Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
139 ದಿನಗಳ ಕಾಲ ಮಂಗಳ ಅಸ್ತಮಿತ: ಈ 4 ರಾಶಿಯಲ್ಲಿ ಹಣಕಾಸು ಬಿಕ್ಕಟ್ಟು; ವೈಮನಸ್ಸು!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಅದ್ರಲ್ಲೂ ಮಂಗಳನ ಸಂಚಾರವು ಮುಖ್ಯ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆ ಮಂಗಳನನ್ನು ಅತ್ಯಂತ ಶುಭಕರ ಹಾಗೆ ಲಾಭ ತರುವ ಗ್ರಹವೆಂದು ಪರಿಗಣಿಸಲಾಗಿದೆ. ಈಗ ನವೆಂಬರ್ 6, 2025 ರಂದು, ಮಂಗಳವು ತನ್ನದೇ ಆದ ರಾಶಿ ವೃಶ್ಚಿಕದಲ್ಲಿ ಬೆಳಗೆ 3:10 ಕ್ಕೆ ಅಸ್ತಮಿಸುತ್ತಾನೆ.
ಮಂಗಳನ ಈ ಗ್ರಹ ಬದಲಾವಣೆಯು ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಲಾಭಗಳಿಗೆ ಕಾರಣವಾಗುತ್ತಿದೆ. ಅದ್ರಲ್ಲೂ ಮಂಗಳನು ಚಲಿಸುವ ಈ ಸಮಯದಲ್ಲಿ 139 ದಿನಗಳ ಕಾಲ ಆತ ಅಸ್ತಮಿಸಿರುತ್ತಾನೆ. ಹೀಗಾಗಿ ಈ ದಿನಗಳಲ್ಲಿ ಹಲವರಿಗೆ ಅಶುಭ ಸಮಾಚಾರಗಳಿವೆ. ಹಾಗೆ ಒಂದಿಷ್ಟು ಅಡ್ಡಿಗಳು ಎದುರಾಗುವುದು ಸಹ ನೋಡಬಹುದು.

ಮಂಗಳನ ಈ ಗ್ರಹ ಬದಲಾವಣೆಯಿಂದ ಯಾರಿಗೆಲ್ಲಾ ನಷ್ಟ? ಯಾರ ಜೀವನದಲ್ಲಿ ಋಣಾತ್ಮಕ ಬದಲಾವಣೆಗಳ ನೋಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳ ಗ್ರಹವು ನಿಮಗೆ ಅಶುಭ ಕಾರಕವಾಗಿ ಪರಿಣಮಿಸಲಿದ್ದಾನೆ. ಮೇಷ 8ನೇ ಮನೆಯಲ್ಲಿ ಮಂಗಳ ಅಸ್ತಮಿಸಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಮಾನಸಿಕ ತೊಳಲಾಟಗಳು ಹೆಚ್ಛಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ನೀವು ಪರದಾಡಬಹುದು. ನಿಮ್ಮ ಆರ್ಥಿಕ ವಿಚಾರಗಳು ಒತ್ತಡದಿಂದಲೂ ಹಾಗೆ ಸಮಸ್ಯೆಗಳ ತರಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯ ಹದಗೆಡಬಹುದು. ಬೆನ್ನು, ಮೂಳೆ ಸಂಬಂಧಿತ ನೊವು, ಅಥವಾ ಅನಾರೋಗ್ಯಕ್ಕೆ ನೀವು ತುತ್ತಾಗಬಹುದು.
