ಮಾರ್ಚ್‌ 20ರ ಗುರುವಾರದ ರಾಶಿಫಲ: ಈ ದಿನ ಯಾರಿಗೆಲ್ಲಾ ಲಾಭದಾಯಕ ನೋಡಿ..!

ಶುಭೋದಯ....ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾರ್ಚ್ 20ರ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನ ಹಲವು ಗೊಂದಲಮಯ ವಿಚಾರಗಳ ನಡುವೆ ಸಿಲುಕಬಹುದು. ಈ ಸಮಯದಲ್ಲಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಹ ಹಲವು ಕೆಲಸಗಳ ಮಾಡಬಹುದು. ನಿಮ್ಮ ಕುಟುಂಬದಲ್ಲಿ ಶಾಂತಿ ಇರಲಿದೆ. ದಾಂಪತ್ಯ ಜೀವನದಲ್ಲಿ ನೀವು ಬಹುಮುಖ್ಯ ವಿಚಾರ ಮರೆಯಬಹುದು. ಮನೆಗೆ ಅಗತ್ಯವಾಗಿ ಬೇಕಾಗಿರುವ ಕೆಲವೊಂದನ್ನು ಮಾಡಲು ಮುಂದಾಗುತ್ತೀರಿ. ಬಹಳ ಸಮಯ ನೀವು ಮನೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ವ್ಯಾಪಾರಿಗಳಿಗೆ ಶುಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು.

ವೃಷಭ ರಾಶಿ

ಈ ರಾಶಿಯವರಿಗೆ ಇಂದು ಬಹಳ ಲಾಭದಾಯಕವಾಗುತ್ತಿದೆ. ನೀವು ಕೆಲಸದಿಂದ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಮುಂದಾಗಬಹುದು. ಮುಖ್ಯವಾದ ವಿಚಾರಕ್ಕೆ ನೀವು ಹಣಕಾಸು ನೆರವು ನೀಡಬಹುದು. ನೀವು ಅಮೂಲ್ಯ ವಸ್ತು ಖರೀದಿಗೆ ಮುಂದಾಗಬಹುದು. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಹಾಗೂ ಪ್ರೀತಿಯ ಜೀವನದಲ್ಲಿ ಸುಖ ಇರಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಹೆಚ್ಚು ಯಶಸ್ಸು ಸಿಗಬಹುದು. ಬೇರೆಯವರ ಕಷ್ಟದಲ್ಲಿ ನೀವು ನೆರವಾಗಬಹುದು. ಭವಿಷ್ಯದ ದೃಷ್ಟಿಯಲ್ಲಿ ನೀವು ಉಳಿತಾಯ ಹೂಡಿಕೆಗೆ ಮುಂದಾಗುವುದು ಬಹಳ ಉತ್ತಮ.

March 20 Daily Horoscope Prediction For 12 Zodiac Signs In Kannada

ಮಿಥುನ ರಾಶಿ

ಇಂದು ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳ ಮಾಲೀಕರು, ಕೆಲಸ ಮಾಡುವ ಜನರು ಉತ್ತಮ ಆರ್ಥಿಕ ಲಾಭ ನೋಡಬಹುದು. ಉದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿಯ ಜೊತೆಗೆ ಆರ್ಥಿಕ ಲಾಭದ ನಿರೀಕ್ಷೆ ಇದೆ. ನಿಮ್ಮ ವ್ಯಾಪಾರ ಅಭಿವೃದ್ದಿಗೆ ಸಾಲ ಮಾಡುವ ಆಲೋಚನೆಯಿದ್ದರೆ ಈ ದಿನ ಅದಕ್ಕೆ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತೀರಿ. ಮಕ್ಕಳ ಶಿಕ್ಷಣದಲ್ಲಿ ಯಾವುದೇ ಅಡಚಣೆ ಇರಬಹುದು.

ಕರ್ಕ ರಾಶಿ

ಈ ದಿನ ನಿಮ್ಮ ಸಾಲಗಳನ್ನು ತೀರಿಸುವ ಮನಸ್ಸು ಮಾಡಲಿದ್ದೀರಿ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಈ ದಿನ ಮುಗಿಸುತ್ತೀರಿ. ಹೋಟೆಲ್ ಉದ್ಯಮಿಗಳಿಗೆ ಈ ದಿನ ಬಹಳ ಲಾಭವಾಗುತ್ತಿದೆ. ದಿನದ ಅಂತ್ಯದಲ್ಲಿ ಹೆಚ್ಚಿನ ಒತ್ತಡ ಹಾಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣ ಸಮಸ್ಯೆಗಳು ಉಂಟಾಗಬಹುದು. ಕುಟುಂಬದ ಯಾವುದೇ ಸಮಸ್ಯೆಯನ್ನು ಪರಿಹರಿಸುವಲ್ಲಿ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಕಳೆಯಲಿದ್ದೀರಿ.

