Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಮಾರ್ಚ್ 2024 ಪ್ರೀತಿ ಭವಿಷ್ಯ: ಈ ತಿಂಗಳು 12 ರಾಶಿಗಳ ಪ್ರೀತಿ ಜೀವನ ಹೇಗಿರಲಿದೆ?
ಮಾರ್ಚ್ ತಿಂಗಳ ಭವಿಷ್ಯ ಪ್ರಕಾರ ಈ ಮಾಸ ಪ್ರೇಮಿಗಳಿಗೆ ಹೇಗಿರಲಿದೆ? ಈ ತಿಂಗಳು ನಿಮಗೆ ರೊಮ್ಯಾಂಟಿಕ್ ಆಗುವುದೇ ಅಥವಾ ಪ್ರಣಯ ಜೀವನದಲ್ಲಿ ಏನಾದರೂ ಅಡೆತಡೆಗಳು ಇರುವುದೇ? ಈ ತಿಂಗಳ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಉತ್ತಮವಾಗಿದೆ. ನಿಮ್ಮಿಬ್ಬರ ನಡುವೆ ಸಂಬಂಧ ತುಂಬಾ ಚೆನ್ನಾಗಿರಲಿದೆ. ಇನ್ನು ಪ್ರೀತಿಯನ್ನು ವ್ಯಕ್ತಪಡಿಸಲು ತುಂಬಾ ಸಮಯದಿಂದ ಕಾಯುತ್ತಿದ್ದರೆ ಅದಕ್ಕೆ ಈ ಅವಧಿ ಅನುಕೂಲಕರವಾಗಿದೆ. ಈ ನಡುವೆ ನೀವು ನಿಮ್ಮ ಮನಸ್ಸಿನ ಭಾವನೆಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದರಿಂದ ನಿಮ್ಮ ಬಾಂಧವ್ಯ ಮತ್ತಷ್ಟು ಉತ್ತಮವಾಗಿರಲಿದೆ.

ವೃಷಭ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿ ಜೊತೆ ನೀವು ಲಾಂಗ್ ಡ್ರೈವ್ ಹೋಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಈ ತಿಂಗಳು ಸ್ವಲ್ಪ ಸಮಯವನ್ನು ಕಳೆಯುತ್ತೀರಿ, ಇದು ನಿಮ್ಮ ಸಂಬಂಧಕ್ಕೆ ಹೊಸತನವನ್ನು ತರುತ್ತದೆ. ನಿಮ್ಮ ಸಂಗಾತಿಯು ತನ್ನ ಭಾವನೆಗಳನ್ನು ನಿಮ್ಮೊಂದಿಗೆ ವ್ಯಕ್ತಪಡಿಸಲು ಬಹಳ ಸಮಯದಿಂದ ಬಯಸುತ್ತಿದ್ದಾರೆ, ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳಬಹುದು.
ಮಿಥುನ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ, ನಿಮ್ಮ ಮದುವೆ ಮಾತುಕತೆ ನಡೆಯಬಹುದು. ಈ ಸಮಯವನ್ನು ಖುಷಿಯಿಂದ ಕಳೆಯಲು ಸಾಧ್ಯವಾಗುವುದು.
ಕರ್ಕ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಏರಿಳಿತಗಳಿಂದ ಕೂಡಿರಲಿದೆ. ಈ ತಿಂಗಳು ನಿಮ್ಮಿಬ್ಬರ ನಡುವೆ ತಿಳುವಳಿಕೆಯ ಕೊರತೆ ಎದ್ದು ಕಾಣುವುದು. ಪರಸ್ಪರ ಸಾಮರಸ್ಯವನ್ನು ಸೃಷ್ಟಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗಬಹುದು. ನಿಮ್ಮಿಬ್ಬರ ನಡುವೆ ಅಂತರ ಹೆಚ್ಚಾಗಬಹುದು. ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿ.
ಸಿಂಹ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ಈ ತಿಂಗಳು ನಿಮ್ಮ ಪ್ರಣಯ ಜೀವನವ್ನು ಆಶ್ವಾದಿಸುತ್ತೀರಿ. ನಿಮ್ಮಿಬ್ಬರ ಸಂಬಂಧದ ಬಗ್ಗೆ ಮನೆಯವರಿಗೆ ಹೇಳಲು ಈ ಅವಧಿ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಪ್ರೇಮಿಗಳಿಗೆ ಈ ತಿಂಗಳು ಒಳ್ಳೆಯದಲ್ಲ. ನಿಮ್ಮ ಸಂಬಂಧವನ್ನು ಹಾಳುಮಾಡಲು ಕೆಲವು ವ್ಯಕ್ತಿಗಳು ಪಿತೂರಿಗಳನ್ನು ರೂಪಿಸಬಹುದು, ಅದರ ಬಲಿಪಶು ನೀವಾಗಬಹುದು,
ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಯೋಚಿಸದೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಹದಗೆಡಬಹುದು. ಸ್ವಲ್ಪ ತಾಳ್ಮೆಯಿಂದಿರಿ ಎಲ್ಲವೂ ಸರಿಯಾಗುವುದು.
