Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಮಾರ್ಚ್ 12 ದಿನ ಭವಿಷ್ಯ: ಈ ದಿನ ಯಾವ ರಾಶಿಗೆ ಹೇಗಿರಲಿದೆ?
ಶುಭ ದಿನ, ಮಾರ್ಚ್ 12 ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ, ಈ ದಿನ ನೀವು ನಿಮ್ಮ ಕೆಲಸದ ಕಡೆಗೆ ಗಮನಹರಿಸಿ, ಅನಗ್ಯತ ವಿಷಯಗಳ ಕಡೆಗೆ ಗಮನಹರಿಸಬೇಡಿ. ರಾಜಕಾರಣಿಗಳು ಈ ದಿನ ಜಾಗ್ರತೆವಹಿಸಬೇಕು. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಿದೆ. ಮಕ್ಕಳು ಯಶಸ್ಸು ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.

ವೃಷಭ ರಾಶಿ'
ವೃತ್ತಿ ಜೀವನದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ಆರ್ಥಿಕ ದೃಷ್ಟಿಯಿಂದಲೂ ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭ ಪಡೆಯಲು ಸಾಧ್ಯವಾಗಲಿದೆ. ಇನ್ನು ಪ್ರೀತಿ ಜೀವನ, ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಇನ್ನು ಕೆಲಸಕ್ಕೆ ಸಂಬಂಧಿಸಿದಂತೆ ಏನೇ ಗೊಂದಲವಿದ್ದರೆ ಅನುಭವಿಗಳ ಸಲಹೆ ಪಡೆಯುವುದು ಒಳ್ಳೆಯದು. ಈ ದಿನ ಕೆಲವೊಂದು ಪ್ರತಿಕೂಲ ಸಂದರ್ಭದಲ್ಲಿ ಕೋಪಗೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು.
ಮಿಥುನ ರಾಶಿ
ಈ ದಿನ ನಿಮಗೆ ಮಿಶ್ರಫಲ, ನೀವು ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಬೇಕು, ಚಿಕ್ಕ ನಿರ್ಲಕ್ಷ್ಯ ದೊಡ್ಡ ಸಮಸ್ಯೆಯನ್ನುಂಟು ಮಾಡಬಹುದು. ಇನ್ನು ಈ ದಿನ ವ್ಯವಹಾರ ಮಾಡುವಾಗ ಮೋಸ ಹೋಗದಂತೆ ಜಾಗ್ರತೆವಹಿಸಿ. ಕುಟುಂಬದಲ್ಲಿಯೂ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲ್ಲ, ನೀವು ಮನೆಯ ವಿಷಯದಲ್ಲಿ ಮೂರನೇಯ ವ್ಯಕ್ತಿ ಮೂಗು ತೂರಿಸಲು ಬಿಡಬೇಡಿ. ಈ ದಿನ ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಆರ್ಥಿಕ ವಿಷಯದಲ್ಲಿ ಈ ದಿನ ಅನುಕೂಲಕರವಲ್ಲ. ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ಈ ದಿನ ನೀವು ಕೆಲಸದ ಕಡೆಗೆ ಗಮನಹರಿಸಿ, ಈ ದಿನ ನೀವಾಡುವ ಮಾತುಗಳ ಬಗ್ಗೆ ಜಾಗ್ರತೆವಹಿಸಿ. ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ಈ ದಿನ ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ನೀವು ಸಾಲ ಮಾಡಿದ್ದರೆ ಅದನ್ನು ಮರಳಿಸಲು ಸಾಧ್ಯವಾಗಲಿದೆ. ಈ ದಿನ ನಿಮಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ.
ಸಿಂಹ ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ, ಆದರೆ ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ಸಲಹೆ ನೀಡಲಾಗುವುದು. ಈ ದಿನ ಕೆಲಸದ ಜಾಗದಲ್ಲಿ ಅನಗ್ಯತ ವಾದ ಮಾಡಬೇಡಿ, ಅನಗ್ಯತ ವಾದ ತಪ್ಪಿಸಿ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಈ ದಿನ ವಾಹನವನ್ನು ಜಾಗ್ರತೆಯಿಂದ ಓಡಿಸಿ.
ಕನ್ಯಾ ರಾಶಿ
ಈ ದಿನ ನಿಮಗೆ ಶುಭವಾಗಿರಲಿದೆ, ಆದರೆ ಈ ದಿನ ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೋಳ್ಳುವಾಗ ಜಾಗ್ರತೆ ಮಾಡಿ, ಕೆಲಸ ಕಾರ್ಯದಲ್ಲಿ ಈ ದಿನ ನಿಮಗೆ ಶುಭವಾಗಿದೆ. ರಾಜಕಾರಣಿಗಳಿಗೆ ಈ ದಿನ ಉತ್ತಮವಾಗಿರಲಿದೆ, ಆರ್ಥಿಕವಾಗಿ ಈ ದಿನ ನಿಮಗೆ ಅನುಕೂಲಕರವಾಗಿದೆ. ಅಲ್ಲದೆ ಈ ದಿನ ಶಾಪಿಂಗ್ ಅಂತ ಹಣ ಖರ್ಚು ಮಾಡಬಹುದು, ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಸಿಗಲಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ದಿನ ನಿಮಗೆ ಅನುಕೂಲಕರವಾಗಿದೆ.
ತುಲಾ ರಾಶಿ
ಈ ದಿನ ನಿಮಗೆ ಮಿಶ್ರಫಲ, ಕೆಲಸದ ಒತ್ತಡ ಅಧಿಕವಿರಬಹುದು. ಆರ್ಥಿಕ ದೃಷ್ಟಿಯಿಂದ ನೋಡುವುದಾರೆ ಈ ದಿನ ನಿಮಗೆ ಅನುಕೂಲಕರವಾಗಿದೆ. ನೀವು ಏನಾದರು ಹೊಸ ಕೆಲಸ ಪ್ರಾರಂಭಿಸಿದ್ದರೆ ಅದರಲ್ಲಿ ಉತ್ತಮ ಫಲ ಸಿಗಲಿದೆ. ದೂರ ಪ್ರಯಾಣದ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ, ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈ ದಿನ ನಿಮಗೆ ತುಂಬಾ ಉತ್ತಮವಾಗಿರಲಿದೆ, ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು, ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯಲು ಸಾಧ್ಯವಾಗಲಿದೆ. ಇನ್ನು ಬೇರೆ ಕಡೆ ಕೆಲಸ ಹುಡುಕುತ್ತಿದ್ದರೆ ಖುಷಿಯ ಸುದ್ದಿ ಸಿಗಲಿದೆ. ವ್ಯಾಪಾರಸ್ಥರಿಗೆ ಈ ದಿನ ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ. ಇನ್ನು ನಿಮ್ಮ ಶತ್ರುಗಳ ಬಗ್ಗೆ ಜಾಗ್ರತೆ ಇರಲಿ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಧನು ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ, ಅನಗ್ಯತ ವಿಷಯಗಳ ಕಡೆಗೆ ಗಮನಹರಿಸುವುದನ್ನು ಬಿಡಿ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ, ಬರಬೇಕಾಗಿರುವ ಹಣ ಕೈ ಸೇರಲಿದೆ. ಹಣದ ಹೂಡಿಕೆಗೆ ಕೂಡ ಈ ದಿನ ತುಂಬಾ ಉತ್ತಮವಾಗಿರಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದಲೂ ನಿಮಗೆ ಪ್ರಯೋಜನಕಾರಿಯಾಗಿದೆ.
ಮಕರ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಕೆಲಸ ಕಾರ್ಯವು ಯೋಜನೆಯಂತೆಯೇ ಪೂರ್ಣವಾಗಲಿದೆ, ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಲು ಸಾಧ್ಯವಾ ಗಲಿದೆ. ಆರ್ಥಿಕವಾಗಿ ಅನುಕೂಲಕರವಾಗಿರುವುದರಿಂದ ಖರ್ಚುಗಳ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಇರಲ್ಲ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಕುಂಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಹೊಸ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ, ಕೆಲಸದ ಕಡೆಗೆ ಹೆಚ್ಚು ಗಮನಹರಿಸಬೇಕು, ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ. ಕೆಲಸದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
ಮೀನ ರಾಶಿ
ಕೆಲಸ ಕಾರ್ಯದಿಂದ ಈ ದಿನ ನಿಮಗೆ ಅನುಕೂಲಕರವಾಗಿದೆ, ಈ ದಿನ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಪ್ರೇಮಿಗಳಿಗೆ ಈ ದಿನ ವಿಶೇಷವಾಗಿರಲಿದೆ. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











