Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮಾರ್ಚ್ 17ರ ಸೋಮವಾರದಂದು ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾರ್ಚ್ 17 ರ ರಾಶಿಫಲ ನೋಡೋಣ.
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನದಂದು ಅತ್ಯಧಿಕ ಲಾಭ ನೋಡಬಹುದು. ನಿಮ್ಮಲ್ಲಿ ಹಲವು ಕೆಲಸಗಳು ಯಾವುದೇ ತಡೆತಡೆಯಿಲ್ಲದೆ ಪೂರ್ಣ ಮಾಡುವ ದಿನವಾಗಲಿದೆ. ಈ ದಿನ ನೀವು ಹೊಸ ವ್ಯಾಪಾರ ಆರಂಭಿಸಿದ್ದರೆ ಅದರು ನಿಮ್ಮ ಲಾಭದಾಯಕ ಉದ್ಯೋಗವಾಗಲಿದೆ. ವ್ಯಾಪಾರಿಗಳು ಈ ದಿನ ಹೆಚ್ಚು ಲಾಭ ಮಾಡುತ್ತಾರೆ. ಒಂದೊಳ್ಳೆ ಕಾರ್ಯಕ್ಕೆ ಕುಟುಂಬ ಹಾಗೂ ಸ್ನೇಹಿತರಿಂದ ಬೆಂಬಲ ಪಡೆಯಲಿದ್ದೀರಿ. ಆರೋಗ್ಯ ಸುಧಾರಿಸಲಿದೆ.
ವೃಷಭ ರಾಶಿ
ಈ ರಾಶಿಯವರಿಗೆ ಇಂದು ಮಿಶ್ರ ಫಲ ಎನ್ನಬಹುದು. ಏಕೆಂದರೆ ದಿನದ ಆರಂಭದಲ್ಲೇ ನಿಮಗೆ ಖರ್ಚು ಹೆಚ್ಚಾಗುತ್ತದೆ. ಆದ್ರೆ ದಿನದ ಅಂತ್ಯದಲ್ಲಿ ಆದಾಯ ಹರಿದು ಬರಲಿದೆ. ಹೊಸ ಉದ್ಯೋಗ ಹುಡುಕುವರರಿಗೆ ಸಿಹಿ ಸುದ್ದಿ ಕಾದಿದೆ. ಅವಿವಾಹಿತರು ಕೂಡ ಇಂದು ಶುಭ ಸುದ್ದಿ ಕೇಳುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಶುಭ ಕಾರ್ಯದ ಕುರಿತಾಗಿ ಮನೆಯಲ್ಲಿ ಮಾತುಕತೆ ನಡೆಯುವ ಸಂಭವವಿದೆ.

ಮಿಥುನ ರಾಶಿ
ವ್ಯಾಪಾರಸ್ಥರಿಗೆ ಹಣದ ವಿಷಯದಲ್ಲಿ ಈ ದಿನ ನೀವು ಹೆಚ್ಚು ಜಾಗರೂಕರಾಗಿದೆ. ಕೆಲಸದ ವಿಚಾರವಾಗಿ ಹೆಚ್ಚು ಒತ್ತಡ ಎದುರಿಸಬೇಕಾಗುತ್ತದೆ. ನೀವು ಯಾವುದೇ ಸಣ್ಣ ಹಳೆಯ ಸಾಲವನ್ನು ಮುಕ್ತಗೊಳಿಸಬಹುದು. ಈ ಸಮಯ ನಿಮ್ಮ ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ಹೊಸ ರೀತಿ ವಿಚಾರಧಾರೆಗಳು ಮೂಡಲಿವೆ. ವಾಹನ ಖರೀದಿಯ ನಿಮ್ಮ ಬಯಕೆಗೆ ಹೊಸದಾದ ಹೆಜ್ಜೆ ಮೂಡುವುದಲ್ಲದೆ ಹೊಸ ಆಶಾಭಾವನೆ ಸಿಗಲಿದೆ. ಆರ್ಥಿಕ ಪ್ರಗತಿಗಾಗಿ ಶ್ರಮ ವಹಿಸಿ ಕೆಲಸ ಮಾಡುವುದು ಉತ್ತಮ ಫಲಿತಾಂಶ ತರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಇಂದು ಲಾಭಕ್ಕಿಂತ ಹೆಚ್ಚಾಗಿ ಮಿಶ್ರ ರೀತಿಯ ಫಲ ನೋಡಲಿದ್ದಾರೆ. ದಾಂಪತ್ಯದಲ್ಲಿ ಇಂದು ಮುನಿಸು ಕಾಡಬಹುದು. ಮನೆಯಲ್ಲಿ ಅಶಾಂತಿ ಮೂಡಲಿದೆ. ಆದ್ರೆ ನಿಮ್ಮ ಆರ್ಥಿಕ ಸ್ಥಿತಿ ಇಂದು ಸುಧಾರಿಸುವಂತಹ ಕೆಲಸ ನೀವು ಮಾಡಲಿದ್ದೀರಿ. ರಿಯಲ್ ಎಸ್ಟೇಟ್, ಬ್ರೋಕರ್, ಬಾಡಿಗೆದಾರರಿಗೆ ಶುಭ ಸುದ್ದಿ ಇರಲಿದೆ. ನಿಮ್ಮ ಕೆಲಸಗಳನ್ನು ಮುಂದೂಡಬೇಡಿ. ಬಂಧುಗಳ ಭೇಟಿಯಿಂದ ನಿಮ್ಮಲ್ಲಿ ಹೊಸ ಆಲೋಚನೆಗಳು ಮೂಡಬಹುದು. ಆರೋಗ್ಯದಲ್ಲಿಂದು ಏರುಪೇರು ಕಾಡಬಹುದು.
ಸಿಂಹ ರಾಶಿ
ಇಂದು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಲು ಮುಂದಾಗಬೇಡಿ. ತಾಳ್ಮೆಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಖರ್ಚುಗಳು ಹೆಚ್ಚಾಗುವ ಸಮಯವಿದು. ಸಂಬಂಧಗಳಲ್ಲಿ ಮತ್ತಷ್ಟು ದೃಢತೆ, ಸಂತಸ ಇರಲಿದೆ. ವಿದ್ಯಾರ್ಥಿಯಾಗಿದ್ದರೆ ನಿಮ್ಮ ಗುರಿಗಳತ್ತ ಗಮನಹರಿಸಲು ಸೂಚಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ಒತ್ತಡ ಎದುರಿಸಬೇಕಾಗಬಹುದು. ಆರೋಗ್ಯದ ಕಡೆಗೂ ಹೆಚ್ಚು ಗಮನವಿಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಇಂದು ಹಲವು ರೀತಿಯ ಹೊಸ ಬದಲಾವಣೆಗಳ ನಿರೀಕ್ಷಿಸಬಹುದು. ಮನೆಗೆ ಹೊಸ ವಸ್ತು ಖರೀದಿಸಲು ನೀವು ಆಲೋಚಿಸಬಹುದು. ಬ್ಯಾಂಕಿಂಗ್, ಆಸ್ತಿ, ವ್ಯವಹಾರದ ವಿಚಾರದಲ್ಲಿ ನಿಮಗೆ ಗೆಲುವಾಗಲಿದೆ. ಅವಿವಾಹಿತರಲ್ಲಿ ಇಂದು ಆರೋಗ್ಯ ಸಂಬಂಧಿ ಸಮಸ್ಯೆಯೊಂದು ಕಾಡಬಹುದು. ಭವಿಷ್ಯದ ಸಂಬಂಧ ಮನೆಯಲ್ಲಿ ನಿರ್ಧಾರ ಕೈಗೊಳ್ಳುವಾಗ ಮನಸ್ಥಾಪಗಳು ಮೂಡಬಹುದು.
ತುಲಾ ರಾಶಿ
ವೈಯಕ್ತಿಕ ಅಥವಾ ವೃತ್ತಿಪರ ಜೀವನವಾಗಲಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಚಿಲ್ಲರೆ ವ್ಯಾಪಾರಿಗಳಿಗೆ ಈ ದಿನ ಶುಭವಾಗಲಿದೆ. ಧನಾತ್ಮಕ ಕಾರಣಕ್ಕಾಗಿ ನೀವು ಇಂದು ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯಾಪಾರ ಮಾಡುವವರು ಇಂದು ಆರ್ಥಿಕವಾಗಿ ಲಾಭ ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಸಂಗಾತಿ ಹಾಗೂ ಮಕ್ಕಳೊಂದಿಗೆ ನಿಮ್ಮ ಮಾತುಗಳು ಕಟುವಾಗಬಹುದು. ಇದರಿಂದ ಒತ್ತಡ ಹಾಗೂ ಮಾನಸಿಕ ಆರೋಗ್ಯ ಹಾಳಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಅನಗತ್ಯ ಖರ್ಚು ಮಾಡುತ್ತಾರೆ. ನೀವು ಬಯಸದೆ ಇರದೆ ವಸ್ತುಗಳಿಗೆ ಖರ್ಚು ಮಾಡಬೇಕಾದ ಅನಿವಾರ್ಯತೆ ಬರಬಹುದು. ಉದ್ಯೋಗಿಗಳಿಗೆ ಇಂದು ಬಹಳ ಮುಖ್ಯ ದಿನವಾಗಿ ಪರಿಣಮಿಸಬಹುದು. ಅವಿವಾಹಿತರಾಗಿದ್ದರೆ ನಿಮ್ಮ ಮದುವೆಯ ಬಗ್ಗೆ ಮನೆಯಲ್ಲಿ ಚರ್ಚಿಸಬಹುದು. ದಿನದ ಅಂತ್ಯದಲ್ಲಿ ನೀವು ಒತ್ತಡ ಹಾಗೆ ಆತಂಕಕ್ಕೆ ಒಳಗಾಗುವಂತಹ ವಿಚಾರಗಳ ಎದುರಿಸಬೇಕಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ನೀವು ಮಧ್ಯದಲ್ಲೇ ಬಿಟ್ಟಿರುವ ಕೆಲಸ ಪೂರ್ಣ ಮಾಡುವುದು ಬಹಳ ಉತ್ತಮ.
