ಮಾರ್ಚ್‌ 29ರ ಶನಿವಾರ ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಲಾಭವಿದೆ ನೋಡಿ!

ವೈದಿಕಶಾಸ್ತ್ರದ ಪ್ರಕಾರ ಮಾರ್ಚ್ 29ರ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ

ಮೇಷ ರಾಶಿ

ಮನೆಯ ವಾತಾವರಣವು ಧನಾತ್ಮಕವಾಗಿರುತ್ತದೆ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಉದ್ಯೋಗಿಗಳು ಕೆಲಸ ಬದಲಿಸುವ ಆಲೋಚನೆಯಲ್ಲಿದ್ದವರು ಸ್ವಲ್ಪ ದಿನಗಳ ಕಾಲ ಮುಂದೂಡಿ. ಇಂದು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ಕೆಲಸದ ಜೊತೆಗೆ ನಿಮ್ಮ ನಡವಳಿಕೆ ಕಡೆ ಗಮನಹರಿಸಿ. ವ್ಯಾಪಾರದಲ್ಲಿ ಈ ದಿನ ನೀವು ಅಂದುಕೊಂಡಿರುವಂತೆ ಲಾಭವಾಗಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರೋಗ್ಯ ಕೂಡ ಸುಧಾರಿಸಲಿದೆ.

ವೃಷಭ ರಾಶಿ

ಇಂದು ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಮಕ್ಕಳಿಗೆ ಉಡುಗೊರೆಗಳು ಅಥವಾ ಯಾವುದಾದರು ಅಗತ್ಯ ವಸ್ತು ಖರೀದಿಸಬಹುದು. ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಮನಸ್ಸನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ವ್ಯಾಪಾರಿಗಳು ಇಂದು ಉತ್ತಮ ಆರ್ಥಿಕ ಲಾಭ ಪಡೆಯಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಮಾತು ನಡೆಯಲಿದೆ. ಹಲವು ರೀತಿಯ ವಿಚಾರಗಳಲ್ಲಿ ನೀವು ಈ ದಿನ ಮುನ್ನಡೆ ನೋಡುವಿರಿ. ನಿಮ್ಮ ಅರ್ಧಕ್ಕೆ ನಿಂತ ಹಲವು ಕೆಲಸಗಳು ಪೂರ್ಣ ಆಗುವ ಸಮಯವಿದು.

march-29-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ನೀವು ಬಯಸಿದಂತೆ ವರ್ಗಾವಣೆ ಸಿಗಲಿದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಇತ್ತೀಚೆಗೆ ನಷ್ಟವನ್ನು ಅನುಭವಿಸಿದರೆ, ಅದನ್ನು ಸರಿದೂಗಿಸಲು ನಿಮಗೆ ಒಳ್ಳೆಯ ಅವಕಾಶ ಸಿಗಲಿದೆ. ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳು ಕೆಲಸ ಬದಲಿಸುವ ಆಲೋಚನೆಯಲ್ಲಿದ್ದವರು ಸ್ವಲ್ಪ ದಿನಗಳ ಕಾಲ ಮುಂದೂಡಿ. ಇಂದು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ಹೆಚ್ಚು ಸಮಯ ಒತ್ತಡದಲ್ಲಿ ಕಳೆಯುತ್ತೀರಿ. ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು. ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಇಂದು ಬಹಳಷ್ಟು ಶುಭ ಕಾರ್ಯಗಳು ಉಂಟಾಗಲಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ನಿಮಗೆ ಉತ್ತಮ ಪರಿಹಾರ ಸಿಗಬಹುದು. ಕೆಲಸದಲ್ಲಿ ಹಿರಿಯರ ಮಾರ್ಗದರ್ಶನ ಮೇಲೆ ನಂಬಿಕೆ ಇಡಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ತಪ್ಪು ವರ್ತನೆ ನಿಮ್ಮ ಇಮೇಜ್ ಹಾಳು ಮಾಡಬಹುದು. ಕೌಟುಂಬಿಕ ವಿಚಾರವಾಗಿ ನಿಮ್ಮಲ್ಲಿ ಹೊಸ ಚೈತನ್ಯ ಇರಲಿದೆ. ನಿಮ್ಮ ಹಲವು ದಿನದ ಆಸೆಯೊಂದನ್ನು ಈಡೇರಿಸಿಕೊಳ್ಳುವ ಸಮಯ ಇದಾಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಹಲವು ರೀತಿಯಲ್ಲಿ ಧನಾತ್ಮಕ ವಿಚಾರಗಳಿಗೆ ಒಳಗಾಗುತ್ತಾರೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಪರವಾಗಿ ಹಲವು ವಿಚಾರ ನಡೆಯಲಿದೆ. ನೀವು ಶ್ರಮದ ಫಲವಾಗಿ ಮೆಚ್ಚುಗೆ ಪಡೆಯುವ ದಿನವೂ ಇದಾಗಿರಬಹುದು. ನಿಮ್ಮ ಕೆಲಸಗಳ್ನು ಅರ್ಧಕ್ಕೆ ನಿಲ್ಲಿಸಲು ಮುಂದಾಗಬೇಡಿ. ಹಳೆಯ ವಿಚಾರವಾಗಿ ಮನೆಯಲ್ಲಿ ಕಲಹ ಇರಬಹುದು. ನಿಮ್ಮ ಆಸೆಯಂತೆ ಮನೆಗಾಗಿ ಹೊಸ ವಸ್ತುವೊಂದನ್ನು ಖರೀದಿಸಬಹುದು. ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ಇಂದು ದೊಡ್ಡ ನಿರ್ಧಾರಕ್ಕೆ ಮುಂದಾಗಬಹುದು. ಆರೋಗ್ಯದ ಕಡೆಗೂ ಗಮನವಿಡಿ.

