾವು ಮುಖ್ಯ ಎಂದು ಭಾವಿಸುತ್ತೇವೆ. ಪ್ರತಿಯೊಂದು ಗ್ರಹಗಳು ನಿರ್ಧಿಷ್ಟ ಸಮಯದಲ್ಲಿ ತಮ್ಮ ಸ್ಥಾನ ಬದಲಾಯಿಸುವುದು ಹಲವು ರೀತಿಯ ಲಾಭಗಳ ನೋಡಲು ಕಾರಣವಾಗುತ್ತದೆ. ಹಾಗೆ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಸಹ ನಾವು ನೋಡಬಹುದು. ಇನ್ನು ನಿಮ್ಮ ರಾಶಿಯಲ್ಲಿನ ಬದಲಾವಣೆಯು ಹಲವು ರೀತಿಯಲ್ಲಿ ನಿಮಗೆ ಶುಭ ಹಾಗೂ ಆಶುಭ ಕಾರಕಗಳ ತರಲಿದೆ ಎಂಬುದನ್ನು ಸಹ ನೀವು ತಿಳಿದಿದ್ದೀರಿ.
ಇನ್ನು ಜುಲೈನಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಯನ್ನು ನಾವು ಗಮನಿಸಬಹುದು. ಅದ್ರಲ್ಲಿ ಮುಖ್ಯವಾಗಿ ಮಂಗಳ ಗ್ರಹದ ಚಲನೆ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಮಂಗಳನ ಆಶೀರ್ವಾದ ಪಡೆಯುವ ರಾಶಿ ಚಕ್ರದ ಮಂದಿಯೂ ಬಹಳ ಅನುಕೂಲಕರ ದಿನಗಳ ನೋಡುತ್ತಾರೆ. ಹಾಗೆ ಮಂಗಳನು ಯಾವ ರಾಶಿಯಲ್ಲಿ ಯಾವ ಸ್ಥಾನದಲ್ಲಿದ್ದಾನೆ ಎಂಬ ಆದಾರದ ಮೇಲೆ ಶುಭ ಅಶುಭಗಳನ್ನು ಲೆಕ್ಕ ಹಾಕಬಹುದು.

ಮಂಗಳನನ್ನು ಧೈರ್ಯ, ಶಕ್ತಿ, ಐಶ್ವರ್ಯ, ಆಸ್ತಿ, ಶುಭ, ಸಂತೋಷದ ಪ್ರತೀಕ ಎಂದು ಬಿಂಬಿಸಲಾಗುತ್ತದೆ. ಮಂಗಳನ ಕೃಪೆಯಿಂದ ನಿಮಗೆ ಹಲವು ಲಾಭಗಳ ನೋಡಬಹುದು. ಸದ್ಯ ಈಗ ಮಂಗಳ ಸಿಂಹ ರಾಶಿಯಲ್ಲಿದ್ದಾನೆ. ಆದ್ರೆ ಇದೇ ಜುಲೈ 28ರಂದು ಮಂಗಳನು ಕನ್ಯಾ ರಾಶಿಗೆ ಚಲಿಸಲಿದ್ದಾನೆ. ಜುಲೈ 28ರ ಸಂಜೆ ಸರಿಯಾಗಿ 19:02ಕ್ಕೆ ಮಂಗಳನ್ನು ಸಿಂಹ ರಾಶಿಯನ್ನು ಕನ್ಯಾ ರಾಶಿಗೆ ಚಲಿಸಲಿದ್ದಾನೆ.
ಮಂಗಳನು ಕನ್ಯಾ ರಾಶಿಯಲ್ಲಿ 45 ದಿನಗಳ ಕಾಲ ನೆಲೆಸಲಿದ್ದಾನೆ. ಹೀಗಾಗಿ ಈ 45 ದಿನಗಳ ಕಾಲ ಯಾರಿಗೆ ಮಂಗಳನು ಶುಭ ತರಲಿದ್ದಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಮಂಗಳ ಗ್ರಹವು ಸಿಂಹ ರಾಶಿಯಿಂದಲೇ ಕನ್ಯಾ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಸಿಂಹ ರಾಶಿಗೂ ಲಾಭವಿದೆ. ಸಿಂಹ ರಾಶಿಯವರಲ್ಲಿ ವೈಯಕ್ತಿಕ ಜೀವನ ಸುಖಕರವಾಗಿರಲಿದೆ. ನಿಮ್ಮ ವೃತ್ತೀಪರ ಲಾಭಗಳನ್ನು ನೋಡಬಹುದು. ಈ ಸಮಯದಲ್ಲಿ ಹೂಡಿಕೆಗಳು ಹಾಗೆ ಉಳಿತಾಯಗಳು ಹೆಚ್ಚಾಗಲಿದೆ, ಇದು ವೈಯಕ್ತಿಕವಾಗಿ ನಿಮ್ಮ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಲಿದೆ. ಪ್ರಯಾಣಗಳಲ್ಲಿ ಲಾಭ ನೋಡಬಹುದು. ಕುಟುಂಬ ಸದಸ್ಯರೊಂದಿಗೆ ನಿಮ್ಮ ಮನಸ್ತಾಪಗಳು ನಿವಾರಣೆಯಾಗಲಿದೆ, ಸಾಲಗಳು ಮರುಪಾವತಿಯಾಗಲಿದೆ. ದಾಂಪತ್ಯ ವಿಚಾರದಲ್ಲೂ ಈ ಸಮಯ ಬಹಲ ಲಾಭದಯಕ, ನೀವು ಬಹಳ ಸಮಯದಿಂದ ಮನೆಗಾಗಿ ಖರೀದಿಸಲು ಬಯಸಿದ್ದ ದುಬಾರಿ ವಸ್ತು ಖರೀದಿಯ ಲಾಭವಿದೆ.
ಕನ್ಯಾ ರಾಶಿ
ಮಂಗಳನು ಕನ್ಯಾ ರಾಶಿಗೆ ಚಲಿಸುವುದರಿಂದ ನಿಮ್ಮಲ್ಲಿ ಅನೇಕ ಧನಾತ್ಮಕ ಬದಲಾವಣೆಗಳ ನೋಡಬಹುದು. ಪೋಷಕರಲ್ಲಿ ಸಂತೋಷ ಉಂಟುಮಾಡುವಂತಹ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಕೌಟುಂಬಿಕ ಸಮಸ್ಯೆಗಳು ದೂರಾಗಲಿವೆ. ಆಸ್ತಿ ವಿಚಾರವಾಗಿ ಬಹಳ ಸಮಯದಿಂದ ಕಾಡುತ್ತಿದ್ದ ವಿಚಾರದಲ್ಲಿ ನಿಮಗೆ ಲಾಭವಿದೆ. ವಿದೇಶ ಪ್ರವಾಸ, ವಿದ್ಯಾಭ್ಯಾಸ ಸಂಬಂಧಿ ಬೆಂಬಲಗಳ ನೀವು ಪಡೆಯಬಹುದು. ಯಾರಿಂದಾದರು ಹಣ ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಅವರಿಂದ ಮರಳಿ ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ. ದೀರ್ಘಕಾಲದ ಅನಾರೋಗ್ಯವೊಂದು ನಿವಾರಣೆ ಆಗಲಿದೆ.
ವೃಶ್ಚಿಕ ರಾಶಿ
ಈ ಮಂಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಅದ್ಭುತ ಬದಲಾವಣೆಗಳ ತರಲಿದೆ. ಈ ಅವಧಿಯಲ್ಲಿ ಅವರು ತಮಗಾಗಿ ಹೊಸ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪಾರಿ ವರ್ಗವು ಈ ಸಮಯದಲ್ಲಿ ಲಾಭದಾಯಕ ವಿಚಾರವಾಗಿ ಸಂತಸದಲ್ಲಿರುತ್ತಾರೆ. ಪಾಲುದಾರಿಯಲ್ಲಿ ಯಶಸ್ಸು ಗಳಿಸಬಹುದು. ಕುಟುಂಬಸ್ಥರೊಡನೆ ನೀವು ಪುಣ್ಯ ಕ್ಷೇತ್ರ ತಲುಪಬಹುದು. ಹಣಕಾಸು ವಿಚಾರವಾಗಿ ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಿರಿ. ಸಾಲ ಪಡೆಯುವ ಉದ್ದೇಶದಿಂದ ಬ್ಯಾಂಕ್ ಸಂಪರ್ಕದಲ್ಲಿದ್ದರೆ ಈ ಸಮಯದಲ್ಲಿ ನೆರವೇರಲಿದೆ. ಶತ್ರುಗಳ ಕಾಟದಿಂದ ನಿವಾರಣೆ ಸಹ ಪಡೆಯಬಹುದು.



Click it and Unblock the Notifications