ಮಾರ್ಚ್‌ 27ರ ಗುರುವಾರ ಯಾವ ರಾಶಿಯವರಿಗೆ ಗುರುಬಲವಿದೆ ನೋಡಿ..!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 27ರ ರಾಶಿಫಲ ನೋಡೋಣ:

ಮೇಷ ರಾಶಿ

ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುವುದಿಲ್ಲ. ಹಾಗೆ ಮನೆಯ ವಿಚಾರವಾಗಿ ನಿಮ್ಮಲ್ಲಿ ಒಂದಿಷ್ಟು ಸಮಸ್ಯೆ ಎದುರಾಗಬಹುದು. ಸಹೋದರರಿಂದ ಅಥವಾ ಮಕ್ಕಳಿಂದ ಕೆಲವೊಂದು ವಿಚಾರವಾಗಿ ಮನಸ್ಥಾಪ ಉಂಟಾಗಬಹುದು. ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಇಂದು ನಿಮ್ಮ ವ್ಯವಹಾರಿಕ ಕ್ಷೇತ್ರದಲ್ಲಿ ಸುಲಭದ ದಿನವಾಗಿರುವುದಿಲ್ಲ, ಹಲವು ರೀತಿಯ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಹಾಗೆ ಬಹಳ ದಿನಗಳ ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಪಡೆಯಬಹುದು. ಸುಧೀರ್ಘ ಪ್ರಯಾಣದಂತಹ ಕಾರ್ಯಕ್ಕೂ ನೀವು ಮುಂದಾಗಬಹುದು. ದಾಂಪತ್ಯ ಜೀವನದಲ್ಲಿ ಕಿರಿ ಕಿರಿ ಉಂಟಾಗುವಂತಹ ವಿಚಾರ ನಡೆಯಬಹುದು.

ವೃಷಭ ರಾಶಿ

ಇಂದು ನಿಮ್ಮ ಎಲ್ಲಾ ಕೆಲಸಗಳು ಪರಿಪೂರ್ಣ ರೀತಿಯಲ್ಲಿ ಮುಗಿಸುವಿರಿ. ಉದ್ಯೋಗಿಗಳು ದಿನದ ಆರಂಭದಲ್ಲಿ ಒತ್ತಡ ಎದುರಿಸಲಿದ್ದಾರೆ. ಆದ್ರೆ ದಿನದ ಅಂತ್ಯದಲ್ಲಿ ಶಾಂತಿ, ನೆಮ್ಮದಿ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ತಂದೆ- ತಾಯಿಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ ನೋಡಬಹುದು. ನೀವು ಕೂಡ ಈ ದಿನ ವಿಶ್ರಾಂತಿ ಕಡೆ ಗಮನಹರಿಸುವುದು ಉತ್ತಮ. ನಿಮ್ಮ ದೈನಂದಿನ ಕೆಲಸಗಳು ಹಲವು ರೀತಿಯಲ್ಲಿ ನಿಮ್ಮನ್ನು ಒತ್ತಡಕ್ಕೆ ತಳ್ಳಬಹುದು. ಹಾಗೆ ಸರ್ಕಾರಿ ನೌಕರರು ಎಚ್ಚರಿಕೆಯಿಂದ ಇಂದು ಶ್ರಮ ವಹಿಸಿ ಕೆಲಸ ಮಾಡುವುದು ಉತ್ತಮ. ನೀವಿಂದು ಹೊಸ ಕೆಲಸ ಆರಂಭಿಸುವ ಆಲೋಚನೆಯಲ್ಲಿದ್ದರೆ ಉತ್ತಮ ದಿನವಾಗಿದೆ.

march-27-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ಹಣದ ವಿಷಯದಲ್ಲಿ ನಿಮಗೆ ದುಬಾರಿಯಾಗಬಹುದು. ನಿಮ್ಮ ಖರ್ಚುಗಳನ್ನು ಇಂದು ನಿಯಂತ್ರಿಸುವುದು ಬಹಳ ಉತ್ತಮ. ಕೆಲಸದ ಸ್ಥಳದಲ್ಲಿ ಅನಗತ್ಯ ಚರ್ಚೆ ಅಥವಾ ಮಾತುಕತೆಗೆ ಮುಂದಾಗಬೇಡಿ. ನಿಮ್ಮ ಪಾಲುದಾರಿಕೆ ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗುವ ನಿರೀಕ್ಷೆ ಇದೆ. ಕೌಟುಂಬಿಕ ವಾತಾವರಣ ಇಂದು ಚೆನ್ನಾಗಿರಲಿದೆ. ಇಂದು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ನಿರ್ಲಕ್ಷಿಸಬೇಡಿ. ಈ ದಿನ ನಿಮ್ಮ ಪರವಾಗಿ ಸ್ನೇಹಿತರಿಂದ ಸಹಾಯ ಪಡೆಯಬಹುದು. ಹಾಗೆ ಕುಟುಂಬಸ್ಥರಿಂದಲೂ ಕೆಲವೊಂದು ವಿಚಾರವಾಗಿ ನೆರವು ಸಿಗಲಿದೆ.

ಕರ್ಕ ರಾಶಿ

ಈ ದಿನ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬಹಳ ಎಚ್ಚರ ವಹಿಸಿ. ಹಾಗೆ ಬೇರೆಯವರಿಗೆ ಮಾತು ಕೊಡುವ ಮುನ್ನವೂ ಆಲೋಚಿಸಿ. ಅನಿರೀಕ್ಷಿತವಾಗಿ ನಿಮ್ಮ ಸಮಸ್ಯೆಯೊಂದಿಗೆ ಸಹಕಾರವಾಗುವಂತಹ ರೀತಿಯಲ್ಲಿ ಹಣ ಲಾಭವಾಗುವ ನಿರೀಕ್ಷೆ ಇದೆ. ಹಾಗೆ ವ್ಯಪಾರ ಹಾಗೂ ಉದ್ಯೋಗ ವಲಯದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಆರೋಗ್ಯದಲ್ಲಿನ ಸಣ್ಣ ಪುಟ್ಟ ಬದಲಾವಣಗಳನ್ನು ಎದುರಿಸಿ.

ಸಿಂಹ ರಾಶಿ

ನಿಮ್ಮ ದೈನಂದಿನ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಪೂರ್ಣವಾಗಲಿದೆ, ಕೆಲಸದ ಒತ್ತಡ ಇರಲಿದೆ. ಮನೆಯಲ್ಲಿ ಶಾಂತಿ ಇರಲಿದೆ. ಹಿಂದೊಮ್ಮೆ ದೊಡ್ಡ ಕೆಲಸಕ್ಕಾಗಿ ಅಥವಾ ಮುಖ್ಯ ಕೆಲಸಕ್ಕಾಗಿ ವ್ಯಯಿಸಲಾಗಿದ್ದ ಹಣದಿಂದ ಲಾಭ ಪಡೆಯಬಹುದು. ಹೂಡಿಕೆಯಲ್ಲಿ ಲಾಭವಿದೆ. ನಿಮ್ಮ ಉಳಿತಾಯಗಳು ಹೆಚ್ಚಾಗಬಹುದು. ಬಂಧುಗಳ ಆಗಮನದಿಂದ ಸಂತಸ ಇರಲಿದೆ. ಹಳೆಯ ಸ್ನೇಹಿತರ ಭೇಟಿಯಾಗಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನೂ ನಿರ್ಲಕ್ಷಿಸಬೇಡಿ.

ಕನ್ಯಾ ರಾಶಿ

ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಅದಕ್ಕೆ ಪರಿಹಾರ ಪಡೆಯಬಹುದು. ಕೆಲಸಕ್ಕೆ ಸಂಬಂಧಿತ ವಿಚಾರದಲ್ಲಿ ನಿಮಗೆ ಒಂದಿಷ್ಟ ಅಡೆತಡೆ ಆಗಬಹುದು. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸಲು ಮುಂದಾಗಿ ಇಲ್ಲದಿದ್ದರೆ ಕೆಲಸಗಳು ಅಪೂರ್ಣವಾಗಿ ಮುಂದೆ ಕಠಿಣ ಶ್ರಮ ಮತ್ತು ಒತ್ತಡ ನಿಮ್ಮ ಮೇಲೆ ಬೀಳಬಹುದು. ವಿದ್ಯಾರ್ಥಿಗಳಿಗೆ ಈ ದಿನ ಅತ್ಯಂತ ಶುಭವಾಗಿರಲಿದೆ. ಹಣಕಾಸಿನ ವಿಚಾರವಾಗಿ ಇಂದು ನಿಮಗೆ ಮಿಶ್ರಫಲವಾಗಿರಲಿದೆ. ಆದಾಯದಷ್ಟೇ ಖರ್ಚು ಕೂಡ ಇರಲಿದೆ.

ತುಲಾ ರಾಶಿ

ಉದ್ಯೋಗಿಗಳಿಗೆ ಇಂದು ಬದಲಾವಣೆಯ ಸಮಯ ಆಗಿರಬಹುದು. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಬಯಕೆಯಂತೆ ಉದ್ಯೋಗ ಸಿಗಬಹುದು. ಅನಗತ್ಯ ವಿಷಯಗಳಿಗಾಗಿ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ. ನಿಮ್ಮ ಸಮಯ ಹಾಳಾಗುವಂತಹ ಹಲವು ವಿಚಾರಕ್ಕೆ ನೀವು ಅನಿವಾರ್ಯವಾಗಿ ಒಳಗಾಗುತ್ತೀರಿ. ಬಹಳ ಸಮಯದಿಂದ ಬಾಕಿ ಉಳಿಸಿದ್ದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ.

ವೃಶ್ಚಿಕ ರಾಶಿ

ನಿಮ್ಮ ಕೆಲಸದಲ್ಲಿ ಇಂದು ಪೂರ್ಣ ಯಶಸ್ಸು ಪಡೆಯಬೇಕಾದರೆ ನೀವು ಶ್ರಮ ವಹಿಸಿ ಕೆಲಸ ಮಾಡುವುದು ಉತ್ತಮ. ನಿಮ್ಮ ಸುತ್ತ ಇಂದು ನಾಕರಾತ್ಮಕ ವಿಚಾರಗಳು ಸುಳಿಯುತ್ತವೆ. ಹಾಗೆ ಎಲ್ಲಾ ಖರ್ಚುಗಳ ಮೇಲೆ ಹೊಸ ರೀತಿಯ ಪ್ರಭಾವ ಬೀರುವ ಅಂಶಗಳಿಂದು ನಡೆಯಬಹುದು. ಆಸ್ತಿ ವಿವಾದ, ಕುಟುಂಬದಲ್ಲಿ ಕಲಹ, ಕಾನೂನು ಹೋರಾಟದಂತಹ ವಿಚಾರದಿಂದ ಇಂದು ದೂರ ಇರುವುದು ಒಳಿತು. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದ ದಿನವಾಗಬಹುದು. ನಿಮಗಾಗಿ ಹೊಸ ಅಚ್ಚರಿ ಕಾದಿರಲಿದೆ.

ಧನು ರಾಶಿ

ಈ ದಿನ ನೀವು ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಕೆಲವು ಮುಜುಗರ ಆಗುವಂತಹ ವಿಚಾರಗಳಿಂದ ನೀವು ದೂರ ಇರುವುದು ಒಳ್ಳೆಯದು. ಹಣದ ವಿಚಾರದಲ್ಲಿ ನಿಮ್ಮ ಆದಾಯ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ಬಹುದಿಂದ ಮಾಡಲು ಬಯಸಿದ್ದ ಕೆಲಸವೊಂದನ್ನು ಇಂದು ಪೂರ್ಣ ಮಾಡಲಿದ್ದೀರಿ. ಇಂದು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬಹುದು. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ಮನೆಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು.

ಮಕರ ರಾಶಿ

ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಬಾಕಿಗಳು ಇಂದು ಮರುಪಾವತಿ ಆಗಲಿದೆ. ಹಣದ ಸಮಸ್ಯೆಗಳಿದ್ದರೆ ಅದರ ನಿವಾರಣಯು ಸಹ ಸಾಧ್ಯವಾಗಲಿದೆ. ವ್ಯಾಪಾರದಲ್ಲಿ ವೇಗ ಪಡೆಯುವುದು ನೋಡಬಹುದು. ಸಹೋದರರಿಂದ ಉತ್ತಮ ಬಂಧ ನೋಡಬಹುದು. ಹಿರಿಯರ ಆಶೀರ್ವದ ನಿಮ್ಮ ಮೇಲಿರಲಿದೆ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವಿವಾಹಿತರಾಗಿದ್ದರೆ ಇಂದು ಶುಭ ಸುದ್ದಿ ಕೇಳುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಶ್ರಮ ಬಿಡದೆ ಗುರಿಯತ್ತ ಮುನ್ನಗ್ಗುವುದು ಫಲಿತಾಂಶ ಪಡೆಯಲು ಸುಲಭದ ದಾರಿಯಾಗಲಿದೆ.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಬಹಳಷ್ಟು ಕೆಲಸವನ್ನು ಸುಲಭವಾಗಿ ಮುಗಿಸಲಿದ್ದೀರಿ. ನಿಮ್ಮ ಎಲ್ಲಾ ಕನಸುಗಳಿಗೆ ಇಂದು ಹೊಸ ಹೆಜ್ಜೆ ಇಡಲಿದ್ದೀರಿ. ಕಚೇರಿಯ ವಾತಾವರಣವು ತುಂಬಾ ಧನಾತ್ಮಕವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ತುಂಬಾ ಚೆನ್ನಾಗೊರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ. ಆತುರವಾಗಿ ಇಂದು ಯಾವುದೇ ಕೆಲಸ ಮುಗಿಸಲು ಮುಂದಾಗಬೇಡಿ. ಹಾಗೆ ಕಬ್ಬಿಣ, ತಾಮ್ರ ಹಾಗೆ ಲೋಹ, ಯಂತ್ರೋಪಕರಣ ಸಂಬಂಧಿಸಿದ ಕೆಲಸದಲ್ಲಿ ಲಾಭ ಮಾಡಲಿದ್ದೀರಿ.

ಮೀನ ರಾಶಿ

ಮೀನ ರಾಶಿಯವರು ಈ ದಿನದಂದು ಮಿಶ್ರಫಲ ನೋಡಲಿದ್ದೀರಿ. ಹಣಕಾಸು ಹರಿವು ಹೆಚ್ಚಳವಾಗುವ ಹಲವು ಅವಕಾಶಗಳಿರಲಿದೆ. ನಿಮ್ಮ ಆರೋಗ್ಯದಲ್ಲಿನ ಏರುಪೇರುಗಳು ಖರ್ಚಿಗೆ ಕಾಣರವಾಗಲಿದೆ. ನಿಮ್ಮ ಕುಟುಂಬಸ್ಥರಿಗೆ ನೀವು ಅಗತ್ಯ ನೆರವು ಪಡೆಯಲಿದ್ದೀರಿ. ದಿನದ ಆರಂಭದಲ್ಲಿರುವ ಶಾಂತಿ ದಿನದ ಅಂತ್ಯದಲ್ಲಿ ಮರೆಯಾಗಬಹುದು. ಅಂದರೆ ಒತ್ತಡಕ್ಕೆ ಒಳಗಾಗುವ ನಿರೀಕ್ಷೆ ಇದೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗುವಂತಹ ಕಾರ್ಯ ಮಾಡಲಿದ್ದೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸುವುದು ಉತ್ತಮ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

march-27-daily-horoscope-prediction-for-12-zodiac-signs-in-kannada

Here is March 27 daily horoscope prediction for 12 zodiac signs read on... ಮಾರ್ಚ್ 27ರ ದಿನ ಭವಿಷ್ಯ
Story first published: Thursday, March 27, 2025, 6:05 [IST]
X
Desktop Bottom Promotion