ಧನು ರಾಶಿ
ಕೆಲಸದ ವಿಚಾರದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಿರಲಿದೆ. ನೀವು ಅಂದುಕೊಂಡಂತೆ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರಲಿವೆ. ವಿಶೇಷವಾಗಿ ಖಾಸಗಿ ಉದ್ಯೋಗದಲ್ಲಿರುವವರು ಈ ದಿನ ಹೆಚ್ಚು ನೆಮ್ಮದಿಯಲ್ಲಿರಲಿದ್ದಾರೆ. ವ್ಯಾಪಾರದಲ್ಲಿ ದಿಢೀರ್ ಪ್ರಗತಿ ನೋಡಬಹುದು. ಆದರೆ ನಿಮ್ಮ ಖರ್ಚಿನ ಮೇಲೆ ನಿಗಾ ಇಡುವುದು ಮುಖ್ಯ. ಉಳಿತಾಯ, ಹೂಡಿಕೆಯಂತಹ ಕೆಲಸಕ್ಕೆ ಮುಂದಾಗುವುದು ಉತ್ತಮ. ಮನೆಯ ಹಿರಿಯರ ಆರೋಗ್ಯ ಮೇಲೆ ಗಮನವಿಡಿ.
ಮಕರ ರಾಶಿ
ಮಕರ ರಾಶಿಯವರಲ್ಲಿ ಇಂದು ಅನೇಕ ಕಾರ್ಯಗಳು ಯಾವುದೇ ತಡೆಯಿಲ್ಲದೆ ನಡೆಯಲಿದೆ, ಹಾಗೆ ನಿಮ್ಮ ಕೆಲಸಗಳ ಪೂರೈಸಲು ಸ್ನೇಹಿತರ ಸಹಕಾರ ಇರಲಿದೆ. ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಇಂದು ಸಾಲ ನೀಡುವುದು ಅಥವಾ ಸಾಲ ಪಡೆಯುವ ಕೆಲಸಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಈ ರಾಶಿಯವರಿಗೆ ಇಂದು ಆರಾಮದಾಯಕ ದಿನವಾಗುತ್ತಿದೆ. ನಿಮ್ಮ ದಾಂಪತ್ಯ ಜೀವನವು ಹಿಂದೆಂದಿಗಿಂತಲೂ ಮಧುರವಾಗಿರಲಿದೆ. ನಿಮ್ಮೆಲ್ಲಾ ಕೆಲಸಗಳು ಸುಲಭವಾಗಿ ಮುಗಿಯಲಿವೆ. ನಿಮ್ಮ ಆದಾಯದಲ್ಲು ಹೆಚ್ಚಳ ಆಗುವುದು ನೋಡಬಹುದು, ಹಾಗೆ ಪಾಲುದಾರಿಗೆ ವ್ಯವಹಾರಸ್ಥರು ಹೊಸ ಉದ್ಯಮ ಆರಂಭಿಸಲು ಮಾತುಕತೆ ಮಾಡಬಹುದು. ಯಾವುದೇ ತರಾತುರಿಯ ನಿರ್ಧಾರ ಇಂದು ತೆಗೆದುಕೊಳ್ಳಬೇಡಿ. ಕುಟುಂಬಸ್ಥರು ಯಾವುದಾದರು ಸಲಹೆ ನೀಡಿದರೆ ಅದನ್ನು ನಿರ್ಲಕ್ಷಿಸಬೇಡಿ.
ಮೀನ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನ. ಹಣದ ಕೊರತೆಯಿಂದ ಸ್ಥಗಿತಗೊಂಡ ನಿಮ್ಮ ಯಾವುದೇ ಕೆಲಸವನ್ನು ನೀವು ಪೂರ್ಣಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿವೆ. ವ್ಯಾಪಾರಸ್ಥರಿಗೆ ಹಣದ ವಿಷಯದಲ್ಲಿ ಜಾಗರೂಕರಾಗಿರಿ ಮತ್ತು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯಾಯಾಮ, ಯೋಗದಲ್ಲಿ ಅಥವಾ ದೈನಂದಿನ ತಪಾಸಣೆಗೆ ಒತ್ತು ನೀಡುವುದು ಒಳಿತು. ನೀವು ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಮೂಲ್ಯ ಸಮಯವನ್ನು ಅನಗತ್ಯವಾಗಿ ವ್ಯರ್ಥ ಮಾಡಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications