Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 22ರ ಶನಿವಾರ ಯಾವೆಲ್ಲ ರಾಶಿಯವರು ನಿರೀಕ್ಷೆಗೂ ಮೀರಿದ ಲಾಭ ಮಾಡುತ್ತಾರೆ?
ಜ್ಯೋತಿಷ್ಯದ ಪ್ರಕಾರ ಮಾರ್ಚ್ 22ರಂದು ನಿಮಗೆ ಹೇಗಿರಲಿದೆ?
ಮೇಷ ರಾಶಿ
ಇಂದು ನೀವು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕಾಗಿ ಬರುವುದರಿಂದ ನಿಮ್ಮ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಲು ಆಗುವುದಿಲ್ಲ. ನಿತ್ಯದ ಕೆಲಸಗಳಲ್ಲಿ ಒತ್ತಡ ಹೆಚ್ಚಾಗಬಹುದು. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಒಳಿತು. ನಿರುದ್ಯೋಗಿಗಳಾಗಿದ್ದರೆ ಈ ತಿಂಗಳು ಶಾಶ್ವತ ಉದ್ಯೋಗ ಪಡೆಯಬಹುದು. ವ್ಯಾಪಾರಿಗಳು ತಮ್ಮ ಕೆಲಸದಲ್ಲಿ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅನಿರೀಕ್ಷಿತ ಮೂಲದಿಂದ ನಿಮಗೆ ಶುಭ ಸುದ್ದಿ ಬರುವಂತಹ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.
ವೃಷಭ ರಾಶಿ
ನಿಮ್ಮ ಹೆಚ್ಚುತ್ತಿರುವ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ಹೆಚ್ಚುತ್ತಿರುವ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ನಡವಳಿಕೆಯಲ್ಲಿನ ಸಣ್ಣ ಬದಲಾವಣೆಯು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ವ್ಯಾಪಾರಸ್ಥರು ಇಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸುವುದು ಉತ್ತಮ. ನಿಮ್ಮ ಮನೆಯಲ್ಲಿ ಶುಭ ಕಾರ್ಯಕ್ಕೆ ಕಾರಣವಾಗುವ ವಿಚಾರ ನಡೆಯಬಹುದು. ಹಲವು ದಿನಗಳಿಂದ ಬಾಕಿ ಉಳಿದ ಕೆಲಸಗಳ ಪೂರ್ಣ ಮಾಡಿ. ನಿಮ್ಮ ದೈನಂದಿನ ಕೆಲಸಗಳು ಅಡೆತಡೆಗಳಿಲ್ಲದೆ ನಡೆಯಲಿದೆ.

ಮಿಥುನ ರಾಶಿ
ಇಂದು ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಪೂರ್ಣವಾಗಲಿವೆ. ಹಣಕಾಸು ವಿಚಾರದಲ್ಲಿ ನೀವು ಇಂದು ನಿರಾಸೆಗೆ ಒಳಗಾಗುವಿರಿ. ನೀವು ಅಂದುಕೊಂಡಿರುವಂತೆ ಹಣವು ನಿಮ್ಮ ಕೈಸೇರದೆ ಇರಬಹುದು. ಹಾಗೆ ಪ್ರಮುಖ ಕೆಲಸವೊಂದಕ್ಕೆ ಹಣ ಒಗ್ಗೂಡಿಸಲು ಒಂದಿಷ್ಟು ಅಡೆತಡೆ ಎದುರಾಗಬಹುದು. ನಿಮ್ಮ ಖರ್ಚುಗಳ ಮೇಲೆ ಈ ದಿನ ನಿಗಾ ಇಡುವುದು ಉತ್ತಮ. ಮನೆಯಿಂದ ಬಹಳ ಸಮಯ ನೀವು ಹೊರಗೆ ಉಳಿಯಬೇಕಾಗುತ್ತದೆ.
