ಮಾರ್ಚ್‌ 23ರ ಭಾನುವಾರ ನಿಮ್ಮ ರಾಶಿಫಲದಲ್ಲಿ ಏನೆಲ್ಲಾ ಇದೆ?

ಶುಭ ದಿನ ವೈದಿಕ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಈ ದಿನದ ರಾಶಿಫಲ.....

ಮೇಷ ರಾಶಿ

ಇಂದು ಇದ್ದಕ್ಕಿದ್ದಂತೆ ನೀವು ಕೆಲವು ಒಳ್ಳೆಯ ಸುದ್ದಿ ಪಡೆಯಬಹುದು ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ಆದಾಯದಲ್ಲಿ ಏರಿಕೆ ನೋಡಬಹುದು. ಅನಿರೀಕ್ಷಿತ ಮೂಲದಿಂದ ನೀವು ಆದಾಯ ಪಡೆಯಬಹುದು. ಕುಟುಂಬ ಹಾಗೂ ಸ್ನೇಃಹಿತರಿಂದ ನಿಮ್ಮ ಪರವಾದ ಕೆಲಸಕ್ಕೆ ಸಹಕಾರ ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಈ ದಿನ ಶುಭವಾಗಲಿದೆ. ಹಳೆಯ ಕೆಲಸಗಳನ್ನು ಹಾಗೆ ಉಳಿಸಿಕೊಳ್ಳುವ ಬದಲಾಗಿ ಆದಷ್ಟು ಬೇಗ ಮುಗಿಸುವುದು ಒಳಿತು. ಆರೋಗ್ಯದಲ್ಲಿ ಈ ದಿನ ಸುಧಾರಣೆ ನೋಡಲಿದ್ದೀರಿ.

ವೃಷಭ ರಾಶಿ

ಇಂದು ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಾಗೆ ಹಣಕಾಸು ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ. ನಿಮ್ಮ ಮುಂದಿನ ನಡೆಗಳು ಇಂದು ನಿರ್ಧಾರವಾಗುವ ಸಾಧ್ಯತೆ ಇದೆ. ನಿಮ್ಮ ಒಂದಿಷ್ಟು ಸಮಸ್ಯೆಗಳಿಗೆ ಸುಲಭದಲ್ಲಿ ಪರಿಹಾರ ಪಡೆದುಕೊಳ್ಳಬಹುದು. ಕುಟುಂಬದಲ್ಲಿ ಶುಭ ಕಾರ್ಯದ ಕುರಿತಾಗಿ ಮಾತುಕತೆ ನಡೆಯಬಹುದು. ನಿಮ್ಮ ಹಳೆಯ ಘಟನೆಗಳಿಂದ ನೀವು ಮತ್ತೆ ನೋವು ಅನುಭವಿಸಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು, ಹಾಗೆ ಇಂದು ಖರ್ಚು ಹೆಚ್ಚಾಗಬಹುದು.

March 23 Daily Horoscope Prediction For 12 Zodiac Signs In Kannada

ಮಿಥುನ ರಾಶಿ

ನೀವು ಹೂಡಿಕೆ, ಉಳಿತಾದ ಕಡೆಗೆ ಹೆಚ್ಚು ಆಲೋಚಿಸಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೆ ಕಾರಣವಾಗಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ಒಟ್ಟಿಗೆ ನೀವು ಮನೆಯ ಜವಾಬ್ದಾರಿಗಳನ್ನು ಪೂರೈಸುವಿರಿ. ನಿಮ್ಮ ಮನೆಗಾಗಿ ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ನಿಮ್ಮ ಶ್ರಮ ವಹಿಸಿ ಕೆಲಸ ಮಾಡುವ ಕಾರಣದಿಂದಾಗಿ ನಿಮ್ಮ ಗೌರವ, ಘನತೆ ಹೆಚ್ಚಾಗಲಿದೆ. ಪ್ರೀತಿಯ ಜೀವನವು ಮಧುರವಾಗಿರಲಿದೆ. ನೀವು ಬಯಸಿದಂತೆ ನಿಮ್ಮ ಕೆಲಸದಲ್ಲಿ ಯಶಸ್ಸು ಒಲಿಯಬಹುದು. ಮನೆಯ ಹಿರಿಯರ ಆರೋಗ್ಯದ ಮೇಲೆ ಗಮನವಿರಲಿ.

ಕರ್ಕ ರಾಶಿ

ನೀವಿಂದು ನಿಮ್ಮ ಕೆಲಸಗಳು ಕಡಿಮೆ ಮಾಡಿಕೊಂಡು ವಿಶ್ರಾಂತಿ ಕಡೆಗೆ ಹೆಚ್ಚು ಮನಸ್ಸು ಮಾಡುವಿರಿ. ಹೀಗಾಗಿ ಶಾಂತಿಯುತ ದಿನವಾಗಿರಲಿದೆ. ಹಾಗೆ ಹಲವರು ಈ ದಿನ ಪ್ರವಾಸ, ಸಂಬಂಧಿಕರ ಭೇಟಿಗೆ ಮುಂದಾಗಬಹುದು. ಆರ್ಥಿಕ ವಿಚಾರದಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ವ್ಯಾಪಾರಿಗಳಿಗೆ ಈ ದಿನ ಸಾಮಾನ್ಯವಾಗಿರಲಿದೆ. ನಿಮ್ಮಲ್ಲಿ ಯಾವುದೇ ಹೊಸ ವಿಚಾರಗಳು ನಡೆಯುವುದಿಲ್ಲ. ನಿಮ್ಮ ಬಹುತೇಕ ವಿಚಾರಗಳಲ್ಲಿ ಯಶಸ್ಸಿನ ಕಡೆಗೆ ಒಲವು ಇರಲಿದೆ. ಸ್ನೇಹಿತರೊಬ್ಬರ ಹಣಕಾಸು ವಿಚಾರವಾಗಿ ನೀವು ಸಹಾಯ ಮಾಡುವಿರಿ.

ಸಿಂಹ ರಾಶಿ

ಇಂದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗಬಹುದು. ಯಾವುದೇ ಕೆಲಸವಿರಲಿ ನೀವು ಪೂರ್ಣ ಗಮನವಿಟ್ಟು ಮಾಡುವುದು ಉತ್ತಮ ಫಲಿತಾಂಶ ನೀಡಲಿದೆ. ಅವಿವಾಹಿತರು ಇಂದು ಶುಭ ಸುದ್ದಿ ಕೇಳುವಿರಿ. ನಿಮ್ಮಲ್ಲಿ ಆರ್ಥಿಕವಾಗಿ ಹಿನ್ನಡೆ ಉಂಟಾಗಬಹುದು, ನೀವು ಹಣದ ನಿರೀಕ್ಷೆಯಲ್ಲಿದ್ದರೆ ಇಂದು ನಿರಾಸೆ ಕಾಡಬಹುದು. ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡ ಕೆಲಸ ಪೂರ್ಣ ಮಾಡುವಿರಿ. ಮನೆಯಲ್ಲಿ ಸಣ್ಣ ವಿಚಾರವು ದೊಡ್ಡ ಮನಸ್ಥಾಪಕ್ಕೆ ಕಾರಣವಾಗಬಹುದು. ದಾಂಪತ್ಯದಲ್ಲಿ ಸುಖವಿರಲಿದೆ. ಅನಿರೀಕ್ಷಿತ ಎನಿಸುವಂತಹ ಹಲವು ಘಟನೆಗಳು ನಡೆಯಬಹುದು.

