Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ಶನಿವಾರ(ಮಾರ್ಚ್ 29) ತುಂಬಾ ವಿಶೇಷವಾಗಿದೆ, 57 ವರ್ಷಗಳ ಬಳಿಕ ಈ ಯೋಗ ಉಂಟಾಗಲಿದೆ
57 ವರ್ಷಗಳ ಈ ಶನಿವಾರ ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಈ ದಿನ ತುಂಬಾನೇ ಮಹತ್ವದ ಘಟನೆ ನಡೆಯಲಿದೆ. ಈ ದಿನ ಶುಭ, ಅಶುಭ ಯೋಗಗಳು ಉಂಟಾಗಲಿದೆ, ಪ್ರಮುಖ ಗ್ರಹ ರಾಶಿ ಬದಲಾವಣೆ ಮಾಡಲಿದೆ, ವಿಶಿಷ್ಠ ಯೋಗಗಳು ಉಂಟಾಗಿದೆ, ಹೀಗೆ ಈ ದಿನ(ಮಾರ್ಚ್ 29) ತುಂಬಾನೇ ವಿಶೇಷವಾಗಿದೆ:

ಷಷ್ಠಗ್ರಹಿ ಯೋಗ
ಈ ದಿನದಂದು ಮೀನ ರಾಶಿಯಲ್ಲಿ ಶನಿ, ರಾಹು, ಸೂರ್ಯ, ಬುಧ, ಶುಕ್ರ ಮತ್ತು ಚಂದ್ರ ಗ್ರಹಗಳ ಸಂಯೋಗವಾಗಲಿದೆ. ಇದೊಂದು ತುಂಬಾ ಅಪರೂಪದ ಸಂಯೋಗವಾಗಲಿದೆ, 6 ಗ್ರಹಗಳು ಮೀನ ರಾಶಿಯಲ್ಲಿ ಸಂಯೋಗವಾಗಲಿದೆ. ಶನಿಯು 30 ವರ್ಷಗಳ ಬಳಿಕ ಮೀನ ರಾಶಿಗೆ ಸಂಚರಿಸಲಿದೆ.
ಶನಿ ಅಮವಾಸ್ಯೆ
ಶನಿವಾರದಂದು ಅಮವಾಸ್ಯೆ ಬಂದಿರುವುದರಿಂದ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ಅಮವಾಸ್ಯೆ ಇತರ ಅಮವಾಸ್ಯೆಗಿಂತ ಭಿನ್ನವಾಗಿರುತ್ತದೆ. ಶನಿಯ ತೊಂದರೆಗಳಿಂದ ಪಾರಾಗಲು ಈ ದಿನ ಪರಿಹಾರ ಕಾರ್ಯ ಮಾಡಿದರೆ ಒಳ್ಳೆಯದು. ಅಲ್ಲದೆ ಈ ದಿನ ಶನಿ ರಾಶಿ ಬದಲಾವಣೆ ಮಾಡುವುದರಿಂದ ಈ ದಿನ ಮತ್ತಷ್ಟು ವಿಶೇಷವಾಗಿರಲಿದೆ. ಈ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಒಳ್ಳೆಯದು. ಶನಿ ಸಾಡೇಸಾತಿ ಇರುವವರು ಈ ದಿನ ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳುಗಳನ್ನು ಅರ್ಪಿಸಿ.
ಶನಿ ಮೀನ ಯೋಗ
ಶನಿಯು ಗುರು ಆಡಳಿತ ಗ್ರಹವಾಗಿರುವ ಮೀನ ರಾಶಿಗೆ ಸಂಚರಿಸಲಿದೆ. ಶನಿಯ ಈ ಸಂಚಾರ ದ್ವಾದಶ ರಾಶಿಗಳ ಮೇಲೆ ತುಂಬಾನೇ ಪ್ರಭಾವ ಬೀರಲಿದೆ. ಈ ಸಂಚಾರ ದೇಶ-ವಿದೇಶ ಹಲವು ಬದಲಾವಣೆಗಳನ್ನು ತರಲಿದ. ಪ್ರತಿಯೊಂದು ರಾಶಿಯ ಮೇಲೆ ಇದರ ಪ್ರಭಾವ ಬೀರಲಿದೆ.
ಈ ಶನಿ ಸಂಚಾರದಿಂದ ಮಕರ ರಾಶಿಯವರು ಶನಿ ಸಾಡೇಸಾತಿಯಿಂದ ಮುಕ್ತರಾಗುತ್ತಾರೆ. ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಪ್ರಾರಂಭವಾಗಲಿದೆ. ಕುಂಭ ಹಾಗೂ ಮೀನ ರಾಶಿಯವರಲ್ಲಿ ಶನಿ ಸಾಡೇಸಾತಿ ಮುಂದುವರೆಯಲಿದೆ.
ಪಿಶಾಚ ಯೋಗ
ಈ ದಿನ ಪಿಶಾಚ ಯೋಗ ಕೂಡ ಇದೆ. ಶನಿ ಮತ್ತು ರಾಹು ಸಂಯೋಗದಿಂದ ಪಿಶಾಚ ಯೋಗ ಉಂಟಾಗಲಿದೆ. ಈ ಪಿಶಾಚ ಯೋಗ ತುಂಬಾ ಕಠಿಣವಾದ ಯೋಗ ಎಂದು ಕರೆಯಲಾಗುವುದು.
ಅಶುಭ ಯೋಗ
ಮೀನ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದ ಅಶುಭ ಯೋಗ ಉಂಟಾಗಲಿದೆ. ಈ ಯೋಗ ಮನೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು, ಮೀನ ರಾಶಿಯವರು ಈ ದಿನ ಜಾಗ್ರತೆವಹಿಸಬೇಕು.
ಮೀನ ರಾಶಿಯಲ್ಲಿ ಬುಧಾದಿತ್ಯ ಯೋಗವಿದೆ
ಮೀನ ರಾಶಿಯಲ್ಲಿ ಬುಧ ಮತ್ತು ಸೂರ್ಯ ಸಂಯೋಗದಿಂದ ಬುಧಾದಿತ್ಯ ಯೋಗ ಉಂಟಾಗಿದೆ. ಈ ಯೋಗ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ವ್ಯಾಪಾರಸ್ಥರು ಧನ ಲಾಭ ಪಡೆಯಬಹುದು.
ಶುಕ್ರಾದಿತ್ಯ ಯೋಗ ಉಂಟಾಗಿದೆ
ಸೂರ್ಯ ಮತ್ತು ಶುಕ್ರ ಮೀನ ರಾಶಿಯಲ್ಲಿ ಸಂಯೋಗವಾಗಲಿದೆ, ಇದರಿಂದಾಗಿ ಶುಕ್ರಾದಿತ್ಯ ಯೋಗ ಉಂಟಾಗಲಿದೆ.
ಲಕ್ಷ್ಮಿ ನಾರಾಯಣ ಯೋಗ ಕೂಡ ಇದೆ
ಈ ದಿನದಂದು ಲಕ್ಷ್ಮಿ ನಾರಾಯಣ ಯೋಗ ಕೂಡ ಇದೆ. ಬುಧ ಹಾಗೂ ಶುಕ್ರ ಗ್ರಹಗಳ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ ಉಂಟಾಗಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
