Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 31ರ ದಿನ ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಲಾಭವಿದೆ?
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 31ರ ರಾಶಿಫಲ ಇಲ್ಲಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಬಹಳ ಲಾಭ ನೋಡಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಉತ್ತಮವಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ಆದರೆ ಎಚ್ಚರಿಕೆಯಿಂದ ನಿರ್ಧಾರಗಳ ತೆಗೆದುಕೊಳ್ಳುವುದು ಉತ್ತಮ. ಅವಿವಾಹಿತರಲ್ಲಿ ಒತ್ತಡ ಹೆಚ್ಚಾಗಲಿದೆ. ಅನಾವಶ್ಯಕ ಜಗಳಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಈ ದಿನ ಶುಭಕರವಾಗಲಿದ್ದು, ಓದಿನ ಕಡೆಗೆ ಗಮನವಿಡಿ. ಸಿಗರೇಟ್ ಮತ್ತು ಮದ್ಯದಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಿ. ಆರೋಗ್ಯ ಸಂಬಂಧಿ ಸಮಸ್ಯೆಗಿಂದ ದೂರವಿರಲು ಈ ಸಲಹೆ ನೀಡಲಾಗಿದೆ. ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಬಹಳ ದಿನಗಳ ಬಯಕೆಯೊಂದನ್ನು ಈ ದಿನ ಈಡೇರಿಸಿಕೊಳ್ಳಲ್ಲಿದ್ದೀರಿ.
ವೃಷಭ ರಾಶಿ
ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲಕರ ದಿನವಾಗಿರುತ್ತದೆ. ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತೀರಿ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನ. ನೀವು ಹಣವನ್ನು ಗಳಿಸುವ ಅವಕಾಶವನ್ನು ಪಡೆಯಬಹುದು. ಕುಟುಂಬಕ್ಕಾಗಿ ಅಥವಾ ಸ್ನೇಹಿತರಿಗಾಗಿ ನೀವಿಂದು ಹಣ ಖರ್ಚು ಮಾಡಬಹುದು. ಭವಿಷ್ಯದ ದೃಷ್ಟಿಯಿಂದ ನೀವು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಹಲವು ದಿನಗಳಿಂದ ಉಳಿಸಿದ್ದ ಕೆಲಸ ಪೂರ್ಣ ಮಾಡಿ. ಈ ದಿನ ಸಾಲ ಮಾಡುವುದನ್ನು ತಪ್ಪಿಸುವುದು ಉತ್ತಮ. ಹಾಗೆ ಬೇರೆಯವರಿಗೂ ಕೊಡಿಸುವುದು ಉತ್ತಮವಲ್ಲ.

ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಶುಭ ದಿನವಾಗಿರಲಿದೆ. ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮಗೆ ಯಾರಾದರು ಹಣ ನೀಡುವ ಉದ್ದೇಶವಿದ್ದರೆ ಅಥವಾ ಬೇರೆವರಿಂದ ನೀವು ಹಣದ ಸಹಕಾರ ಬಯಸಿದ್ದರೆ ಈ ದಿನ ಪೂರೈಕೆಯಾಗಲಿದೆ. ಅಗತ್ಯ ವಸ್ತುವೊಂದಕ್ಕೆ ನೀವು ಹಣ ವ್ಯಯಿಸಬಹುದು. ಹಲವು ದಿನದಿಂದ ನಿಮಗೆ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಉತ್ತಮ ದಿನವಾಗುತ್ತಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಇಂದು ಮಿಶ್ರ ಫಲ ನೋಡಲಿದ್ದಾರೆ. ದಿನದ ಆರಂಭವು ಖರ್ಚುಗಳಿಂದ ಆರಂಭವಾಗಬಹುದು. ನಿಮಗೆ ಆಸಕ್ತಿಯಲ್ಲದ ಕೆಲಸದಲ್ಲಿ ನೀವು ಅನಿವಾರ್ಯವಾಗಿ ಭಾಗಿಯಾಗಬೇಕಾಗುತ್ತದೆ. ಹಲವು ವರ್ಷದ ಕೆಲಸ ಮತ್ತೆ ನಿಮ್ಮ ಹುಡುಕಿ ಬರಬಹುದು. ವಾಹನ ಮಾಲಿಕರು ಲಾಭ ಮಾಡುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿ ವರ್ಗವು ಈ ದಿನ ಬಹಳ ಲಾಭ ಮಾಡಬಹುದು. ಕೆಲಸದ ಕಾರಣದಿಂದ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ದಾಂಪತ್ಯ ಹಾಗೂ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರೂ ದೊಡ್ಡದು ಮಾಡುವ ಬದಲಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಇಂದು ಮುಂದಾಗಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನ ಹಲವು ರೀತಿಯ ಲಾಭ ನೋಡಲಿದ್ದೀರಿ. ನೀವು ಅಂದುಕೊಂಡಿರುವಂತೆ ಹಣಕಾಸು ವಿಚಾರಗಳು ನಡೆಯಲಿವೆ. ಯಾವುದೇ ದೊಡ್ಡ ನಿರ್ಧಾರವನ್ನು ಮುಂದಾಲೋಚನೆ ಇಲ್ಲದೆ ತೆಗೆದುಕೊಳ್ಳಬೇಡಿ. ಯಾವ ವಿಚಾರವಾಗಿ ನೀವು ಇಷ್ಟು ದಿನಗಳಿಂದ ಕೆಲಸದಲ್ಲಿ ಹಿನ್ನಡೆ ಅನುಭವಿಸಿದ್ದೀರೋ ಅದು ನಿವಾರಣೆಯಾಗಬಹುದು. ಅವಿವಾಹಿತರು ಇಂದು ಶುಭ ಸುದ್ದಿ ಕೇಳಬಹುದು. ನೀವು ಹೊಸ ವ್ಯಾಪಾರ ಅಥವಾ ಉದ್ಯಮ ಆರಂಭಿಸಿದ್ದರೆ ಈ ದಿನದಿಂದ ಲಾಭದಾಯಕವಾಗಬಹುದು.
