ಮಾರ್ಚ್‌ 30ರ ಯುಗಾದಿಯ ದಿನ ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಲಾಭವಿದೆ ನೋಡಿ!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 30ರ ರಾಶಿಫಲ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನೀವು ಆತುರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ನೀವು ಗುರಿಯಾಗಬೇಕಾಗಬಹುದು. ಕಚೇರಿ ಕೆಲಸಗಳು ಹಾಗೆ ಅಲ್ಲಿನ ಒತ್ತಡ ಹ ಹೆಚ್ಚಾಗಬಹುದು. ಹೆಚ್ಚಿನ ಜವಾಬ್ದಾರಿಗಳನ್ನು ನೀವಿಂದು ನಿರ್ವಹಿಸಬೇಕಾಗಬಹುದು. ವ್ಯಾಪಾರಿಗಳು ಈ ದಿನದ ಅಂತ್ಯದಲ್ಲಿ ಲಾಭದಾಯಕವಾದ ಪರಿಸ್ಥಿತಿಯಲ್ಲಿ ಇರುವಿರಿ. ಹಣಕಾಸಿನ ಖರ್ಚು ಹೆಚ್ಚಾದರೂ ನಿಮ್ಮ ಪರವಾದ ಒಲವು ಇರಲಿದೆ. ನೀವು ಅಂದುಕೊಂಡಂತೆ ಹಣ ಹರಿದು ಬರಲಿದೆ. ಅವಿವಾಹಿತರಲ್ಲಿ ಶುಭವಾಗುವ ಸೂಚನೆ ಇದೆ. ದಾಂಪತ್ಯದಲ್ಲಿ ಸಂತಸದ ವಾತಾವರಣ ಇರಲಿದೆ. ಶುಭ ಕಾರ್ಯಗಳಲ್ಲಿ ನೀವಿಂದು ಭಾಗಿಯಾಗುವ ನಿರೀಕ್ಷೆ ಇದೆ.

ವೃಷಭ ರಾಶಿ

ನೀವು ಮಾಡುವ ಕೆಲಸದಲ್ಲಿ ಬಹಳ ಜಾಗರುಕತೆ ಮುಖ್ಯವಾಗುತ್ತದೆ. ಕೆಲಸದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕಥೆ ಇರಲಿ. ವ್ಯಾಪಾರಿಗಳು ಉದ್ದೇಶಿತ ಲಾಭ ಪಡೆಯಲಿದ್ದಾರೆ. ಅನುಪಯುಕ್ತ ವಸ್ತುಗಳ ಮೇಲೆ ನಿಮ್ಮ ಅಮೂಲ್ಯ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಲು ಮುಂದಾಗಬೇಡಿ. ನಿಮ್ಮ ಆರ್ಥಿಕ ಲಾಭಕ್ಕೆ ಕಾರಣವಾಗುವಂತಹ ವಿಚಾರಗಳು ನಡೆಯಲಿವೆ. ವೈಯಕ್ತಿಕ ಜೀವನದಲ್ಲಿ, ನಿಮ್ಮ ಸಂಗಾತಿಯೊಂದಿಗೆ ವೈಮನಸ್ಸು ಮೂಡಬಹುದು. ಹಾಗೆ ಕುಟುಂಬಸ್ಥರೊಂದಿಗೆ ಯಾವುದಾದರು ವಿಚಾರವಾಗಿ ಭಿನ್ನಾಭಿಪ್ರಾಯ ಕಾಡಬಹುದು. ಆರೋಗ್ಯದ ಕಡೆಗೆ ಗಮನವಿಡಿ.

march-30-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಆರ್ಥಿಕವಾಗಿ ಇಂದು ನಿಮಗೆ ಸವಾಲಿನ ದಿನವಾಗಿರಬಹುದು. ಖರ್ಚುಗಳ ಹಠಾತ್ ಹೆಚ್ಚಳವು ನಿಮ್ಮ ಆದಾಯದಲ್ಲಿ ಉಳಿತಾಯದ ಪ್ರಮಾಣ ಕಡಿಮೆ ಮಾಡಬಹುದು. ಅನಗತ್ಯ ವಸ್ತುಗಳ ಖರೀದಿಗೆ ನೀವು ಸಾಲ ಪಡೆಯಬೇಕಾಗಬಹುದು. ವೃತ್ತಿಗೆ ಸಂಬಂಧಿಸಿದಂತೆ ಅಸಮಾಧಾನಕ್ಕೆ ನೀವು ಒಳಗಾಗಬಹುದು. ವ್ಯಾಪಾರದಲ್ಲಿ ಲಾಭ ಮಾಡುವ ಉದ್ದೇಶದಿಂದ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬಹುದು. ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ನಿಮಗೆ ಸಹಕಾರ ಸಿಗಲಿದೆ.