ಮಿಥುನ ರಾಶಿ
ಮಂಗಳ ಗ್ರಹವು ಮಿಥುನ ರಾಶಿಯವರಿಗೆ ಹಲವು ರೀತಿಯ ಸಮಸ್ಯೆಗಳ ತರಲಿದೆ. ಅದ್ರಲ್ಲೂ ನಿಮ್ಮ 6ನೇ ಮನೆಯಲ್ಲಿ ಮಂಗಳನ ಸಂಚಾರವು ನಿಮ್ಮ ಆಸ್ತಿ, ವಸ್ತು ಖರೀದಿ, ಐಷಾರಾಮಿ ವಿಚಾರದಲ್ಲಿ ಸವಾಲುಗಳನ್ನು ತರಲಿದೆ. ವೃತ್ತಿ ಜೀವನದಲ್ಲಿ ನಿಮಗೆ ಒತ್ತಡ ಅಥವಾ ಸಮಸ್ಯೆಗಳಿವೆ. ವಾಹನ ಸಂಬಂಧಿತ ಖರ್ಚುಗಳು ಹೆಚ್ಚಾಗುತ್ತದೆ. ಮಂಗಳ ಗ್ರಹದ ಸ್ಥಿತಿಯು ನಿಮ್ಮ ಖರ್ಚುಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ನಿಮ್ಮ ಶತ್ರುಗಳು ಹೆಚ್ಚಾಗಬಹುದು. ನಿಮಗೆ ಯಾರಿಂದಾದು ಹಣ ಬರಬೇಕಿದ್ದರೆ ಅದರಿಂದ ನಷ್ಟ ನೋಡಬಹುದು, ಅಥವಾ ಹಣ ಕೈಸೇರದೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಂಗಳನ ಈ ಸ್ಥಾನಪಲ್ಲಟವು ಹಲವು ರೀತಿಯಲ್ಲಿ ಋಣಾತ್ಮಕ ಪರಿಣಾಮಗಳ ಎದುರಿಸುವುದು ನೋಡಬಹುದು. ನಿಮ್ಮ ಹಣಕಾಸು ಸ್ಥಿತಿ ಬಿಗಡಾಯಿಸುವುದು ಹಲವು ಸಮಸ್ಯೆಗಳ ಉಂಟು ಮಾಡಲಿದೆ. ಅದ್ರಲ್ಲೂ ದಾಂಪತ್ಯದಲ್ಲಿದ್ದ ಬಿಕ್ಕಟ್ಟುಗಳು ದೊಡ್ಡದಾಗಲಿದೆ. ಹಾಗೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮತ್ತಷ್ಟು ಖರ್ಚು ಮಾಡಬೇಕಾಗುತ್ತದೆ. ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿನ ಏರುಪೇರು ನಿಮಗೆ ಅಡ್ಡಿಯ ಜೊತೆಗೆ ಮಾನಸಿಕ ನೆಮ್ಮದಿ ಹಾಳು ಮಾಡಬಹುದು.
ಮೀನ ರಾಶಿ
ಮಂಗಳ ಗ್ರಹದ ಸ್ಥಿತಿಯು ನಿಮಗೆ ಅನಾನುಕೂಲಗಳ ತರಲಿದೆ. ಮೀನ ರಾಶಿಯ 9ನೇ ಮನೆಯಲ್ಲಿ ಮಂಗಳ ಅಸ್ತಮಿಸಲಿದ್ದಾನೆ. ನಿಮ್ಮ ಹಲವು ಕೆಲಗಳಲ್ಲಿ ಅಶುಭ ಯೋಗವಿದೆ. ನೀವು ಮಾಡಬೇಕಿದ್ದ ಕೆಲಸಗಳಲ್ಲಿ ಅಡ್ಡಿಯಾಗಲಿದೆ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಅಶುಭವಿದೆ. ಆರೋಗ್ಯದಲ್ಲಿನ ಏರುಪೇರು ನಿಮ್ಮಲ್ಲಿ ಖರ್ಚುಗಳನ್ನು ಹೆಚ್ಚಾಗಿಸಲಿದೆ. ಸಂಬಂಧಿಕರ ನಡುವೆ ಮನಸ್ತಾಪಗಳು ಹೆಚ್ಚಾಗುವ ಸಮಯವಿದು. ನಿಮ್ಮ ಉಳಿತಾಯದ ಹಣವನ್ನು ನೀವು ಬೇರೊಂದು ಕೆಲಸಕ್ಕೆ ಬಳಸಬೇಕಾಗುತ್ತದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