ಸಿಂಹ ರಾಶಿ

ಸಿಂಹ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರವಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ನಡವಳಿಕೆಯನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವ ಮಾರ್ಗ ನೀವು ಹುಡುಕಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ನೀವು ಮಾಡಬೇಕಿದ್ದ ಮುಖ್ಯವಾದ ಕೆಲಸಗಳನ್ನು ಮೊದಲು ಮಾಡಲು ಮುಂದಾಗಿ. ಹಣಕಾಸು, ಉಳಿತಾಯ, ಹೂಡಿಕೆ ಮೇಲೆ ಗಮನವಿರಲಿ. ನೀವು ಚಿಂತನಶೀಲವಾಗಿ ಖರ್ಚು ಮಾಡುತ್ತೀರಿ. ಹಾಗೆ ಹಳೆಯ ಬಾಕಿ ಮರುಪಾವತಿಗಾಗಿ ನೀವು ಕೊನೆಯ ಪ್ರಯತ್ನಕ್ಕೆ ಮುಂದಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಈ ದಿನ ಮಿಶ್ರಫಲ ನೋಡಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವ ಜೊತೆಗೆ ಅಗತ್ಯ ಖರ್ಚುಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಮನೆಗೆ ಬೇಕಾದ ವಸ್ತುಗಳ ಖರೀದಿಸಬೇಕಾಗಬಹುದು. ಹಲವು ಕಾಲದ ಸಮಸ್ಯೆಯೊಂದನ್ನು ಮಾತುಕತೆಯ ಮೂಲಕ ನಿವಾರಿಸಿಕೊಳ್ಳುವುದು ಉತ್ತಮ. ವ್ಯಾಪಾರಿಗಳಲ್ಲಿ ಆದಾಯ ಹಾಗೂ ಖರ್ಚು ಸಮನಾಗಿರಲಿದೆ. ಈ ದಿನ ಆದಷ್ಟು ಮನೆಯಿಂದ ಹೊರಗೆ ಊಟ ತಿಂಡಿ ಮಾಡುವುದನ್ನು ತಪ್ಪಿಸಿ. ಸರ್ಕಾರಿ ಉದ್ಯೋಗಿಗಳಿಗೆ ಒಳ್ಳೆಯ ದಿನ. ಹೊಸ ಕೆಲಸ ಆರಂಭಿಸಲು ನಿಮಗೆ ಉತ್ತಮ ಕಾಲ.

ತುಲಾ ರಾಶಿ

ತುಲಾ ರಾಶಿಯ ಜನರು ಇಂದು ಯಾರೊಂದಿಗೂ ಹೆಚ್ಚು ಚರ್ಚೆಗಳಲ್ಲಿ ಭಾಗಿಯಾಗದಿರುವುದು ಉತ್ತಮ, ನೀವಿಂದು ತಾಳ್ಮೆಯಿಂದ ವರ್ತಿಸುವುದು ಲಾಭವಾಗಲಿದೆ. ಹಲವು ದಿನಗಳಿಂದ ನೀವು ಮಾಡಿ ಮುಗಿಸಬೇಕಿದ್ದ ಕೆಲಸ ಮರೆತು ಹೋಗುವ ಸಂಭವವಿದೆ, ಹೀಗಾಗಿ ಅಂತಹ ಕೆಲಸಗಳಿದ್ದರೆ ಪೂರ್ಣ ಮಾಡುವುದು ಉತ್ತಮ. ಚಿಲ್ಲರೆ ವ್ಯಾಪಾರಿಗಳು, ರಿಯಲ್ ಎಷ್ಟೇಟ್, ವಾಹನ ಮಾಲೀಕರು ಲಾಭ ಮಾಡುವ ದಿನವಾಗಲಿದೆ. ನೀವಿಂದು ದೇವಾಲಯ ಭೇಟಿಗೆ ಮುಂದಾಗಬಹುದು. ಹಾಗೆ ನಿಮ್ಮ ಮನಸ್ಸಿನಲ್ಲಿ ನೆಮ್ಮದಿ ಉಳಿಯಬಹುದು.

ವೃಶ್ಚಿಕ ರಾಶಿ

ಕುಟುಂಬಸ್ಥರೊಂದಿಗೆ ನಿಮ್ಮ ಸಂಬಂಧ ಮತ್ತಷ್ಟು ಕಹಿಯಾಗುವಂತಹ ಘಟನೆಗಳು ನಡೆಯಲಿವೆ. ನಿಮ್ಮ ಒತ್ತಡದ ಜೀವನ ಶೈಲಿಯಿಂದಾಗಿ ಕೆಲವು ಕೆಲಸಗಳಲ್ಲಿ ನಿಮ್ಮ ಭಾಗಿತ್ವ ಇಲ್ಲದಾಗಬಹುದು. ಅಗತ್ಯ ಸಮಯದಲ್ಲಿ ನಿಮಗೆ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು. ಕಬ್ಬಿಣ, ಲೋಹದ ಜೊತೆಗೆ ಕೆಲಸ ಮಾಡುವವರು ಎಚ್ಚರಿಕೆ ಇರುವುದು ಉತ್ತಮ. ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಮುಂದೆ ಉತ್ತಮ ದಿನಗಳಿಗೆ ಕಾರಣವಾಗಲಿದೆ. ಹಣಕಾಸು ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. ವಿಶ್ರಾಂತಿ ಪಡೆಯುವುದು ಸಹ ಮುಖ್ಯ.

ಧನು ರಾಶಿ

ಧನು ರಾಶಿಯವರಲ್ಲಿ ಈ ದಿನ ಲಾಭ ನೋಡಬಹುದು. ನೀವು ಬೆಳಗ್ಗೆಯಿಂದ ಈ ದಿನ ಮುಗಿಯುವವರೆಗೂ ಸಂತೋಷದಿಂದ ಕಾಣಿಸಲಿದ್ದೀರಿ. ನಿಮ್ಮ ಕೆಲಸದ ಮೂಲಕ ನೀವಿಂದು ಹಣಕಾಸು ಲಾಭ ನೋಡಬಹುದು. ನಿಮ್ಮ ವೈಯಕ್ತಿಕ ವಿಚಾರಕ್ಕೆ ಖರ್ಚು ಮಾಡುವುದು ಹೆಚ್ಚಾಗಲಿದೆ. ಸ್ನೇಹಿತರೊಬ್ಬರ ಸಹಾಯಕ್ಕೆ ನೀವು ಮುಂದಾಗಬೇಕಾಗಬಹುದು. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಲ್ಲಿ ಈ ದಿನ ಗೌರವ ಹಾಗೂ ಜವಾಬ್ದಾರಿ ಹೆಚ್ಚಾಗಲಿದೆ. ಇಂದು ನೀವು ನಿಮ್ಮ ಪ್ರೀತಿಪಾತ್ರರಿಗಾಗಿ ಯಾವುದಾದರ ಅಮೂಲ್ಯ ವಸ್ತುಗಳನ್ನು ಖರೀದಿಸಬಹುದು.

ಮಕರ ರಾಶಿ

ಮಕರ ರಾಶಿಯವರು ಇಂದು ಹಲವು ಕೆಲಸಗಳಲ್ಲಿ ಸಫಲತೆ ನೋಡಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಬಲವಾದ ಸಾಧ್ಯತೆ ಇದೆ. ನೀವು ಪಾಲುದಾರಿಕೆ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ನೋಡುತ್ತಿರಿ. ಹಲವು ಕಾಲದಿಂದ ಬಾಕಿ ಉಳಿದ ಹಣ ಸಂದಾಯವಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗಬಹುದು. ವ್ಯಾಪಾರಿಗಳು ಹೊಸ ಆದಾಯ ಮೂಲ ಹುಡುಕಲು ಮುಂದಾಗಬಹುದು.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನದಂದು ಮಿಶ್ರಫಲ ಇರಲಿದೆ. ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವುದು ಬಹಳ ಉತ್ತಮ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಆಲೋಚಿಸುತ್ತಿದ್ದರೆ ಈ ಕುರಿತು ನಿಮಗೆ ಸಲಹೆ ನೀಡುವ ಮಂದಿ ಸಿಗುತ್ತಾರೆ. ಬ್ಯಾಂಕಿಂಗ್, ಆಸ್ತಿ ಸಂಬಂಧ ನೀವು ಬಹಳ ದಿನಗಳಿಂದ ಓಡಾಟ ನಡೆಸುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಫಲಿತಾಂಶ ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ, ಬಹುದಿನದಿಂದ ನೀವು ಅನುಭವಿಸಿದ್ದ ಅನಾರೋಗ್ಯ ಸುಧಾರಿಸಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಅತ್ಯಂತ ಶುಭಕರವಾದ ದಿನವಾಗಿರಲಿದೆ, ನಿಮ್ಮ ಬಹುತೇಕ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಮುಕ್ತಾಯವಾಗಲಿವೆ. ನೀವು ಅಂದುಕೊಂಡಂತೆ ನಿಮ್ಮ ಕೆಲಸದಲ್ಲಿ ಶುಭ ಫಲ ಇರಲಿದೆ. ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ನೀವು ಪೂರ್ಣ ಮಾಡುವಿರಿ. ಆರ್ಥಿಕವಾಗಿಯೂ ನೀವುಂದು ಬಲವಾಗುತ್ತೀರಿ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮಂದಿಗೆ ಅತ್ಯಧಿಕ ಲಾಭದ ನಿರೀಕ್ಷೆ ಇಡಬಹುದು. ಹೊಸ ವಸ್ತುಗಳ ಖರೀದಿಗೆ ನೀವು ಒಂದಿಷ್ಟು ತಯಾರಿ ಮಾಡಿಕೊಳ್ಳಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

March 20 Daily Horoscope Prediction For 12 Zodiac Signs In Kannada

Here is March 20 daily horoscope prediction for 12 zodiac signs read on... ಮಾರ್ಚ್ 20ರ ದಿನ ಭವಿಷ್ಯ
Story first published: Thursday, March 20, 2025, 6:04 [IST]
X
Desktop Bottom Promotion