ಕನ್ಯಾ ರಾಶಿ

ವ್ಯಾಪಾರಿಗಳಿಗೆ ಹಾಗೂ ಹಣದ ವಿಷಯದಲ್ಲಿ ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ. ನೀವು ಹಳೆಯ ಸಾಲವನ್ನು ಈ ದಿನ ಮರುಪಾವತಿಸಲು ಮುಂದಾಗಬಹುದು. ಕಚೇರಿಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಸರ್ಕಾರಿ ನೌರರಲ್ಲಿ ಈ ದಿನ ಲಾಭದಾಯಕ ವಿಚಾರಗಳು ನಡೆಯಲಿದೆ. ಈ ದಿನ ನೀವು ದುಬಾರಿ ವಸ್ತುಗಳ ಖರೀದಿಗೆ ಹಣ ಹೂಡಿಕೆ ಮಾಡಬಹುದು. ಇಂದು ಉಳಿತಾಯ, ಹೂಡಿಕೆ, ಬ್ಯಾಂಕಿಂಗ್ ವಿಚಾರಗಳಲ್ಲಿ ನಿಮ್ಮ ಅದೃಷ್ಟ ಪರೀಕ್ಷೆ ಮಾಡಬಹುದು. ಅವಿವಾಹಿತರು ಜಾಗ್ರತೆವಹಿಸಬೇಕು. ದೂರ ಪ್ರಯಾಣದಂತಹ ವಿಶ್ರಾಂತಿ ಇಲ್ಲದ ಕೆಲಸಕ್ಕೆ ಮುಂದಾಗಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಇಂದು ಸುಧಾರಿಸಲಿದೆ. ಕುಟುಂಬಸ್ಥರ ಜೊತೆಗೆ ಹೊರಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂತೋಷಕ್ಕೆ ಕಾರಣವಾಗು ಕೆಲಸಗಳ ಮಾಡುವಿರಿ.


ತುಲಾ ರಾಶಿ

ವ್ಯಾಪಾರಿಗಳು ಈ ದಿನ ಶುಭ ಸುದ್ದಿ ಪಡೆಯಬಹುದು. ಹಣದ ಬಗ್ಗೆ ಹೇಳುವುದಾದರೆ ಈ ದಿನ ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಮಕ್ಕಳಿಗೆ ಅಥವಾ ಮನೆಯ ಸದಸ್ಯರೊಬ್ಬರಿಗೆ ಉಡುಗೊರೆ ಖರೀದಿಸಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಸಹಾಯದಿಂದ ನಿಮ್ಮಲ್ಲಿ ಸಂತಸ ಮೂಡಲಿದೆ. ನಿಮ್ಮ ಆರ್ಥಿಕ ಪ್ರಗತಿಗೆ ಕಾರಣವಾಗುವ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಕೆಲವು ಸಮಯ ನೀವು ಮನೆಯಿಂದ ಹೊರ ಹೋಗಬೇಕಾಗಬಹುದು. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳ ಪೂರ್ಣ ಮಾಡುವಿರಿ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚು ಗಮನವಿಡಿ.

ವೃಶ್ಚಿಕ ರಾಶಿ

ಇಂದು ನಿಮ್ಮ ಕುಟುಂಬ ಜೀವನದಲ್ಲಿ ಸುಖ ಇರಲಿದೆ. ಬದಲಾವಣೆಯೊಂದನ್ನು ಜೀವನ ಸಂಗಾತಿಯ ಸ್ವಭಾವದಲ್ಲಿ ಕಾಣಬಹುದು. ಸಾಧ್ಯವಾದರೆ ಇಂದು ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ, ಅವರ ಮನಸ್ಸನ್ನು ಅರಿಯಲು ಪ್ರಯತ್ನಿಸಿ. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಆಂತರಿಕ ವೆಚ್ಚಗಳು ಹೆಚ್ಚಾಗುವುದು. ನೀವು ಇಂದು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಚಿಲ್ಲರೆ ವ್ಯಾಪಾರಿಗಳಿಗೆ ಅಚ್ಚರಿಯ ಫಲಿತಾಂಶ ಇರಲಿದೆ. ಹಾಗೆ ದಿಢೀರ್ ಲಾಭ ತರುವಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು.

