Latest Updates
-
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು
ಮಾರ್ಚ್ 15ರ ಶನಿವಾರದ ರಾಶಿಫಲ: ಈ ದಿನ ಯಾರಿಗೆಲ್ಲಾ ಲಾಭದಾಯಕ ನೋಡಿ..!
ಜ್ಯೋತಿಷ್ಯದ ಪ್ರಕಾರ ಮಾರ್ಚ್ 15ರ ದಿನದಂದು ನಿಮ್ಮ ರಾಶಿಯಲ್ಲಿ ಯಾವ ಲಾಭಗಳಿವೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಮಿಶ್ರಫಲ ನೋಡಲು ಸಿಗಲಿದೆ. ನಿಮ್ಮ ಆತ್ಮಿಯರಿಂದ ನಿಮಗೆ ಸಹಾಯವಾಗಲಿದೆ. ನಿಮ್ಮ ಅನುಕೂಲಕರ ದಿನಗಳು ಹತ್ತಿರವಾಗಲು ಇಂದು ದೊಡ್ಡ ಹೆಜ್ಜೆ ಇಡಲಿದ್ದೀರಿ. ಇಂದು ನಿಮ್ಮ ಯಾವುದೇ ಸಂಬಂಧಿಗಳು, ಸ್ನೇಹಿತರು, ಹಿರಿಯರು ನೀಡುವ ಸಲಹೆಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕೆಲವು ಪ್ರಮುಖ ಕೆಲಸಗಳು ಸಿಲುಕಿಕೊಳ್ಳಬಹುದು, ಅದು ನಿಮ್ಮ ಆತಂಕ ಹೆಚ್ಚಿಸಬಹುದು. ವೈವಾಹಿಕ ಜೀವನದಲ್ಲಿ ಸುಖವಿರಲಿದೆ. ಹೊಸ ವಸ್ತು ಖರೀದಿ ಯೋಗವಿದೆ.
ವೃಷಭ ರಾಶಿ
ಹಣಕಾಸು ವಿಚಾರದಲ್ಲಿ ಈ ದಿನ ನಿಮಗೆ ಕಷ್ಟವಾಗಬಹುದು. ಅಗತ್ಯ ಕೆಲಸದಲ್ಲಿ ಖರ್ಚು ಹೆಚ್ಚಾಗಬಹುದು. ಇದನ್ನು ಸರಿದೂಗಿಸಲು ನೀವು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಬರಬಹುದು. ನಿಮ್ಮ ಸುಲಭದ ಕೆಲಸಗಳು ಕಷ್ಟವಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ ಮನೆಯ ಸದಸ್ಯರಿಂದ ನಿಮಗೆ ಬೆಂಬಲ ಸಿಗಲಿದೆ. ಹಾಗೆ ಶಾಂತಿ ನೆಲೆಸಲಿದೆ.

ಮಿಥುನ ರಾಶಿ
ಇಂದು ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣ ಮಾಡಬೇಕಾಗಬಹುದು. ಕಚೇರಿಯಲ್ಲಿ ಉದ್ಯೋಗಸ್ಥರ ಮೇಲಿನ ಒತ್ತಡ ಹೆಚ್ಚಾಗಬಹುದು. ನಿಮ್ಮ ಸಮಸ್ಯೆಗಳು ಕಡಿಮೆಯಾಗುವಂತಹ ಸಲಹೆ ನಿಮಗೆ ಸಿಗಲಿದೆ. ಅವಿವಾಹಿಯತರಿಗೆ ಈ ದಿನ ಶುಭವಾಗಲಿದೆ. ದೂರ ಪ್ರಯಾಣದಂತಹ ಕೆಲಸಕ್ಕೆ ನೀವು ಮುಂದಾಗಬೇಕಾಗುತ್ತದೆ. ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸದಿರುವುದು ಉತ್ತಮ. ವಾಹನ ಸಂಬಂಧ ಖರ್ಚು ಹೆಚ್ಚಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಯಲ್ಲಿ ಈ ದಿನವು ಅತ್ಯಂತ ಲಾಭದಾಯಕವಾಗಿರಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಪಾಲುದಾರಿಗೆ ವ್ಯವಹಾರದಲ್ಲಿ ನೀವು ತೊಡಗಿದ್ದರೆ ಲಾಭಾಂಶದ ಪ್ರಮಾಣ ಹೆಚ್ಚಳವಾಗಲಿದೆ. ಜವಾಬ್ದಾರಿಗಳ ಹೊರೆ ಹೆಚ್ಚಾದಂತೆ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಶ್ರಮ ಗುರಿತಿಸಲಾಗುತ್ತದೆ. ಹಾಗೆ ದೂರ ಸಂಬಂಧಿಕರಿಂದ ನಿಮಗೆ ಶುಭ ಸುದ್ದಿ ಬರಲಿದೆ. ಆರ್ಥಿಕ ಸ್ಥಿತಿ ಸಂಬಂಧ ನಿಮಗಿದ್ದ ಆತಂಕವೊಂದು ದೂರಾಗಲಿದೆ.
ಸಿಂಹ ರಾಶಿ
ಕೆಲಸದಲ್ಲಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಮೇಲಿನ ಗೌರವ, ಘಟನೆ ಇಂದು ಹೆಚ್ಚಾಗಲಿದೆ. ನೀವು ಬಯಸಿದ್ದ ಕೆಲಸವೊಂದು ನಿಮ್ಮಿಷ್ಟದಂತೆ ನೆರವೇರಲಿದೆ. ರಿಯಲ್ ಎಸ್ಟೇಟ್ ಆಸ್ತಿ ವ್ಯವಹಾರದಂತಹ ಕೆಲಸದಲ್ಲಿ ಹೆಚ್ಚಿನ ಯಶಸ್ಸು ನಿರೀಕ್ಷಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಈ ದಿನ ಶುಭಕರವಾಗುತ್ತಿದೆ. ಹಳೆಯ ಅನಾರೋಗ್ಯವೊಂದು ಮತ್ತೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಹಣಕಾಸು ವಿಚಾರವಾಗಿ ನೀವು ನಿಮ್ಮ ಹತ್ತಿರದವರಿಗೆ ಸಹಾಯ ಮಾಡುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಇಂದು ದಿಢೀರ್ ಧನ ಲಾಭ ನೋಡಬಹುದು. ವ್ಯಾಪಾರಿಗಳು, ಗೃಹಿಣಿಯರು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಇಂದು ಶುಭ ದಿನ. ಮಕ್ಕಳ ಭವಿಷ್ಯದ ಚಿಂತೆ ಇದು ದೂರಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಸ್ಥಳದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಹಾಗೆ ನೀವು ಉದ್ಯೋಗ ಬದಲಿಸುವ ಆಲೋಚನೆ ಹೊಂದಿದ್ದರೆ ಒಳ್ಳೆಯ ಅವಕಾಶ ಒಂದು ಹುಡುಕಿ ಬರಬಹುದು.
ತುಲಾ ರಾಶಿ
ಇಂದು ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ಹಲವು ವಿಚಾರಗಳನ್ನು ಹಿರಿಯರು, ಮನೆಯವರಲ್ಲಿ ಹಂಚಿಕೊಳ್ಳುವುದು ಬಹಳ ಉತ್ತಮ. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಬಹುದಿನದ ಆಸೆಯೊಂದು ಈಡೇರುವ ದಿನವಾಗಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಲ್ಲ ಮಾನಸಿಕ ಅಶಾಂತಿ ಇರಬಹುದು. ಹೊಸ ವ್ಯಾಪಾರ ಅಥವಾ ವ್ಯವಹಾರಕ್ಕೆ ನೀವು ಮುಂದಾಗಬಹುದು. ಇದರಿಂದ ಲಾಭ ಮಾಡುವ ಸಮಯವೂ ಬರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಈ ದಿನದಂದು ನಿಮ್ಮ ಮನೆಯ ಹಾಗೂ ಕುಟುಂಬದ ಕಡೆಗೆ ಹೆಚ್ಚು ಗಮನವಿಡುವುದು ಒಳ್ಳೆಯದು. ಅದರಲ್ಲೂ ಯಾರಾದರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಆರ್ಥಿಕವಾಗಿ ನೀವು ಸಮಾಧಾನಕರ ದಿನವನ್ನು ನೋಡುವಿರಿ. ನಿಮ್ಮ ಹೂಡಿಕೆ, ಉಳಿತಾಯದಲ್ಲಿ ಹೆಚ್ಚಳ ನೋಡಬಹುದು. ಹಾಗೆ ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನವಿಡುವುದು ಉತ್ತಮ. ಹತ್ತಿರದವರಿಂದ ಇಂದು ನೋವಾಗುವಂತಹ ಮಾತುಗಳ ಕೇಳುವಿರಿ.
