ಮಾರ್ಚ್ ತಿಂಗಳ ಭವಿಷ್ಯ: 12 ರಾಶಿಗಳಲ್ಲಿ ಈ 4 ರಾಶಿಗಳಿಗೆ ಅದೃಷ್ಟದ ಮಾಸವಿದು

ಮಾರ್ಚ್‌ ತಿಂಗಳ ರಾಶಿಫಲ ನೋಡುವುದಾದರೆ ಬಹುತೇಕ ರಾಶಿಗಳಿಗೆ ಸವಾಲಿನ ಮಾಸ, ಆದರೆ ಕೆಲ ರಾಶಿಯವರು ಅದ್ಭುತ ಪ್ರಯೋಜನ ಪಡೆಯುತ್ತಾರೆ, ಆ ರಾಶಿಗಳೆಂದರೆ...

ಮೇಷ ರಾಶಿ
ಮಾರ್ಚ್‌ ಮಾಸ ಮೇಷ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಈ ತಿಂಗಳು ಅದೃಷ್ಟದ ಮಾಸವಾಗಿದೆ. ಈ ಮಾಸ ನೀವು ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನೀವು ಹೊಸ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿದ್ದರೆ ಅಥವಾ ಉದ್ಯೋಗದಲ್ಲಿ ಬಡ್ತಿ ನಿರೀಕ್ಷೆಯಲ್ಲಿದ್ದರೆ ಈ ಮಾಸ ಅನುಕೂಲಕರ ಪ್ರಯೋಜನ ಪಡೆಯುತ್ತೀರಿ.

March Month Prediction

ವ್ಯಾಪಾರಸ್ಥರಿಗೆ ಕೆಲ ಸವಾಲುಗಳು ಬಂದರು ಅನುಕೂಲಕರ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಸಂಬಂಧದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಆದರೆ ಆರೋಗ್ಯದ ಕಡೆಗೆ ಗಮನಹರಿಸಿ.

ವೃಷಭ ರಾಶಿ
ವೃ ವೃಷಭ ರಾಶಿಯವರಿಗೆ ಮಾರ್ಚ್‌ ಮಾಸ ತುಂಬಾನೇ ಪ್ರಯೋಜನಕಾರಿಯಾಗಿದೆ. ನೀವು ಕೆಲಸದ ಹುಡುಕಾಟದಲ್ಲಿದ್ದರೆ ಈ ಅವಧಿಯಲ್ಲಿ ನೀವು ಬಯಸಿದ ಕೆಲಸ ಪಡೆಯಲು ಸಾಧ್ಯವಾಗಲಿದೆ. ಬಡ್ತಿಯ ನಿರೀಕ್ಷೆಯಲ್ಲಿರುವವರೆಗೆ ಈ ಸಮಯ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯಲು ಸಾಧ್ಯವಾಗಲಿದೆ.

ಇನ್ನು ಈ ಮಾಸ ದೊಡ್ಡ ವ್ಯವಹಾರ ಮಾಡಲು ಕೂಡ ಸಾಧ್ಯವಾಗುವುದು. ರಾಜಕಾರಣಿಗಳಿಗೆ ಈ ಮಾಸ ತುಂಬಾನೇ ಪ್ರಯೋಜನಕಾರಿಯಾಗಿದೆ. ಕುಟುಂಬ ಜೀವನದಲ್ಲಿ ಪ್ರೀತಿ , ಸಾಮರಸ್ಯ ಇರಲಿದೆ, ಅವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಬಹುದು, ಪ್ರೇಮಿಗಳಿಗೂ ಈ ಮಾಸ ವಿಶೇಷವಾಗಿರಲಿದೆ.

ಧನು ರಾಶಿ
ಧನು ರಾಶಿಯವರಿಗೆ ಮಾರ್ಚ್‌ ತಿಂಗಳು ತುಂಬಾನೇ ಅನುಕೂಲಕರವಾಗಿದೆ. ನೀವು ನಿಮ್ಮ ಬದುಕಿನಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕೆಲಸದ ಹುಡುಕಾಟದfಲಿರುವವರೆಗೆ ಕೆಲಸ ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ವೃತ್ತಿ ಬದುಕಿನಲ್ಲಿ ತೃಪ್ತಿ ಇರಲಿದೆ.

ವ್ಯಾಪಾರಸ್ಥರು ಕೂಡ ತಮ್ಮ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ಈ ಅವಧಿಯಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭ ಗಳಿಸುವುದರಿಂದ ಲಾಭ ಗಳಿಸಲು ಸಾಧ್ಯವಾಗುವುದು. ಮನೆಯ ಸೌಕರ್ಯ ಹೆಚ್ಚಿಸಲು ವಸ್ತುಗಳನ್ನು ಖರೀದಿಸಬಹುದು.

ಕುಟುಂಬ ಜೀವನ ಚೆನ್ನಾಗಿರಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ತುಂಬಾನೇ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಮೂರನೇಯ ವ್ಯಕ್ತಿಯಿಂದ ಮನಸ್ತಾಪ ಉಂಟಾಗದಂತೆ ಜಾಗ್ರತೆವಹಿಸಿ.

ಕುಂಭ ರಾಶಿ
ಕುಂಭ ರಾಶಿಯವರಿಗೂ ಮಾರ್ಚ್‌ ತಿಂಗಳು ತುಂಬಾನೇ ಅನುಕೂಲಕರವಾಗಿದೆ, ನಿಮ್ಮ ಪ್ರಾಮಾಣಕ ಕೆಲಸಕ್ಕೆ ಹೆಚ್ಚಿನ ಫಲಿತಾಂಶ ದೊರೆಯಲಿದೆ, ಉದ್ಯೋಗಿಗಳಿಗೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ವ್ಯಾಪಾರಿಗಳು ಕೂಡ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಿದೆ. ಈ ಸಮಯದಲ್ಲಿ ಹಣವನ್ನು ಉಳಿತಾಯಮಾಡಲು ಸಾಧ್ಯವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳಿಗೆ ಈ ಮಾಸ ವಿಶೇಷವಾಗಿರಲಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Saturday, March 1, 2025, 10:09 [IST]
X
Desktop Bottom Promotion