ಕನ್ಯಾ ರಾಶಿ
ದಿನದ ಆರಂಭವು ಉತ್ತಮವಾಗಿರುತ್ತದೆ. ನೀವು ಧನಾತ್ಮಕ ಶಕ್ತಿಯಿಂದ ಸುತ್ತುವರೆದಿರುವಿರಿ. ನಿಮ್ಮ ಬಹುತೇಕ ಕೆಲಸಗಳು ನಿಮ್ಮ ಆಲೋಚನೆಗಳಂತೆ ಸುಲಭವಾಗಿ ಮುಗಿಸಬಹುದು. ಪ್ರೀತಿಯ ಜೀವನದಲ್ಲಿ ಬಹಳ ಸುಖ ಹಾಗೂ ಸಂತಸ ಇರಲಿದೆ. ದುಂದುವೆಚ್ಚಕ್ಕೆ ಇಂದು ಮುಂದಾಗಬೇಡಿ. ವ್ಯಾಪಾರಿಗಳಿಗೆ ಉತ್ತಮ ದಿನವಾದರು ಖರ್ಚು ಕೂಡ ಹೆಚ್ಚಾಗಲಿದೆ. ನಿಮ್ಮ ಪರದಿಯಿಂದ ಹೊರಗಿನ ಖರ್ಚುಗಳಿಗೆ ಇಂದು ಮುಂದಾಗಬೇಡಿ, ಇದರಿಂದ ನೀವು ಅದಾಯದ ಕೊರತೆಗೆ ಒಳಗಾಗಬಹುದು. ಬಹಳಷ್ಟು ಸಮಯ ನೀವು ಮನೆಯಿಂದ ಹೊರಗುಳಿಯುತ್ತೀರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಸವಾಲುಗಳ ತರಬಹುದು. ನೀವು ಉದ್ಯೋಗ ಹುಡುಕುವ ಕೆಲಸ ಕಾಡುತ್ತಿದ್ದರೆ ಈ ಕೆಲಸ ಹಾಗೆಯೇ ಮುಂದುವರೆಸಿ. ಆರ್ಥಿಕ ಸಮಸ್ಯೆಗಳ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುವ ಕಾರಣ ನಿಮ್ಮಲ್ಲಿ ನೆಮ್ಮದಿ ಇರಲಿದೆ. ಹಾಗೆ ಉತ್ತಮ ಕೆಲಸಗಳಿಗೆ ನೀವು ಮುಂದಾಗುತ್ತೀರಿ. ಅನಗತ್ಯ ಮಾತುಗಾರಿಕೆ, ಪ್ರಯಾಣಗಳನ್ನು ಮಾಡದೆ ಇರುವುದು ಉತ್ತಮ. ನಿಮ್ಮ ತಂದೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ವೃಶ್ಚಿಕ ರಾಶಿ
ಹಣದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿರುತ್ತದೆ, ವಿಶೇಷವಾಗಿ ವ್ಯಾಪಾರ ವೃದ್ಧಿಸಲು ಅಥವಾ ವ್ಯವಹಾರದ ದೃಷ್ಟಿಯಿಂದ ಸಾಲ ಪಡೆಯಲು ಮುಂದಾದರೆ ಈ ದಿನ ಅದಕ್ಕಾಗಿ ಒಂದಿ ಹೆಜ್ಜೆ ಮುಂದಿಡಲಿದ್ದೀರಿ. ಹೂಡಿಕೆ, ಉಳಿತಾಯ ಸಂಬಂಧವಾಗಿ ಈ ದಿನ ಮುಖ್ಯ ನಿರ್ಧಾರ ತೆಗೆದುಕೊಳ್ಳಬಹುದು. ಮಕ್ಕಳಿಂದ ಕೆಲಸ ಸಂಬಂಧಿ ಸಮಸ್ಯೆ ಎದುರಾಗಬಹುದು. ದಾಂಪತ್ಯ ಜೀವನದಲ್ಲಿ ನಿಮ್ಮ ಪರವಾದ ಒಲವಿರಲಿದೆ. ವಾಹನ ಚಲಾಯಿಸುವವರು ಇಂದು ಎಚ್ಚರಿಕೆಯಿಂದ ಇರುವುದು ಉತ್ತಮ
ಧನು ರಾಶಿ
ಧನು ರಾಶಿಯ ಮಂದಿ ಈ ದಿನದಂದು ಹಲವು ರೀತಿಯ ಧನಾತ್ಮಕ ಬದಲಾವಣೆಗಳ ನೋಡಬಹುದು, ನಿಮ್ಮ ಕೆಲಸದ ವಿಚಾರದಲ್ಲಿ ಒತ್ತಡ ಕಡಿಮೆಯಾಗಲಿದೆ. ಹಾಗೆ ಹೊಸ ಉದ್ಯೋಗ ನೀವು ಹುಡುಕುತ್ತಿದ್ದರೆ ಈ ಸಮಯ ನಿಮಗೆ ವರದಾನವಾಗಲಿದೆ. ಬೇರೆಯವರ ಕುರಿತಂತೆ ಅನಗತ್ಯವಾಗಿ ಇಂದು ಮಾತಿಗೆ ಅಥವಾ ಜಗಳಕ್ಕೆ ಮುಂದಾಗಬೇಡಿ. ಟಾರ್ಗೆಟ್ ಸಂಬಂಧಿ ಕೆಲಸದಲ್ಲಿರುವವರಿಗೆ ಈ ದಿನ ನೆಮ್ಮದಿ ಇರಲಿದೆ. ಅಪರಿಚಿತರ ಜೊತೆಗಿನ ಮಾತುಕತೆ ಅಥವಾ ಅವರ ಒಡನಾಟದಿಂದ ದೂರ ಇರುವುದು ಉತ್ತಮ. ನಿಮ್ಮ ಕೆಲಸಗಳಲ್ಲಿ ಅಡೆತಡೆಗಳು ನಿವಾರಣಯಾಗಲಿದೆ.