ಧನು ರಾಶಿ
ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ನಿಮಗೆ ಸಿಗಬಹುದು. ಇಂದು ನಿಮ್ಮ ಕಾರ್ಯಗಳು ಅಡೆತಡೆಯಿಲ್ಲದೆ ಮುಗಿಯಲಿದೆ, ನಿಮಗಾಗಿ ಹೊಸ ಉದ್ಯೋಗದ ಸುದ್ದಿ ಬರಲಿದೆ. ಅನೇಕ ದಿನಗಳಿಂದ ಉಳಿದಿದ್ದ ಬಾಕಿ ಸಾಲ ಮರುಪಾವತಿಯಾಗಲಿದೆ. ಹಳೆಯ ವಸ್ತುವೊಂದು ಪುನಃ ನಿಮ್ಮ ಕೈ ಸೇರಲಿದೆ. ವಾಹನ ಮಾಲಿಕರು ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗಬಹುದು. ಆದ್ರೆ ಹಣ ಉಳಿತಾಯವಾಗುವುದು ಕಷ್ಟ.
ಮಕರ ರಾಶಿ
ಕೆಲಸದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುವುದಿಲ್ಲ. ನಿಮ್ಮ ಕೆಲಸದಿಂದ ತೃಪ್ತಿ ಇರುವುದಿಲ್ಲ. ನೀವಿಂದು ಹೆಚ್ಚು ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಸಹಭಾಗಿತ್ವ ವ್ಯಾಪಾದರಲ್ಲಿ ಲಾಭ ಹೆಚ್ಚಾಗಲಿದೆ. ಹಾಗೆ ನೀವಿಂದು ದೊಡ್ಡ ಮೊತ್ತವನ್ನು ಆತ್ಮಿಯರಿಗೆ ನೀಡಬೇಕಾಗಬಹುದು. ಹಾಗೆ ಆದಾಯದ ಮೂಲದಿಂದ ಹಣದ ಹರಿವು ಕೂಡ ಹೆಚ್ಚಾಗಬಹುದು. ಮನೆಯ ವಸ್ತುವೊಂದು ದುರಸ್ಥಿಯಾಗಬಹುದು. ಊಟ, ತಿಂಡಿಗಾಗಿ ನೀವು ಬಹುತೇಕ ಸಮಯ ಮನೆಯಿಂದ ಹೊರಗೆ ಉಳಿಯಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಇಂದು ಶುಭಕರವಾದ ವಾತಾವರಣ ಇರಲಿದೆ. ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಕಾರ್ಯನಿರತ ದಿನವಾಗಲಿದೆ. ಹಾಗೆ ನಿಮ್ಮ ಬ್ಯಾಂಕಿಂಗ್ ವ್ಯವಹಾರ, ಕೋರ್ಟ್ ಸಂಬಂಧಿ ವ್ಯವಹಾರ, ಸರ್ಕಾರಿ ದಾಖಲೆ ಪತ್ರಗಳ ಕಾರ್ಯದಲ್ಲಿ ಹಿನ್ನಡೆ ಆಗಬಹದು, ಆದ್ರೆ ಅದರ ಫಲಿತಾಂಶ ಬಹುಬೇಗ ನೀವು ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಧನಾತ್ಮಕ ಕಾರ್ಯಗಳು ನಡೆಯಲಿವೆ. ನಿಮ್ಮ ಮೇಲಾಧಿಕಾರಿಗಳಿಂದ ನಿಮ್ಮ ಬಗ್ಗೆ ಪ್ರಶಂಸೆ ಕೇಳಿಬರಲಿದೆ. ಅನಗತ್ಯ ಮಾತುಗಾರಿಕೆಗೆ ಇಂದು ಮುಂದಾಗಬೇಡಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ನಿಮ್ಮ ಮನೆಗಾಗಿ ವಸ್ತು ಖರೀದಿಸುವ ಸಾಧ್ಯತೆ ಇದೆ. ಚಿನ್ನ, ಬೆಳ್ಳಿಯ ವಸ್ತುಗಳ ಮೇಲೆ ಹೆಚ್ಚು ಗಮನವಿಡಿ, ವಾಹನ ಮಾಲೀಕರು ಹೆಚ್ಚು ಲಾಭ ಮಾಡುವ ದಿನವಾಗಿರಲಿದೆ. ನಿಮ್ಮ ಸುತ್ತಲಿನ ವಾತಾವರಣ ಇಂದು ಸಂತಸದಿಂದ ಕೂಡಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











