ಮಂಗಳನ ರಾಶಿ ಬದಲಾವಣೆ: ಈ 5 ರಾಶಿಯವರಿಗೆ ಕುಬೇರ ಯೋಗ ಶುರು! ಕೆಲಸ ಮತ್ತು ವ್ಯವಹಾರದಲ್ಲಿ ಬಂಫರ್ ಲಾಭ

ಮಂಗಳನ ರಾಶಿ ಬದಲಾವಣೆ! ಕುಂಭ ರಾಶಿಯಲ್ಲಿ ಆದಿತ್ಯ ಮಂಗಳ ಯೋಗ.. ಈ 5 ರಾಶಿಯವರಿಗೆ ಕುಬೇರ ಯೋಗ ಶುರು. ಕೆರಿಯರ್ ಮತ್ತು ಬ್ಯುಸಿನೆಸ್‌ನಲ್ಲಿ ಬಂಫರ್ ಲಾಭ. ಹೌದು, ಜ್ಯೋತಿಷ್ಯದಲ್ಲಿ ಒಂದು ಮಹತ್ವದ ಘಟನೆ ಸಂಭವಿಸಲಿದೆ. ಗ್ರಹಗಳ ಸೇನಾಪತಿ ಮಂಗಳ ಗ್ರಹವು 2026ರ ಫೆಬ್ರವರಿ 23ರಂದು ಕುಂಭ ರಾಶಿಗೆ ಪ್ರವೇಶಿಸಲಿದೆ. ಬೆಳಗ್ಗೆ 11:49ಕ್ಕೆ ಶನಿ ಆಳುವ ಕುಂಭವನ್ನು ಮಂಗಳ ಪ್ರವೇಶಿಸುವುದರಿಂದ (Aditya Mangal Yoga in Aquarius) ಜ್ಯೋತಿಷ್ಯದಲ್ಲಿ ಹಲವು ಬದಲಾವಣೆಗಳು ನಿಶ್ಚಿತ.

ಈಗಾಗಲೇ ಕುಂಭದಲ್ಲಿ ಸೂರ್ಯ, ಶುಕ್ರ, ಬುಧ ಮತ್ತು ರಾಹು ಇರುವುದರಿಂದ, 'ಪಂಚಗ್ರಹಿ ಯೋಗ' ರೂಪುಗೊಳ್ಳಲಿದೆ. ಜೊತೆಗೆ, ಮಂಗಳ ಮತ್ತು ಸೂರ್ಯರ ಸಂಯೋಗದಿಂದ 'ಆದಿತ್ಯ ಮಂಗಳ ಯೋಗ'ವೂ ಸೃಷ್ಟಿಯಾಗಲಿದೆ. ಈ ಶುಭ ಯೋಗಗಳ ಪ್ರಭಾವದಿಂದ ಮೇಷ ಮತ್ತು ಸಿಂಹ ಸೇರಿದಂತೆ ಐದು ರಾಶಿಗಳಿಗೆ ಗೋಚರವು (Mars Transit 2026) ಅತ್ಯಂತ ಲಾಭ ತರಲಿದೆ.

Aditya Mangal Yoga

ಈ ಅವಧಿಯಲ್ಲಿ ಈ ರಾಶಿಗಳ ವೃತ್ತಿ ಮತ್ತು ವ್ಯಾಪಾರದಲ್ಲಿ ಗಣನೀಯ ಪ್ರಗತಿ ಕಾಣಬಹುದು. ಮಂಗಳನ ಸಂಚಾರದಿಂದ (Mangal Gochar 2026) ಯಾವ ಐದು ರಾಶಿಗಳಿಗೆ ಲಾಭ ದೊರೆಯಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಮೇಷ: ಬಡ್ತಿಯ ಸಾಧ್ಯತೆ

ಮೇಷ ರಾಶಿಯವರ 11ನೇ ಮನೆಯಲ್ಲಿ ಮಂಗಳ ಸಂಚಾರ, ವೃತ್ತಿ ಸ್ಥಳದಲ್ಲಿ ಸಹೋದ್ಯೋಗಿ ಹಾಗೂ ಸ್ನೇಹಿತರಿಂದ ಸಂಪೂರ್ಣ ಬೆಂಬಲಕ್ಕೆ ಕಾರಣ. ಮಂಗಳ ನಿಮ್ಮ ಅಧಿಪತಿ ಗ್ರಹವಾಗಿರುವುದರಿಂದ, ಈ ಗೋಚರವು ಅತ್ಯಂತ ಪ್ರಯೋಜನಕಾರಿ.

ನಿಮ್ಮ ಆಸೆಗಳು ಈ ಅವಧಿಯಲ್ಲಿ ಈಡೇರಲಿದ್ದು, ವೃತ್ತಿ ಮತ್ತು ವ್ಯವಹಾರದಲ್ಲಿ ಸ್ಪಷ್ಟ ಗುರುತಿಸುವಿಕೆ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯೂ ಇದೆ. ರಿಯಲ್ ಎಸ್ಟೇಟ್ ಕ್ಷೇತ್ರದವರಿಗೂ ಇದು ಉತ್ತಮ ಲಾಭಗಳಿಸುವ ಸಮಯ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ವೃಷಭ: ಖರ್ಚು ಏರಿಕೆ

ವೃಷಭ ರಾಶಿಯ 10ನೇ ಮನೆಯ ಮೇಲೆ ಮಂಗಳನ ಸಂಚಾರ ಪ್ರಭಾವ ಬೀರಲಿದ್ದು, ವೃತ್ತಿಜೀವನಕ್ಕೆ ಮಂಗಳಕರ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಲಭಿಸಬಹುದು. ಆದಾಯ ಹೆಚ್ಚಳವಾದರೂ, ಖರ್ಚುಗಳಲ್ಲೂ ಏರಿಕೆ ಕಾಣಬಹುದು.

