Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ಮತ್ತು ಮಂಗಳನ ಕೆಟ್ಟ ಪ್ರಭಾವದಿಂದಾಗಿ ಜಲೈ 12ರವರೆಗೆ ಈ 5 ರಾಶಿಯವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು
ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹವೂ ಅದರದ್ದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ, ಶೌರ್ಯ, ಧೈರ್ಯ, ಶಕ್ತಿಯ ಅಂಶವೆಂದು ಪರಿಗಣಿಸಲಾದ ಮಂಗಳ ಗ್ರಹವು ಈ ಜೂನ್ 1ಕ್ಕೆ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಿದೆ. ಮಂಗಳ ಮೇಷ ರಾಶಿಯಲ್ಲಿ ಜುಲೈ 12 ರವರೆಗೆ ಮೇಷ ರಾಶಿಯಲ್ಲಿಯೇ ಇರಲಿದೆ.
ಶನಿಯು ಕುಂಭದಲ್ಲಿದೆ, ಮಂಗಳನ ಮೂರನೇ ದೃಷ್ಟಿ ಕೂಡ ಶನಿ ಇರುವ ಮನೆಯ ಮೇಲಿದೆ, ಹೀಗಾಗಿ ಈ ಅವಧಿ ಕೆಲ ರಾಶಿಗಳಿಗೆ ಅಷ್ಟೊಂದು ಅನಕೂಲಕರವಲ್ಲ, ಜುಲೈ 12ರವರೆಗೆ ಈ ರಾಶಿಯವರು ಮಂಗಳನ ಕೆಟ್ಟ ಪ್ರಭಾವ ಬೀರುವುದು, ಆದ್ದರಿಂದ ಜಾಗ್ರತೆವಹಿಸಿ:

ಕರ್ಕ ರಾಶಿ
ಕರ್ಕ ರಾಶಿಯವರು ಶನಿ ಮತ್ತು ಮಂಗಳನ ಅಶುಭ ಪರಿಣಾಮಗಳಿಂದಾಗಿ ನಿಮ್ಮ ವ್ಯವಹಾರದಲ್ಲಿ ನೀವು ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ನೀವು ಮಾಡುವ ಪ್ರಯತ್ನಗಳು ವಿಫಲವಾಗಬಹುದು. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಾಧಿಸಲು ತುಂಬಾನೇ ಕಷ್ಟವಾಗುವುದು. ಆರ್ಥಿಕವಾಗಿ ತುಂಬಾನೇ ಜಾಗ್ರತೆವಹಿಸಿ, ಆದ್ದರಿಂದ ಮುಂಚಿತವಾಗಿ ಜಾಗರೂಕರಾಗಿರಿ.
ಈ ಅವಧಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ವಾದ ಅಥವಾ ವಿವಾದದ ಸಾಧ್ಯತೆ ಇರುವುದರಿಂದ ನಿಮ್ಮ ಸಂಬಂಧದಲ್ಲಿ ಏರಳಿತವಿರಬಹುದು. ತಲೆನೋವು ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕೂಡ ಕಾಡಬಹುದು. ಕಚೇರಿಯಲ್ಲಿ ಕೆಲ ಸಮಸ್ಯೆಗಳಿರಬಹುದು, ಆದರೆ ಹೆಚ್ಚಿನ ತೊಂದರೆಯಾಗದಂತೆ ಜಾಗ್ರತೆವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಮಂಗಳ ಮತ್ತು ಶನಿಯ ಅಶುಭ ಪರಿಣಾಮಗಳಿಂದ ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ, ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುವುದು. ಕೆಲಸದಲ್ಲಿ ತುಂಬಾ ಶ್ರದ್ಧೆವಹಿಸಬೇಕು. ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ, ಈ ಸಮಯದಲ್ಲಿ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ಖರ್ಚು ಭರಿಸಲು ಸಾಲ ತೆಗೆದುಕೊಳ್ಳಬೇಕಾಗುವುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಹೊಂದಿದ್ದರೆ ನಿರೀಕ್ಷೆಯ ಲಾಭ ಪಡೆಯಲು ಕಷ್ಟವಾಗುವುದು.
ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು,ಅಹಂ ತುಂಬಾನೇ ಪ್ರಬಾವ ಬೀರಲಿದೆ . ಆರೋಗ್ಯದ ಬಗ್ಗೆ ಗಂಡಲು ಹಾಗೂ ನರಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ಅವಧಿಯಲ್ಲಿ, ತುಲಾ ರಾಶಿಯ ಜನರು ಹೆಚ್ಚು ಜಾಗರೂಕರಾಗಿರಬೇಕು, ಸಂಬಂಧದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಬಹುದು. ಹೂಡಿಕೆಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ವೃತ್ತಿಜೀವನದಲ್ಲಿ ಈ ಅವಧಿಯಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸಬಹುದು, ಹಣಕಾಸಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ. ವೈವಾಹಿಕ ಜೀವನದಲ್ಲಿ ಈ ಅವಧಿ ಅನುಕೂಲಕರವಲ್ಲ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಮಂಗಳ ಮತ್ತು ಶನಿಯ ಅಶುಭ ಪರಿಣಾಮಗಳಿಂದ ಈ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಈ ಎಲ್ಲಾ ಅವಧಿಗಿಂತ ಈ ಅವಧಿ ತುಂಬಾನೇ ಕಷ್ಟಕರವಾಗಿದೆ. ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಸ್ವಂತ ವ್ಯವಹಾರ ಮಾಡುತ್ತಿರುವವರು ಬಯಸಿದಂತೆ ಲಾಭ ಗಳಿಸಲು ಕಷ್ಟವಾಗುವುದು, ಆದ್ದರಿಂದ ಈ ಅವಧಿ ಜಾಗ್ರತೆಯಿಂದ ಮುಂದುವರೆಸಿ.
ಧನು ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿಯಲ್ಲಿ ಹಣ ಗಳಿಸಲು ವಿಫಲರಾಗಬಹುದು. ಹಣದ ಸಮಸ್ಯೆ ಹೆಚ್ಚಿರಬಹುದು. ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು, ಸಮಯದಲ್ಲಿ, ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಕಷ್ಟವಾಗುವುದು, ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕು. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಬದುಕಿನಲ್ಲಿ ನೀವು ಹೆಚ್ಚು ಜಾಗ್ರತೆವಹಿಸಿ.
ಮಕರ ರಾಶಿ
ಮಂಗಳ ಮತ್ತು ಶನಿಯ ಅಶುಭ ಪರಿಣಾಮಗಳಿಂದಾಗಿ ಈ ಸಮಯ ತುಂಬಾನೇ ಕಷ್ಟಕರವಾಗಿದೆ. ವ್ಯವಹಾರದಲ್ಲಿ ನಷ್ಟ ಉಂಟಾಗದಂತೆ ನೀವಯ ಜಾಗ್ರತೆವಹಿಸಿ. ಕೆಲಸದಲ್ಲಿ ಹಲವು ಸವಾಲುಗಳನ್ನು ಎದುರಿಸಬಹುದು, ಕೆಲಸದಲ್ಲಿ ಹೆಚ್ಚಿನ ಒತ್ತಡ ಅಧಿಕವಿರಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿರಲಿದೆ. ವ್ಯಾಪಾರಿಗಳಿಗೆ ಸವಾಲಿನ ಸಮಯ, ಆರೋಗ್ಯದ ಕಡೆಗೆ ಗಮನಹರಿಸಿ, ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆವಿರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications