Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕರ್ಕ ರಾಶಿಗೆ ಮಂಗಳ ಸಂಚಾರ: 6 ರಾಶಿಗಳ ಮೇಲೆ ಬೀರಲಿದೆ ನಕರಾತ್ಮಕ ಪ್ರಭಾವ
ಮಂಗಳನನ್ನು ಜ್ಯೋತಿಷ್ಯದಲ್ಲಿ ಕ್ಷುದ್ರಗ್ರಹವೆಂದು ಪರಿಗಣಿಸಲಾಗುದೆ. ಮಂಗಳನು ಅನುಕೂಲಕರ ಸ್ಥಾನದಲ್ಲಿದ್ದರೆ ಅದು ತುಂಬಾ ಒಳ್ಳೆಯ ಪರಿಣಾಮ ಬೀರುತ್ತದೆ, ನಮ್ಮೆಲ್ಲಾ ಕಾರ್ಯಗಳುಮಂಗಳಕರವಾಗಿ ಪೂರ್ಣಗೊಳ್ಳಲಿದೆ, ಅದೇ ಅದರ ಸ್ಥಾನ ನಮ್ಮ ರಾಶಿಯಲ್ಲಿ ಸರಿಯಾಗಿರದಿದ್ದರೆ ಹಲವು ಸವಾಲುಗಳು ಎದುರಾಗಬಹುದು. ಈ ಅಕ್ಟೋಬರ್ 20ಕ್ಕೆ ಮಂಗಳನು ಕರ್ಕ ರಾಶಿಗೆ ಸಂಚರಿಸಲಿದೆ. ಈ ಸಂಚಾರ 6 ರಾಶಿಗಳಿಗೆ ಅನುಕೂಲಕರವಲ್ಲ , ಈ ರಾಶಿಯವರು ಜಾಗ್ರತೆವಹಿಸಬೇಕು:

ಮೇಷ ರಾಶಿ
ಮಂಗಳ ಸಂಚಾರ ಮೇಷ ರಾಶಿಯವರಿಗೆ ಅನುಕೂಲಕರವಲ್ಲ. ಈ ಅವಧಿಯಲ್ಲಿ ನಿಮಗೆ ಅನೇಕ ಸವಾಲುಗಳು ಬರಬಹುದು. ಮಂಗಳ ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಇರುವುದರಿಂದ ಹಲವು ಸವಾಲುಗಳು ಎದುರಾಗಬಹುದು, ಈ ಅವಧಿಯಲ್ಲಿ ಒಳ ರಾಜಕೀಯದ ಬಗ್ಗೆ ಜಾಗ್ರತೆವಹಿಸಬೇಕು, ಕೆಲವರು ನಿಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಬಹುದು, ಈ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು.
ಆರ್ಥಿಕವಾಗಿ ನೋಡುವುದಾದರೆ ಯಾವುದೇ ದೊಡ್ಡ ಸಮಸ್ಯೆವಿರಲ್ಲ, ಆದರೆ ವ್ಯಾಪಾರಿಗಳು ಹೂಡಿಕೆ ಬಗ್ಗೆ ಆಲೋಚಿಸಲು ಹೋಗಬೇಡಿ, ಮಿತಿ ಮೀರಿದ ಖರ್ಚು ಸಮಸ್ಯೆ ಹೆಚ್ಚಿಸಬಹುದು. ಇನ್ನು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕೂಡ ನೀವು ಹೆಚ್ಚಿನ ಗಮನಹರಿಸಬೇಕು.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಮಂಗಳ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ತಾಳ್ಮೆಯಿಂದಿರಬೇಕು. ಆರ್ಥಿಕವಾಗಿ ಉತ್ತಮವಾಗಿರಲಿದೆ, ಆದರೆ ಯಾವುದೇ ದೊಡ್ಡ ಆರ್ಥಿಕ ವ್ಯವಹಾರ ಮಾಡದಿದ್ದರೆ ಒಳ್ಳೆಯದು. ಕೆಲಸದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಇನ್ನು ಈ ಸಮಯದಲ್ಲಿ ಖರ್ಚು ಕೂಡ ಹೆಚ್ಚು ಬರಲಿದೆ, ಹಣ ಹೊಂದಿಸುವುದೇ ದೊಡ್ಡ ಸವಾಲಾಗಬಹುದು.
