ಮಾರ್ಚ್‌ 25ರ ಮಂಗಳವಾರ ನಿಮ್ಮ ರಾಶಿಫಲದಲ್ಲಿ ಹೇಗಿದೆ?

ಈ ದಿನ ವೈದಿಕ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಿಗೆ ಮಾರ್ಚ್ 25 ಹೇಗಿರಲಿದೆ ಎಂಬುದನ್ನು ನೋಡೋಣ:

ಮೇಷ ರಾಶಿ

ಇಂದು ವ್ಯಾಪಾರಸ್ಥರಿಗೆ ಸವಾಲಿನ ದಿನವಾಗಬಹುದು. ಪ್ರಮುಖ ಕೆಲಸಗಳಿಗೆ ಇದ್ದಕ್ಕಿದ್ದಂತೆ ಅಡಚಣೆ ಉಂಟಾಗಬಹುದು. ಕೆಲವು ಕಾನೂನು ತೊಂದರೆಗಳು, ಹಣಕಾಸಿನ ಸಮಸ್ಯೆಗಳು, ನೌಕರರಿಗೆ ಸಮಸ್ಯೆಗಳಂತಹ ಕಠಿಣವಾದ ದಿನ ಎದುರಿಸಬೇಕಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಹಲವು ಬಾರಿ ಆ ಕುರಿತು ಆಲೋಚಿಸಿ, ಸಲಹೆ ಪಡೆಯುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಕೆಲಸಗಳಿಗಾಗಿ ದೂರ ಪ್ರಯಾಣಕ್ಕೆ ಮುಂದಾಗಬಹುದು. ನಿಮ್ಮ ಮಕ್ಕಳು, ಆತ್ಮೀಯರ ಸಂಬಂಧ ನೀವು ಕಹಿ ವಿಚಾರ ಕೇಳಬಹುದು.

ವೃಷಭ ರಾಶಿ

ಉದ್ಯೋಗಿಗಳಿಗೆ ಬದಲಾವಣೆಯ ಕಾಲ. ವ್ಯಾಪಾರಸ್ಥರು ತಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯ ಹಿರಿಯರ ಆಶೀರ್ವಾದ ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ದಿನವಲ್ಲ. ಸಂಗಾತಿಯಿಂದಿಗೆ ಹೊಂದಾಣಿಕೆ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ. ಉದ್ಯೋಗಿಗಳಿಗೆ ಬದಲಾವಣೆಯ ಕಾಲ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಶಾಂತಿ ಇರಲಿದೆ. ಕಲಾವಿದರಿಗೆ ಅನಿರೀಕ್ಷಿತ ಲಾಭವಿದೆ.

March 25 Daily Horoscope Prediction For 12 Zodiac Signs In Kannada

ಮಿಥುನ ರಾಶಿ

ಸಣ್ಣ ಉದ್ಯಮಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳು ಕಂಡುಬರುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ದುಂದುವೆಚ್ಚಕ್ಕೆ ಇಂದು ಮುಂದಾಗಬೇಡಿ. ಹಲವು ಕಡೆಗಳಲ್ಲಿ ನಿಮಗೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ನಿಮ್ಮ ಸಂತಸ ಹೆಚ್ಚಾಗುವುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಬಹಳ ಸಮಯದಿಂದ ನೀವು ಬಯಸಿದ್ದಂತಹ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ನಿಮ್ಮ ಹಿತಶತ್ರುಗಳ ಕುರಿತು ಜಾಗೃತೆ ವಹಿಸಿ. ಅವಿವಾಹಿತರಲ್ಲಿ

