Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಿಂಹ ರಾಶಿಗೆ ಮಂಗಳ ಸಂಚಾರ: ಈ ರಾಶಿಯವರಿಗೆ ಅಶುಭ ಫಲ ಆರಂಭ..!!
ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹಾಗೆ ಮಂಗಳನ ಕೃಪೆಯಿಂದಾಗಿ ಹಲವು ರಾಶಿಗಳಿಗೆ ಶುಭವಾಗುವುದನ್ನು ಕೂಡ ನಾವು ನೋಡಬಹುದು. ಅದರಲ್ಲೂ ಮಂಗಳನು ರಾಶಿ ಬದಲಾಯಿಸುವುದು ಹಾಗೆ ಶುಭಕಾರಕಗಳ ತರುವುದು ನೋಡಬಹುದು. ಸದ್ಯ ಮಂಗಳನ್ನು ಜೂನ್ 7ರಂದು ಸೂರ್ಯನ ಅಧಿಪತ್ಯ ಇರುವ ಸಿಂಹ ರಾಶಿಗೆ ಚಲಿಸಿದ್ದಾನೆ.
ಮಂಗಳನ ಈ ರೀತಿಯ ಚಲನೆಯು ಹಲವು ರೀತಿಗಳಲ್ಲಿ ಶುಭಕರವಾಗುತ್ತದೆ. ವಿಶೇಷವಾಗಿ ಮಂಗಳ, ಬುಧ ಹಾಗೂ ಚಂದ್ರನು ಈಗ ರಾಶಿಗಳ ಬದಲಾಯಿಸುವ ಸಮಯ ಆಗಿದೆ. ಮಂಗಳನನ್ನು ಆರ್ಥಿಕ ಸ್ವಾವಲಂಬನೆ, ಪ್ರಗತಿ, ಆರೋಗ್ಯ ವೃದ್ಧಿ, ಐಶ್ವರ್ಯ ಪ್ರಾಪ್ತಿ ಸೇರಿ ಹಲವು ರೀತಿಯ ಶುಭಕಾರಕವಾಗಿ ಪರಿಗಣಿಸಲಾಗುತ್ತದೆ.

ಹಾಗೆ ಮಂಗಳನು ಧೈರ್ಯ, ಶೌರ್ಯ, ಶಕ್ತಿ ಮತ್ತು ಧೈರ್ಯದ ಅಂಶವಾದ ಮಂಗಳವು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿ ಜನರ ಜೀವನದಲ್ಲಿ ಅದರ ಪ್ರಭಾವ ಉಂಟು ಮಾಡಲಿದೆ. ಆದ್ರೆ ಕೆಲವು ರಾಶಿಗಳಿಗೆ ಮಂಗಳನ ಸಂಚಾರವು ವ್ಯತಿರಿಕ್ತ ಪರಿಣಾಮಕ್ಕೂ ಕಾರಣವಾಗಲಿದೆ. ಮಾವಿಂದು ಮಂಗಳನ ಪ್ರಭಾವಕ್ಕೆ ಒಳಗಾಗಿ ಅಶುಭಕಾರಕ ಸ್ಥಿತಿಯಲ್ಲಿರುವ ರಾಶಿಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳವು ಮೇಷ ರಾಶಿಯ 5 ನೇ ಮನೆಯಲ್ಲಿ ಚಲಿಸಲಿದೆ. ಹೀಗಾಗಿ ನಿಮ್ಮ ದಾಂಪತ್ಯ, ಪ್ರೀತಿ ಪ್ರೇಮದ ವಿಚಾರವಾಗಿ ಸಮಸ್ಯೆಗಳು ಬರಬಹುದು. ಮಕ್ಕಳ ವಿದ್ಯಾಭ್ಯಾಸದ ಕುರಿತಾದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಅನಿರೀಕ್ಷಿತ ನಿರ್ಧಾರಗಳು ನಿಮಗೆ ಸಮಸ್ಯೆಗಳ ತರಬಹುದು. ಆತುರವಾಗಿ ಯಾವುದೇ ನಿರ್ಧಾರಗಳ ತೆಗೆದುಕೊಳ್ಳಲು ಹೋಗಬೇಡಿ. ಸಂಬಂಧಗಳಲ್ಲಿ ಹಲವು ರೀತಿಯ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರಲಿದೆ. ಹಾಗೆ ಆರ್ಥಿಕ ಸ್ಥಿತಿಯಲ್ಲೂ ಕೂಡ ನೀವು ಏರಿಳಿತ ನೋಡುತ್ತೀರಿ.