ಕರ್ಕ ರಾಶಿ
ವ್ಯವಹಾರಕ್ಕೆ ಸಂಬಂಧಿಸಿದ ಜನರು ಈ ದಿನ ದೊಡ್ಡ ಲಾಭ ನಿರೀಕ್ಷಿಸಬಹುದು. ಈ ದಿನ ಬಹಳಷ್ಟು ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಇರಬಹುದು. ಹಾಗೆ ನಿರೂದ್ಯೋಗಿಗಳಿಗೆ ಈ ದಿನ ಬಹಳ ಉತ್ತಮವಾಗಲಿದೆ. ಇಂದಿನ ನಿಮ್ಮ ಕಠಿಣ ಪರಿಶ್ರಮವು ಮುಂದಿನ ದಿನಗಳಲ್ಲಿ ನಿಮಗೆ ಪ್ರಗತಿಯ ಮಾರ್ಗಗಳನ್ನು ತೆರೆಯುತ್ತದೆ. ಅವಿವಾಹಿತರಿಗೆ ಈ ದಿನ ಶುಭವಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯೊಂದಿಗಿನ ಹೊಂದಾಣಿಕೆಯು ಉತ್ತಮವಾಗಿರುತ್ತದೆ.
ಸಿಂಹ ರಾಶಿ
ಈ ದಿನ ನಿಮಗೆ ಆರ್ಥಿಕವಾಗಿ ಲಾಭದಾಯಕವಾಗುವ ದಿನವಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ನೀವಿಂದು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಹಳ ಜಾಗರೂಕರಾಗಿರಿ. ಮನೆಗೆ ಅಗತ್ಯವಾದ ವಸ್ತು ಖರೀದಿಗೆ ಮುಂದಾಗಬಹುದು, ದಾಂಪತ್ಯ, ಪ್ರೀತಿ ಜೀವನದಲ್ಲಿ ನಿಮಗೆ ನೀವಂದುಕೊಂಡ ಫಲಿತಾಂಶ ಸಿಗಬಹುದು. ಸಣ್ಣ ವ್ಯಾಪಾರಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಮುಖ್ಯ ವಿಚಾರದಲ್ಲಿ ನಿಮಗೆ ಯಶಸ್ಸು ಸಿಗಬಹುದು.
ಕನ್ಯಾ ರಾಶಿ
ಈ ದಿನ ವ್ಯಾಪಾರಿಗಳಿಗೆ ಬಹಳ ಲಾಭದಾಯಕವಾಗಲಿದೆ, ನೀವು ಕಬ್ಬಿಣ, ಲೋಹ, ಯಂತ್ರೋಪಕರಣ ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನವಾಗಬಹುದು. ನಿಮ್ಮಲ್ಲಿ ಹಲವು ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರ ಕಂಡುಕೊಳ್ಳಬಹುದು. ಸಂಬಳ ಪಡೆಯುವ ಜನರು ತಮ್ಮ ಎಲ್ಲಾ ಕೆಲಸಗಳನ್ನು ಕಚೇರಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸಿ. ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡಲು ಯೋಚಿಸುತ್ತಿದ್ದರೆ ಈ ದಿನ ಸೂಕ್ತವಾಗಿದೆ. ಕಾರಣಗಳಿಲ್ಲದೆ ಇಂದು ಅನಗತ್ಯ ಖರ್ಚಿಗೆ ಮುಂದಾಗಬೇಡಿ. ಹಾಗೆ ಎಲ್ಲಾ ಖರ್ಚುಗಳಿಗೂ ಈ ದಿನ ಲೆಕ್ಕ ಇಟ್ಟುಕೊಳ್ಳುವುದು ಉತ್ತಮ.
