Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಥುನ ರಾಶಿಯಿಂದ ಮಂಗಳನ ನಿರ್ಗಮನ: ಈ ರಾಶಿಯರಿಗೆ ಇನ್ಮುಂದೆ ಯೋಗ..!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಅಧಿಪತಿ ಎಂದು ಕರೆಯಲಾಗಿದೆ. ಮಂಗಳನು ಯಾವ ರಾಶಿಯಲ್ಲಿರುತ್ತಾನೋ ಅವರಿಗೆ ಅತ್ಯಂತ ಶುಭ ದಿನಗಳಿರಲಿವೆ. ಆರ್ಥಿಕ ವಿಚಾರದಲ್ಲಿ, ಸಂಪತ್ತು, ಆರೋಗ್ಯದ ವಿಚಾರದಲ್ಲಿಯೂ ಕೂಡ ಅತ್ಯುತ್ತಮ ದಿನಗಳನ್ನು ನೋಡುತ್ತಾರೆ. ಮಂಗಳ ಅನುಕೂಲಕರ ಸ್ಥಾನದಲ್ಲಿದ್ದಾಗ ಎಲ್ಲಾ ಕಾರ್ಯಗಳಲ್ಲು ಶುಭ ಆಗಲಿದೆ. ಮಂಗಳ ಯಾವ ರಾಶಿಗೆ ಚಲಿಸಿದರು ಕೂಡ ಉಳಿದ ಹಲವು ರಾಶಿಗಳಿಗೂ ಇದರ ಲಾಭ ಪಡೆಯುವುದು ನೋಡಬಹುದು.
ಹಾಗೆ ಈಗ ಫೆಬ್ರವರಿ 24 ರಂದು ಮಂಗಳ ಗ್ರಹವು ಮಿಥುನ ರಾಶಿಯಿಂದ ನಿರ್ಗಮಿಸುತ್ತಿದೆ. ಇದು ಹಲವು ರಾಶಿಗಳಿಗೆ ಲಾಭದಾಯಕವಾಗುತ್ತಿದೆ. ಶಿವರಾತ್ರಿಗೂ ಮೊದಲು ಮಂಗಳನ ಈ ಚಲನೆಯು ಹಲವು ರೀತಿ ಲಾಭಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಮಂಗಳನು ಮಿಥುನ ರಾಶಿಗೆ ಚಲಿಸುವುದರಿಂದ ಯಾವ ರಾಶಿಯವರಲ್ಲಿ ಲಾಭ ನೋಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಂಗಳ ಗ್ರಹದ ನಿರ್ಗಮನವು ನಿಮ್ಮ ರಾಶಿಯಲ್ಲಿ ಧನಾತ್ಮಕ ಲಾಭಕ್ಕೆ ಕಾರಣವಾಗುತ್ತಿದೆ. ಆಯಾ ರಾಶಿಯ ಜನರು ಮಂಗಳನಿಂದ ಹಲವು ರೀತಿ ಲಾಭ ಪಡೆಯಲಿದ್ದಾರೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳನ ಮಿಥುನ ರಾಶಿಯಿಂದ ನಿರ್ಗಮನ ಆಗುತ್ತಿರುವುದು ಮೇಷ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತಿದೆ. ನಿಮ್ಮ ನಿತ್ಯದ ಕೆಲಸಗಳಲ್ಲಿ ಶುಭ ವಿಚಾರಗಳು, ಸುಲಭದ ಯಶಸ್ಸು ನೋಡಬಹುದು. ಹಾಗೆ ಬಹಳ ಕಾಲದಿಂದ ಅರ್ಧಕ್ಕೆ ನಿಂತಿರುವಂತಹ ಹಣಕಾಸು ವಿಚಾರಗಳು, ಸಮಸ್ಯೆಗಳು ಬಗೆಹರಿಯಲಿವೆ. ಅದರಲ್ಲು ಸಾಲಗಳು ಮರುಪಾವತಿಯಾಗಲಿದೆ, ನಿಮ್ಮ ಹೂಡಿಕೆ ಉಳಿತಾಯ, ಸೇರಿ ಹಣಕಾಸಿನ ಲಾಭಗಳು ಹೆಚ್ಚಾಗುತ್ತವೆ. ಆರೋಗ್ಯದಲ್ಲಿಯೂ ನಿಮಗೆ ಲಾಭದಾಯಕ ದಿನಗಳು ಇರಲಿವೆ. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಉತ್ತಮ ದಿನಗಳು. ಹಾಗೆ ಅವಿವಾಹಿತರಲ್ಲಿ ಶುಭ ಸುದ್ದಿಗಳು ಕೇಳಿಬರುತ್ತವೆ. ಮನೆಯಲ್ಲಿ ಶಾಂತಿ ನೆಲೆಸಲು ನೀವು ಕಾರಣರಾಗುತ್ತೀರಿ.
ಕರ್ಕ ರಾಶಿ
ಮಿಥುನ ರಾಶಿಯಿಂದ ಮಂಗಳನ ನಿರ್ಗಮನವು ಕರ್ಕ ರಾಶಿಯವರಲ್ಲಿ ಲಾಭದಾಯಕವಾಗಿಯೂ ಗೋಚರಿಸಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಅಥವಾ ಹಳೆಯ ಕೆಲಸದಲ್ಲಿ ಸಮಸ್ಯೆಗಳಿದ್ದರೆ ಅದರಿಂದ ಮುಕ್ತಿ ಪಡೆಯುತ್ತೀರಿ. ಗೃಹಿಣಿಯರಲ್ಲಿದ್ದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ವ್ಯಾಪಾರಸ್ಥರಲ್ಲಿ ಚುರುಕುತನದಿಂದ ಕೂಡಿದ ವ್ಯವಹಾರ ಪ್ರಕ್ರಿಯೆ ನೋಡಬಹುದು. ನಿಮ್ಮ ಲಾಭದ ಅಂಶ ಕೂಡ ಹೆಚ್ಚಾಗುತ್ತದೆ, ಹೊಸ ವ್ಯವಹಾರಗಳಿಗೆ ನೀವು ಮುಂದಾಗಬಹುದಾಗಿದೆ.
ಸಿಂಹ ರಾಶಿ
ಮಂಗಳ ಗ್ರಹವು ಸಿಂಹ ರಾಶಿಯ 11ನೇ ಮನೆಗೆ ಚಲಿಸುವುದು ನೀವು ಆರ್ಥಿಕವಾಗಿ ಸದೃಢವಾಗುವ ಕಾಲದ ಸೂಚಕವಾಗಿದೆ. ನಿಮ್ಮ ಉಳಿತಾಯಗಳು, ಹಣಕಾಸಿನ ವ್ಯವಹಾರಗಳು ನೀವು ಅಂದುಕೊಂಡಂತೆ ಶುಭವಾಗಿ ನಡೆಯಲಿದೆ. ನಿಮ್ಮಿಂದ ಇತರರಿಗೆ ಸಹಕಾರವಾಗುವ ಸಾಧ್ಯತೆ ದಟ್ಟವಾಗಿದೆ. ಪ್ರೀತಿ ಹಾಗೂ ದಾಂಪತ್ಯದಲ್ಲಿ ಮತ್ತಷ್ಟು ಸಂಬಂಧ ಬಲವಾಗುತ್ತದೆ. ನಿಮ್ಮ ಆಸೆಯಂತೆ ಕೆಲವೊಂದು ವಿಚಾರಗಳು ನಡೆಯಲಿವೆ, ಅವಿವಾಹಿತರಿಗೆ ಶುಭ ಕಾಲವಾಗಿದೆ. ಮದುವೆ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಆರೋಗ್ಯದ ವಿಚಾರದಲ್ಲಿ ಮಿಶ್ರಫಲ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಮಂಗಳನ ನಿರ್ಗಮನವು ನೀವು ಬಯಸುವ ಅನೇಕ ಕಾರ್ಯಗಳು ಯಶಸ್ವಿಯಾಗಲು ಕಾರಣವಾಗುತ್ತದೆ. ಹೊಸ ವಸ್ತು ಖರೀದಿ, ವಾಹನ, ಆಸ್ತಿ ಹೀಗೆ ಐಷಾರಾಮಿ ವಸ್ತುಗಳ ಕಡೆ ನಿಮ್ಮ ಒಲವು ಹೆಚ್ಚಾಗಬಹುದು. ಕುಟುಂಬಸ್ಥರಿಂದ ನಿಮಗೆ ಬೆಂಬಲ ಸಿಗುತ್ತದೆ, ಇದರಿಂದ ಬಹುದೊಡ್ಡ ಕೆಲಸದಲ್ಲಿ ಯಶಸ್ಸು ಒಲಿಯಲಿದೆ. ಕೆಲವೊಮ್ಮೆ ಮನೆಯಿಂದ ದೂರಾಗಬೇಕಾಗಬಹುದು. ದಾಂಪತ್ಯದಲ್ಲಿ ಶಾಂತಿ ನೆಲೆಸಲಿದೆ. ನೀವು ಅಂದುಕೊಂಡಿದ್ದ ಕೆಲಸಗಳು ಹೆಚ್ಚು ಖರ್ಚು ಮಾಡಿಸಬಹುದು, ಆದ್ರೆ ಅಂತಿಮವಾಗಿ ಶುಭವಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications