Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
ಏಪ್ರಿಲ್ 23ಕ್ಕೆ ಮಂಗಳ ತನ್ನ ರಾಶಿ ಬದಲಾವಣೆ ಮಾಡಿದೆ. ಕುಂಭ ರಾಶಿಯನ್ನು ಬಿಟ್ಟು ಮಂಗಳವು ಮೀನ ರಾಶಿಗೆ ಸಂಚರಿಸಿದೆ, ಇನ್ನೂ ಒಂದೂವರೆ ತಿಂಗಳು ಮೀನ ರಾಶಿಯಲ್ಲಿ ಇರಲಿದೆ. ಜೂನ್ 1ಕ್ಕೆ ಮಂಗಳ ಮೀನ ರಾಶಿ ಬಿಟ್ಟು ಮೇಷ ರಾಶಿಗೆ ಸಂಚರಿಸಲಿದೆ. ಇನ್ನು 38 ದಿನಗಳವರೆಗೆ ಮಂಗಳ ಗ್ರಹವು ಮೀನ ರಾಶಿಯಲ್ಲಿ ಇರಲಿದೆ.
ಮಂಗಳವು ಕ್ಷುದ್ರಗ್ರಹ, ಇದು ರಾಶಿಯಲ್ಲಿಅದು ಯಾವ ಮನೆಯಲ್ಲಿ ಇದೆಯೋ ಅದರಂತೆ ಪ್ರಭಾವ ಬೀರಲಿದೆ. ಮಂಗಳದ ಈ ಸಂಚಾರ 12 ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮಂಗಳ ಮೇಷ ರಾಶಿಯ 12ನೇ ಮನೆಯಲ್ಲಿ ಇರಲಿದೆ. ಈ ಮಂಗಳ ಸಂಚಾರ ನಿಮ್ಮ ಖರ್ಚು ಹೆಚ್ಚಿಸಲಿದೆ, ಓಡಾಟ ಹೆಚ್ಚರಲಿದೆ, ಅಲ್ಲದೆ ಹಲವು ಖರ್ಚುಗಳು ಬರುವುದರಿಂದ ಹಣ ಹೆಚ್ಚು ಬೇಕಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನೀವು ತುಂಬಾನೇ ಜಾಗ್ರತೆವಹಿಸಿ. ಅನಗ್ಯತ ವಿವಾದಗಳಿಂದ ದೂರವಿರುವುದು ಒಳ್ಳೆಯದು. ಗಾಡಿಯನ್ನು ಲಚಲಾಯಿಸುವಾಗ ಜಾಗ್ರತೆವಹಿಸಿ. ಇನ್ನು ಈ ಸಮಯದಲ್ಲಿ ಯಾರಿಗೂ ಸಾಲ ನೀಡಬೇಡಿ, ಒಂದು ವೇಳೆ ಕೊಟ್ಟರೆ ಅದು ಮರಳಿ ಸಿಗುವುದು ಕಷ್ಟವಾಗುವುದು, ಅಲ್ಲದೆ ಈ ಈ ಅವಧಿಯಲ್ಲಿ ಯಾವುದೇ ಸಾಲ ಮಾಡಲು ಹೋಗಬೇಡಿ, ವ್ಯಾಪಾರಸ್ಥರು ನಿಮ್ಮ ವ್ಯಾಪಾರ ಯೋಜನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಡಿ.
ವೃಷಭ ರಾಶಿ
ವೃಷಭ ರಾಶಿಯಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ಸ್ಥಾನ ನಿಮಗೆ ಅದೃಷ್ಟಕರ, ಈ ಅವಧಿಯಲ್ಲಿ ನೀವು ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದು. ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ, ಸಂಬಳ ಹೆಚ್ಚಾಗಲಿದೆ. ಆದರೆ ಮಂಗಳನ ಪ್ರಭಾವ ಕುಟುಂಬದ ಮೇಲೆ ಅಷ್ಟೊಂದು ಪರಿಣಾಮಕಾರಿಯಾಗಿ ಇಲ್ಲ. ನಿಮ್ಮ ಹಾಗೂ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರುವುದು, ಪ್ರೀತಿ ಕಡಿಮೆಯಾಗಿದೆ ಎಂಬ ಭಾವನೆ ಮೂಡುವುದು, ನೀವು ಈ ಸಮಯದಲ್ಲಿ ನಿಮ್ಮ ಕೋಪ ನಿಯಂತ್ರಿಸಬೇಕು.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಮಂಗಳ 10ನೇ ಮನೆಯಲ್ಲಿ ಇರಲಿದೆ. 10ನೇ ಮನೆ ಕರ್ಮದ ಮನೆಯಾಗಿದ್ದು ನಿಮಗೆ ಯಶಸ್ಸು ನೀಡುತ್ತಾನೆ. ಇನ್ನು ಪೂರ್ವಜರ ಆಸ್ತಿ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಇನ್ನು ನಿಮ್ಮ ಆಸ್ತಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರೆ ಲಾಭದಲ್ಲಿ ಮಾರಾಟ ಮಾಡಬಹುದು. ಈ ಗ್ರಹ ಸಂಚಾರ ನಿಮಗೆ ಅನುಕೂಲಕರವಾಗಿದೆ, ಆರ್ಥಿಕವಾಗಿ ಒಳ್ಳೆಯದಿದೆ. ಈ ಸಮಯದಲ್ಲಿ ಹೆತ್ತವರ ಆರೋಗ್ಯದ ಕಡೆಗೆ ಗಮನಹರಿಸಿ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ 9ನೇ ಮನೆಯಲ್ಲಿ ಮಂಗಳವಿದೆ. ಈ ಮಂಗಳ ಸಂಚಾರ ನಿಮಗೆ ಅನುಕೂಲಕರವಾಗಿರಲಿದೆ. ನೀವು ಎಂಥದ್ದೇ ಪರಿಸ್ಥಿತಿಯಾದರೂ ಸುಲಭದಲ್ಲಿ ನಿಭಾಯಿಸಲು ಸಾಧ್ಯವಾಗುವುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದು. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಿಸಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಮಂಗಳ 8ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಇರುವುದು ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ಅನಿರೀಕ್ಷಿತ ಏರಳಿತ ಇರಲಿದೆ. ಕೆಲಸದಲ್ಲಿ ನೀವು ಎಚ್ಚರವಾಗಿರಬೇಕು, ಆವಾಗ ಮಾತ್ರ ನೀವು ಯಶಸ್ಸು ಗಳಿಸಲು ಸಾಧ್ಯವಾಗುವುದು. ಕೆಲಸದಲ್ಲಿ ಬೇರೆಯವರ ಪಿತೂರಿಗೆ ಬಲಿಯಾದಂತೆ ಜಾಗ್ರತೆವಹಿಸಿ. ಈ ಅವಧಿಯಲ್ಲಿ ಹೂಡಿಕೆ, ಆಸ್ತಿ ಮಾರಾಟ ಇವುಗಳನ್ನು ಮಾಡದಿದ್ದರೆ ಒಳ್ಳೆಯದು.
ಕನ್ಯಾರಾಶಿ
ಮಂಗಳವು ಕನ್ಯಾ ರಾಶಿಯಲ್ಲಿ 7ನೇ ಮನೆಯಲ್ಲಿ ಇದೆ. ಏಳನೇ ಮನೆ ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ, ನಿಮ್ಮಿಬ್ಬರ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮಿಬ್ಬರ ನಡುವೆ ಅಹಂ ಹೆಚ್ಚಾಗುವುದು ವಿದೇಶಕ್ಕೆ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿರಲಿದೆ. ಕುಟುಂಬ ಜೀವನದ ಕಡೆಗೆ ಸ್ವಲ್ಪ ಗಮನಹರಿಸಬೇಕು.
ತುಲಾ ರಾಶಿ
ತುಲಾ ರಾಶಿಯವರಲ್ಲಿ 6ನೇ ಮನೆಯಲ್ಲಿ ಮಂಗಳ ಇರಲಿದೆ. ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ತಲೆದೂರುವುದು, ಕೆಲಸದ ಒತ್ತಡ ಕೂಡ ಅಧಿಕರವಿರಲಿದೆ. ರಾಜಕಾರಣಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ನ್ಯಾಯಾಲಯದಲ್ಲಿ ಏನಾದರು ಪ್ರಕರಣ ಇದ್ದರೆ ತೀರ್ಪು ನಿಮ್ಮ ಬರಲಿದೆ. ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಮಂಗಳ 5ನೇ ಮನೆಯಲ್ಲಿ ಇದೆ. ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಗೆ ಈ ಸಮಯ ಒಳ್ಳೆಯದಿದೆ. ಪ್ರೇಮಿಗಳಿಗೆ ಈ ಸಮಯ ಅನುಕೂಲಕರವಲ್ಲ. ದಂಪತಿ ಮಗುವಿನ ಅಪೇಕ್ಷೆಯಲ್ಲಿದ್ದರೆ ಈ ಅವಧಿಯಲ್ಲಿ ಶುಭ ಸುದ್ದಿ ಪಡೆಯುತ್ತೀರಿ.
ಧನು ರಾಶಿ
ಮಂಗಳ ನಿಮ್ಮ 4ನೇ ಮನೆಯಲ್ಲಿದೆ. ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ಆಸ್ತಿ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಈ ಅವಧಿ ವಾಹನ ಖರೀದಿಗೂ ತುಂಬಾನೇ ಅನುಕೂಲಕರವಾಗಿದೆ. ಕುಟುಂಬದಲ್ಲಿ ಶುಭ ಕಾರ್ಯದ ಸೂಚನೆಯಿದೆ.
ಮಕರ ರಾಶಿ
ಮಕರ ರಾಶಿಯವರಲ್ಲಿ ಮಂಗಳ 3ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ನಿಮ್ಮ ಅಹಂನಿಂದ ಸಮಸ್ಯೆ ಹೆಚ್ಚಾಗಲು ಬಿಡಬೇಡಿ. ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಮಂಗಳ 2ನೇ ಮನೆಯಲ್ಲಿ ಇರಲಿದೆ, 2ನೇ ಮನೆಯಲ್ಲಿ ಇರುವ ಮಂಗಳ ಧನಾತ್ಮಕ ಫಲಿತಾಂಶ ನೀಡುತ್ತಾನೆ. ಈ ಅವಧಿ ನಿಮಗೆ ತುಂಬಾ ಮುಖ್ಯವಾಗಿದೆ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆದರೆ ಈ ಅವಧಿಯಲ್ಲಿ ಅನಗ್ಯತ ವಿಚಾರಗಳ ಕಡೆ ಗಮನ ನೀಡಬೇಡಿ, ಆರೋಗ್ಯದ ಕಡೆಗೆ ಗಮನಹರಿಸಬೇಕು.
ಮೀನ ರಾಶಿ
ಏಪ್ರಿಲ್ 23ಕ್ಕೆ ಮೀನ ರಾಶಿಯ ಲಗ್ನ ಮನೆಗೆ ಮಂಗಳ ಬಂದಿದೆ. ಇದರಿಂದ ನಿಮಗೆ ತುಂಬಾ ಒಳ್ಳೆಯದು. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