ಕರ್ಕ ರಾಶಿ

ಕರ್ಕ ರಾಶಿಯವರು ಇಂದು ವ್ಯಾಪಾರ ಕ್ಷೇತ್ರದಲ್ಲಿ ಲಾಭ ಮಾಡಲಿದ್ದಾರೆ. ಚಿಲ್ಲರೆ ವ್ಯಾಪಾರಿಗಳು, ಸಣ್ಣ ಉದ್ಯಮ ನಡೆಸುವವರಿಗೆ ದಿನದ ಅಂತ್ಯದಲ್ಲಿ ಲಾಭವಾಗಲಿದೆ. ನಿಮ್ಮ ಗುರಿಗಳತ್ತ ಹೆಚ್ಚು ಗಮನವಿಡಿ. ದಿನದ ಬಹಳ ಸಮಯ ನೀವು ಮನೆಯಿಂದ ಹೊರಗೆ ಕಳೆಯಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಸರಿಯಾದ ಸಮಯಕ್ಕೆ ಬಾಕಿ ಸಾಲಗಳನ್ನು ತೀರಿಸುವುದು ಮುಖ್ಯ. ಅವಿವಾಹಿತರಾಗಿದ್ದರೆ ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು, ಇದು ನಿಮ್ಮಲ್ಲಿ ಹೊಸ ಮನೋಬಲದಕ್ಕೆ ಕಾರಣವಾಗಲಿದೆ. ನಿರಂತರ ಕೆಲಸದಿಂದ ಒತ್ತಡವಿದ್ದರೆ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ.

ಸಿಂಹ ರಾಶಿ

ಸಿಂಹ ರಾಶಿಯ ಜನರು ಈ ದಿನದಂದು ಉತ್ತಮ ಲಾಭ ಮಾಡಲಿದ್ದಾರೆ. ದಾಂಪತ್ಯದಲ್ಲಿ ಸುಖ ನೋಡಬಹುದು. ಪ್ರೀತಿಯ ಜೀವನ ಕೂಡ ಉತ್ತಮವಾಗಿರಲಿದ. ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ದಿನವನ್ನಾಗಿ ನೀವು ಪರಿವರ್ತಿಸಿಕೊಳ್ಳಬಹುದು. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ತುಂಬಾ ಧನಾತ್ಮಕ ಮತ್ತು ಲವಲವಿಕೆಯಿಂದ ಇರುತ್ತೀರಿ. ಆರ್ಥಿಕ ದೃಷ್ಟಿಕೋನದಿಂದ ಉತ್ತಮ ದಿನ. ನಿಮ್ಮ ಮನೋಬಲ ಹೆಚ್ಚಾಗಲಿದೆ. ಅನಾರೋಗ್ಯ ಸಮಸ್ಯೆಯೊಂದರ ಹಿನ್ನೆಲೆ ನೀವು ವೈದ್ಯರ ಭೇಟಿಯನ್ನು ಮುಂದೂಡುತ್ತಾ ಬಂದಿದ್ದರೆ ಇಂದು ತಜ್ಞರ ಭೇಟಿಯಾಗುವುದು ಉತ್ತಮ.

ಕನ್ಯಾ ರಾಶಿ

ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ನೀವು ಹಣವನ್ನು ದುಂದುವೆಚ್ಚ ಮಾಡಬೇಡಿ. ನಿಮ್ಮ ಕುಟುಂಬದಲ್ಲಿ ನಿಮ್ಮ ಭವಿಷ್ಯದ ಕುರಿತು ನಿರ್ಧಾರ ಅಥವಾ ಚರ್ಚೆ ನಡೆಯಬಹುದು. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಕಾಡಬಹುದು. ಹಲವು ದಿನಗಳಿಂದ ಕಾಡುವ ಸಮಸ್ಯೆ ಮತ್ತಷ್ಟು ಉಲ್ಭಣವಾಗಬಹುದು. ಎಲ್ಲಾ ಸಮಯದಲ್ಲೂ ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿದ್ದ ಸಮಸ್ಯೆಯೊಂದು ದೂರಾಗಬಹುದು. ನೀವು ದೇವಾಲಯ ಭೇಟಿಗೆ ಮುಂದಾಗಬಹುದು. ಮನೆಯ ಹಿರಿಯರ ಆರೋಗ್ಯದ ಮೇಲೆ ಗಮನವಿಡಿ.

ತುಲಾ ರಾಶಿ

ತುಲಾ ರಾಶಿಯವರು ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ನೋಡಬಹುದು. ನಿಮ್ಮ ಉದ್ಯೋಗದಲ್ಲಿ ಜವಾಬ್ದಾರಿ, ಒತ್ತಡ ಹೆಚ್ಚಾಗಬಹುದು. ನಿಮ್ಮ ಉಳಿತಾಯ, ಹೂಡಿಕೆ ಹೆಚ್ಚಾಗಬಹುದು. ಮುಖ್ಯವಾದ ಕೆಲಸವೊಂದಕ್ಕೆ ನೀವು ಹಣ ವ್ಯಯಿಸಬಹುದು. ಭವಿಷ್ಯದ ದೃಷ್ಟಿಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು. ಸಂಬಂಧಿಕರ ಭೇಟಿಯಿಂದ ಹೊಸ ಒತ್ತಡಕ್ಕೆ ನೀವು ಒಳಗಾಗಬಹುದು. ಮಧುಮೇಹಿಗಳು, ಹೃದಯ ಸಂಬಂಧಿ ಸಮಸ್ಯೆ ಹೊಂದಿರುವವರು ಈ ದಿನ ಎಚ್ಚರಿಕೆ ವಹಿಸುವುದು ಅಗತ್ಯ.

ವೃಶ್ಚಿಕ ರಾಶಿ

ಉದ್ಯೋಗಿಗಳಿಗೆ ಇಂದು ಶುಭ ಸಂಕೇತ ಇದೆ. ನಿಮ್ಮ ಆದಾಯ ಹೆಚ್ಚಿಸುವ ಬಲವಾದ ಕೆಲಸ ಮಾಡಲಿದ್ದೀರಿ. ನೀವಿಂದು ಶ್ರಮ ವಹಿಸಿ ಕೆಲಸ ಮಾಡಿದರೆ ಅದರ ಫಲಿತಾಂಶ ಉತ್ತಮವಾಗಿರಲಿದೆ. ವ್ಯಾಪಾರಸ್ಥರು ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ನಿಮ್ಮ ಸುತ್ತಲಿನ ವಾತಾವರಣದಲ್ಲಿ ಗೊಂದಲಮಯವಾದ ವಿಚಾರಗಳು ನಡೆಯಬಹುದು. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಇಂದು ಕಾಡಬಹುದು. ನಿಮ್ಮ ಆಧ್ಯಾತ್ಮಿಕ ಬಲವು ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ. ಹಲವು ದಿನಗಳ ನಿಮ್ಮ ಪ್ರಯತ್ನಕ್ಕೆ ಫಲ ಸಿಗುವ ದಿನವಾಗಬಹುದು.

ಧನು ರಾಶಿ

ಧನು ರಾಶಿಯವರು ಇಂದು ಹಲವು ರೀತಿಯಲ್ಲಿ ಮಿಶ್ರ ಫಲಕ್ಕೆ ಒಳಗಾಗುತ್ತಾರೆ. ನಿಮ್ಮ ಕುಟುಂಬದಲ್ಲಿ ಶಾಂತಿ ಇರಲಿದೆ. ಹಾಗೆ ನಿಮ್ಮ ಗೌರವ ಹೆಚ್ಚಾಗುವ ಸಾಧ್ಯತೆಗಳಿವೆ. ಹಲವು ಸಮಯದ ಕನಸುಗಳನ್ನು ನನಸು ಮಾಡಿಕೊಳ್ಳಲು ಇಂದು ಮತ್ತೊಂದು ಹೆಜ್ಜೆ ಮುಂದೆ ಹೋಗಲಿದ್ದೀರಿ. ಮನೆಗೆ ಬೇಕಾದ ವಸ್ತು ಖರೀದಿಯ ಅವಕಾಶಗಳು ಬರಲಿವೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅಪರಿಚಿತರಿಂದ ಸಲಹೆ ಅಥವಾ ವಸ್ತುಗಳನ್ನು ಸ್ವೀಕರಿಸಬೇಡಿ. ನಿಮ್ಮ ಹಲವು ನೋವುಗಳು ನಿವಾರಣೆಯಾಗಬಹುದು, ಅಂದರೆ ಮೂಳೆ, ಕೀಲು ನೋವಿನ ಸಮಸ್ಯೆ ಇದ್ದರೆ ಪರಿಹಾರ ಪಡೆಯಬಹುದು.

ಮಕರ ರಾಶಿ

ಮಕರ ರಾಶಿಯವರು ಇಂದು ಹಲವು ರೀತಿಯ ಲಾಭಗಳ ಪಡೆಯಬಹುದು. ನೀವು ಯಂತ್ರೋಪಕರಣ ವ್ಯಾಪಾರಿಗಳಾಗಿದ್ದರೆ ಅಥವಾ ಬಟ್ಟೆ ವ್ಯಾಪಾರಿಗಳಾಗಿದ್ದರೆ ಅತ್ಯಧಿಕ ಲಾಭದ ದಿನವಾಗುತ್ತಿದೆ. ಆಸ್ತಿ ವಿಚಾರದಲ್ಲಿ ನಿಮಗೆ ಶುಭವಾಗುತ್ತಿದೆ. ಹೊಸ ವಿಚಾರಗಳನ್ನು ಕಲಿಯಲು ನೀವು ಮುಂದಾಗಬಹುದು. ಕ್ರೀಡಾ ಕ್ಷೇತ್ರದಲ್ಲಿ ಒಲವು ಹೊಂದಿದ್ದರೆ ಈ ದಿನ ದೊಡ್ಡ ಸಾಧನೆಗೆ ದಾರಿಯಾಗಬಹುದು. ನಿಮ್ಮ ಮನೆಯಲ್ಲಿರುವ ವಸ್ತುವೊಂದು ನಿಮ್ಮ ದೊಡ್ಡ ಕೆಲಸಕ್ಕೆ ನೆರವಾಗಲಿದೆ. ಇಂದು ಮನೆಯಿಂದ ಹೊರಗೆ ಆಹಾರ ಸೇವನೆಯನ್ನು ತಪ್ಪಿಸುವುದು ಉತ್ತಮ.

ಕುಂಭ ರಾಶಿ

ಈ ದಿನ ನಿಮ್ಮಲ್ಲಿ ಒತ್ತಡ ಹೆಚ್ಚಾಗಬಹುದು, ಹಾಗೆ ಕೆಲಸದ ಕಡೆಗೆ ಹೆಚ್ಚು ಗಮನವಿಡಲು ಆಗವುದಿಲ್ಲ, ಇದು ನಿಮ್ಮಲ್ಲಿ ಮಾನಸಿಕ ಸ್ಥಿತಿ ಹಾಳಾಗಲು ಕಾರಣವಾಗಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ಥಾಪ ಬರಬಹುದು. ಮಕ್ಕಳ ಕಡೆಯಿಂದಲೂ ಕೆಲವು ಸಮಸ್ಯೆ ಎದುರಿಸಬೇಕಾಗಬಹುದು. ವಾಹನ ಮಾಲಿಕರು ಎಚ್ಚರದಿಂದ ಇರಿ. ನಿಮ್ಮ ವ್ಯಪಾರದಲ್ಲಿ ಎಚ್ಚರಿಕೆ ಹಾಗೂ ಬುದ್ದಿವಂತಿಕೆಯಿಂದ ಇರುವುದು ಮುಖ್ಯವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಮೀನ ರಾಶಿ

ಆತುರದ ಕೆಲಸಗಳನ್ನು ಇಂದು ಮಾಡಲು ಹೋಗಬೇಡಿ, ನಿಮ್ಮ ಹಲವು ಕೆಲಸಗಳು ಇಂದು ಅರ್ಧಕ್ಕೆ ನಿಲ್ಲಬಹುದು. ಹಣದ ವಿಚಾರದಲ್ಲಿ ಈ ದಿನ ಅಷ್ಟೊಂದು ಶುಭವಾಗಿರುವುದಿಲ್ಲ, ಆದರೆ ಹೋಟೆಲ್ ನಡೆಸುವವರು, ಕಬ್ಬಿಣ ವ್ಯಾಪಾರಸ್ಥರು ಹೆಚ್ಚು ಲಾಭ ಮಾಡಬಹುದು. ಸಾಲ ಮಾಡುವಂತಹ ಅನಿವಾರ್ಯತೆ ಎದುರಾಗಬಹುದು. ಕಚೇರಿಯ ಕೆಲಸಗಳು ಅರ್ಧಕ್ಕೆ ಬಿಡುವ ಬದಲಾಗಿ ಪೂರ್ಣಗೊಳಿಸಲು ಮುಂದಾಗಿ. ಮೂಳೆಗಳಿಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಒಳ‍ಗಾಗುವ ಸಾಧ್ಯತೆ ಇದೆ. ನಿಮ್ಮ ಆದಾಯ ದ್ವಿಗುಣ ಆಗುವಂತಹ ಅವಕಾಶವಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

March 25 Daily Horoscope Prediction For 12 Zodiac Signs In Kannada

Here is March 25 daily horoscope prediction for 12 zodiac signs read on... ಮಾರ್ಚ್ 24ರ ದಿನ ಭವಿಷ್ಯ
Story first published: Tuesday, March 25, 2025, 6:04 [IST]
X
Desktop Bottom Promotion