ಏನಾದರೂ ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಮನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಅದನ್ನು ಹೆಚ್ಚು ಮಾಡಲು ಬಿಡಬೇಡಿ, ಅಲ್ಲದೆ ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಮಂಗಳ ಎರಡನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು, ನಿಮ್ಮ ಹಾಗೂ ಸಂಗಾತಿ ನಡುವೆ ಅಂತರ ಹೆಚ್ಚಾಗಬಹುದು, ನಿಮ್ಮ ಮಾರುಗಳಿಂದ ಯಾರನ್ನೂ ನೋಯಿಸದಂತೆ ಜಾಗ್ರತೆವಹಿಸಿ. ಇನ್ನು ಹಣಕಾಸಿನ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು, ಮಿತಿ ಮೀರಿ ಸಾಲ ಮಾಡಲು ಹೋಗಬೇಡಿ, ಹಣವನ್ನು ನೋಡಿ ಖರ್ಚು ಮಾಡದಿದ್ದರೆ ಆರ್ಥಿಕ ಸಮಸ್ಯೆ ಹೆಚ್ಚಾಗಬಹುದು.
ವೃತ್ತಿ ಬದುಕಿನಲ್ಲಿಯೇ ಅಸಮಧಾನ ಹೆಚ್ಚಾಗಬಹುದು, ಕೆಲಸ ಬದಲಾಯಿಸಲು ಆಲೋಚಿಸಬಹುದು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ, ಚಿಕ್ಕ ಸಮಸ್ಯೆವಿದ್ದರೂ ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ಕರ್ಕ ರಾಶಿ
ಮಂಗಳ ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸಿದಾಗ ಕರ್ಕ ರಾಶಿಯಲ್ಲಿಯೇ ಇರಲಿದೆ. ಮಂಗಳನ ಈ ಸ್ಥಾನ ನಿಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚಿಸಲಿದೆ, ಇದರಿಂದ ಆರೋಗ್ಯದ ಮೇಲೂ ಕೂಡ ಕೆಟ್ಟ ಪರಿಣಾಮ ಬೀರಬಹುದು, ನೀವು ಆರೋಗ್ಯದ ಕಡೆಗೆ ಗಮಹರಿಸಿ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಕೋಪದ ಪ್ರವೃತ್ತಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು.
ಕುಟುಂಬ ಜೀವನದ ಕಡೆಗೆ ಗಮನಹರಿಸಿ, ಇಲ್ಲದಿದ್ದರೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು, ಆರೋಗ್ಯ ವಿಷಯದಲ್ಲಿಯೂ ನಿರ್ಲಕ್ಷ್ಯ ಸಲ್ಲದು.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಮಂಗಳ 12ನೇ ಮನೆಯಲ್ಲಿ ಇರಲಿದೆ, ಈ ಸಮಯದಲ್ಲಿ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು, ವೃತ್ತಿ ಜೀವನದಲ್ಲಿ ಸವಾಲುಗಳನ್ನು ತರಬಹುದು. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಹಣ ಹೆಚ್ಚ ಖರ್ಚಾಗಬಹುದು, ವೃತ್ತಿ ಜೀವನದಲ್ಲಿ ನೀವು ನಿರೀಕ್ಷೆ ಮಾಡಿದಂತೆ ಫಲ ಸಿಗಲ್ಲ ಈ ಕಾರಣದಿಂದಾಗಿ ನಿರಾಸೆ ಉಂಟಾಗಬಹುದು, ಸಂಯಮದಿಂದ ಪರಿಸ್ಥಿತಿ ನಿಭಾಯಿಸಿ. ಆದಷ್ಟೂ ಅನಗ್ಯತ ವಾದದಿಂದ ದೂರವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಮಂಗಳ 11ನೇ ಮನೆಯಲ್ಲಿ ಇರಲಿದೆ, ಈ ಸಂಚಾರ ನಿಮಗೆ ಹೆಚ್ಚು ಅನುಕೂಲಕರವಲ್ಲ, ಈ ಅವಧಿಯಲ್ಲಿ ಹೆಚ್ಚು ಖರ್ಚುಗಳು ಬರಬಹುದು, ಮಾನಸಿಕ ಒತ್ತಡ ಹೆಚ್ಚಿರಬಹುದು, ವೃತ್ತಿ ಬದುಕಿನಲ್ಲಿನ ಸವಾಲಿನಿಂದ ಆತ್ಮವಿಶ್ವಾಸ ಕಡಿಮೆಯಾಗಬಹುದು. ಹಣಕಾಸಿನ ದೃಷ್ಟಿಯಿಂದ ಉತ್ತಮವಲ್ಲ. ಈ ಅವಧಿಯಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