ವೃಷಭ ರಾಶಿ
ಮಂಗಳ ಗ್ರಹವು ವೃಷಭ ರಾಶಿಯ 4 ನೇ ಮನೆಗೆ ಚಲಿಸಲಿದೆ. ಇದರಿಂದ ನಿಮ್ಮ ಕುಟುಂಬ ಜೀವನ ನಿರ್ವಹಣೆ ಜಟಿಲವಾಗಬಹುದು. ಮನೆಯಲ್ಲಿ ಹಣಕಾಸು ಸಂಬಂಧ ಒತ್ತಡ ಹೆಚ್ಚಾಗಬಹುದು. ಮಕ್ಕಳ ಕುರಿತಾದ ಚಿಂತೆ ಕಾಡಬಹುದು. ಹಾಗೆ ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಹೊಸ ಮನೆ, ಜಾಗ, ವಾಹನ ಖರೀದಿಯ ಕುರಿತ ಆಲೋಚನೆಗಳಲ್ಲಿ ಅಥವಾ ಸಿದ್ದತೆಗಳಲ್ಲಿ ಅಡೆತಡೆಗಳು ಎದುರಾಗಬಹುದು. ಹಲವು ಬಾರಿ ತಾಳ್ಮೆ ಕಳೆದುಕೊಳ್ಳುವಂತಹ ವಿಚಾರಗಳು ನಡೆಯಲಿದೆ.
ಕರ್ಕ ರಾಶಿ
ಮಂಗಳ ಗ್ರಹವು ಕರ್ಕ ರಾಶಿಯ 2ನೇ ಮನೆಗೆ ಚಲಿಸಲಿದೆ. ಇದರಿಂದಾಗಿ ನಿಮ್ಮ ಮಾತುಗಳಿಂದ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರಲಿದೆ. ಮನೆಯಲ್ಲಿ ಆಶಾಂತಿಯಂತಹ ವಾತಾವರಣಕ್ಕೆ ನೀವು ಕಾರಣರಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಇರಲಿದೆ. ವ್ಯಾಪಾರಿ ವರ್ಗವು ವ್ಯವಹಾರಿಕವಾಗಿ ಹಿನ್ನಡೆ ಅನುಭವಿಸಬಹುದು.
ಮಕರ ರಾಶಿ
ಮಂಗಳ ಗ್ರಹವು ಮಕರ ರಾಶಿಯ 8 ನೇ ಮನೆಗೆ ಸ್ಥಳಾಂತರಗೊಂದಿದೆ. ಹೀಗಾಗಿ ಈ ರಾಶಿ ಜನರ ವೆಚ್ಚಗಳು ಹೆಚ್ಚಾಗಲಿವೆ. ನೀವು ಬೇರೊಂದು ಕೆಲಸಕ್ಕಾಗಿ ಮೀಸಲಿಟ್ಟ ಹಣವನ್ನು ಈ ಸಮಯದಲ್ಲಿ ಖರ್ಚು ಮಾಡಬಹುದು. ಇದರಿಂದ ಒತ್ತಡಕ್ಕೆ ನೀವು ಸಿಲುಕಬಹುದು. ಅಲ್ಪಾವಧಿ ಹಣಕಾಸು ಸಮಸ್ಯೆ ದೊಡ್ಡದಾಗಬಹುದು. ಸಾಲ ಹೆಚ್ಚಳದ ಆತಂಕ ಕೂಡ ಇದೆ.
ಕುಂಭ ರಾಶಿ
ಮಂಗಳನು ಕುಂಭ ರಾಶಿಯ 7ನೇ ಮನೆಗೆ ಸ್ಥಳಾಂತರಗೊಂಡಿದ್ದಾನೆ. ಇದರಿಂದಾಗಿ ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಮೂಡಬಹುದು. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಅದರ ಲಾಭಾಂಶ ಕೈ ಸೇರದೆ ಇರಬಹುದು. ಸರ್ಕಾರಿ ಉದ್ಯೋಗಿಗಳಲ್ಲಿ ಹೊಸ ಒತ್ತಡ ಇರಲಿದೆ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












