Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಮಂಗಳ ಸಂಚಾರ: ಹಲವರಿಗೆ ಈ ವಾರ ಅದ್ಭುತ ಪ್ರಯೋಜನ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿ, ನಕ್ಷತ್ರಗಳ ಬದಲಾಯಿಸುವುದು ನೋಡಬಹುದು. ಗ್ರಹಗಳ ಈ ಸಂಚಾರವು ಹಲವು ರೀತಿಯ ಬದಲಾವಣೆಗಳು, ಹಲವು ರೀತಿಯ ಲಾಭ, ನಷ್ಟಗಳಿಗೂ ಕಾರಣವಾಗುತ್ತವೆ ಎಂಬುದನ್ನು ನಾವು ಅರಿತಿದ್ದೇವೆ. ಅದ್ರಲ್ಲೂ ಗ್ರಹಗಳ ಚಲನೆಯು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಸಾಮಾನ್ಯ.
ಗ್ರಹಗಳಲ್ಲಿ ಪ್ರಮುಖವಾಗಿ ಶುಕ್ರನಿಗೆ ತನ್ನದೇ ಆದ ಸ್ಥಾನ ನೀಡಲಾಗಿದೆ. ಈಗ ಶುಕ್ರನು ವೃಷಭ ರಾಶಿಗೆ ಚಲಿಸಿದ್ದಾನೆ. ಕಳೆದ ಎರಡು ದಿನದ ಹಿಂದೆ ಶುಕ್ರ ವೃಷಭ ರಾಶಿಗೆ ಚಲಿಸಿರುವುದು ಹಲವರಲ್ಲಿ ಬದಲಾವಣೆಗೆ ಕಾರಣವಾಗಿತ್ತು. ಆದ್ರೆ ಈಗ ಅದೇ ವೃಷಭ ರಾಶಿಗೆ ಮಂಗಳ ಕೂಡ ಚಲಿಸುತ್ತಿದೆ.

ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತವೆ. ಈ ಗ್ರಹ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ ಅಂತ್ಯದಲ್ಲಿ, ಶುಕ್ರನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ಮಂಗಳನು ಶುಕ್ರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶುಕ್ರನ ನಕ್ಷತ್ರವಾಗಿರುವ ಪೂರ್ವ ಪಾಲ್ಗುಣಿಗೆ ಮಂಗಳ ಸಂಚರಿಸುತ್ತಾನೆ. ಇದು ಹಲವರಿಗೆ ಯೋಗ ತರಲಿದೆ.
ಜೂನ್ 30ರಂದು ಮಂಗಳನು ಈ ನಕ್ಷತ್ರಕ್ಕೆ ಚಲಿಸುತ್ತಾನೆ. ಹಾಗೆ ಅಲ್ಲಿತೇ ಜುಲೈ 7ರವರೆಗೂ ನೆಲೆಸಲಿದ್ದಾನೆ. ಈ ಒಂದು ವಾರದ ಸಮಯವು ಹಲವರಿಗೆ ಲಾಭದಾಯಕವಾಗುತ್ತಿದೆ. ಹಾಗೆ ಹಲವರಲ್ಲಿ ಶುಭಕಾರಕವಾಗುವುದು ಖಚಿತವಾಗಿದೆ. ಹಾಗಾದ್ರೆ ಯಾರಿಗೆಲ್ಲಾ ಇದು ಲಾಭದಾಯಕ ಎನ್ನುವುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಮಂಗಳನ ಸಂಚಾರವು ಮೇಷ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ಈ ವಾರದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳೂ ದೂರಾಗಲಿವೆ. ನೀವು ಬಯಸಿದಂತೆ ಹಣಕಾಸು ನಿಮ್ಮ ಕೈ ಸೇರಲಿವೆ. ಹಲವು ದಿನದಿಂದ ಅಡೆತಡೆಗೆ ಒಳಗಾಗಿದ್ದ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುತ್ತೀರಿ. ಹಾಗೆ ಔದ್ಯೋಗಿಕ ವಿಚಾರವಾಗಿ ಎದುರಾಗಿರುವ ಸಮಸ್ಯೆ ಕೂಡ ನಿವಾರಣೆ ಆಗಬಹುದು. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದಲೂ ಕೂಡ ನೀವು ಮುಕ್ತರಾಗಬಹುದು. ವೈವಾಹಿಕ ಜೀವದಲ್ಲಿ ಶಾಂತಿ ಇರಲಿದೆ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವು ದೊಡ್ಡ ನಿರ್ಧಾರವೊಂದನ್ನು ಈ ಸಮಯದಲ್ಲಿ ತೆಗೆದುಕೊಳ್ಳಬಹದು, ಇದು ಉತ್ತಮ ಫಲಿತಾಂಶ ತರಬಹುದು. ಆಸ್ತಿ ವಿಚಾರದಲ್ಲಿ ಧನಾತ್ಮಕ ಪರಿಣಾಮ ನೋಡುವಿರಿ.
ಸಿಂಹ ರಾಶಿ
ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಮಂಗಳ ಸಂಚಾರವು ಸಿಂಹ ರಾಶಿಯವರಿಗೆ ಯಶಸ್ವಿ ಅವಧಿ ಆಗಿರಲಿದೆ. ನಿರುದ್ಯೋಗಿಗಳಿಗೆ ಈ ಅವಧಿಯಲ್ಲಿ ಅವರ ಕನಸಿನ ಕೆಲಸ ಸಿಗುತ್ತದೆ ಮತ್ತು ಅವರ ಕೆಲಸದಲ್ಲಿನ ಪ್ರಯತ್ನಗಳನ್ನು ಅವರ ಮೇಲಧಿಕಾರಿಗಳು ಮೆಚ್ಚುತ್ತಾರೆ. ವ್ಯಾಪಾರಿಗಳು ತಮ್ಮ ವ್ಯವಹಾರ ವಿಸ್ತರಿಸಲು ಸೂಕ್ತ ವಾರ ಎನ್ನಬಹುದು, ನಿಮ್ಮ ಎಲ್ಲಾ ಕೆಲಸಗಳು ಕೈಗೂಡಬಹುದು. ಆರ್ಥಿಕವಾಗಿ ಈ ವಾರದಲ್ಲಿ ನೀವು ಅಂದುಕೊಂಡಂತೆ ನೆರವೇರಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಬೆಂಬಲ ಸಿಗಲಿದೆ.
ಮಕರ ರಾಶಿ
ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಮಂಗಳನ ಸಂಚಾರವು ಮಕರ ರಾಶಿಯವರಿಗೆ ಅನೇಕ ಬಗೆಯಲ್ಲಿ ಲಾಭದಾಯಕವಾಗುತ್ತಿದೆ. ಮಂಗಳನ ಆಶೀರ್ವಾದವು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಹೊಸ ವಾಹನ ಖರೀದಿ ಸಂಬಂಧವಾಗಿ ನಿಮಗೆ ಲಾಭದಾಯಕ ವಾರ ಎನ್ನಬಹುದು. ವ್ಯಾಪಾರಿಗಳಲ್ಲಿ ಪ್ರಗತಿ, ಉದ್ಯಮಿಗಳಿಗೆ ಲಾಭಾಂಶ ಹೆಚ್ಚಳ, ಹಾಗೆ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೂ ಅತ್ಯುತ್ತಮ ಕಾಲ ಇದು ಎನ್ನಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications