Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 24ರ ಸೋಮವಾರ ನಿಮ್ಮ ರಾಶಿಫಲದಲ್ಲಿ ಏನಿದೆ? ಯಾರಿಗೆ ಲಾಭ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡೋಣ:
ಮೇಷ ರಾಶಿ
ಹಣದ ವಿಷಯದಲ್ಲಿ ಈ ದಿನ ನಿಮ್ಮ ಪಾಲಿಗೆ ಶುಭವಾಗಬಹುದು, ಯಾವುದೇ ವಹಿವಾಟು ನಡೆಸುವಾಗ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಏಕಾಎಕಿ ಹೆಚ್ಚಾಗಬಹುದು. ನಿಮ್ಮ ಕೆಲಸದಲ್ಲಿ ತೊಡಕುಗಳು ಎದುರಾಗಬಹುದು. ಹಲವು ದಿನಗಳ ಕೆಲಸಕ್ಕೆ ನೀವು ಮುಕ್ತಾಯ ಹಾಡಬಹುದು. ನಿಮ್ಮ ದಾಂಪತ್ಯದಲ್ಲಿ ಸುಖವಿರಲಿದೆ.
ವೃಷಭ ರಾಶಿ
ಈ ದಿನ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಿದರೆ, ಅದು ನಿಮಗೆ ಉತ್ತಮವಾಗಿರುತ್ತದೆ. ನಿತ್ಯದ ಕೆಲಸಕ್ಕೆ ಗೈರಾಗಬೇಡಿ. ಕುಟುಂಬದಲ್ಲಿ ನಿಮ್ಮ ಭವಿಷ್ಯದ ಕುರಿತ ಚರ್ಚೆ ಇರಲಿದೆ. ವ್ಯಾಪಾರಸ್ಥರಿಗೆ ಈ ದಿನ ಲಾಭದಾಯಕವಾಗಿರಲಿದೆ. ನಿಮ್ಮ ಸ್ನೇಹಿತರಿಂದ ಆರ್ಥಿಕ ಸಹಾಯ ಪಡೆಯಲಿದ್ದೀರಿ, ಆರೋಗ್ಯದ ಮೇಲೆ ಗಮನವಿಡಿ.

ಮಿಥುನ ರಾಶಿ
ಇಂದು ನಿಮಗೆ ಹಲವು ಮೂಲಗಳಿಂದ ಆರ್ಥಿಕ ಲಾಭದ ನಿರೀಕ್ಷೆ ಇದೆ. ಉದ್ಯೋಗಿಗಳು ತಮ್ಮ ಕೆಲಸದ ಕಡೆಗೆ ಗಮನವಿಡಿ. ನೀವು ಸರ್ಕಾರಿ ಹುದ್ದೆಯಲ್ಲಿದ್ದರೆ ಈ ದಿನ ನಿಮ್ಮ ಕೆಲಸವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಪ್ರೀತಿಯ ವಾತಾವರಣ ಇರಲಿದೆ. ಕೆಲಸದ ಕಾರಣದಿಂದ ನೀವು ದೂರ ಪ್ರಯಾಣ ಮಾಡಬಹುದು.
ಕರ್ಕ ರಾಶಿ
ಈ ದಿನ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಧನಾತ್ಮಕತೆ ಇರಲಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ಸಮಯವು ನಿಮಗೆ ತುಂಬಾ ಅದೃಷ್ಟದಿಂದ ಕೂಡಿರಲಿದೆ. ದಿನದ ಕೊನೆಯಲ್ಲಿ ನೀವು ಆರ್ಥಿಕ ಲಾಭವನ್ನು ಸಹ ಪಡೆಯುತ್ತೀರಿ. ಮನಸ್ಸಿನಲ್ಲಿ ಶಾಂತಿ ನೆಲೆಸುವ ಕಾರ್ಯ ಮಾಡುವಿರಿ, ಕುಟುಂಬದಲ್ಲಿ ಶುಭ ಸುದ್ದಿ ಕೇಳುವಿರಿ. ಸ್ನೇಹಿತರು ನಿಮ್ಮ ನೆರವಿಗೆ ಬರಬಹುದು. ಹೊಸ ಉದ್ಯಮದಲ್ಲಿ ಏಳಿಗೆ ಇರಲಿದೆ.
ಸಿಂಹ ರಾಶಿ
ಈ ದಿನ ಹಣಕಾಸಿನ ಪರಿಸ್ಥಿತಿಯಲ್ಲಿ ಹದಗೆಡುವ ಸಾಧ್ಯತೆಯಿದೆ. ವೆಚ್ಚಗಳು ಆದಾಯವನ್ನು ಮೀರಬಹುದು. ಸಾಲ ಕೂಡ ಪಡೆಯಬೇಕಾಗಬಹುದು. ಆರೋಗ್ಯಕ್ಕೆ ಬಂಧಿಸಿದಂತೆ ಈ ಸಮಯದಲ್ಲಿ ನೀವು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗಬಹುದು. ವ್ಯಾಪಾರ ವ್ಯವಹಾರವು ಸಾಮಾನ್ಯವಾಗಿರಬಹುದು. ನಿಮ್ಮ ಕುಟುಂಬದಲ್ಲಿ ನಿಮ್ಮಿಂದಾಗಿ ಸಂತೋಷ ಇರಲಿದೆ. ಹಲವು ಕೆಲಸದಲ್ಲಿ ಅಡೆತಡೆ ಇರಬಹುದು.
ಕನ್ಯಾ ರಾಶಿ
ಇಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಪರಿಹರಿಸಲು ಪ್ರಯತ್ನಿಸಿ. ದೊಡ್ಡ ಖರ್ಚುಗಳಿಗೆ ಮುಂದಾಗುವ ಮೊದಲು ಮತ್ತೊಮ್ಮೆ ಆಲೋಚಿಸಿ. ನಿರ್ಧಿಷ್ಟ ಕೆಲಸಕ್ಕಾಗಿ ಮೀಸಲಿಟ್ಟು ಹಣವನ್ನು ನೀವು ಬೇರೆ ಕೆಲಸಕ್ಕೆ ಬಳಸಬಹುದು. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಶುಭ ಹಾಗೂ ಅಶುಭದಿಂದ ಕೂಡಿರಲಿದೆ. ನೀವು ಹೋಟೆಲ್ ಉದ್ಯಮದಲ್ಲಿದ್ದರೆ ನಿಮಗೆ ಲಾಭ ಹೆಚ್ಚು, ಆದರೆ ಈ ದಿನ ಖರ್ಚು ಸಹ ಹೆಚ್ಚಾಗಲಿದೆ. ಅನಗತ್ಯ ವಸ್ತುಗಳಿಗೆ ನೀವು ಹಣ ವ್ಯಯಿಸಬಹುದು. ಉದ್ಯೋಗಿಗಳಿಗೆ ಕೆಲಸದ ಕಡೆಗೆ ಗಮನಹರಿಸಲು ಸಲಹೆ ನೀಡಲಾಗುವುದು. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು.
ವೃಶ್ಚಿಕ ರಾಶಿ
ನೀವಿಂದು ಕೆಲಸದ ವಿಚಾರದಲ್ಲಿ ಬಹಳ ಒತ್ತಡಕ್ಕೆ ಒಳಗಾಗಬಹುದು. ಸ್ವಂತ ಉದ್ಯೋಗ ಅಥವಾ ಬ್ಯಾಂಕ್, ನ್ಯಾಯಾಂಗ, ಖಾಸಗಿ ಉದ್ಯೋಗಸ್ಥರಲ್ಲಿ ಹೆಚ್ಚು ಒತ್ತಡ ಕಂಡುಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಹಾಗೆ ಸಮಾಜ ಸೇವಕರು ಇಂದು ಗುರುತಿಸಲ್ಪಡುತ್ತಾರೆ. ದಿನದ ಅಂತ್ಯದಲ್ಲಿ ಹೆಚ್ಚು ಆತಂಕ ಪಡುವ ವಿಚಾರಗಳು ಎದುರಾಗಬಹುದು, ವಾಹನ ಮಾಲೀಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಧನು ರಾಶಿ
ಹಣಕಾಸಿನ ಸ್ಥಿತಿ ನೀವು ಬಯಸಿದಂತೆ ಇರುವುದಿಲ್ಲ. ನಿಮಗೆ ಬರಬೇಕಿದ್ದ ಹಣ ಇಂದು ಮತ್ತಷ್ಟು ದೂರಾಗಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ ಕಾಡಬಹುದು. ಅಮೂಲ್ಯ ವಸ್ತುಗಳು ನಿಮ್ಮ ಕೈ ತಪ್ಪುವ ಸಾಧ್ಯತೆ ಹೆಚ್ಚು. ಮನೆಗೆ ಬೇಕಾದ ವಸ್ತುವನ್ನು ಇಂದು ಖರೀದಿಸಲು ಉತ್ತಮ ಸಮಯ. ಅವಿವಾತರಲ್ಲಿ ಈ ದಿನ ಶುಭವಾಗಲಿದೆ.
ಮಕರ ರಾಶಿ
ಈ ದಿನದಂದು ನೀವು ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ತಾಳ್ಮೆಯಿಂದ ಎಲ್ಲಾ ಸಮಸ್ಯೆಗಳ ಎದುರಿಸಿ, ಅನಗತ್ಯ ಮಾತಿನಿಂದ ಸಮಸ್ಯೆ ಉದ್ಭವಿಸಬಹುದು. ವ್ಯಾಪಾರ ಹಾಗೂ ಪಾಲುದಾರಿಯಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ನಿಮ್ಮ ಗುರಿ ತಲುಪಲು ಇರುವ ದಾರಿಯನ್ನು ಬದಲಾಯಿಸಬೇಡಿ, ಹಾಗೆ ಅದನ್ನು ಮುಂದೂಡಬೇಡಿ. ಆರೋಗ್ಯದಲ್ಲಿ ಯಥಾಸ್ಥಿತಿ ಇರಲಿದೆ.
ಕುಂಭ ರಾಶಿ
ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಈ ದಿನ ಅದರ ಪರವಾಗಿ ಅಥವಾ ಅದರ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಅನಿರೀಕ್ಷಿತವಾಗಿ ನೀವು ಬೇರೆಯವರಿಂದ ಸಹಾಯ ಪಡೆಯಬಹುದು. ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ಬಹುದೊಡ್ಡ ಚಿಂತೆಯೊಂದು ನಿಮ್ಮಿಂದ ದೂರಾಗಲಿದೆ.
ಮೀನ ರಾಶಿ
ವ್ಯಾಪಾರದಲ್ಲಿ ಏರಿಳಿತದ ಪರಿಸ್ಥಿತಿ ಇರಲಿದೆ. ಹೊಸ ಹೂಡಿಕೆ, ಹೊಸ ಖರ್ಚುಗಳ ಮಾಡಲು ಹೋಗಬೇಡಿ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಕುಟುಂಬದಲ್ಲಿರುವ ಭಿನ್ನಾಭಿಪ್ರಾಯ ಕೊನೆಗೊಳ್ಳುತ್ತವೆ. ಬಹಳ ಕಾಲದಿಂದ ನಿಮಗೆ ಸೇರಬೇಕಿದ್ದ ವಸ್ತುವೊಂದು ಕೈ ಸೇರಲಿದೆ. ಆರೋಗ್ಯದ ಮೇಲೆ ಗಮನವಿರಲಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