ತುಲಾ ರಾಶಿ
ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಯನ್ನು ಇಂದು ಪರಿಹರಿಸಬಹುದು. ಇದರಿಂದ ನಿಮ್ಮ ಆದಾಯದಲ್ಲಿ ಮುಂದೆ ಏರಿಕೆ ನೋಡಬಹುದು. ನೀವು ಹಲವು ದಿನಗಳಿಂದ ಪ್ರವಾಸ ವಿಚಾರವಾಗಿ ಮಾಡುತ್ತಿದ್ದ ಆಲೋಚನೆಗಳು ಈ ದಿನದಂದು ಮತ್ತೊಂದು ಹೆಜ್ಜೆ ಮುಂದಿಡಲಿದ್ದೀರಿ. ಈ ಸಮಯದಲ್ಲಿ ಸಾಲ ಮಾಡುವುದು ನಿಮಗೆ ದುಬಾರಿಯಾಗಬಹುದು. ಕುಟುಂಬಸ್ಥರಿಂದ ನಿಮಗೆ ಈ ದಿನ ಬೆಂಬಲ ಸಿಗಲಿದೆ, ಹಾಗೆ ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆಯೂ ಇದೆ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಈ ದಿನ ಶುಭವಾಗಲಿದೆ.
ವೃಶ್ಚಿಕ ರಾಶಿ
ಆರ್ಥಿಕ ವಿಚಾರವಾಗಿ ಈ ದಿನ ಶುಭ ದಿನ. ಹಲವು ದಿನದಿಂದ ನೀವು ಹಣಕಾಸು ವಿಚಾರವಾಗಿ ಮಾಡುತ್ತಿದ್ದ ಪ್ರಯತ್ನಗಳು ಯಶಸ್ಸು ಗಳಿಸಲಿವೆ. ಇಂದು ವ್ಯಾಪಾರಸ್ಥರಿಗೆ ಸರಾಸರಿ ದಿನ ಆಗಿರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವೈವಾಹಿಕ ಜೀವನಕ್ಕೆ ಹೆಚ್ಚು ಗಮನ ಕೊಡುವಂತೆ ಸಲಹೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಶುಭವಾಗಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಅಡೆತಡೆಯಿಲ್ಲದೆ ನಡೆಯಲಿದೆ. ಅನಗತ್ಯ ಚರ್ಚೆಗಳಿಂದ ಇಂದು ದೂರವೇ ಇರುವುದು ಉತ್ತಮ.
ಧನು ರಾಶಿ
ಹಣಕಾಸು ವಿಚಾರದಲ್ಲಿ ಈ ದಿನ ನಿಮಗೆ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಆದ್ರೆ ನಿಮ್ಮ ಕೆಲಸ ವಿಚಾರದಲ್ಲಿ ಈ ದಿನ ಶುಭವಾಗುತ್ತಿದೆ. ಹಲವು ದಿನಗಳಿಂದ ನೀವು ಅಂದುಕೊಂಡಿದ್ದ ಕಾರ್ಯಗಳು ಪೂರ್ಣವಾಗಲಿವೆ. ಉದ್ಯೋಗ ಬದಲಿಸುವ ನಿಮ್ಮ ಬಯಕೆಗೆ ಈ ದಿನ ಉತ್ತಮ ಅವಕಾಶಗಳು ಬರಲಿವೆ. ನಿಮ್ಮಲ್ಲಿ ಕೆಲಸಕ್ಕೆ ಸಂಬಂಧಿಸಿದ ಹಲವು ಒತ್ತಡ ದೂರಾಗಲಿವೆ. ನಿಮ್ಮಲ್ಲಿ ಬಹಳ ಹಳೆಯ ಅನಾರೋಗ್ಯ ಸಮಸ್ಯೆಗಳಿದ್ದರೆ ಇಂದು ಸುಧಾರಣೆ ನೋಡಬಹುದು. ನಿಮ್ಮ ಎಲ್ಲ ಕೆಲಸದಲ್ಲಿಯೂ ಯಶಸ್ಸು ನೋಡಬಹುದು.
