Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 21ರ ಶುಕ್ರವಾರದ ರಾಶಿಫಲ: ಈ ದಿನ ಯಾರಿಗೆ ಧನಲಾದ ನಿರೀಕ್ಷೆ ನೋಡಿ!!
ಜ್ಯೋತಿಷ್ಯಶಾಸ್ತ್ರ ಪ್ರಕಾರ ಮಾರ್ಚ್ 21ರ ನಿಮ್ಮ ರಾಶಿಫಲ ಇಲ್ಲಿದೆ...
ಮೇಷ ರಾಶಿ
ಈ ದಿನ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಕೆಲಸದ ನಿಮಿತ್ತ ನೀವು ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಕುಟುಂಬದಲ್ಲಿ ನಿಮ್ಮ ಭವಿಷ್ಯದ ದಿನಗಳ ಕುರಿತಂತೆ ಮಾತುಗಳು ಚರ್ಚೆ ನಡೆಯಬಹುದು. ನೀವು ಬಹಳ ಕಾಲದಿಂದ ಮಾಡಬೇಕೆಂದು ಕಾದಿದ್ದ ಕೆಲಸ ಮಾಡಿ ಮುಗಿಸಲು ಇದು ಸೂಕ್ತ ಸಮಯ ಆಗಲಿದೆ. ಹಿರಿಯರು ನೀಡುವ ಸಲಹೆಯನ್ನು ಪಾಲಿಸುವುದು ಬಹಳ ಮುಖ್ಯ. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ. ವ್ಯಾಪಾರಿಗಳು ಈ ದಿನ ಲಾಭದಾಯಕ ದಿನವನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ಸ್ನೇಹಿತರಿಂದ ನಿಮಗೆ ಸಮಸ್ಯೆ ಬರಬಹುದು.
ವೃಷಭ ರಾಶಿ
ಕೆಲಸದ ಸ್ಥಳದಲ್ಲಿ ನಿಮಗೆ ಒತ್ತಡ ಹೆಚ್ಚಾಗಬಹುದು, ಹಾಗೆ ಹಲವು ರೀತಿಯ ಹೊಸ ಕೆಲಸಗಳು ಹುಡುಕಿ ಬರಬಹುದು. ದಿನದ ಆರಂಭದಲ್ಲಿ ಆತಂಕ, ಗೊಂದಲ ನಿಮ್ಮಲ್ಲಿ ಕಾಡಬಹುದು. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು ಮತ್ತು ಶೀಘ್ರದಲ್ಲೇ ನಿಮ್ಮ ಸಾಲಗಳನ್ನು ಸಹ ತೀರಿಸಲು ಮುಂದಾಗಬಹುದು. ಚಿಲ್ಲರೆ ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ಮಾಡಲಿದ್ದೀರಿ, ನಿಮ್ಮ ಕನಸಿನ ವಸ್ತು ಖರೀದಿಸಲು ಒಂದು ಹೆಜ್ಜೆ ಮುಂದಿಡಬಹುದು. ವಾಹನ ಮಾಲೀಕರು ಎಚ್ಚರಿಕೆ ಇಂದ ಇರಲು ಸಲಹೆ ನೀಡಲಾಗಿದೆ.

ಮಿಥುನ ರಾಶಿ
ಒಂದು ಸಣ್ಣ ತಪ್ಪಿಗೆ ನೀವು ತಪ್ಪು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಇಂದು ನೀವು ಮಾಡುವ ಎಲ್ಲಾ ಕೆಲಸದ ಮೇಲೆಯೂ ಮತ್ತಷ್ಟು ಎಚ್ಚರಿಕೆ ಹಾಗೆ ಮತ್ತಷ್ಟು ಗಮನವಿಡುವುದು ಬಹಳ ಮುಖ್ಯ. ನೀವು ಬಾಡಿಗೆದಾರರಾಗಿದ್ದರೆ ಲಾಭ ಮಾಡುತ್ತೀರಿ. ಮನೆಯ ಸದಸ್ಯರಿಗಾಗಿ ನೀವು ಹಣ ಖರ್ಚು ಮಾಡಬೇಕಾಗಬಹುದು. ಶುಭ ಕಾರ್ಯಗಳಿಗೆ ಈ ದಿನ ದಿನಾಂಕ ನಿಗದಿ ಅಥವಾ ಆ ಕಾರ್ಯಕ್ಕೆ ಕಾರ್ಯಯೋಜನೆ ರೂಪಿಸಬಹುದು. ಮನೆಯಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ಬಹುದಿನದ ಅನಾರೋಗ್ಯ ಸುಧಾರಿಸಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನ ಮಿಶ್ರಫಲ ಇರಲಿದೆ. ದಿನದ ಆರಂಭದಲ್ಲಿ ನಿಮಗೆ ಹೆಚ್ಚು ಲಾಭದಾಯಕವಾದರೆ ದಿನದ ಅಂತ್ಯದಲ್ಲಿ ಹೆಚ್ಚು ಖರ್ಚು, ಮಾನಸಿಕ ಒತ್ತಡದಂತಹ ವಿಚಾರಗಳಿಗೆ ನೀವು ತೆರೆದುಕೊಳ್ಳಬಹುದು. ಯಾವುದೇ ಪ್ರಮುಖ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮತ್ತೆ ಆಲೋಚಿಸಿ.
ನೀವು ಪಾಲುದಾರಿಕೆ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ಸವಾಲಿನ ದಿನ ಆಗಬಹುದು. ಲಾಭಾಂಶ ಹೆಚ್ಚು ಮಾಡಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಸಂಬಂಧಿಕರಿಂದ ಶುಭ ಸುದ್ದಿ ಕೇಳಬಹುದು.
ಸಿಂಹ ರಾಶಿ
ನಿಮ್ಮ ಖರ್ಚಿನಲ್ಲಿ ಈ ದಿನ ದಿಢೀರ್ ಏರಿಕೆ ಆಗಬಹುದು, ನೀವು ಉಹಿಸದ ಕಾರಣಕ್ಕೆ ಹಣ ವ್ಯಯಿಸಬೇಕಾಗಬಹುದು. ವ್ಯಾಪಾರವನ್ನು ಬದಲಾಯಿಸಲು ಇದು ಉತ್ತಮ ಸಮಯವಲ್ಲ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ಅಡೆತಡೆ ನೋಡಬಹುದು. ಕಬ್ಬಿಣ ವ್ಯಾಪಾರಿಗಳು, ಕೆಲಸಗಾರರು ಇಂದು ಎಚ್ಚರಿಕೆಯಿಂದ ಇರುವುದು ಮುಖ್ಯ. ಇಂದು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಸಮಸ್ಯೆಗಳ ಎದುರಿಸಬೇಕಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಶುಭ ಫಲಗಳ ನೋಡಲಿದ್ದಾರೆ. ವ್ಯಪಾರಿಗಳು ಇಂದು ನಿಮ್ಮ ವ್ಯವಹಾರ ಸಂಬಂಧ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸಮಸ್ಯೆಗಳು ದೊಡ್ಡದಾಗುವ ಮೊದಲೇ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗುವುದು ಬಹಳ ಉತ್ತಮ. ನಿಮ್ಮ ಕೆಲಸ ಕಾರ್ಯಗಳಿಂದ ಹಿಂದೆ ಸರಿಯಬೇಡಿ. ಬಹಳ ಕಾಲ ನೀವು ಮಾಡಲು ಯತ್ನಿಸುತ್ತಿದ್ದ ಹಲವು ಕೆಲಸಗಳು ಈಗ ಪೂರ್ಣ ಮಾಡಬಹುದು. ಕುಟುಂಬ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ.