ಮಕರ ರಾಶಿ
ಕೆಲಸದಲ್ಲಿ ನೀವು ಈ ದಿನ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಈ ಸಮಯವು ಪ್ರಯೋಜನಕಾರಿಯಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದವರು ತುಂಬಾ ಕಾರ್ಯನಿರತರಾಗಿರುತ್ತಾರೆ. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವವವರಿಗೆ ಈ ದಿನ ಶುಭ ಸುದ್ದಿ ಕೇಳುವಿರಿ. ನಿಮ್ಮ ಆದಾಯದಲ್ಲೂ ಏರಿಕೆ ಆಗುವುದು ನೋಡಬಹುದು. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿದ್ದರೆ ಕೆಲವೊಂದಕ್ಕೆ ನೀವು ಪರಿಹಾರ ಪಡೆಯಬಹುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಯಮ ಹಾಗೂ ತಾಳ್ಮೆಯಿಂದ ಇರುವುದು ಬಹಳ ಉತ್ತಮ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ನಿಮಗೆ ಕಾಡಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ದಿನ ನಿರಂತರ ಒತ್ತಡ ಎದುರಿಸಬೇಕಾಗಬಹುದು. ಅದರಲ್ಲೂ ನಿಮ್ಮ ಕೆಲಸದ ಕಾರಣಕ್ಕೆ ಹೊಸ ಒತ್ತಡ ಎದುರಿಸಬೇಕಾಗಬಹುದು. ಯಾವುದೇ ಕೆಲಸವಾದರೂ ಶ್ರಮ ವಹಿಸಿ ಮಾಡುವುದು ಉತ್ತಮ. ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗಲಿದೆ. ನೀವು ವ್ಯಾಪಾರಸ್ಥರಾಗಿದ್ದು ತುಂಬಾ ಸಮಯದಿಂದ ಸಮಸ್ಯೆ ಎದುರಿಸುತ್ತಿದ್ದರೆ ಈ ಸಮಸ್ಯೆಯು ಪರಿಹಾರವಾಗಬಹುದು. ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಲು ಮುಂದಾಗಬೇಡಿ. ಮನೆಯ ವಾತಾವರಣ ಶಾಂತವಾಗಿರಲಿದೆ. ಸ್ನೇಹಿತರಿಂದ ಧನ ಸಹಾಯ ನಿರೀಕ್ಷಿಸಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿ ಈ ದಿನ ಅತ್ಯುತ್ತಮ ಲಾಭ ನೋಡಬಹುದು, ನೀವು ಕಬ್ಬಿಣ ವ್ಯಾಪಾರಿಗಳಾಗಿದ್ದರೆ ಈ ದಿನ ಆದಾಯ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರದಲ್ಲಿರುವವರು ಕೂಡ ಈ ದಿನ ಆದಾಯ ಹೆಚ್ಚಿಸಿಕೊಳ್ಳಬಹುದು. ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಈ ದಿನದಲ್ಲಿ ಶುಭ ಸುದ್ದಿ ಕೇಳಬಹುದು, ಅವಿವಾಹಿತರು ತಮ್ಮ ಮದುವೆಯ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










