Latest Updates
-
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ!
ಮಂಗಳ-ಚಂದ್ರನ ಸಂಯೋಗದಿಂದ ಮಹಾಭಾಗ್ಯ: ಹೊಸ ಆದಾಯ, ಸಾಲ ಮರುಪಾವತಿ ಯೋಗ!
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸಂಚಾರನ್ನು ಹಲವು ರೀತಿಯಲ್ಲಿ ಶುಭಕರ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಗ್ರಹಗಳ ನಿರ್ಧಿಷ್ಟ ಸಮಯದಲ್ಲಿ ನಿರ್ಧಿಷ್ಟ ರಾಶಿಯಲ್ಲಿ ಚಲಿಸುತ್ತವೆ. ಹಾಗೆ ಚಲಿಸುವ ಪ್ರಕ್ರಿಯೆಯಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ಅಥವಾ ಅವುಗಳ ಪ್ರಭಾವಕ್ಕೆ ಒಳಗಾಗುವುದು ಸಹ ನೋಡಬಹುದು. ಈ ವಿದ್ಯಮಾನಗಳನ್ನು ಬಹಳ ವಿಶೇಷವೆಂದು ಕರೆಯಲಾಗಿದೆ.
ಹಾಗೆ ಜ್ಯೋತಿಷ್ಯದಲ್ಲಿ ಮಂಗಳನನ್ನು ಕೂಡ ಬಹಳ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಮಂಗಳನ ಸಂಚಾರವು ಹಲವು ರಾಶಿಗಳ ಮೇಲೆ ತನ್ನ ಪ್ರಭಾವ ಉಂಟು ಮಾಡುವುದು ನೋಡಬಹುದು. ಹಾಗೆ ಈಗ ಮಂಗಳನು ಕನ್ಯಾ ರಾಶಿಯಲ್ಲಿ ಚಲಿಸುತ್ತಿದ್ದು, ಶೀಘ್ರ ಚಂದ್ರನ ಜೊತೆ ಸಂಯೋಘವಾಗಲಿದ್ದಾನೆ. ಈ ಮಂಗಳ ಮತ್ತು ಚಂದ್ರನ ಸಂಯೋಗವು ವಿಶೇಷ ಮಹತ್ವವನ್ನು ಹೊಂದಿದೆ ಏಕೆಂದರೆ ಇದರ ರಚನೆಯು ಮಹಾಭಾಗ್ಯ ಯೋಗ ಅಥವಾ ಚಂದ್ರ-ಮಂಗಳ ಯೋಗದ ರಚನೆಗೆ ಕಾರಣವಾಗುತ್ತದೆ.

ಈ ಯೋಗವು ನಿಮ್ಮ ಅದೃಷ್ಟವನ್ನು ಬಲ ಪಡಿಸುವುದಲ್ಲದೆ, ಆರ್ಥಿಕ ಸ್ಥಿತಿ, ಆರೋಗ್ಯ ಸೇರಿದಂತೆ ಹಲವು ವೈಯಕ್ತಿಕ ವಿಚಾರದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಕಾರಣವಾಗಲಿದೆ. ಆಗಸ್ಟ್ 25ರ ಬಳಗ್ಗೆ ಚಂದ್ರನು ಕನ್ಯಾ ರಾಶಿ ಪ್ರವೇಶಿಸುತ್ತಾನೆ. ಮುಂದಿನ ಎರಡು ದಿನಗಳ ಕಾಲ ಚಂದ್ರ ಕನ್ಯಾ ರಾಶಿಯಲ್ಲಿನ ಮಂಗಳನ ಜೊತೆ ಸಂಯೋಗವಾಗಿರುತ್ತಾನೆ. ಈ ಸಮಯದಲ್ಲಿ ಈ ಯೋಗದಿಂದ ವಿಶೇಷವಾಗಿ ಪ್ರಭಾವಿತವಾದ ರಾಶಿಗಳಲ್ಲಿ ಹಲವು ರೀತಿ ಬದಲಾವಣೆಗಳು ನೋಡಬಹುದು.
ಹಾಗಾದ್ರೆ ಮಂಗಳ ಹಾಗೂ ಚಂದ್ರನ ಸಂಯೋಗವು ಯಾರಿಗೆಲ್ಲಾ ಶುಭಕರವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಈ ಮಹಾಭಾಗ್ಯ ಯೋಗವು ಮೇಷ ರಾಶಿಯವರಿಗೆ ಅತ್ಯಂತ ಶುಭ ಮತ್ತು ಫಲಪ್ರದ ಎಂದು ಸಾಬೀತುಪಡಿಸುತ್ತದೆ. ಈ ಯೋಗದಿಂದಾಗಿ, ನಿಮ್ಮೊಳಗೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ, ಇದರಿಂದಾಗಿ ನಿಮ್ಮ ಯಾವುದೇ ಕೆಲಸ ಮಾಡುವಾಗ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ವ್ಯಾಪಾರ ಸಂಬಂಧವಾಗಿ ಹಾಗೆ ವೃತ್ತಿ ಸಂಬಂಧಿತ ವಿಚಾರವಾಗಿಯೂ ಧನಾತ್ಮಕ ಬದಲಾವಣೆ ನೋಡಬಹುದು. ಬಹಳ ಸಮಯದಿಂದ ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ನಿಮ್ಮ ಸಾಲಗಳು ಮರುಪಾವತಿಯಾಗಬಹುದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ವೃಷಭ ರಾಶಿ
ಚಂದ್ರ ಮತ್ತು ಮಂಗಳನ ಸಂಯೋಗದಿಂದ ರೂಪುಗೊಂಡ ಈ ಮಹಾಭಾಗ್ಯ ಯೋಗವು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸು ಸಂಬಂಧಿತ ಕಷ್ಟವೊಂದು ನಿವಾರಣೆಯಾಗಲಿದೆ. ಫೈನಾನ್ಸ್, ಬ್ಯಾಂಕಿಂಗ್ ವಿಚಾರ ಕುರಿತಾಗಿ ನಿಮಗೆ ಅನುಕೂಲಕರ ದಿನ ಆಗಿರಲಿದೆ. ಅವಿವಾಹಿತರು ಶುಭ ಸುದ್ದಿ ಕೇಳಬಹುದು. ಈ ಎರಡು ದಿನದಲ್ಲಿ ನಿಮ್ಮ ದುಂದು ವೆಚ್ಚಗಳು ಕಡಿಮೆಯಾಗಲಿದೆ. ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ಸ್ಥಿತಿ ಇರಲಿದೆ.
ಧನು ರಾಶಿ
ಈ ಮಹಾಭಾಗ್ಯ ಯೋಗವು ಧನು ರಾಶಿ ಜನರಲ್ಲಿ ಹೊಸ ರೀತಿಯ ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಆದಾಯ ಮೂಲ ಹೆಚ್ಚಳವಾಗುವ ಸಂಭವವಿದೆ. ಬಹಳ ಸಮಯದ ನಿಮ್ಮ ಬಯಕೆಯು ಈಡೇರಲಿದೆ. ಪ್ರೇಮ ಸಂಬಂಧಗಳು, ದಾಂಪತ್ಯ ಮಧುರವಾಗುತ್ತಿದೆ. ಕೆಲಸದ ಸ್ಥಳದಲ್ಲಿದ್ದ ಅಡೆತಡೆಯೊಂದು ನಿವಾರಣೆಯಾಗಲಿದೆ. ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ನಿಮ್ಮ ಪ್ರಯತ್ನದಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ದೇವಾಲಯ ಭೇಟಿ, ಪ್ರವಾಸದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು.
(ಹಕ್ಕುತ್ಯಾಗ: ಈ ಲೇಖನದಲ್ಲಿ ಉಲ್ಲೇಖಿಸಲಾದ ರತ್ನಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ಸಲಹೆಗೆ ಬದಲಿಯಾಗಿ ಪರಿಗಣಿಸಬಾರದು. ಹಾಗೆ ಈ ಲೇಖನಕ್ಕೆ ಸಂಬಂಧಿಸಿದ್ದಂತೆ ಯಾವುದೇ ವಿಚಾರಕ್ಕೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಾಗಿರುವುದಿಲ್ಲ)



Click it and Unblock the Notifications