ಧನು ರಾಶಿ

ಇಂದು ನೀವು ಕೆಲಸದ ಜೊತೆಗೆ ನಿಮಗಾಗಿ ಸಮಯ ಕಂಡುಕೊಳ್ಳುವಿರಿ. ವ್ಯಾಪಾರಿಗಳು ಹೊಸ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ಇದಕ್ಕೆ ಅನುಕೂಲಕರ ದಿನವಾಗಿದೆ. ಉದ್ಯೋಗಿಗಳಿಗೆ ಈ ದಿನ ಸಾಮಾನ್ಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಈ ದಿನ ಲಾಭದ ಜೊತೆಗೆ ಒತ್ತಡ ಕೂಡ ಹೆಚ್ಚಾಗಲಿದೆ. ಕಬ್ಬಿಣ, ಲೋಹದ ವ್ಯಾಪಾರಿಗಳು ಲಾಭ ಮಾಡುವ ದಿನವಾಗಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆಯುರ್ವೇದ ಔಷಧ ವ್ಯವಹಾರಸ್ಥರಿಗೆ ಇಂದು ಬಹಳ ಅದೃಷ್ಟದ ದಿನವಾಗಲಿದೆ.

ಮಕರ ರಾಶಿ

ಇಂದು ನೀವು ಸಕಾರಾತ್ಮಕ ಭಾವನೆ ಹೊಂದುತ್ತೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲವು ಸವಾಲಿನ ಕಾರ್ಯಗಳನ್ನು ನೀಡಬಹುದು. ವ್ಯಾಪಾರಿಗಳು ಹೊಸ ರೀತಿ ಸವಾಲು ಎದುರಿಸಬೇಕಾಗಬಹುದು. ನಿಮ್ಮ ಸುತ್ತಮುತ್ತ ನಡೆಯುವ ವಿಚಾರಗಳ ಕುರಿತು ಆದಷ್ಟು ಗಮನವಿಡಿ. ವಾಹನ ಮಾಲಿಕರು ಎಚ್ಚರಿಕೆಯಿಂದ ಇರಿ. ಬಹಳ ಸಮಯದಿಂದ ಬಯಸಿದ್ದ ವಸ್ತು ನಿಮ್ಮ ಕೈ ಸೇರಬಹುದು. ಒತ್ತಡ ಹೆಚ್ಚಾಗಬಹುದು, ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ. ಎಲ್ಲಾ ನಿರ್ಧಾರವನ್ನು ಹೆಚ್ಚು ಸಮಯ ಆಲೋಚಿಸಿ ತೆಗೆದುಕೊಳ್ಳಿ.

ಕುಂಭ ರಾಶಿ

ಇಂದು ಕುಂಭ ರಾಶಿಯ ಮಂದಿ ಅನೇಕ ಲಾಭಗಳ ನೋಡಬಹುದು. ನೀವು ಕುಟುಂಬಸ್ಥರಿಂದ ಅಥವಾ ಸ್ನೇಹಿತರಿಂದ ಹಣಕಾಸು ಸಹಾಯ ಪಡೆಯಬಹುದು. ಹಾಗೆ ದೈನಂದಿನ ಕೆಲಸ ಕಾರ್ಯಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ನಿಮ್ಮ ಪಂಚೇಂದ್ರಿಯಕ್ಕೆ ಸಂಬಂಧಿಸಿದ ಸಮಸ್ಯೆಯೊಂದು ಇಂದು ಪರಿಹಾರ ಪಡೆದುಕೊಳ್ಳಬಹುದು. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮುನ್ನ ಆಲೋಚಿಸಿ. ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ಸಂತಸ ಮೂಡಬಹುದು. ಅವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಉತ್ತಮ ಅವಕಾಶ ಪಡೆಯಲಿದ್ದೀರಿ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನ ಹಣಕಾಸು ವಿಚಾರವಾಗಿ ಧನಾತ್ಮಕ ಬದಲಾವಣೆಗಳ ನೋಡಲಿದ್ದಾರೆ. ನಿಮಗೆ ಬರಬೇಕಿದ್ದ ಸಾಲ ಮರುಪಾವತಿ ಸೇರಿ ಅನಿರೀಕ್ಷಿತ ಮೂಲದಿಂದ ಹಣ ಬರುವ ಸಾಧ್ಯತೆ ಇದೆ. ಸಣ್ಣ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಮಹತ್ವದ ದಿನವಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

march-29-daily-horoscope-prediction-for-12-zodiac-signs-in-kannada

Here is March 29 daily horoscope prediction for 12 zodiac signs read on... ಮಾರ್ಚ್ 29ರ ದಿನ ಭವಿಷ್ಯ
Story first published: Saturday, March 29, 2025, 6:08 [IST]
X
Desktop Bottom Promotion