ವರ್ಷದ ಮೊದಲ ತಿಂಗಳಲ್ಲಿ ಹಲವು ಸಂಕ್ರಮಣ: ಈ 3 ರಾಶಿಯವರಿಗೆ ಆರ್ಥಿಕ ಬಲ ಹೆಚ್ಚಳ

ಹೊಸ ವರ್ಷವನ್ನು ಸ್ವಾಗತಿಸಲು ನಾವು ತುದಿಗಾಲಿನಲ್ಲಿ ನಿಂತಿದ್ದೇವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ 2025ಕ್ಕೆ ಬಹಳ ಮಹತ್ವ ನೀಡಲಾಗಿದೆ. ಏಕೆಂದರೆ ಹಲವು ಗ್ರಹಗಳು ಹಲವು ರಾಶಿಗಳಲ್ಲಿ ಚಲಿಸುವುದು ಹಲವು ರಾಶಿಯವರಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ. ಅದರಲ್ಲೂ ಪ್ರತಿಯೊಂದು ನವಗ್ರಹಗಳು ನಿರ್ದಿಷ್ಟ ಮಧ್ಯಂತರದಲ್ಲಿ ಚಿಹ್ನೆಯನ್ನು ಬದಲಾಯಿಸುತ್ತವೆ ಮತ್ತು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.

ಇನ್ನು 2025ಕ್ಕೆ ಪ್ರವೇಶಿಸುತ್ತಿರುವ ನಾವು ಜನವರಿಯಲ್ಲಿ ಹಲವು ರೀತಿಯ ಸ್ಥಾನಗಳಲ್ಲಿ ಬದಲಾವಣೆ ಆಗುತ್ತಿರುವುದನ್ನು ನೋಡಲಿದ್ದೇವೆ. ಬುಧ ಜನವರಿ 4ರಂದು ಧನು ರಾಶಿಗೆ ಚಲಿಸುತ್ತಿದೆ. ಜನವರಿ 14 ರಂದು, ಸೂರ್ಯನು ಮಕರ ರಾಶಿಗೆ ಮತ್ತು ಜನವರಿ 21 ರಂದು, ಮಂಗಳವು ಮಿಥುನ ರಾಶಿಗೆ ಚಲಿಸುತ್ತದೆ. ನಂತರ ಜನವರಿ 24 ರಂದು ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಸೂರ್ಯನೊಂದಿಗೆ ಒಂದಾಗುತ್ತಾನೆ ಮತ್ತು ಮತ್ತೆ ಬುಧತೀಯ ರಾಜಯೋಗವನ್ನು ರೂಪಿಸಲಿದೆ.

Many Planet Transits In January Will Bring Luck For These 3 Zodiac Signs

ಹೀಗೆ ಜನವರಿ ಸೇರಿ 2025ರಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆಗಳು ಎಲ್ಲರ ಜೀವನದಲ್ಲೂ ಬದಲಾವಣೆ ತರಲಿದೆ. ಆದ್ರೆ ಜನವರಿಯಲ್ಲಿ ಈ ರೀತಿಯ ಹಲವು ಬದಲಾವಣೆಯಿಂದ ಮೂರು ರಾಶಿಯವರಲ್ಲಿ ಹಲವು ಬದಲಾವಣೆ ನೋಡಬಹುದು. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಜನವರಿಯು ಲಾಭದಾಯಕವಾಗುತ್ತದೆ. ಯಾವ ಗ್ರಹಗತಿಗಳ ಬದಲಾವಣೆಯು ಅತ್ಯುತ್ತಮ ಆರಂಭಕ್ಕೆ ಕಾರಣವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಕರ ರಾಶಿ

2025ರ ಜನವರಿಯಲ್ಲಿ ಸಂಭವಿಸುವ ಗ್ರಹಗತಿಗಳ ಸಂಚಾರವು ಮಕರ ರಾಶಿಯವರಲ್ಲಿ ವೃತ್ತಿ ಹಾಗೂ ವ್ಯವಹಾರದಲ್ಲಿ ಅತ್ಯುತ್ತಮ ಪ್ರಗತಿಗೆ ಕಾರಣವಾಗುತ್ತಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಪ್ರಯಾಣಗಳು ಉತ್ತಮ ಆರ್ಥಿಕ ಲಾಭವನ್ನು ತರಲಿದೆ. ಹಣಕಾಸು ವಿಚಾರದಲ್ಲೂ ನಿಮಗೆ ಒಳಿತಾಗಲಿದೆ, ನೀವು ಅಂದುಕೊಂಡ ಕೆಲಸವನ್ನು ಯಾವ ಅಡೆಯಡೆ ಇಲ್ಲದೆ ಮುಗಿಸುವ ಅವಕಾಶವಿದೆ. ಬಹುದಿನಗಳ ನಿಮ್ಮ ಬಯಕೆ ಅಥವಾ ಆಸೆ ಈ ಜನವರಿಯಲ್ಲಿ ಸಾಕಾರಗೊಳ್ಳುವ ಅಥವಾ ಆ ಗುರಿ ಸನಿಹವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದಿಂದ ಸಂಪೂರ್ಣ ಬೆಂಬಲ ಪಡೆಯಿರಿ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ಮೇಷ ರಾಶಿ

ಜನವರಿ 2025 ರ ಗ್ರಹಗಳ ಸಂಚಾರವು ಮೇಷ ರಾಶಿಯ ಜನರಲ್ಲಿ ಲಾಭದಾಯಕವಾಗಿ ಪರಿಣಮಿಸುತ್ತಿದೆ. ಹೊಸ ಆದಾಯಗಳು ನಿಮಗೆ ಹುಡುಕಿಬರಲಿದೆ. ಉದ್ಯಮಿಗಳಿಂದ ಹಿಡಿದು ಸಣ್ಣ ವ್ಯಾಪಾರಿಗಳು, ಗ್ರಹಿಣಿಯರಿಗೆ ಈ ಜನವರಿಯು ಲಾಭದಾಯಕವಾಗುತ್ತಿದೆ. ನೀವು ಮಾಡಿದ್ದ ಹೂಡಿಕೆಯಿಂದ ಲಾಭಗಳಿಸುತ್ತೀರಿ, ನಿಮ್ಮ ಉಳಿತಾಯ ಹೆಚ್ಚಾಗುತ್ತಿದೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ಬಹುಕಾಲದಿಂದ ನೀವು ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಪೂರ್ಣವಾಗಲಿದೆ. ಹಲವು ವರ್ಷಗಳಿಂದ ನೀವು ಮಾಡಲು ಬಯಸಿದ್ದ ಕೆಲಸಗಳ ಆರಂಭಿಸಲು ಇದು ಶುಭ ಕಾಲ.

ತುಲಾ ರಾಶಿ

ಜನವರಿಯಲ್ಲಿ ಗ್ರಹಗಳ ಸಂಚಾರದಿಂದಾಗಿ ತುಲಾ ರಾಶಿಯವರು ಅದೃಷ್ಟವಂತರಾಗಲಿದ್ದಾರೆ. ನಿಮ್ಮ ಆರ್ಥಿಕ ಬೆಂಬಲ ಹೆಚ್ಚಾಗಲಿದೆ. ಅವಿವಾಹಿತರಲ್ಲಿ ವಿವಾಹ ಭಾಗ್ಯದ ಅನುಕೂಲವಿದೆ. ನಿಮ್ಮ ಜಾತಕದ ದೋಷ ನಿವಾರಣೆಗೂ ಇದು ಶುಭ ಗಳಿಗೆ ಯಾಗಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಅದೃಷ್ಟದ ಕೃಪೆಯಿಂದ ನೀವು ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಬಾಕಿ ಉಳಿದಿರುವ ಕೆಲಸಗಳು ಪುನರಾರಂಭಗೊಳ್ಳುತ್ತವೆ ಮತ್ತು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕುಟುಂಬಸ್ಥರ ನೆರವಿನಿಂದಾಗಿ ನಿಮ್ಮ ಕನಸು ನನಸಾಗುವ ಸಂಭವವಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Many Planet Transits In January Will Bring Luck For These 3 Zodiac Signs

Starting in January, 2025, many types of planetary changes will bring changes in everyone's lives. However, due to many such changes in January, many changes can be seen in the three zodiac signs.
Story first published: Monday, December 30, 2024, 21:05 [IST]
X
Desktop Bottom Promotion