ತುಲಾ ರಾಶಿ
ಈ ತಿಂಗಳಿನಮ್ಮ ಸಂಗಾತಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಹಾಗೂ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಜೀವನಕ್ಕಾಗಿ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು, ಭವಿಷ್ಯದಲ್ಲಿ ಅದರ ಸಕಾರಾತ್ಮಕ ಪರಿಣಾಮಗಳು ಗೋಚರಿಸುತ್ತವೆ. ಈ ಅವಧಿಯಲ್ಲಿ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ವೃಶ್ಚಿಕ ರಾಶಿ
ಈ ತಿಂಗಳು ಪ್ರೇಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು. ಈ ತಿಂಗಳು ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆಯ ಕೊರತೆ ಇರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಸಮಸ್ಯೆಗಳು ಉಂಟಾಗಬಹುದಾದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮಿಬ್ಬರಿಂದಲೂ ಅನಗತ್ಯ ವಾದ ಮಾಡಬಹುದು. ಚರ್ಚೆಯಿಂದ ದೂರವಿರುವುದು ಉತ್ತಮ. ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಧನು ರಾಶಿ
ಪ್ರೇಮಿಗಳಿಗೆ ಈ ತಿಂಗಳು ತುಂಬಾ ಒಳ್ಳೆಯದಿದೆ. ಕೆಲ ಭಿನ್ನಾಭಿಪ್ರಾಯಗಳಿದ್ದರೆ ಎಲ್ಲವೂ ಸರಿಯಾಗಲಿದೆ. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ಖುಷಿಯ ಕಳೆಯಲು ಸಾಧ್ಯವಾಗುವುದು.
ಮಕರ ರಾಶಿ
ಪ್ರೇಮಿಗಳಿಗೆ ಈ ಮಾಸ ಹೆಚ್ಚು ಅನುಕೂಲಕರವಲ್ಲ, . ನಿಮ್ಮ ಪ್ರೀತಿಗೆ ಕುಟುಂಬದವರಿಂದಲೂ ನೀವು ವಿರೋಧವನ್ನು ಎದುರಿಸಬೇಕಾಗಬಹುದು. ಸಂಗಾತಿಯೂ ಕೋಪಗೊಳ್ಳಬಹುದು, ಇದರಿಂದಾಗಿ ಈ ತಿಂಗಳು ಸಮಸ್ಯೆಗಳಿಂದ ಕೂಡಿರುತ್ತದೆ. ನಿಮ್ಮ ಪ್ರೇಮಿಯ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು. ಅವರೊಂದಿಗೆ ಎಲ್ಲೋ ಲಾಂಗ್ ಡ್ರೈವ್ ಹೋಗಿ, ಅದು ಸಂಬಂಧವನ್ನು ಬಲಪಡಿಸುತ್ತದೆ.
ಕುಂಭ ರಾಶಿ
ಈ ತಿಂಗಳು, ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಕೆಲವು ವಿಷಯಕ್ಕೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಇದರಿಂದಾಗಿ ನಿಮ್ಮಿಬ್ಬರ ನಡುವಿನ ಅಂತರವು ಹೆಚ್ಚಾಗಬಹುದು. ನಿಮ್ಮ ಈ ನಡವಳಿಕೆಯಿಂದಾಗಿ, ಬೇರೆಯವರು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮಿಬ್ಬರ ಮಧ್ಯೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮಿಂದ ತಪ್ಪಾದರೆ ತಪ್ಪುಗಳನ್ನು ಒಪ್ಪಿಕೊಳ್ಳಿ.
ಮೀನ ರಾಶಿ
ಪ್ರೇಮಿಗಳಿಗೆ ಈ ತಿಂಗಳು ತುಂಬಾ ಒಳ್ಳೆಯದು. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ಖುಷಿಯಾಗಿ ಕಳೆಯುತ್ತೀರಿ ನೀವು ಚಿಕ್ಕ ಟ್ರಿಪ್‌ಗಳಿಗೆ ಹೋಗಬಹುದು. ಈ ಸಮಯವು ನಿಮಗೆ ಅದ್ಭುತವಾಗಿದೆ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ನೀವು ಇನ್ನೂ ವ್ಯಕ್ತಪಡಿಸದಿದ್ದರೆ, ಈ ಸಮಯವು ನಿಮಗೆ ಸೂಕ್ತವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











