Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 16ರ ಭಾನುವಾರದ ರಾಶಿಫಲ: ಈ ದಿನ ಯಾರಿಗೆಲ್ಲಾ ಧನಲಾಭ ನೋಡಿ!
ಶುಭೋದಯ.... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 16ರ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನದಂದು ಅದ್ಭುತ ಲಾಭಗಳ ನೋಡಬಹುದಾಗಿದೆ. ನಿಮ್ ಕೆಲಸ ಕಾರ್ಯಗಳು ಅಡೆಯಡೆಯಿಲ್ಲದೆ ನೆರವೇರಲಿದೆ. ಹಾಗೆ ನಿಮ್ಮ ಅನುಭವ ಇಂದು ನಿಮ್ಮಲ್ಲಿ ಲಾಭಕ್ಕೆ ಕಾರಣವಾಗಲಿದೆ. ನಿಮಗೆ ಹಣ ಬರುವ ಸಾಧ್ಯತೆ ಇದೆ. ಹಣವನ್ನು ಮಿತಿ ಮೀರಿ ಖರ್ಚು ಮಾಡಬೇಡಿ. ಕುಟುಂಬಸ್ಥರೊಂದಿಗೆ ತಾಳ್ಮೆಯಿಂದ ವರ್ತಿಸಿ. ವ್ಯವಹಾರ ಸಂಬಂಧದಲ್ಲಿ ಕೆಲವು ಅಡೆತಡೆ ಇರಬಹುದು, ಆದ್ರೆ ದಿನದ ಅಂತ್ಯದಲ್ಲಿ ನಿವಾರಣೆಯಾಗಲಿದೆ. ನಿಮ್ಮ ಆರೋಗ್ಯದ ಕಡೆಗೆ ಗಮನವಿಡಿ.
ವೃಷಭ ರಾಶಿ
ವೃಷಭ ರಾಶಿ ಮಂದಿಗೆ ಈ ದಿನ ಮಿಶ್ರ ಫಲ ನೀಡಲಿದೆ. ದಿನದ ಆರಂಭವು ಅತ್ಯಂತ ಲಾಭದಾಯಕವಾಗಿರಲಿದೆ, ಆದ್ರೆ ದಿನದ ಅಂತ್ಯದಲ್ಲಿ ಕಹಿ ಸುದ್ದಿ ಕೇಳಬಹುದು. ಉದ್ಯಮಿಗಳು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಾದರೆ ಮತ್ತೊಮ್ಮೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಉತ್ತಮ. ನಿಮ್ಮ ಆರ್ಥಿಕ ಪರಿಸ್ಥಿತಿಗಲು ಸರಾಸರಿಯಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇಡಿ. ಆಪ್ತರಿಗಾಗಿ ನೀವು ಹಣ ಖರ್ಚು ಮಾಡಬೇಕಾಗಿರಬಹುದು.

ಮಿಥುನ ರಾಶಿ
ಈ ದಿನ ಮಿಥುನ ರಾಶಿಯವರಲ್ಲಿ ಆರ್ಥಿಕ ಪ್ರಗತಿ ನೋಡಬಹುದು. ನೀವು ಅವಿವಾಹಿತರಾಗಿದ್ದರೆ ಶುಭ ಸುದ್ದಿ ಕೇಳಲಿದ್ದೀರಿ. ಈ ದಿನ ಆಪ್ತರ ಜೊತೆಗೆ ಮನಸ್ಥಾಪ ಉಂಟಾಗಬಹುದು. ಬಹಳಷ್ಟು ಸಮಯ ನೀವು ಒಂಟಿಯಾಗಿರುತ್ತೀರಿ. ಹಾಗೆ ಮನೆಯಲ್ಲಿ ಅಶಾಂತಿ ಕೂಡ ಮೂಡಬಹುದು. ನೀವು ಯಾವುದಾದರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ದಿನ ಆ ಕುರಿತು ಎಚ್ಚರ ವಹಿಸುವುದು ಬಹಳ ಮುಖ್ಯ. ಶಾಪಿಂಗ್, ಮನೆಗೆ ಹೊಸ ವಸ್ತು ಖರೀದಿಯಂತಹ ಕಾರ್ಯಕ್ಕೆ ಹಣ ವ್ಯಯಿಸುವು ಸಾಧ್ಯತೆ ಹೆಚ್ಚಾಗಿದೆ.