ಹಿಂದೆ ಮಾಡಿದ ಶ್ರಮದ ಫಲ ಈಗ ನಿಮಗೆ ದೊರೆಯಲಿದೆ. ವಿರೋಧಿಗಳ ಬಗ್ಗೆ ಹೆಚ್ಚು ಎಚ್ಚರದಿಂದಿರಿ. ಈ ಅವಧಿಯಲ್ಲಿ ಹಣ ಗಳಿಸಲು ಅನೇಕ ಉತ್ತಮ ಅವಕಾಶಗಳು ಒದಗಿ ಬರಲಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಸಿಂಹ: ಹೊಸ ಜವಾಬ್ದಾರಿ

ಸಿಂಹ ರಾಶಿಯ ವಿವಾಹ, ಪಾಲುದಾರಿಕೆ, ಸಂಬಂಧಗಳಿಗೆ ಸಂಬಂಧಿಸಿದ 7ನೇ ಮನೆಯಲ್ಲಿ ಮಂಗಳ ಸಂಚರಿಸಲಿದ್ದಾನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದ್ದು, ಉದ್ಯೋಗದಲ್ಲಿರುವವರಿಗೆ ಇದು ಲಾಭದಾಯಕ ಅವಧಿಯಾಗಿದೆ.

ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಮುನ್ನಡೆಯಲು ಹಲವು ಅವಕಾಶಗಳು ತೆರೆದುಕೊಳ್ಳುತ್ತವೆ. ನಿಮ್ಮ ಬಾಕಿ ಹಣ ಮರಳಿ ಸಿಗುವ ಪ್ರಬಲ ಯೋಗವಿದೆ. ಹಳೆಯ ಹೂಡಿಕೆಗಳು ಸಹ ಉತ್ತಮ ಲಾಭ ತಂದುಕೊಡುತ್ತವೆ, ಆರ್ಥಿಕ ಸ್ಥಿತಿಗೆ ಬಲ ಸಿಗಲಿದೆ.

ಧನು: ಉತ್ತಮ ಆದಾಯ

ಧನು ರಾಶಿಯವರ 3ನೇ ಮನೆಯಲ್ಲಿ ಮಂಗಳ ಗೋಚರ ನಡೆಯಲಿದ್ದು, ವ್ಯಾಪಾರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಶ್ರಮ ಮತ್ತು ಧೈರ್ಯದಿಂದ ಮುಂದೆ ಸಾಗಲು ಇದು ಸಹಾಯಕ. ಸಣ್ಣಪುಟ್ಟ ಪ್ರಯಾಣಗಳು, ವಿಶೇಷವಾಗಿ ವ್ಯವಹಾರಕ್ಕೆ ಸಂಬಂಧಿಸಿದವು, ಲಾಭ ತರುತ್ತವೆ.

ಯೋಚಿಸಿ ಮಾಡಿದ ಹೂಡಿಕೆಗಳಿಂದ ಉತ್ತಮ ಲಾಭಾಂಶವನ್ನು ನಿರೀಕ್ಷಿಸಬಹುದು. ಗಳಿಕೆಯ ಜೊತೆಗೆ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಮಂಗಳನ ಕೃಪೆಯಿಂದ ಈ ಗೋಚರದಲ್ಲಿ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಕುಂಭ: ವೃತ್ತಿಯಲ್ಲಿ ಯಶಸ್ಸು

ಕುಂಭ ರಾಶಿಯ ಲಗ್ನ ಭಾವದಲ್ಲಿ ಮಂಗಳ ಗೋಚರವು ವ್ಯಕ್ತಿತ್ವ, ಆರೋಗ್ಯ ಮತ್ತು ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿ, ಹೆಚ್ಚು ಪ್ರೇರಿತರಾಗಿರುತ್ತೀರಿ. ಆದಾಗ್ಯೂ, ಹಠಮಾರಿ ಧೋರಣೆ ನಿಮಗೆ ನಷ್ಟ ತರಬಹುದು.

ವೃತ್ತಿ ಮತ್ತು ವ್ಯವಹಾರದಲ್ಲಿ ಈ ಗೋಚರವು ಯಶಸ್ಸು ತರುತ್ತದೆ. ಸಹೋದ್ಯೋಗಿಗಳ ಬೆಂಬಲದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಸರ ಮಾಡದಿರುವುದು ಉತ್ತಮ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mars Transit 2026 In Aquarius: These 5 Zodiac Signs Get Benefits From Aditya Mangal Yoga / Mangal Gochar

Mars Transit 2026 In Aquarius: These 5 Zodiac Signs Get Benefits From Aditya Mangal Yoga / Mangal Gochar
Story first published: Thursday, February 19, 2026, 17:16 [IST]
X
Desktop Bottom Promotion