Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನ್ಯಾ ರಾಶಿಗೆ ಮಂಗಳ ಸಂಚಾರ: 3 ರಾಶಿಯವರಲ್ಲಿ ಹಣದ ಹರಿವು
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಅತ್ಯಂತ ಪ್ರಮುಖ ವಿದ್ಯಮಾನಗಳಾಗಿ ಪರಿಗಣಿಸಲಾಗಿದೆ. ಈ ಗ್ರಹಗಳ ಚಲನೆಯು ವ್ಯಕ್ತಿಯೊಬ್ಬರ ಜೀವನ ಬದಲಾಯಿಸಬಹುದು. ಹಾಗೆ ಎಲ್ಲಾ ರಾಶಿಗಳ ಮೇಲೂ ಪ್ರಭಾವ ಉಂಟು ಮಾಡಲಿದೆ. ಜುಲೈನಲ್ಲಿ ಶುಕ್ರ ಹಾಗೂ ಮಂಗಳ ಗ್ರಹದ ಸಂಚಾರವು ಹಲವು ರೀತಿಯ ಲಾಭದಾಯಕ ಕೆಲಸಗಳಿಗೆ ಕಾರಣವಾಗುತ್ತಿದೆ. ಜುಲೈನಲ್ಲಿ ಮಂಗಳನ ಸಂಚಾರ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡುತ್ತಿದೆ.
ಮಂಗಳ ಗ್ರಹವು ಜುಲೈನಲ್ಲಿ ತನ್ನ ರಾಶಿ ಬದಲಾಯಿಸುತ್ತಿದೆ. ಜುಲೈ ಅಂತ್ಯದಲ್ಲಿ ಮಂಗಳ ಗ್ರಹವು ಕನ್ಯಾ ರಾಶಿಯಲ್ಲಿ ಚಲಿಸಲಿದೆ. ಇದರಿಂದ ಹಲವರಿಗೆ ಲಾಭದಾಯಕ ಬೆಳವಣಿಗೆ ಕಂಡುಬರಲಿದೆ. ಮಂಗಳ ಗ್ರಹವು ಜುಲೈ 28, 2025 ರಂದು 19:02 ಕ್ಕೆ ಕನ್ಯಾ ರಾಶಿಗೆ ಚಲಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಮಂಗಳವು ಬಹ ಮುಖ್ಯ ಮತ್ತು ಇದನ್ನು ಅಗ್ನಿ ಗ್ರಹ ಎಂದು ಕರೆಯಲಾಗುತ್ತದೆ.

ನಿಮ್ಮ ಜಾತಕದಲ್ಲಿ ಮಂಗಳನು ಸರಿಯಾದ ಸ್ಥಾನದಲ್ಲಿದ್ದರೆ ನಿಮಗೆ ಪ್ರಗತಿ ಲಾಭ ಹೆಚ್ಚಾಗಲಿದೆ, ಇನ್ನು ಕನ್ಯಾ ರಾಶಿಗೆ ಮಂಗಳನ ಸಂಚಾರದಿಂದಾಗಿ ಹಲವರಿಗೆ ಲಾಭದಾಯಕ ದಿನಗಳ ಬರಲಿವೆ. ಅದೃಷ್ಟಗಳು ಒಲಿಯಲಿದೆ. ಹಾಗಾದ್ರೆ ಮಂಗಳನಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ ದಿನಗಳಿವೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳನು ಮೇಷ ರಾಶಿಯವರ ಅಧಿಪತಿ ಎನ್ನಬಹುದು. ಆದ್ರೆ ಈಗ ಕನ್ಯಾ ರಾಶಿಗೆ ಚಲಿಸುವುದು ಮೇಷ ರಾಶಿಯವರಿಗೆ ಆರ್ಥಿಕ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ಅನೇಕ ಕೆಲಸಗಳು ಹಣ ತರುವ ಮೂಲವಾಗಿ ಬದಲಾಗಬಹುದು. ವೃತ್ತೀ ಜೀವನದಲ್ಲೂ ಕೂಡ ನಿಮಗೆ ಯಶಸ್ಸು ಇರಲಿದೆ. ವ್ಯಾಪಾರಿಗಳು ತಮ್ಮ ಪ್ರಗತಿ ನೋಡುವ ಕಾರಣ ಅವರ ಅದಾಯದಲ್ಲಿ ಲಾಭ ಇರಲಿದೆ. ಉದ್ಯೋಗದಲ್ಲಿ ಹೊಸ ರೀತಿ ಅವಕಾಶಗಳು ಸಿಗಲಿದೆ. ಆರೋಗ್ಯವು ಸುಧಾರಿಸಲಿದೆ. ನಿಮ್ಮ ಮನಸ್ಸಿನ ಗೊಂದಲ ನಿವಾರಣೆಗೆ ಇದು ಸಕಾಲವಾಗಲಿದೆ.
ಸಿಂಹ ರಾಶಿ
ಕನ್ಯಾ ರಾಶಿಯಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭವಾಗಲಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಹಿಂದೆಂದೂ ಕಾಣದಂತಹ ಲಾಭ ನೋಡಬಹುದು. ನಿಮ್ಮ ವ್ಯವಹಾರಗಳಲ್ಲಿ ದೊಡ್ಡ ಲಾಭ ನೋಡಬಹುದು. ನಿಮ್ಮ ಆಸ್ತಿ, ಮನೆ ಖರೀದಿ, ನಿರ್ಮಾಣ ವಿಚಾರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿರುವವರು ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದಂತಹ ಕ್ರಿಯೆಗೆ ಒಳಗಾಗಬಹುದು. ಇದರಿಂದ ನಿಮ್ಮಲ್ಲಿ ಆರ್ಥಿಕ ಸದೃಢತೆ ಇರಲಿದೆ. ವಿದೇಶ ಪ್ರವಾಸದಂತಹ ಸಂತಸಕರ ವಿಚಾರದಲ್ಲೂ ನಿಮಗೆ ಒಲವು ಇರಲಿದೆ. ಆಪ್ತರು ನಿಮಗೆ ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ಸಮಯದಲ್ಲಿ ನೀಡಬಹುದು.
ವೃಶ್ಚಿಕ ರಾಶಿ
ಮಂಗಳ ಗ್ರಹದ ಸಂಚಾರವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಿತಾಂಶಗಳ ನೀಡಲಿದೆ. ಈ ಅವಧಿಯಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಬ್ಯಾಂಕಿಂಗ್ ವಿಚಾರದಲ್ಲಿ ಇದು ಲಾಭದಾಯಕ ಸಮಯವಾಗಲಿದೆ. ನಿಮ್ಮ ವ್ಯಾಪಾರಗಳು ಲಾಭದತ್ತ ತಿರುಗಲಿದೆ. ಹಣಕಾಸಿನ ವಿಚಾರದಲ್ಲಿ ದೊಡ್ಡ ನಿರ್ಧಾರಗಳು ನಿಮಗೆ ಫಲ ನೀಡಲಿವೆ. ಕೃಷಿ ಸಂಬಂಧಿ ಕೆಲಸಗರರಿಗೆ ಆರ್ಥಿಕ ಲಾಭವಾಗುವುದು. ನಿಮ್ಮ ಕೌಟುಂಬಿಕ ಸಮಸ್ಯೆಗಳಲ್ಲಿ ಪರಿಹಾರ ನೋಡುವಿರಿ. ನಿಮ್ಮ ಸಾಲ ಕುರಿತಾದ ಸಮಸ್ಯೆ ಬಗೆಹರಿಯಲಿದೆ. ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಕುಟುಂಬದವರಲ್ಲಿದ್ದ ಹಣಕಾಸು ಸಮಸ್ಯೆ ನಿವಾರಣೆ ಆಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications