Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಮಾರ್ಚ್ ತಿಂಗಳ ಆರ್ಥಿಕ ಭವಿಷ್ಯ: ಹಣಕಾಸು ವಿಚಾರದಲ್ಲಿ ಯಾವ ರಾಶಿಯ ಅದೃಷ್ಟ ಹೇಗಿರಲಿದೆ?
ಮಾರ್ಚ್ ತಿಂಗಳ ಭವಿಷ್ಯ ಪ್ರಕಾರ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ನೀಡಲಾಗಿದ್ದು ಯಾವ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿರಲಿದೆ, ಯಾರಿಗೆ ಸವಾಲಿನ ಸಮಯ ಎಂದು ನೋಡೋಣ ಬನ್ನಿ:
ಮೇಷ ರಾಶಿ'
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ, ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಬರಬೇಕಾಗಿರುವ ಹಣ ಕೈ ಸೇರಲಿದೆ. ಇನ್ನು ಆಸ್ತಿ ಖರೀದಿ ಅಥವಾ ವಾಹನ ಖರೀದಿ ಬಗ್ಗೆ ಆಲೋಚನೆ ಮಾಡಿದ್ದರೆ ಅದಕ್ಕೆ ಅವಧಿ ಅನುಕೂಲಕರವಾಗಿದೆ.

ವೃಷಭ ರಾಶಿ
ಆರ್ಥಿಕ ದೃಷ್ಟಿಯಿಂದ ಈ ಮಾಸ ನಿಮಗೆ ತುಂಬಾನೇ ಉತ್ತಮವಾಗಿರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ, ನೀವು ನಿರೀಕ್ಷೆ ಮಾಡದೆ ಇರುವಷ್ಟು ಲಾಭ ಗಳಿಸಲು ಸಾಧ್ಯವಾಗಲಿದೆ. ಇನ್ನು ಬೇರೆ ಕಡೆ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು ಒಳ್ಳೆಯ ಸಂಬಳಕ್ಕೆ ಉದ್ಯೋಗ ಪಡೆಯಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು ಬರಬಹುದು, ಖರ್ಚು-ವೆಚ್ಚಗಳ ಕಡೆಗೆ ಗಮನಹರಿಸದಿದ್ದರೆ ಕಷ್ಟ, ಅನಗ್ಯತ ಖರ್ಚುಗಳಿಗೆ ಕಡಿವಾಣ ಹಾಕಿ, ವ್ಯಾಪಾರಸ್ಥರಿಗೂ ಈ ಅವಧಿ ಸವಾಲಿನಿಂದ ಕೂಡಿರುತ್ತದೆ, ಯಾವುದೇ ಹೊಸ ಹೂಡಿಕೆ ಮಾಡದಿದ್ದರೆ ಒಳ್ಳೆಯದು.
ಕರ್ಕ ರಾಶಿ
ಈ ಮಾಸ ಖರ್ಚು ಹೆಚ್ಚಿರಲಿದೆ, ಆದರೆ ನೀವು ವಸ್ತುಗಳನ್ನು ಖರೀದಿಸಲು ಖರ್ಚು ಮಾಡುವುದರಿಂದ ಖುಷಿಯಾಗಿರುತ್ತೀರಿ, ವ್ಯಾಪಾರಸ್ಥರಿಗೂ ಈ ಅವಧಿ ಅನುಕೂಲಕರವಾಗಿದೆ, ನೀವು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ.
ಸಿಂಹ ರಾಶಿ
ವ್ಯಾಪಾರಸ್ಥರಿಗೆ ಈ ಮಾಸ ಏರಳಿತದಿಂದ ಕೂಡಿರಲಿದೆ, ನೀವು ಯಾವುದೇ ದೊಡ್ಡ ಹೂಡಿಕೆ ಮಾಡುವ ಮುನ್ನ ಚೆನ್ನಾಗಿ ಆಲೋಚನೆ ಮಾಡಿ ಹೂಡಿಕೆ ಮಾಡಬೇಕು. ಆರೋಗ್ಯ ಸಮಸ್ಯೆಯಿಂದಾಗಿ ಕೂಡ ಹಣ ಹೆಚ್ಚು ಖರ್ಚಾಗಬಹುದು.
ಕನ್ಯಾ ರಾಶಿ
ಆದಾಯ ಚೆನ್ನಾಗಿರಲಿದೆ, ಆದರೆ ಆದಾಯಕ್ಕಿಂತ ಹೆಚ್ಚು ಖರ್ಚ ಬರಬಹುದು, ಅನಗ್ಯತ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು, ಅಗ್ಯತಕ್ಕಿಂತ ಹೆಚ್ಚು ಸಾಲ ಪಡೆಯಬೇಡಿ, ಹಣವನ್ನು ಶೋಕಿ ಜೀವನಕ್ಕೆ ಖರ್ಚು ಮಾಡುವ ಬದಲಿಗೆ ಉಳಿತಾಯದ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ತುಲಾ ರಾಶಿ
ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಆದಾಯ ಹೆಚ್ಚಾಗಲಿದೆ, ಆದರೆ ಆರೋಗ್ಯದ ಕಡೆಗೆ ಗಮನಹರಿಸಬೇಕು, ಇಲ್ಲದಿದ್ದರೆ ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಮಾರ್ಚ್ ತಿಂಗಳು ಉತ್ತಮವಾಗಿದೆ, ಈ ಹಿಂದೆ ಮಾಡಿದ ಹೂಡಿಕೆ ನಿಮಗೆ ಲಾಭ ತರಲಿದೆ, ಆಸ್ತಿ ವ್ಯವಹಾರ ಮಾಡಿದವರು ಉತ್ತಮ ಲಾಭ ಗಳಸಲು ಸಾಧ್ಯವಾಗಲಿದೆ.
ಧನು ರಾಶಿ
ಧನು ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಮನೆಯ ಸೌಕರ್ಯ ಹೆಚ್ಚಾಗಬಹುದು, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಮಾರ್ಚ್ ತಿಂಗಳು ಮಿಶ್ರಫಲ, ವ್ಯಾಪಾರಿಗಳು ನಿರೀಕ್ಷೆ ಮಾಡಿದ ಲಾಭ ಪಡೆಯಲು ಕಷ್ಟವಾಗುವುದು, ಹಣದ ಖರ್ಚು ಕೂಡ ಅಧಿಕವಿರಲಿದೆ.
ಕುಂಭ ರಾಶಿ
ಹಣಕಾಸಿನ ದೃಷ್ಟಿಯಿಂದ ನಿಮಗೆ ಉತ್ತಮವಾಗಿದೆ, ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುತ್ತೀರಿ, ಉದ್ಯೋಗಿಗಳಿಗೂ ಊ ಅವಧಿ ಉತ್ತಮವಾಗಿದೆ, ಬಡ್ತಿ ದೊರೆಯುವ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ, ವ್ಯಾಪಾರಸ್ಥರಿಗೆ ಲಾಭ ಪಡೆಯಲು ಸಾಧ್ಯವಾಗಲಿದೆ, ವ್ಯಾಪಾರಸ್ಥರು ದೊಡ್ಡ ಆರ್ಡರ್ ಪಡೆಯಬಹುದು. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