ಮಕರ ರಾಶಿ
ಇಂದು ಮನೆಯ ವಾತಾವರಣದಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಹಲವು ಬಾರಿ ಆಲೋಚಿಸಿ. ಉದ್ಯೋಗಿಗಳಿಗೆ ಈ ಸಮಯವು ಬಹಳ ಮುಖ್ಯವಾಗಿದೆ. ಭವಿಷ್ಯದ ದೃಷ್ಟಿಯಿಂದ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಈ ದಿನ ಪ್ರೀತಿ ಪಾತ್ರರ ಜೊತೆ ಸಂತೋಷದಿಂದ ಕಳೆಯಬಹುದು. ದಿನದ ಅಂತ್ಯವು ನಿಮಗೆ ಒತ್ತಡ ತರಬಹುದು. ಬಹಳ ಸಮಯದಿಂದ ನಿಮ್ಮ ಮನದಲ್ಲಿದ್ದ ಗೊಂದಲವೊಂದು ನಿವಾರಣೆಯಾಗಬಹುದು. ಕುಟುಂಬದಲ್ಲಿ ಏನಾದರು ಸಮಸ್ಯೆವಿದ್ದರೆ ಅದನ್ನು ಇಂದು ಬಗೆಹರಿಸಿಕೊಳ್ಳು ಪ್ರಯತ್ನಿಸಿ.
ಕುಂಭ ರಾಶಿ
ಮನೆಯ ವಾತಾವರಣ ಇಂದು ಸಂತೋಷದಿಂದ ಕೂಡಿರಲಿದೆ. ಆಸ್ತಿ ಸಂಬಂಧಿಸಿದ ಸಮಸ್ಯೆವಿದ್ದರೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಸಮಸ್ಯೆಗಳನ್ನು ಮಾತುಕತೆಯ ಮೂಲ ಬಗೆಹರಿಸಲು ಪ್ರಯತ್ನಿಸಿ. ಇಂದು ಸ್ನೇಹಿತರಿಂದ ನೀವು ಧನ ಸಹಾಯ ಪಡೆದುಕೊಳ್ಳಬಹುದು. ಹೀಗಾಗಿ ಆರ್ಥಿಕ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆಗಬಹುದು. ಅನಗತ್ಯ ವಸ್ತುಗಳಿಗೆ ನೀವು ಖರ್ಚು ಮಾಡಬೇಕಾಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಮಿಶ್ರ ಫಲ ನೋಡಬಹುದು. ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಸಲು ಪ್ರಯತ್ನಿಸಿ. ಬಹಳಷ್ಟು ವಿಚಾರಗಳು ನಿಮ್ಮ ಪರವಾಗಿ ಒಲವು ಪಡೆಯಬಹುದು. ಬಹಳ ದಿನಗಳ ಕನಸಿನ ಕುರಿತು ನೀವು ಇಂದು ಮನೆಯಲ್ಲಿ ಹೇಳಿಕೊಳ್ಳಲು ಒಳ್ಳೆಯ ಸಮಯ. ಅವಿವಾಹಿತರಲ್ಲಿ ಈ ದಿನ ಶುಭ ತರಲಿದೆ. ವಾಹನ ಖರೀದಿ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಗೆಲುವು ನೊಡಬಹುದು. ಹಣದ ವಹಿವಾಟು ಮಾಡುವಾಗ ಜಾಗ್ರತೆವಹಿಸಿ, ಹೂಡಿಕೆ, ಸಾಲ ನೀಡುವುದು, ವಸ್ತು ಖರೀದಿಯ ವಿಚಾರದಲ್ಲಿ ಹೆಚ್ಚು ಗಮನವಿಟ್ಟು ಕೆಲಸ ಮಾಡಿ. ವಿಶ್ರಾಂತಿ ಪಡೆಯುವ ಕುರಿತು ಆಲೋಚಿಸಿ. ದಾಂಪತ್ಯ, ಮಕ್ಕಳ ವಿಚಾರದಲ್ಲೂ ಹೆಚ್ಚು ಗಮನ ನೀಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