ಕರ್ಕ ರಾಶಿ
ಹಣದ ವಿಷಯದಲ್ಲಿ ನಿಮಗಿಂದು ಮಿಶ್ರಫಲ ಆಗಿರಲಿದೆ. ಇಂದು ನೀವು ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ಕೇಳಬಹುದು. ಮನೆಯಲ್ಲಿ ಶಾಮತಿ ಇರಲಿದೆ, ಮಕ್ಕಳು ಹಾಗೂ ಪತ್ನಿಯೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ಬಹಳ ಸಮಯದಿಂದ ನೀವು ಮಾಡಬೇಕೆಂದು ಬಯಸಿದ್ದ ಕೆಲಸಕ್ಕೆ ಒಂದು ಹೆಜ್ಜೆ ಇಡುವಿರಿ. ಹಳೆಯ ಸಾಲದಿಂದ ಮುಕ್ತಿ ಪಡೆಯುತ್ತೀರಿ. ಉಳಿತಾದ ಕಡೆಗೆ ಹೆಚ್ಚು ಒಲವು ಹೊಂದಬಹುದು. ವ್ಯಾಪಾರಿಗಳಿಗೆ ಶುಭ ದಿನವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಅಂದುಕೊಂಡಿದ್ದನ್ನು ಮಾಡಿ ಮುಗಿಸುವ ದಿನವಾಗಿರಲಿದೆ. ನಿಮ್ಮ ಬಯಕೆಯಲ್ಲಿನ ಹಲವು ವಿಚಾರದಲ್ಲಿ ಕೆಲವೊಂದು ಈಡೇರಿಸಿಕೊಳ್ಳಬಹುದು. ಆಪ್ತರನ್ನು ಭೇಟಿಯಾಗುತ್ತೀರಿ. ಆರ್ಥಿಕವಾಗಿ ಸುಧಾರಿಸಿದರೂ ಈ ದಿನ ಹೆಚ್ಚು ಖರ್ಚು ಕೂಡ ಆಗಲಿದೆ. ನಿಮ್ಮ ವಿಚಾರವಾಗಿ ಮನೆಯಲ್ಲಿ ಬೆಂಬಲ ಇರಲಿದೆ. ದೇವಾಲಯ, ಪ್ರವಾಸಿ ಕ್ಷೇತ್ರ ಭೇಟಿಯಾಗುವ ಸಾಧ್ಯತೆ ಇದೆ. ಕೆಲಸದ ವಿಚಾರದಲ್ಲಿ ಒತ್ತಡ ಕಡಿಮೆ ಆಗಲಿದೆ. ಬಹಳ ಸಮಯದ ನಂತರ ಸ್ನೇಹಿತರೊಬ್ಬರ ಭೇಟಿಯಾಗುತ್ತೀರಿ. ಅವಿವಾಹಿತರಿಗೆ ಒಳ್ಳೆಯ ದಿನವಾಗಿರಲಿದೆ.
ಕನ್ಯಾ ರಾಶಿ
ಇಂದು ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡಲು ನಿಮಗೆ ಉತ್ತಮ ದಿನವಾಗಿರುವುದಿಲ್ಲ. ಹೊಸ ಉದ್ಯೋಗ ಹುಡುಕುತ್ತಿದ್ದರೆ ಅವಕಾಶ ಬರಲಿದೆ ಆದರೆ ನಿಮ್ಮಲ್ಲಿ ತೃಪ್ತಿ ಇರದೆ ಇರಬಹುದು. ಬಹಳ ಸಮಯದಿಂದ ನೀವು ಮಾಡಬೇಕೆಂದು ಅಂದುಕೊಂಡಿದ್ದ ಕೆಲಸಕ್ಕೆ ಇಂದು ಕೈ ಹಾಕುವಿರಿ. ದಾಂಪತ್ಯದಲ್ಲಿ ಮುನಿಸು ಅಶಾಂತಿ ಇರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ದೊಡ್ಡ ಸವಾಲಿನ ಕೆಲಸವೊಂದು ನಿಮ್ಮ ಮುಂದೆ ಬರಲಿದೆ. ವಿದೇಶಿ ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸಕ್ಕೆ ನೀವು ಆಲೋಚಿಸಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು.
ತುಲಾ ರಾಶಿ
ಈ ದಿನ ತುಲಾ ರಾಶಿಯವರಲ್ಲಿ ಹಣದ ಪರಿಸ್ಥತಿ ಸುಧಾರಿಸಲಿದೆ. ನಿಮಗೆ ಹಣಕಾಸು ವಿಚಾರದಲ್ಲಿ ಯಶಸ್ಸು ಸಿಗಬಹುದು. ಕೆಲಸದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬೇಡಿ. ಇಂದು ನೀವು ಯಾವುದೇ ಕೆಲಸವನ್ನ ಪ್ರಾರಂಭಿಸಿದರೂ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇಂದು ಆರೋಗ್ಯದ ವಿಷಯದಲ್ಲಿ ಏರಿಳಿತಗಳು ಕೂಡಿರಲಿದೆ. ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ.
