Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ ಮೊದಲ ವಾರ ಮಂಗಳ ಹಿಮ್ಮುಖ ಚಲನೆ: ಈ ರಾಶಿಗಳಿಗೆ ಸಮಸ್ಯೆ, ಅಡೆತಡೆ ಹೆಚ್ಚಳ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿ ಮತ್ತು ನಕ್ಷತ್ರ ಬದಲಾಯಿಸುತ್ತಲೇ ಇರುತ್ತದೆ. ಗ್ರಹಗಳ ಈ ಬದಲಾವಣೆಯು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಮಂಗಳನ ಸಂಚಾರದಿಂದ ಎಲ್ಲಾ ರಾಶಿಗಳ ಮೇಲೂ ಕೂಡ ಪರಿಣಾಮ ಉಂಟು ಮಾಡುವುದು ನೋಡಬಹುದು.
ಈಗ ನವೆಂಬರ್‌ನಲ್ಲಿ ಮಂಗಳನ ಸಂಚಾರದಿಂದ ಹಲವು ರೀತಿಯ ಬದಲಾವಣೆಗಳ ನೋಡಬಹುದಾಗಿದೆ. ನವೆಂಬರ್ 1 ರಿಂದ ಮಂಗಳವು ತನ್ನ ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತದೆ. ಒಂದು ಗ್ರಹವು ಸೂರ್ಯನಿಗೆ ತುಂಬಾ ಹತ್ತಿರದಲ್ಲಿ ಚಲಿಸಿದಾಗ ಹಾಗೆ ತನ್ನ ಪ್ರಕಾಶತೆಯನ್ನು ಕಳೆದುಕೊಳ್ಳುವುದರಿಂದ ಹಿಮ್ಮುಖ ಚಲನೆಗೆ ಒಳಗಾಗುತ್ತದೆ.

ನವೆಂಬರ್ ತಿಂಗಳಲ್ಲಿ ಮಂಗಳವು ತನ್ನ ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತದೆ. ಈ ಹಿಮ್ಮುಖ ಚಲನೆಯು 7 ತಿಂಗಳ ಕಾಲ ಇರಲಿದೆ. ಮೇ 2ರಂದು ಮಂಗಳನ ಉದಯ ನೋಡಬಹುದು. ಮಂಗಳ ಈ ಹಿಮ್ಮುಖ ಚಲನೆಯಿಂದಾಗಿ, ಕೆಲವು ರಾಶಿ ಜನರಲ್ಲಿ ಅನಿರೀಕ್ಷಿತ ಬದಲಾವಣೆಗಳ ನೋಡಬಹುದು. ಹಾಗೆ ಇದು ಕೆಲವರಿಗೆ ಶುಭ ಮತ್ತೆ ಕೆಲವರಿಗೆ ಅಶುಭ ಲಾಭಕ್ಕೆ ಕಾರಣವಾಗಲಿದೆ.
ಹಾಗಾದ್ರೆ ನವೆಂಬರ್‌ನಲ್ಲಿ ಮಂಗಳನ ಹಿಮ್ಮುಖ ಚಲನೆಯಿಂದಾಗಿ ಯಾವ ರಾಶಿಯವರಿಗೆ ಅನಾನುಕೂಲತೆ ಹೆಚ್ಚಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಬಲವಾದ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಹೊಂದಿರುವ ವೃಶ್ಚಿಕ ರಾಶಿಯ ಜನರು ಈ ಮಂಗಳನ ಹಿಮ್ಮುಖ ಚಲನೆಯ ಪರಿಣಾಮವಾಗಿ ಹಲವು ರೀತಿಯ ಸಮಸ್ಯೆಗಳ, ಅಡೆತಡೆಗಳ ನೋಡಬಹುದು. ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯವರು ತಮ್ಮ ವಸ್ತುಗಳನ್ನು ರಕ್ಷಿಸಲು ಮತ್ತು ಹಣವನ್ನು ಉಳಿಸಲು ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ವೃಷಭ ರಾಶಿಯವರು ಜೀವನದಲ್ಲಿ ಅತ್ಯುತ್ತಮವಾದ ವಸ್ತುಗಳನ್ನು ಪಡೆಯಲು ಬಯಸುತ್ತಾರೆ. ಈ ಸಮಯದಲ್ಲಿ ನಿಮ್ಮ ದೀರ್ಘಕಾಲದ ಉಳಿತಾಯವನ್ನು ಬೇರೆ ಕೆಲಸಕ್ಕೆ ವಿನಿಯೋಗಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ಸಮಯ ದೊಡ್ಡ ನಷ್ಟಗಳ ಅನುಭವಿಸಬಹುದು. ಹಣದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಅಡ್ಡಿಗಳಿವೆ. ಮಿತವ್ಯಯ ಮಾಡುವುದು ಉತ್ತಮ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವುದು ಕಷ್ಟವಾಗಬಹುದು. ನಿಮ್ಮ ಮನೆಯ ವ್ಯವಹಾರಗಳು ನಿಧಾನವಾಗಲಿದೆ. ಆಪ್ತರಿಂದ ಹಣ ಮರಳಿ ಪಡೆಯುವ ನಿಮ್ಮ ಪ್ರಯತ್ನದಲ್ಲಿ ಮನಸ್ತಾಪಗಳು ಉಂಟಾಗಬಹುದು. ಪ್ರೀತಿಯ ವಿಚಾರದಲ್ಲಿ ಕಹಿ ಸುದ್ದಿಗಳ ಕೇಳುವಿರಿ. ನಿಮ್ಮ ವಾಹನ ಖರೀದಿಯ ವಿಚಾರವಾಗಿ ಕೈ ಸುಟ್ಟುಕೊಳ್ಳಬಹುದು. ಪರರಿಗಾಗಿ ನೀವು ಮಾಡುವ ಸಹಾಯವು ನಿಮಗೆ ಕಷ್ಟಗಳ ತರಬಹುದು.
ಮಕರ ರಾಶಿ
ಮಕರ ರಾಶಿ ಜನರು ಈ ಮಂಗಳನ ಹಿಮ್ಮುಖ ಚಲನೆಯ ಪರಿಣಾಮವಾಗಿ ಅನಾರೋಗ್ಯಗಳ ಎದುರಿಸಬೇಕಾಗಬಹುದು. ನಿಮ್ಮ ಹಲವು ದೀರ್ಘಕಾಲದ ಸಮಸ್ಯೆಗಳು ಕಾಡಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಲಾಭ ಇರದಿದ್ದರೂ ಹಣಕಾಸಿನ ಸಮಸ್ಯೆಗಳ ಎದುರಿಸಬೇಕಾಗಬಹುದು. ಅನಗತ್ಯ ಖರ್ಚುಗಳು ಹೆಚ್ಚಾಗುವ ಪರಿಣಾಮ ನಿಮ್ಮಲ್ಲಿ ಒತ್ತಡದ ದಿನಗಳು ಎದುರಾಗಲಿದೆ. ಉಳಿತಾಯದ ಹಣ ಅನಗತ್ಯ ವಿಚಾರಕ್ಕೆ ವ್ಯಯಿಸಬಹುದು. ಮನೆ ನಿರ್ಮಾಣದಲ್ಲಿ ಅಡೆತಡೆ ಇದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಮಂಗಳನ ಹಿಮ್ಮುಖ ಚಲನೆ ಹಲವು ರೀತಿಯ ಅಶುಭಗಳ ತರಲಿದೆ. ನಿಮ್ಮ ವ್ಯಾಪಾರ ವಿಚಾರದಲ್ಲಿ ನಷ್ಟಗಳ ನೋಡಬಹುದು. ನಿವೇಶನ ಖರೀದಿ, ವಾಹನ ಖರೀದಿ, ಮನೆ ಖರೀದಿಯಂತಹ ವಿಚಾರಗಳಲ್ಲಿ ಅಡ್ಡಿಗಳು ಎದುರಾಗಬಹುದು. ವಿದ್ಯಾರ್ಥಿಗಳು ಕಷ್ಟದ ದಿನ ನೋಡಬಹುದು. ದಾಂಪತ್ಯ ವಿಚಾರದಲ್ಲಿ ಮನಸ್ತಾಪಗಳು ಮೂಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications