Latest Updates
-
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ
March 01 Horoscope: ಹಣಕಾಸು ವಿಚಾರದಲ್ಲಿ ತಿಂಗಳ ಮೊದಲ ದಿನವೇ ಆತಂಕ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 01 (March 01 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಬಹಳ ಅನುಕೂಲವಾಗಿರಲಿದೆ. ನಿಮ್ಮ ಪ್ರಯಾಣಗಳಿಂದ ಸಂತಸವಿದೆ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆಪ್ತರೊಬ್ಬರಿಂದ ನಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಅನೇಕರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಸಿಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಿಶ್ರಫಲವಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಮಾಡಿ ಮುಗಿಸುವತ್ತ ಗಮನವಿಡಿ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಯಾರಿಂದಾದರು ಕೆಲಸದ ವಿಚಾರವಾಗಿ ಸಹಾಯ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಸಮಸ್ಯೆಗಳಿವೆ. ನಿಮ್ಮ ಸಣ್ಣ ಪ್ರಯಾಣವೊಂದು ಖರ್ಚುಗಳಿಗೆ ಕಾರಣವಾಗಲಿದೆ. ವಾಹನ ಸಂಬಂಧಿತ ವಿಚಾರವಾಗಿ ಎಚ್ಚರಿಕೆಯಿಂದಿರಿ. ಮನೆಯ ಅಗತ್ಯ ಖರ್ಚುಗಳನ್ನು ನಿಭಾಯಿಸಿ. ಪ್ರೇಮಿಗಳಿಗೆ ಇಂದು ಶುಭ ಸೂಚಕ ದಿನ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲ ತರಲಿದೆ. ನೀವು ಮಾಡಬೇಕಿದ್ದ ಪ್ರಯಾಣ ಮುಂದೂಡುವಿರಿ. ಸಹೋದರರ ಅಥವಾ ಕಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಬಹು ದಿನದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಇಂದು ಪೂರ್ಣ ಮಾಡುವಿರಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಮಿಶ್ರಫಲ ತರುತ್ತಿದೆ. ಪ್ರಯಾಣದ ಕಾರಣದಿಂದ ನೀವು ಒತ್ತಡದಲ್ಲಿ ಸಮಯ ಕಳೆಯುವಿರಿ. ಖರ್ಚುಗಳ ಮೇಲೆ ನಿಗಾ ಇಡಿ. ಶ್ರಮದಾಯಕ ಕೆಲಸಗಳಲ್ಲಿಯೂ ನೀವು ಭಾಗಿಯಾಗಬಹುದು. ಕೃಷಿ ಸಂಬಂಧಿತ ವಿಚಾರವಾಗಿ ಶುಭವಿದೆ.
ಕನ್ಯಾ ರಾಶಿ
ಗೃಹಿಣಿಯರು ಇಂದು ಆಪ್ತರಿಂದ ನೋವಿನ ಮಾತು ಎದುರಿಸಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡ್ಡಿಗಳು ಎದುರಾಗುವ ಸಾಧ್ಯತೆ ಇದೆ. ಯಾರಿಂದಾದರು ಸಾಲ ಪಡೆಯುವ ನಿಮ್ಮ ಬಯಕೆಯು ಈಡೇರದೆ ಇರಬಹುದು. ವ್ಯವಹಾರದಲ್ಲಿ ಶುದ್ಧವಾಗಿರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಮಿಶ್ರಫಲವಿದೆ, ಕೆಲಸದ ಕಾರಣಕ್ಕೆ ನೀವು ಮಾಡುವ ಪ್ರಯಾಣವು ತಕ್ಕ ಪ್ರತಿಫಲ ಕೊಡುವುದಿಲ್ಲ. ಯಾರೊಂದಿಗಾದರು ಹಣದ ವ್ಯವಹಾರ ಮಾಡುತ್ತಿದ್ದರೆ ಹಳೆಯ ಲೆಕ್ಕಗಳನ್ನು ಬರೆದಿಡುವುದು ಉತ್ತಮ. ವ್ಯಾಪಾರಿಗಳಿಗೆ ಇಂದು ಕಠಿಣ ದಿನವಾಗುತ್ತಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಸಾಮಾನ್ಯವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಮಾಡಿ ಮುಗಿಸುವುದು ನಿಮ್ಮಲ್ಲಿ ನೆಮ್ಮದಿಗೆ ಕಾರಣಗಾಗಲಿದೆ. ಕುಟುಂಬಸ್ಥರೊಂದಿಗೆ ನೀವು ಪ್ರಯಾಣ ಮಾಡಬಹುದು. ಅಪಾಯಕಾರಿ ಕೆಲಸಗಳ ಮಾಡುವವರು ಎಚ್ಚರಿಕೆಯಿಂದ ಇರಬೇಕಿದೆ.
ಧನು ರಾಶಿ
ಧನು ರಾಶಿಯ ಜನರಿಗೆ ಈ ದಿನವು ಉತ್ತಮವಾಗಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ದಿನವಿದು. ನಿಮ್ಮ ಪ್ರಯಾಣಗಳಲ್ಲಿ ಸುಖವಿದೆ. ಯಾರಿಂದಾದರು ಹಣ ಪಡೆಯುವ ಬಯಕೆ ಈಡೇರಲಿದೆ. ಅನೇಕರಲ್ಲಿ ಈ ದಿನವು ದೇವಾಲಯ, ಪ್ರವಾಸ ಸ್ಥಳಗಳಲ್ಲಿ ಕಾಲ ಕಳೆಯುವ ದಿನವಾಗುತ್ತಿದೆ. ಪಂಚೇಂದ್ರಿಯ ಸಂಬಂಧಿ ಯಾವುದಾದರು ಸಮಸ್ಯೆ ಇದ್ದರೆ ಇಂದು ನಿವಾರಣೆಯಾಗಲಿದೆ.
ಮಕರ ರಾಶಿ
ಗೃಹಿಣಿಯರಲ್ಲಿ ಇಂದು ಖರ್ಚುಗಳಿಂದ ತುಂಬಿದ ದಿನ. ಯಾರಿಗಾದರು ನೀವು ಸಹಾಯ ಮಾಡುವ ಅವಕಾಶಗಳ ಪಡೆಯಬಹುದು. ಸಂಬಂಧಿಕರೊಂದಿಗೆ ಮನಸ್ತಾಪ ದೊಡ್ಡದಾಗಬಹುದು. ದಿನದ ಅಂತ್ಯದಲ್ಲಿ ಮನೆಗೆ ಹೊಸ ವಸ್ತುವೊಂದು ಬರಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಪ್ರಯಾಣದ ದಿನ, ದಿನದ ಸಂಜೆ ಪ್ರಯಾಣಕ್ಕೆ ಸಿದ್ದರಾಗುತ್ತೀರಿ. ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣ ಮಾಡುವ ದಿನವಾಗುತ್ತಿದೆ. ಯಾರಿಗಾದರು ಹಣ ನೀಡುವುದು ಬಾಕಿ ಇದ್ದರೆ ಇಂದು ಒತ್ತಡ ಎದುರಿಸುವಿರಿ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಉತ್ತಮ ದಿನ. ಈ ದಿನ ನೀವು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವಿರಿ. ಸಮಯದೊಳಗೆ ನೀವು ನಿಮ್ಮ ಕೆಲಸಗಳನ್ನು ಪೂರ್ಣ ಮಾಡುವಿರಿ. ಮಹಿಳೆಯರು ವಾಹನ ವಿಚಾರವಾಗಿ ಎಚ್ಚರಿಕೆಯಿಂದ ಇರಬೇಕಿದೆ.



Click it and Unblock the Notifications










