Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 14ರ ಹೋಳಿ ಹುಣ್ಣಿಮೆಯ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಜ್ಯೋತಿಷ್ದದ ಪ್ರಕಾರ ಮಾರ್ಚ್ 14 ಈ ಹೋಳಿ ಹುಣ್ಣಿಮೆಯ ದಿನದಂದು ರಾಶಿಯಲ್ಲಿ ಯಾವ ಲಾಭಗಳಿವೆ ನೋಡಿ.
ಮೇಷ ರಾಶಿ
ಹೋಳಿ ಹುಣ್ಣಿಮೆಯ ಈ ದಿನದಂದು ಮೇಷ ರಾಶಿಯವರಿಗೆ ಶುಭವಾದ ದಿನವಾಗುತ್ತಿದೆ. ನಿಮ್ಮ ಕೆಲಸ ಕಾರ್ಯಗಳು ಅನುಕೂಲಕರವಾಗಿ ಬದಲಾಗುತ್ತಿವೆ. ಮೀನ ರಾಶಿಗೆ ಸೂರ್ಯನ ಚಲನೆಯೂ ಇಂದೇ ಸಂಭವಿಸುತ್ತಿರುವುದು ನಿಮಗೆ ಲಾಭದಾಯಕವಾಗುತ್ತಿದೆ. ಹಣಕಾಸಿನ ಸ್ಥಿತಿ ಬಲವಾಗುತ್ತದೆ. ನೀವು ಹೊಸ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರುತ್ತದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ದೂರದ ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ಸಂತಸ ಮೂಡಲಿದೆ. ಅನಿರೀಕ್ಷಿತ ಮೂಲದಿಂದ ನಿಮ್ಮ ಹಣ ಬಲ ಹೆಚ್ಚಾಗಲಿದೆ.
ವೃಷಭ ರಾಶಿ
ಈ ದಿನದಂದು ವೃಷಭ ರಾಶಿಯವರಲ್ಲಿ ಹಣದ ಚಿಂತೆ ದೂರಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ತಾತ್ಕಾಲಿಕವಾಗಿ ದೂರಾಗಲಿವೆ. ಹಾಗೆ ವ್ಯವಹಾರ ಹಾಗೂ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ನೀವು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯ ಹೆಜ್ಜೆ ಇಡಿ. ಇಂದು ವಿದ್ಯಾರ್ಥಿಗಳಿಗೆ ಬಹಳ ಉತ್ತಮ ದಿನವಾಗಿರಲಿದೆ.

ಮಿಥುನ ರಾಶಿ
ಈ ರಾಶಿಯವರಿಗೆ ಈ ದಿನದಂದು ಮಿಶ್ರ ಫಲ ನೋಡಬಹುದು, ನಿಮ್ಮ ಆದಾಯದ ಮೂಲ ಹೆಚ್ಚಾಗುವ ಮೂಲಕ ನಿಮಗೆ ಆರ್ಥಿಕ ಬಲ ಬರುವುದು, ಹಾಗೆ ಖರ್ಚುಗಳು ಕೂಡ ಹೆಚ್ಚಾಗಲಿದೆ. ಹಳೆಯ ವ್ಯವಹಾರ, ಕೆಲಸಗಳು ಇಂದು ಸಂಪೂರ್ಣ ಮಾಡುವಿರಿ. ಸರ್ಕಾರಿ ಉದ್ಯೋಗದಲ್ಲಿದ್ದರೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಕುಟುಂಬಸ್ಥರಿಂದ ನಿಮ್ಮ ಪರವಾದ ಬೆಂಬಲ ಸಿಗಲಿದೆ. ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರು ಈ ಹುಣ್ಣಿಮೆಯ ದಿನದಂದು ಅತ್ಯಧಿಕ ಲಾಭಗಳಿಸಲಿದ್ದಾರೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸಂತಸಮಯ ಸಂದರ್ಭಗಳಿ ಇರಲಿದೆ. ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ಈ ದಿನ ಹೊಸದಾಗಿ ಸಾಲ ಮಾಡಬೇಡಿ. ಇದು ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಿಸಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ, ಜವಾಬ್ದಾರಿ ಹೆಚ್ಚಾಗಬಹುದು. ಮಾನಸಿಕ ಸ್ಥಿತಿಯ ಬಗ್ಗೆ ಹೆಚ್ಚು ಗಮನವಿಡಿ. ವ್ಯಾಪಾರಿಗಳು ಇಂದು ಯೋಗ್ಯವಾದ ಲಾಭ ಪಡೆಯುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ಬಹಳ ಸಂತಸಮಯವಾಗಿ ಕಳೆಯಲಿದ್ದಾರೆ. ನಿಮ್ಮ ಮನೆಯ ವಾತಾವರಣ ನಿಮ್ಮನ್ನೂ ಖುಷಿಯಾಗಿಡಲಿದೆ. ಆದರೆ ಹಣಕಾಸು ವಿಚಾರದಲ್ಲಿ ಈ ದಿನ ಅಡಚಣೆ ಆಗಬಹುದು. ಹಣದ ವಿಚಾರವಾಗಿ ಯಾವುದೇ ವ್ಯವಹಾರ ಮಾಡುವಾಗ ಮತ್ತಷ್ಟು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗುತ್ತಿದೆ. ನೀವು ರಿಯಲ್ ಎಸ್ಟೇಟ್, ಆಸ್ತಿ ವ್ಯವಹಾರದಲ್ಲಿ ಇಂದು ಮುನ್ನಡೆಯಬಹುದು. ಸ್ನೇಹಿತರಿಂದ ನಿಮ್ಮ ಹಣ ಮರಳಿ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ.
ಕನ್ಯಾ ರಾಶಿ
ಈ ದಿನ ನೀವು ಶುಭ ಸುದ್ದಿ ಕೇಳುವಿರಿ. ಅವಿವಾಹಿತರಲ್ಲಿ ಈ ದಿನ ವಿಶೇಷ ಲಾಭಕ್ಕೆ ಕಾರಣವಾಗಲಿದೆ. ಕೆಲಸ ಮಾಡುವ ಜನರು ಕಚೇರಿಯಲ್ಲಿ ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಷಯವೊಂದು ನಿವಾರಣೆಯಾಗಲಿದೆ. ನಿಮ್ಮಮ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವಾಹನ ಮಾಲಿಕರು ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹೊಸ ರೀತಿಯ ಕೆಲಸಗಳು ನಿಮ್ಮನ್ನು ಹುಡುಕಿ ಬರಲಿವೆ. ದಾಂಪತ್ಯ ಹಾಗೂ ಪ್ರೀತಿಯ ಜೀವನವು ಮಧುರವಾಗಿರಲಿದೆ. ಕಾನೂನು, ಕೋರ್ಟ್ ವಿಚಾರದಲ್ಲಿ ಹಿನ್ನಡೆಯಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಮಿಶ್ರ ಫಲ ನೋಡಬಹುದು. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ ಆಗಿರಲಿದೆ. ವ್ಯಾಪಾರದಲ್ಲಿ ಸಿಗುವಂತಹ ಅವಕಾಶವನ್ನು ನೀವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಮುಂದೆ ನಿಮಗೆ ಲಾಭವಾಗುವ ನಿರೀಕ್ಷೆ ಇದೆ. ಹಲವು ದಿನಗಳಿಂದ ನೀವು ಅಂದುಕೊಂಡ ಕೆಲಸವೊಂದು ಈ ದಿನ ಪೂರ್ಣ ಮಾಡಲಿದ್ದೀರಿ. ಕುಟುಂಬಸ್ಥರಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಹಾಗೆ ನೀವು ದೇವಾಲಯ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೆ ನೀವಿಂದು ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆಯೂ ಇದೆ.
ವೃಶ್ಚಿಕ ರಾಶಿ
ಇಂದು ವೃಶ್ಚಿಕ ರಾಶಿಯ ಮಂದಿ ಅದರಲ್ಲೂ ವಿವಾಹಿತರಿಗೆ ಬಹಳ ವಿಶೇಷವಾದ ದಿನವಾಗಿರಲಿದೆ. ನಿಮ್ಮ ಸಂಗಾತಿಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಪ್ರಯತ್ನಿಸಬೇಕು, ವ್ಯಾಪಾರಿಗಳು ಲಾಭಕ್ಕಾಗಿ ಅಡ್ಡಮಾರ್ಗ ಹಿಡಿಯಬೇಡಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ. ಹಾಗೆ ಎಲ್ಲಾ ಆಯಾಮದಿಂದಲೂ ನಿಮ್ಮ ಪರವಾದ ಕೆಲಸ ಕಾರ್ಯಗಳು ಸುಲಭದ ರೀತಿಯಲ್ಲಿ ನಡೆಯಲಿದೆ. ಮನಸ್ಥಾಪಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಲು ಮುಂದಾಗುವುದು ಉತ್ತಮ.
ಧನು ರಾಶಿ
ಧನು ರಾಶಿಯವರಲ್ಲಿ ಈ ದಿನವು ಅತ್ಯಂತ ಶುಭಕರವಾಗಿ ನಡೆಯಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಹೆಚ್ಚು ಶ್ರಮ ಹಾಕಿ ಅತ್ಯುತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಮುಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚು ಬೆಂಬಲ ಪಡೆಯತ್ತಿರಿ. ಆರ್ಥಿಕ ವಿಚಾರದಲ್ಲಿಯೂ ನೀವು ಬಹಳ ಉತ್ತಮ ದಿನವನ್ನಾಗಿ ನೋಡಲಿದ್ದೀರಿ. ಈ ಸಮಯದಲ್ಲಿ ಸ್ನೇಹಿತರಿಂದ ಹೂಡಿಕೆ ಕುರಿತು ಸಲಹೆ ಪಡೆಯುವುದು ಉತ್ತಮ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳಿಡಿ. ನಿಮ್ಮ ಸನಿಹದ ದೇವಾಲಯ ಭೇಟಿ ನೀಡುವುದು ಬಹಳ ಉತ್ತಮ.
ಮಕರ ರಾಶಿ
ಮಕರ ರಾಶಿಯ ಮಂದಿ ಈ ದಿನದಂದು ಅತ್ಯುತ್ತಮ ಲಾಭ ಗಳಿಸಲಿದ್ದಾರೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕುರಿತ ಭಾವನೆಗಳು ಬದಲಾಗಲಿದೆ. ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಗಾಗಿ ನೀವು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೀರಿ. ಹಣದ ಖರ್ಚು ಮಿತವಾಗಿಸುವುದು ಉತ್ತಮ. ಈ ದಿನ ನಿಮ್ಮ ಬಹುದೊಡ್ಡ ಆಸೆಯೊಂದು ಈಡೇರಬಹುದು, ಹೊಸ ವ್ಯವಹಾರದಲ್ಲಿ ಲಾಭ ನೋಡಬಹುದು. ಹಾಗೆ ಬಂಧು ಮಿತ್ರರಿಂದ ಈ ದಿನ ನಿಮ್ಮ ಭೇಟಿ ಸಂತಸದ ವಾತಾವರಣಕ್ಕೆ ಕಾರಣವಾಗಬಹುದು. ನಿಮ್ಮಿಂದ ಮತ್ತೊಬ್ಬರಿಗೆ ಸಹಾಯವಾಗುವ ದಿನ ಇದಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ಹುಣ್ಣಿಮೆಯ ದಿನದಂದು ಲಾಭದಾಯಕ ದಿನವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಜೊತೆಗೆ ನಿಮ್ಮಲ್ಲಿ ಹೊಸ ಆದಾಯ ಬರಲಿದೆ. ಒಂದಿಷ್ಟು ಕೆಲಸಗಳು ವೇಗ ಪಡೆಯಲಿವೆ. ಒಂದು ವರ್ಷಕ್ಕಿಂತ ಮೊದಲು ಮಾಡಬೇಕಿದ್ದ ಕೆಲಸವನ್ನು ಮಾಡಿ ಮುಗಿಸುತ್ತೀರಿ. ಅನಿರೀಕ್ಷಿತವಾಗಿ ನಿಮ್ಮ ಬಳಿ ಹಣದ ಹರಿವು ಹೆಚ್ಚಾಗಲಿದೆ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳುವ ಸಂಭವವಿದೆ. ಬಹಳ ಸಮಯದಿಂದ ನೀವು ಬಯಸಿದ್ದ ವಿಚಾರವೊಂದು ಇಂದು ನೆರವೇರಲಿದೆ.
ಮೀನ ರಾಶಿ
ಈ ಹುಣ್ಣಿಮೆಯ ದಿನವಂದು ಮೀನ ರಾಶಿಗೆ ಸೂರ್ಯನು ಸಂಚರಿಸುತ್ತಿದ್ದಾನೆ. ಹೀಗಾಗಿ ಈ ದಿನದಂದು ಮೀನ ರಾಶಿಗೆ ಅತ್ಯುತ್ತಮ ಲಾಭ ನೋಡಬಹುದು, ನಿಮ್ಮ ಆದಾಯ ಹೆಚ್ಚಾಗಲಿದೆ. ನೀವು ಬಯಸಿದಂತೆ ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯಬಹುದು. ಹಾಗೆ ಬಹುದಿನದಿಂದ ನೀವು ಬಯಸಿದ್ದ ವಿಶೇಷ ಆಸೆಯೊಂದು ಈಡೇರಬಹುದು, ದಾಂಪತ್ಯ ಜೀವನದಲ್ಲಿ ನಿಮಗೆ ಸುಖ ಇರಲಿದೆ. ತಾಳ್ಮೆಯಿಂದ ಎಲ್ಲವನ್ನು ಇಂದು ಎದುರಿಸಿ. ಹಲವು ಸಮಯದಲ್ಲಿ ನಿಮ್ಮ ಖರ್ಚು ಹೆಚ್ಚಾಗಿಸುವ ಪರಿಸ್ಥಿತಿಗಳು ಎದುರಾಗಬಹುದು, ಎಚ್ಚರಿಕೆಯಿಂದ ಹೆಜ್ಜೆ ಇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