ಕನ್ಯಾ ರಾಶಿ

ನೀವು ಮಕ್ಕಳ ವಿಚಾರವಾಗಿ ಇಂದು ಶುಭ ಸುದ್ದಿ ಕೇಳಬಹುದು. ಮನೆ ಸದಸ್ಯರ ಜೊತೆಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ವ್ಯಪಾರಿಗಳು ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಬೇಡಿ. ಹಾಗೆ ನಿಮ್ಮ ಆದಾಯವನ್ನು ಬೇರೊಂದು ಕೆಲಸದಲ್ಲಿ ಹೂಡಿಕೆ ಮಾಡಲು ಇಂದು ಮುಂದಾಗದೆ ಇರುವುದು ಉತ್ತಮ. ಸಮಸ್ಯೆಗಳನ್ನು ಆದಷ್ಟು ಬೇಗ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಿ. ಸೋಮಾರಿಗಳಾಗಬೇಡಿ, ನಿಮ್ಮ ಗುರಿಯ ಕುರಿತು ಸ್ಪಷ್ಟ ನಿಲುವು ಪಡೆಯಿರಿ. ಯಾವುದೇ ಕೆಲಸವನ್ನಾದರು ಬುದ್ದಿವಂತಿಕೆಯಿಂದ ಮಾಡಲು ಮುಂದಾಗಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಬಹಳಷ್ಟು ಶುಭವಾಗುತ್ತಿದೆ. ನೀವು ಅನೇಕ ದಿನಗಳಿಂದ ಮಾಡಲು ಇಚ್ಛಿಸಿದ್ದ ಕೆಲಸ ಪೂರ್ಣ ಮಾಡುವಿರಿ, ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ, ವಿಶೇಷವಾಗಿ ಉದ್ಯೋಗಿಗಳು ಪ್ರಶಂಸೆ ಮತ್ತು ಗೌರವಕ್ಕೆ ಪಾತ್ರರಾಗುತ್ತಾರೆ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಆರ್ಥಿಕ ಸಮಸ್ಯೆಗಳು ದೂರಾಗುವಂತಹ ಕೆಲಸವನ್ನು ನೀವಿಂದು ಮಾಡಲಿದ್ದೀರಿ. ಬೇರೆಯವರ ವಿಚಾರವಾಗಿ ನೀವು ಸಲಹೆ ನೀಡಲು ಹೋಗದೆ ಇರುವುದು ಒಳಿತು. ಆಸ್ತಿ, ಹಣದ ವಿಚಾರವಾಗಿ ಎಚ್ಚರಿಕೆಯಿಂದ ಇರಿ. ವಾಹನ ಮಾಲಿಕರು ಲಾಭ ಮಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಮಿಶ್ರ ಫಲದಿಂದ ಕೂಡಿರಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ದಿನದ ಅಂತ್ಯದಲ್ಲಿ ಒತ್ತಡಕ್ಕೆ ಒಳಗಾಗುವ ಘಟನೆಗಳು ನಡೆಯಬಹುದು. ಮನೆಗೆ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ಹಣವನ್ನು ಹೆಚ್ಚಾಗಿ ಖರ್ಚು ಮಾಡಬೇಕಾಗುತ್ತದೆ. ಹಾಗೆ ಮುಖ್ಯ ವಿಚಾರವೊಂದಕ್ಕೆ ಒಟ್ಟು ಮಾಡಿದ್ದ ಹಣವನ್ನು ಬೇರೊಂದು ವಿಚಾರಕ್ಕೆ ಬಳಸಬಹುದು. ಮುಂದಿನ ದಿನಗಳಿಗಾಗಿ ನೀವಿಂದು ಬಹುದೊಡ್ಡ ಕೆಲಸ ಮಾಡಬಹುದು. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಪೂರಕವಾಗಿ ಅವಕಾಶಗಳು ಬರಬಹುದು. ಇಂತಹ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ.

ಧನು ರಾಶಿ

ವ್ಯಾಪಾರಸ್ಥರು ಇಂದು ಹಣದ ವಿಷಯದಲ್ಲಿ ಜಾಗರೂಕರಾಗಿರಿ, ತರಾತುರಿಯಲ್ಲಿ ಯಾವುದೇ ಹಣಕಾಸಿನ ನಿರ್ಧಾರಕ್ಕೆ ಮುಂದಾಗಬೇಡಿ. ಮನದಲ್ಲಿರುವ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಬಹಳ ಉತ್ತಮ. ಅವಿವಾಹಿತರಿಗೆ ಈ ದಿನ ಶುಭವಾಗಬಹುದು. ನಿಮ್ಮ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡಿ. ಯಾರ ಬಳಿಯೂ ಈ ದಿನ ಹಣಕಾಸಿನ ಸಹಾಯ ಕೇಳಲು ಮುಂದಾಗಬೇಡಿ. ನಿಮ್ಮ ಮೇಲಿನ ಗೌರವ ಕಡಿಮೆಯಾಗಬಹುದು. ಬಹುದೊಡ್ಡ ಚರ್ಚೆಗೆ ನೀವಿಂದು ಒಳಗಾಗಬೇಕಾಗಬಹುದು.

ಮಕರ ರಾಶಿ

ಮಕರ ರಾಶಿಯವರು ಇಂದು ದೂರ ಪ್ರಯಾಣಕ್ಕೆ ಮುಂದಾಗಬಹುದು. ವಾಹನ ಮಾಲಿಕರು ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗುತ್ತಿದೆ. ಉದ್ಯೋಗಿಗಳು ಬಯಸಿದ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಸುತ್ತಲು ಇಂದು ಧನಾತ್ಮಕ ವಿಚಾರಗಳು ಹರಿದಾಡಲಿದೆ. ಇದರಿಂದ ನಿಮ್ಮ ಮನದಲ್ಲಿ ಶಾಂತಿ ಇರಲಿದೆ. ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆಗೆ ಗಮನವಿಡುವುದು ಒಳಿತು. ನಿಮ್ಮ ಆರೋಗ್ಯದಲ್ಲಿ ಈ ದಿನ ಹೆಚ್ಚು ಬದಲಾವಣೆ ಇರುವುದಿಲ್ಲ. ನಿಮ್ಮ ಅಮೂಲ್ಯ ವಸ್ತುಗಳನ್ನು ಹೆಚ್ಚು ಜೋಪಾನ ಮಾಡುವುದು ಒಳಿತು.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಎಲ್ಲಾ ವಿಚಾರದಲ್ಲಿ ಯಶಸ್ಸು ಪಡೆಯಬಹುದು. ಹಲವು ದಿನಗಳಿಂದ ನೀವು ಅಂದುಕೊಂಡ ಕೆಲಸ ಈ ದಿನ ಮುಗಿಯಬಹುದು. ನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮವಹಿಸಿ. ಅನಿರೀಕ್ಷಿತ ಮೂಲದಿಂದ ನಿಮಗೆ ಹಣ ಲಾಭದ ನಿರೀಕ್ಷೆ ಇದೆ. ಹಲವು ಸಮಯದಿಂದ ಬಯಸಿದ್ದ ವಸ್ತುವನ್ನು ನೀವಿಂದು ಖರೀದಿಸಬಹುದು. ನೀವಿಂದು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬಹುದು. ನೀವು ಈಗಾಗಲೇ ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಸಂತೋಷವು ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ನೀವು ಪ್ರಮುಖ ಚರ್ಚೆ ನಡೆಸಬಹುದು.

ಮೀನ ರಾಶಿ

ವ್ಯಾಪಾರಕ್ಕೆ ಸಂಬಂಧಿಸಿದ ಜನರಲ್ಲಿ ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ನೀವಿಂದು ಏಕಕಾಲದಲ್ಲಿ ಅನೇಕ ಜವಾಬ್ದಾರಿಗಳನ್ನು ಹೊರಬೇಕಾಗಬಹುದು. ಅನಗತ್ಯ ವಸ್ತುಗಳಿಗೆ ಖರ್ಚು ಮಾಡುವುದನ್ನು ತಪ್ಪಿಸಿ. ಉದ್ಯೋಗಿಗಳು ಅನಗತ್ಯ ವಿಷಯಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಲು ಹೋಗಬಾರದು. ದೂರ ಪ್ರಯಾಣದಂತಹ ಕೆಲಸಕ್ಕೆ ನೀವು ಮುಂದಾಗಬಹುದು. ಆರೋಗ್ಯದ ಕಡೆಗೆ ಹೆಚ್ಚು ಗಮನ ಇಡುವುದು ಉತ್ತಮ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

March 23 Daily Horoscope Prediction For 12 Zodiac Signs In Kannada

Here is March 23 daily horoscope prediction for 12 zodiac signs read on... ಮಾರ್ಚ್ 23ರ ದಿನ ಭವಿಷ್ಯ
Story first published: Sunday, March 23, 2025, 6:03 [IST]
X
Desktop Bottom Promotion