ತುಲಾ ರಾಶಿ
ಕೆಲಸ ಮಾಡುವ ಜನರು ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಘರ್ಷಣೆಯನ್ನು ತಪ್ಪಿಸಬೇಕು. ಈ ದಿನ ವ್ಯಾಪಾರಿಗಳಿಗೆ ಶುಭವಾಗುತ್ತಿದೆ. ನಿಮ್ಮ ಹಳೆಯ ಬಾಕಿ ಮರುಪಾವತಿಯಾಗುತ್ತಿದೆ. ಹಾಗೆ ವ್ಯಾಪಾರದಲ್ಲಿ ಹೊಸ ರೀತಿಯ ಬದಲಾವಣೆಗಳ ನೋಡಲಿದ್ದೀರಿ. ನಿಮ್ಮ ಮನೆಯ ಸದಸ್ಯರಿಗಾಗಿ ಹಣ ನೀಡಬೇಕಾಗುತ್ತದೆ. ನಿಮ್ಮ ಬಯಕೆಯಂತೆ ಹೊಸ ಉದ್ಯೋಗ ಸಿಗಬಹುದು. ಯಾರ ಬಳಿಯೂ ಈ ದಿನ ಸಾಲ ಮಾಡಬೇಡಿ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆ ನೋಡಬಹುದು.
ವೃಶ್ಚಿಕ ರಾಶಿ
ಹಣದ ವಿಷಯದಲ್ಲಿ ಇಂದು ಉತ್ತಮ ದಿನ. ಕಷ್ಟಪಟ್ಟು ದುಡಿದ ಹಣವನ್ನು ಸರಿಯಾಗಿ ಬಳಸುವುದು ಉತ್ತಮ. ಅನಗತ್ಯ ಖರ್ಚುಗಳಿಂದ ಆದಷ್ಟು ಇಂದು ದೂರವೇ ಇರಿ. ಉದ್ಯೋಗದಲ್ಲಿರುವ ಜನರ ಸ್ಥಾನವು ಕಚೇರಿಯಲ್ಲಿ ಬಲವಾಗಿರುತ್ತದೆ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರ ಯಾವುದೇ ಪ್ರಮುಖ ಸಮಸ್ಯೆಯ ಪರಿಹಾರದಿಂದಾಗಿ ಅರ್ಧಕ್ಕೆ ನಿಂತಿದ್ದ ಕೆಲಸ ಮುಂದುವರೆಲಿದೆ. ನಿಮ್ಮ ಭಾವನೆಗಳು ಕೆರಳುವಂತಗ ಘಟನೆ ಅಥವಾ ವಿಚಾರಗಳು ನಡೆಯಬಹುದು.
ಧನು ರಾಶಿ
ನಿಮ್ಮ ಕನಸಿನ ವಿಚಾರವೊಂದರಲ್ಲಿ ನಿಮ್ಮ ಯಶಸ್ಸು ಹತ್ತಿರವಾಗುತ್ತಿದೆ. ಬಹು ದಿನಗಳಿಂದ ನೀವು ಅರ್ಧಕ್ಕೆ ನಿಲ್ಲಿಸಿರುವ ಕೆಲಸ ಪೂರ್ಣ ಮಾಡಿ. ವ್ಯಾಪಾರಿಗಳು ಹೊಸ ಆದಾಯ ಮೂಲ ಹುಡುಕಲಿದ್ದಾರೆ ಅದರಲ್ಲಿ ಯಶಸ್ವಿಯೂ ಆಗಲಿದ್ದಾರೆ. ಕುಟುಂಬದಲ್ಲಿ ಯಾರಾದರು ಅನಾರೋಗ್ಯ ಪೀಡಿತರಿದ್ದರೆ ಅವರ ಮೇಲೆ ಗಮನವಿಡಿ. ಇಂದು ಉತ್ತಮ ಕೊಡುಗೆಯನ್ನು ಪಡೆಯುವ ಬಲವಾದ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಜೀವನ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಹಾಗೆ ಸಂಬಂಧದಲ್ಲಿ ಸಾಮರಸ್ಯ ಕೊರತೆ ಕಾಡಬಹುದು.
ಮಕರ ರಾಶಿ
ಇಂದು ನೀವು ಯಾವುದೇ ಕೆಲಸ ಮಾಡಿದರೂ ಅದನ್ನು ಶ್ರಮ ವಹಿಸಿ ಮಾಡಿ ಅದರ ಪ್ರತಿಫಲ ನೀವು ಅನುಭವಿಸುವುದು ಖಚಿತ. ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನ. ಇಂದು ಯಾವುದಾದರು ಅಮೂಲ್ಯ ವಸ್ತು ಅಥವಾ ದೊಡ್ಡ ವಸ್ತು ಖರೀದಿಗೆ ಮುಂದಾಗುವುದಾದರೆ ಅದನ್ನು ಮುಂದೂಡುವುದು ಉತ್ತಮ. ಕೆಲಸ ಮಾಡುವ ಮಂದಿ ಈ ದಿನ ಕಚೇರಿಯಲ್ಲಿ ತಮ್ಮ ಮೇಲಾಧಿಕಾರಿಗಳೊಂದಿಗೆ ಅನಗತ್ಯ ಚರ್ಚೆ ಹಾಗೂ ಘರ್ಷಣೆಯಲ್ಲಿ ಭಾಗಿಯಾಗಬಹುದು. ನಿಮ್ಮ ಮಾತುಗಳ ಮೇಲೆ ನಿಗಾ ಇಡುವುದು ಒಳಿತು. ದೇವಾಲಯ ಭೇಟಿ ಮಾಡುವ ಸಾಧ್ಯತೆ ಇದೆ. ಗೃಹಿಣಿಯರಿಗೆ ಈ ದಿನ ಬಹಳ ಶುಭಕರವಾಗುತ್ತಿದೆ.
ಕುಂಭ ರಾಶಿ
ನಿಮ್ಮಲ್ಲಿ ಇಂದು ಹಲವು ಧನಾತ್ಮಕ ಬದಲಾಣೆಗಳ ನೋಡಬಹುದು. ನಿಮ್ಮ ಜೀವನದ ಬಹುಮುಖ್ಯ ಘಟನಾವಳಿ ಇಂದು ನಡೆಯಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಲ್ಲಿ ಪ್ರಮುಖ ಸಮಸ್ಯೆಯ ಪರಿಹಾರದಿಂದಾಗಿ ಸ್ಥಗಿತಗೊಂಡ ಕೆಲಸ ಮುಂದುವರೆಯಬಹುದು, ವ್ಯವಹಾರ ವೃದ್ಧಿಯ ಸಾಧ್ಯತೆ ಹೆಚ್ಚಾಗಿದೆ. ದಾಂಪತ್ಯದಲ್ಲಿ ಮುನಿಸು ಇರಬಹುದು. ಮಕ್ಕಳ ಭವಿಷ್ಯದ ವಿಚಾರದಲ್ಲಿ ಹೊಸದೊಂದು ಚರ್ಚೆ ಇಂದು ಹುಟ್ಟುಕೊಳ್ಳಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ದಿನ ಸಣ್ಣಪುಟ್ಟ ಹಿನ್ನಡೆ ಅನುಭವಿಸಬಹುದು.
ಮೀನ ರಾಶಿ
ನೀವು ವ್ಯಾಪಾರಸ್ಥರಾಗಿದ್ದರೆ ಇಂದು ಹೊಸ ಒಪ್ಪಂದ ಮಾಡಿಕೊಳ್ಳಲಿದ್ದರೆ, ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ಅಡ್ಡಿ ಆತಂಕ ಎದುರಾದರು ಅದನ್ನು ನೀವು ನಿವಾರಿಸಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಕೆಲಸ ಮಾಡಲಿದ್ದೀರಿ. ಆರೋಗ್ಯವೂ ಸುಧಾರಿಸಲಿದೆ. ಕಳೆದು ಹೋದ ವಿಚಾರವಾಗಿ ಇಂದು ಚಿಂತೆ ಹೆಚ್ಚಾಗಬಹುದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಮುಗಿಸಲು ಪ್ರಯತ್ನಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