ಕರ್ಕ ರಾಶಿ

ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಅನಿರೀಕ್ಷಿತ ಮೂಲದಿಂದ ಅಥವಾ ವ್ಯಕ್ತಿಯಿಂದ ನಿಮಗೆ ಹಣ ಬರುವ ನಿರೀಕ್ಷೆ ಇದೆ. ಹೀಗಾಗಿ ಇಡೀ ದಿನದಲ್ಲಿ ನಿಮಗೆ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಬಹುದು. ಹಾಗೆ ಪೂಜಾ ಕಾರ್ಯದಲ್ಲಿ ಅಥವಾ ಶುಭ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ಇಂದು ನೀವು ಹೆಚ್ಚಿನ ಒತ್ತಡ ಅನುಭವಿಸುವ ಸಾಧ್ಯತೆಯಿರುವುದರಿಂದ ಶಾಂತ ಮನಸ್ಸಿನಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ದಿನ ಒಳ್ಳೆಯದಲ್ಲ. ಹಳೆಯ ಅನಾರೋಗ್ಯ ಅಥವಾ ನಿಯಮಿತ ಚಿಕಿತ್ಸೆಯ ಕುರಿತು ಗಮನವಿಡಿ.

ಸಿಂಹ ರಾಶಿ

ಕೆಲಸದ ವಿಷಯದಲ್ಲಿ ನೀವು ನಿರಾಶೆ ಎದುರಿಸಬೇಕಾಗಬಹುದು. ನೀವಿಂದು ಸ್ನೇಹಿತರು, ಕುಟುಂಬಸ್ಥರಿಗೆ ಹಣಕಾಸು ವಿಚಾರವಾಗಿ ಸಹಾಯ ಮಾಡಲು ಮುಂದಾಗುತ್ತೀರಿ, ಆದ್ರೆ ಇದರಿಂದ ನೀವು ಸಮಸ್ಯೆಯಲ್ಲಿ ಮುಳುಗುವ ಆತಂಕವಿದೆ. ಸಂಗಾತಿಯ ಜೊತೆಗೆ ಸಂತಸದ ದಿನ ಕಳೆಯುವಿರಿ, ಆದ್ರೆ ಪ್ರೀತಿಯ ವಿಚಾರದಲ್ಲಿ ನಿಮಗೆ ಆತಂಕ ಇರಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ. ಇಂದು ನೀವು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು. ಈ ದಿನ ಹೂಡಿಕೆ ಮಾಡಲು ಕುರಿತಾಗಿ ನೀವು ಯೋಚಿಸಬಹುದು.

ಕನ್ಯಾ ರಾಶಿ

ನೀವಿಂದು ಮನೆಗೆ ಅಗತ್ಯ ವಸ್ತು ಅಥವಾ ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಲು ಮುಂದಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರು ದೊಡ್ಡ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾರೆ. ನಿಮ್ಮ ಬಹು ದಿನಗಳ ಆಸೆಯೊಂದನ್ನು ಈ ದಿನ ಪೂರೈಸಿಕೊಳ್ಳುತ್ತೀರಿ, ನೀವು ಅರ್ಧಕ್ಕೆ ನಿಲ್ಲಿಸಿರುವ ಹಲವು ಕೆಲಸಗಳು ಪೂರ್ಣ ಆಗಲಿವೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ವವರು ಯಾವುದೇ ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.

ತುಲಾ ರಾಶಿ

ನೀವು ಯಾರಿಗಾದರೂ ಸಾಲ ನೀಡಿದ್ದರೆ ಅದನ್ನು ನೆನಪಿಸುವುದು ಒಳ್ಳೆಯದು. ನಿತ್ಯದ ಕೆಲಸದಲ್ಲಿ ಅಡೆತಡೆ ನೋಡಬಹುದು. ವ್ಯಾಪಾರದಲ್ಲಿ ಬಂದ ಹಣವು ಈ ದಿನ ವ್ಯಯಿಸುವ ಸಾಧ್ಯತೆ ಹೆಚ್ಚಾಗಿದೆ. ಹಳೆಯ ಕೆಲಸಗಳು ಮತ್ತೆ ನಿಮ್ಮ ಸಮಯ ಹಾಳು ಮಾಡಲಿವೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ದಿನ ಎಚ್ಚರಿಕೆಯಿಂದ ಇರುವುದು ಒಳಿತು. ಸಂಗಾತಿಯೊಂದಿಗೆ ಈ ದಿನ ನೀವು ಸಂತೋಷದಂದ ಕಳೆಯಬಹುದು. ಹಲವು ದಿನಗಳಿಂದ ಕಾದಿದ್ದ ನಿಮ್ಮ ಬಯಕೆಯ ದಿನ ಇದಾಗಬಹುದು. ಕುಟುಂಬಸ್ಥರ ಸಹಾಯ ಕೋರಿ ನೀವು ಬೇಡಿಕೆ ಇಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಇದು ಆಧ್ಯಾತ್ಮಿಕ ವಿಚಾರದಲ್ಲಿ ಮತ್ತಷ್ಟು ಬಲಗೊಳ್ಳುತ್ತಾರೆ. ವ್ಯಾಪಾರಸ್ಥರು ಇಂದು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ತೊಂದರೆಯಿಂದಾಗಿ ನೀವು ಹೆಚ್ಚಿನ ಒತ್ತಡದಲ್ಲಿರುತ್ತೀರಿ. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಪ್ರಮುಖ ಕೆಲಸಗಳು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ದಾಂಪತ್ಯ ಜೀವನದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿಸುವಂತಹ ಹಲವು ಕೆಲಸಗಳು ನಡೆಯಲಿದೆ. ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ಒತ್ತಡವು ಹೆಚ್ಚಾಗಬಹುದು. ಮಧುಮೇಹದಂಹ ಅನಾರೋಗ್ಯ ಸಮಸ್ಯೆ ನೀವು ಎದುರಿಸುತ್ತಿದ್ದರೆ ಈ ದಿನ ಎಚ್ಚರಿಕೆಯಿಂದ ಇರಬೇಕು.

ಧನು ರಾಶಿ

ಧನು ರಾಶಿಯವರು ಇಂದು ಅಂದುಕೊಂಡ ಕೆಲಸವನ್ನು ಮತ್ತೆ ಮುಂದೂಡಬಹುದು. ಒಂದು ಲೆಕ್ಕಾಚಾರದಲ್ಲಿ ನಿಮಗಿದು ಉತ್ತಮವಾಗಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ನೋಡಿದರು ಅದನ್ನು ನೀವು ನಿಮ್ಮ ಕೆಲಸಕ್ಕೆ ಬಳಸುವುದಿಲ್ಲ, ಬದಲಿಗೆ ಬೇರೊಂದು ಕೆಲಸಕ್ಕೆ ಬಳಸಬೇಕಾಗುತ್ರದೆ. ದೂರ ಪ್ರಯಾಣದಲ್ಲಿ ನೀವು ತೊಡಗಬೇಕಾಗಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ನಿಮಗಾಗಿ ಹೊಸ ಅವಕಾಶ ಬರಲಿವೆ. ಆದರೆ ನೀವು ಆ ಅವಕಾಶ ಬಳಸಿಕೊಳ್ಳದೆ ಬಿಡಬಹುದು. ಕುಟುಂಬಸ್ಥರಿಗೆ ಅಗತ್ಯವಾಗಿದ್ದ ವಸ್ತುವೊಂದನ್ನು ನೀಡಲಿದ್ದೀರಿ.

ಮಕರ ರಾಶಿ

ಕೆಲಸದ ದೃಷ್ಟಿಯಿಂದ ಇಂದು ಮುಖ್ಯವಾದ ದಿನವಾಗಿದೆ. ಕಠಿಣ ಪರಿಶ್ರಮದ ಹೊರತಾಗಿಯೂ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗದೆ ಇರಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸರಿಯಾದ ಸಮಯ ಬಂದಾಗ ನಿಮ್ಮ ಶ್ರಮದ ಫಲವನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕೆಲಸದ ಕಾರಣಕ್ಕೆ ನೀವು ಬೇರೆಯವರ ಮೇಲೆ ಕೋಪಗೊಳ್ಳುವ ಸಾಧ್ಯತೆ ಇರಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ವವರು ಯಾವುದೇ ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಬಹಳ ದಿನಗಳಿಂದ ಅರ್ಧದಲ್ಲೇ ನಿಲ್ಲಿಸಿರುವ ಕೆಲಸವನ್ನು ಪೂರ್ಣ ಮಾಡುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಈ ದಿನ ಮಿಶ್ರ ಫಲ ನೋಡಬಹುದು. ದಿನ ಆರಂಭದಲ್ಲೇ ಒತ್ತಡ ಎದುರಿಸುವ ನೀವು ದಿನದ ಅಂತ್ಯದಲ್ಲಿ ನಿಧಾನವಾಗಿ ಸಂತೋಷ ಪಡೆಯಲಿದ್ದೀರಿ. ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳು ಇಂದು ಧನಾತ್ಮಕವಾಗಿ ನಡೆಯಲಿದೆ. ಸರ್ಕಾರಿ ಕೆಲಸದ ವಿಚಾರವಾಗಿ ಹಾಗೆ ಬಡ್ತಿಯ ವಿಚಾರದಲ್ಲಿ ಮುನ್ನಡೆ ಸಿಗಲಿದೆ. ಬಹುಕಾಲದಿಂದ ನಿಮಗೆ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಮನೆಗೆ ಅಗತ್ಯಾಗಿದ್ದ ದುಬಾರಿ ವಸ್ತುವೊಂದನ್ನು ನೀವು ಖರೀದಿಸಲು ಮುಂದಾಗಬಹುದು, ಅವಿವಾಹಿತರಾಗಿದ್ದರೆ ಶುಭ ಸುದ್ದಿಗಳ ಕೇಳುವಿರಿ.

ಮೀನ ರಾಶಿ

ನಿಮ್ಮ ಅದೃಷ್ಟದ ಭಾಗವು ಬಲವಾಗಿರುತ್ತದೆ ಮತ್ತು ಇಂದು ಕಡಿಮೆ ಪ್ರಯತ್ನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಚಿಲ್ಲರೆ ವ್ಯಾಪಾರ ಮಾಡುವ ಜನರಿಗೆ ಇಂದು ಬಹಳ ಲಾಭದಾಯಕ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಆಗುವ ಕೆಲಸ ಮಾಡುವಿರಿ ಅಥವಾ ನಿರ್ಧಾರ ತೆಗೆದುಕೊಳ್ಳುವಿರಿ. ಪ್ರವಾಸ, ವಿದೇಶಯಾನ, ಉದ್ಯಮ ಕಟ್ಟುವ ನಿಮ್ಮ ಕನಿಸಿಗೆ ಈ ದಿನ ಮುನ್ನುಡಿ ಬರೆಯಬಹುದು. ಸಂಗಾತಿಯೊಂದಿಗೆ ವಿಶೇಷ ದಿನವನ್ನು ಕಳೆಯಲಿದ್ದೀರಿ. ಸಣ್ಣಪುಟ್ಟ ವಿಚಾರವಾಗಿ ನಿಮ್ಮಲ್ಲಿ ಇಂದು ನೋವು ಕಾಣಿಸಿಕೊಳ್ಳಬಹುದು, ಇದು ಮಾನಸಿಕವಾಗಿ ನಿಮ್ಮಲ್ಲಿ ಅಶಾಂತಿ ತರಬಹುದು. ವಾಹನ ಮಾಲಿಕರಿಗೆ ಈ ದಿನ ಶುಭಕರ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

march-30-daily-horoscope-prediction-for-12-zodiac-signs-in-kannada

Here is March 30 daily horoscope prediction for 12 zodiac signs read on... ಮಾರ್ಚ್ 30ರ ದಿನ ಭವಿಷ್ಯ
Story first published: Sunday, March 30, 2025, 6:03 [IST]
X
Desktop Bottom Promotion