ವೃಶ್ಷಿಕ ರಾಶಿ
ಈ ದಿನದಂದು ನಿಮ್ಮಲ್ಲಿ ಹಣದ ವಿಷಯದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಹಣಕಾಸಿನ ಪ್ರಯತ್ನಗಳ ವೈಫಲ್ಯದಿಂದಾಗಿ ಒತ್ತಡ ಎದುರಿಸಬೇಕಾಗುತ್ತದೆ. ನೀವು ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುವಿರಿ. ಆಪ್ತರಿಂದ ನಿಮಗೆ ಶುಭ ಸುದ್ದಿ ಕೇಳಿಬರಲಿದೆ. ನಿಮ್ಮಲ್ಲಿ ಯಾವುದಾದರು ವಿಚಾರಕ್ಕೆ ಒತ್ತಡ, ಮನಃಶಾಂತಿ ಕೆಡುವಂತಹ ಘಟನೆ ಎದುರಾಗಬಹುದು. ಇಂದು ದೂರ ಪ್ರಯಾಣ ಮಾಡಬೇಕಾಗಬಹುದು.
ಧನು ರಾಶಿ
ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಂದು ಬಯಸಿದ ಫಲಿತಾಂಶಗಳ ಪಡೆಯಲಿದ್ದೀರಿ. ನಿರೀಕ್ಷೆಗೆ ತಕ್ಕಂತೆ ನಿಮ್ಮ ಬಳಿ ಹಣ ಸಂದಾಯ ಆಗಲಿದೆ. ಹಾಗೆ ಹಳೆಯ ಸಾಲಗಳು ಮರುಪಾವತಿ ಆಗಲಿದೆ. ಉದ್ಯೋಗಸ್ಥರಿಗೆ ಈ ದಿನ ಶುಭ ದಿನ. ಇಂದು ಕೆಲಸದ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ಆರೋಗ್ಯ ಸಂಬಂಧಿ ಕೆಲವು ಸಮಸ್ಯೆ ಎದುರಿಸಬೇಕಾಗಬಹುದು.
ಮಕರ ರಾಶಿ
ವ್ಯಾಪಾರಸ್ಥರು ಇಂದು ಯಾವುದೇ ಗಡಿಬಿಡಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರ ವಹಿಸಿ. ನಿಮ್ಮ ಆದಾಯಗಳು ಇಂದು ಹೆಚ್ಚಾಗಬಹುದು, ಆರ್ಥಿಕ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರ ಹುಡುಕಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಮನಸ್ಥಾಪ ಬೆಳೆಯಬಹುದು. ಹೊಸ ಉದ್ಯೋಗ ಆರಂಭಿಸುವ ಕನಸಿದ್ದರೆ ಈ ದಿನ ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸಂಬಂಧಿಕರಿಂದ ಉತ್ತಮ ಸಲಹೆ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೋಡಿಲಿದ್ದೀರಿ.
ಕುಂಭ ರಾಶಿ
ನೀವು ಉದ್ಯಮಿಯಾಗಿದ್ದರೆ ನಕಾರಾತ್ಮಕ ಆಲೋಚನೆಯಿಂದ ದೂರವಿರಿ. ಇಂದು ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನದಲ್ಲಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಈ ದಿನ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚು ಲಾಭ ಮಾಡುವ ದಿನವಾಗಿದೆ. ರಿಯಲ್ ಎಸ್ಟೇಟ್, ವಾಹನ ಮಾಲಿಕರು, ಗ್ಯಾರೆಜ್, ಈ ರೀತಿ ಸ್ವಂತ ಉದ್ಯೋಗ ಮಾಡುತ್ತಿರುವವರು ಹೆಚ್ಚು ಲಾಭ ಮಾಡಲಿದ್ದೀರಿ.
ಮೀನ ರಾಶಿ
ಹಣದ ವಿಷಯದಲ್ಲಿ ಇಂದು ಮಿಶ್ರಫಲ ಇರಲಿದೆ. ನಿಮ್ಮ ಯಾವುದೇ ಪ್ರಮುಖ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಲಾಭದಾಯಕ ದಿನಗಳ ನೋಡಬಹುದು. ಹೂಡಿಕೆ ಮಾಡಲು ಬಯಸಿದರೆ ಈ ಸಮಯ ಸೂಕ್ತವಲ್ಲ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಬಹಳ ಸಮಯದಿಂದ ನಿಮ್ಮಲ್ಲಿ ಕಾಡುತ್ತಿದ್ದ ಅನಾರೋಗ್ಯವು ಇಂದು ಸುಧಾರಣೆ ಕಾಣಬಹುದು. ಪ್ರೀತಿ, ದಾಂಪತ್ಯ ಜೀವನದಲ್ಲಿ ಇಂದು ಸುಖ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications