Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 28ರ ಶುಕ್ರವಾರ ಯಾವ ರಾಶಿಯವರಿಗೆ ಶುಭ ನೋಡಿ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 28ರ ರಾಶಿಫಲ ನೋಡೋಣ
ಮೇಷ ರಾಶಿ
ಇಂದು ಕೆಲಸ ವಿಚಾರದಲ್ಲಿ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಯಾವುದರ ಬಗ್ಗೆಯೂ ಗೊಂದಲಕ್ಕೊಳಗಾಗಿದ್ದರೆ ಮತ್ತು ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿಲ್ಲ ಎಂದುಕೊಂಡಿದ್ದರೆ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ಇಂದು ಕೆಲವು ದೊಡ್ಡ ಖರ್ಚುಗಳನ್ನು ಮಾಡಬಹುದಾದರೂ, ನಿಮ್ಮ ಆದಾಯದ ಹೆಚ್ಚಳದಿಂದಾಗಿ ನೀವು ಯಾವುದೇ ಹಣಕಾಸಿನ ಸಮಸ್ಯೆಯನ್ನು ಎದುರಿಸುವುದಿಲ್ಲ. ಹಾಗೆ ಕುಟುಂಬಸ್ಥರಿಂದ ನಿಮ್ಮ ಪರವಾದ ಒಲವು ಹಾಗೆ ನಿಮಗೆ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಕಾರಣಗಳಿಲ್ಲದೆ ನಿಮ್ಮಲ್ಲಿ ಒತ್ತಡ ಹೆಚ್ಚಾಗಬಹುದು. ಕೌಟುಂಬಿಕ ಜೀವನದಲ್ಲಿ ಸುಖ ಕಷ್ಟಗಳೆರಡು ಕೂಡ ಸಮಾನವಾಗಿ ಇಂದು ನೀವು ಅನುಭವಿಸವಹುದು.
ವೃಷಭ ರಾಶಿ
ನೀವು ತಪ್ಪು ಮಾಡಿದ್ದರೂ ಸಂಗಾತಿಯ ಅಥವಾ ಕುಟುಂಬ ಸದಸ್ಯರಿಂದ ಹಲವು ರೀತಿಯ ಮಾತುಗಳ ಕೇಳಬೇಕಾಗಬಹುದು. ನಿಮ್ಮ ಸಂತೋಷವನ್ನು ಮರಳಿ ಪಡೆಯಲು ಇದು ಶುಭ ಕಾಲವಾಗಲಿದೆ. ಹಣದ ವಿಚಾರದಲ್ಲಿ ಈ ದಿನ ಮಿಶ್ರ ಫಲ ನೀಡಲಿದೆ. ನಿಮ್ಮ ಮನೆಯ ವಾತಾವರಣದಲ್ಲಿ ದಿಢೀರ್ ಬದಲಾವಣೆ ನೋಡಬಹುದು. ಇಂದು ಕೆಲಸದ ಬಗ್ಗೆ ನೀವು ಹೆಚ್ಚು ಗಂಭೀರವಾಗಿರಬೇಕು, ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ನಿಮ್ಮ ಸಂಪೂರ್ಣ ಸಮಯ ಕೆಲಸಕ್ಕಾಗಿ ವ್ಯಯಿಸಿ ಅದರ ಲಾಭ ಪಡೆಯುವುದು ಖಚಿತ. ವ್ಯಪಾರಸ್ಥರಿಗೆ ಈ ದಿನ ಶುಭವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಿಥುನ ರಾಶಿ
ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ಸಣ್ಣ ಮಟ್ಟದ ಅನಾರೋಗ್ಯ ನಿಮ್ಮಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಇಂದು ಉದ್ಯೋಗದ ಸ್ಥಳದಲ್ಲಿ ಒತ್ತಡ, ನಿಮ್ಮ ಆತ್ಮವಿಶ್ಬಾಸ ಹೆಚ್ಚಿಸುವ ಕೆಲಸ ಮಾಡುವಿರಿ. ಸ್ನೇಹಿತರು ಅಥವಾ ಕೆಲಸದ ಸ್ಥಳದಲ್ಲಿ ಸಿಗುವ ಆತ್ಮೀಯರಿಂದ ಸಹಕಾರ ಪಡೆಯಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ಇದೆ. ಮನೆಯ ಸ್ಥಿತಿಯನ್ನು ಸುಧಾರಿಸಲು ಇಂದು ಕೆಲವು ದೃಢ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ನೀವು ದೂರ ಪ್ರಯಾಣದಂತಹ ಕೆಲಸಕ್ಕೆ ಮುಂದಾಗಬಹುದು.
ಕಟಕ ರಾಶಿ
ನಿಮ್ಮ ಆಲೋಚನೆಗಳಿಗೆ ಇಂದು ಬೆಂಬಲ ಸಿಗದೆ ಇರಬಹುದು. ಇಂದು ಯಾವುದೇ ಅನಗತ್ಯ ಖರ್ಚು, ಅನಗತ್ಯ ಚರ್ಚೆಗೆ ಮುಂದಾಗಬೇಡಿ. ಹಣ ಸಂಪಾದಿಸಲು ಇಂದು ತುಂಬಾ ಶ್ರಮಿಸಬೇಕಾಗಬಹುದು. ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನಿರಾಶೆಗೊಳ್ಳುವ ಬದಲು ಧೈರ್ಯದಿಂದ ಕೆಲಸ ಮಾಡಬೇಕು. ಕೆಲಸದ ಬಗ್ಗೆ ನೀವು ಹೆಚ್ಚು ಗಂಭೀರವಾಗಿರಬೇಕು, ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಡಿ. ಆತುರದಿಂದ ಕೆಲಸ ಮುಗಿಸುವ ಮುನ್ನ ಎಚ್ಚರ ಇಡುವುದು ಒಳ್ಳೆಯದು. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾಗಲಿದೆ.
ಸಿಂಹ ರಾಶಿ
ನಿಮಗಿಂದು ಕೆಲಸದಿಂದ ವಿಶ್ರಾಂತಿ ಪಡೆಯಬಹುದು. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ಆತುರದಿಂದ ಅಥವಾ ನಿರ್ಲಕ್ಷ್ಯದಿಂದ ಯಾವುದೇ ಕೆಲಸ ಹಾಗೂ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ. ನಿಮ್ಮ ಅರ್ಧಕ್ಕೆ ನಿಲ್ಲಿಸಿರುವ ಕೆಲಸ ಇಂದು ಪೂರ್ಣಗಳಿಸಿ ಅದರ ಜೊತೆಗೆ ಹಲವು ದಿನದಿಂದ ಬಾಕಿ ಉಳಿಸಿಕೊಂಡ ಕೆಲಸಗಳನ್ನೂ ಕೂಡ ಪೂರ್ಣ ಮಾಡಿ. ಭವಿಷ್ಯದ ದೃಷ್ಟಿಯಿಂದ ನೀವಿಂದು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
ಕನ್ಯಾ ರಾಶಿ
ಸಂಗಾತಿಯೊಂದಿಗೆ ತುಂಬಾ ಸಂತಸದ ದಿನವನ್ನು ಕಳೆಯಲಿದ್ದೀರಿ. ಈ ದಿನ ಯಾವುದೇ ವಿಚಾರವಾಗಿ ಸುಳ್ಳು ಹೇಳುವುದು ಒಳ್ಳೆಯದಲ್ಲ. ನಿಮ್ಮ ಚರ್ಮ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು. ಕಲಸದ ವಿಚಾರವಾಗಿ ಆಯಾಸಗೊಂಡಂತೆ ಮತ್ತು ಒತ್ತಡವನ್ನು ಅನುಭವಿಸುವಿರಿ. ನೀವಿಂದು ಯಾರನ್ನೂ ಮೆಚ್ಚಿಸುವ ಕೆಲಸಕ್ಕೆ ಮುಂದಾಗಬೇಡಿ. ನಿಮ್ಮ ಗುರಿಗಳ ತಲುಪಲು ಇಂದು ಒಳ್ಳೆಯ ದಿನವಾಗಬಹುದು. ಮನೆಗೆ ಹೊಸದಾಗಿ ಯಾವುದಾದರು ವಸ್ತು ಖರೀದಿಸಬಹುದು. ಹಣಕಾಸು ವಿಚಾರದಲ್ಲಿ ಸಾಲ ಪಡೆಯಬಹುದು.
ತುಲಾ ರಾಶಿ
ಮನೆಯ ಪರಿಸರವನ್ನು ಬದಲಾಯಿಸುವ ಯೋಚನೆ ನಿಮ್ಮ ಮನದಲ್ಲಿ ಮೂಡಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಯದಿಂದ ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದೀರಿ, ಆದರೆ ಇಂದು ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಪಂಚೇಂದ್ರಿಯದಲ್ಲಿ ಒಂದಕ್ಕೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳಗಾಗಬಹುದು. ಬಹು ಸಮಯದ ಸಮಸ್ಯೆಗಳನ್ನು ಬಗೆಹರಿಸಲು ನೀವು ಮತ್ತಷ್ಟು ಸಮಸ್ಯೆಗಳ ಎದುರಿಸಬೇಕಾಗಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಹಲವು ಸಮಯ ಮನೆಯಿಂದ ಹೊರಗೆ ಉಳಿಯಬೇಕಾಗುತ್ತದೆ.
ವೃಶ್ಚಿಕ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುತ್ತದೆ. ಕುಟುಂಬ ಸದಸ್ಯರ ಅಗತ್ಯಗಳನ್ನು ಪೂರೈಸಲು ಇಂದು ಸಾಕಷ್ಟು ಖರ್ಚು ಮಾಡಬಹುದು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ ಆದ್ದರಿಂದ ನೀವು ಚಿಂತಿಸಬೇಕಾಗಿಲ್ಲ. ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಯಾವುದೇ ಪ್ರಮುಖ ಕೆಲಸವನ್ನು ಮುಕ್ತಾಯಗೊಳಿಸುವುದು ಒಳಿತು. ಹಾಗೆ ಹೂಡಿಕೆ, ಉಳಿತಾಯಕ್ಕೆ ಮುಂದಾದರೆ ಉತ್ತಮ ದಿನಗಳು ಕಾದಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕ ದಿನವಾಗಿ ಮಾರ್ಪಾಡಾಗಲಿದೆ. ನಿಮ್ಮ ಆರೋಗ್ಯದ ಕಡೆಗೂ ಗಮನ ಇರಲಿ.
ಧನು ರಾಶಿ
ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಮತ್ತು ಪ್ರೀತಿಪಾತ್ರರೊಡನೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಅದನ್ನು ಎದುರಿಸಬಹುದು. ನೀವು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ವಾದ ಮಾಡಬಹುದು. ನಿಮ್ಮ ಮಿತಿಗಳನ್ನು ನೀವು ತಿಳಿದು ಮಾತನಾಡುವುದು ಉತ್ತಮ. ಹೊಸ ಹೂಡಿಕೆಗಳಲ್ಲಿ ಆಸಕ್ತಿ ಸದ್ಯಕ್ಕೆ ಬೇಡ. ದಾಂಪತ್ಯ ಜೀವನವನ್ನು ಆನಂದಿಸಿ ಆಸ್ವಾದಿಸಿ. ಕುಟುಂಬದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಆದಾಯದ ಮೂಲ ಹುಡುಕಬಹುದು. ನಿಮ್ಮ ಹಳೆಯ ಬಾಕಿಗಳು ಸಂದಾಯವಾಗಲಿವೆ.
ಮಕರ ರಾಶಿ
ನಿಮ್ಮ ಪೋಷಕರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಹಣಕಾಸಿನ ಖರ್ಚಿನ ವಿಷಯದಲ್ಲಿ ಇಂದಿನ ದಿನವು ತುಂಬಾ ದುಬಾರಿಯಾಗಿದೆ. ಅನಗತ್ಯ ಖರ್ಚು ಮಾಡಬಹುದು. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಉತ್ತಮ. ಹೊಸದಾದ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿವೆ. ಕುಟುಂಬಸ್ಥರ ಮಾತಿನಂತೆ ನಿಮ್ಮ ನಿರ್ಧಾರ ಬದಲಾಯಿಸುವುದು ಉತ್ತಮ. ಹಲವು ವಿಚಾರಗಳಲ್ಲಿ ನೀವು ಸಲಹೆ ಆಲಿಸಬೇಕಾಗುತ್ತದೆ. ಕೆಲಸದ ಕಾರಣಕ್ಕೆ ನೀವಿಂದು ಬಹಳ ಸಮಯ ಪ್ರಯಾಣಿಸಬೇಕಾಗಬಹುದು. ನಿಮ್ಮ ಇಷ್ಟದ ವಸ್ತು ನಿಮ್ಮ ಕೈಸೇರಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ಅತ್ಯಂತ ಶುಭವಾಗಲಿದೆ, ನಿಮ್ಮ ಆರ್ಥಿಕ ಸ್ಥಿತಿಯು ಇಂದು ಸುಧಾರಿಸಲಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡ ವಿಚಾರಗಳು ಪೂರ್ಣ ಆಗಲಿದೆ. ನಿತ್ಯದ ಕೆಲಸಗಳು ಅಡೆತಡೆಯಿಲ್ಲದೆ ನಡೆಯಲಿದೆ. ಬಹಳ ಸಮಯದ ಕನಸೊಂದನ್ನು ನೀವು ಮುಟ್ಟಲು ಇಂದು ಒಂದು ಹೆಜ್ಜೆ ಮುಂದಿಡುತ್ತೀರಿ. ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಇಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಸಾಕಷ್ಟು ಪ್ರಯಾಣಿಸಬೇಕಾಗಬಹುದು.
ಮೀನ ರಾಶಿ
ಇಂದು ನಿಮ್ಮ ಕೆಲಸದಲ್ಲಿ ಸಣ್ಣ ಅಡೆತಡೆಗಳು ಇರಬಹುದು, ಆದರೂ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಿಗಳು ಸಾಲ ನೀಡುವುದು, ಅಥವಾ ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚಿಗೆ ಮುಂದಾಗಬಾರದು. ನೀವು ಸಂಬಂಧಿಕರಿಂದ ಹಣಕಾಸಿನ ನೆರವು ಪಡೆದಿದ್ದರೆ ಈ ದಿನ ಅದರ ಕೆಲವು ಭಾಗ ಮರುಪಾವತಿ ಮಾಡುವಿರಿ. ನಿಮ್ಮ ಇರುವಿಕೆಯಿಂದ ಹಲವರಿಗೆ ಸಹಾಯಕವಾಗಲಿದೆ. ಸಂಜೆ ನಿಮ್ಮಲ್ಲಿ ಒತ್ತಡ ಹಾಗೂ ಹೊಸ ಕೆಲಸಗಳು ಹುಡುಕಿ ಬರಲಿವೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










