ಕುಂಭ ರಾಶಿಯಲ್ಲಿ ಅಂಗಾರಕ ಯೋಗ! ಈ ರಾಶಿಯವರಿಗೆಲ್ಲಾ ರಾಜಯೋಗ.. ಯಾರಿಗೆ ಧನಲಾಭ? ಯಾರಿಗೆ ಸಂಕಷ್ಟ?

ಕುಂಭ ರಾಶಿಯಲ್ಲಿ ಅಂಗಾರಕ ಯೋಗ! ಅಪರೂಪದ ಮಂಗಳ ಗೋಚಾರದಿಂದ ಯಾವ ರಾಶಿಯವರಿಗೆ ರಾಜಯೋಗ.. ಯಾರಿಗೆ ಧನಲಾಭ? ಯಾರು ಎಚ್ಚರವಾಗಿರಬೇಕು? ಹೌದು, 2026ರಲ್ಲಿ ಮಂಗಳ ಗ್ರಹವು ಕುಂಭ ರಾಶಿಗೆ ಸಂಚರಿಸಲಿದೆ. ಈ ಮಂಗಳ ಸಂಚಾರದಿಂದ (Mars Transit In Aquarius 2026) ಕೆಲವು ರಾಶಿಗಳಿಗೆ ಧನಲಾಭ ಒದಗಲಿದ್ದರೆ, ಇನ್ನು ಕೆಲವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ತಾಂತ್ರಿಕ, ರಾಜಕೀಯ, ಆಡಳಿತ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವ ಸಾಧ್ಯತೆಯಿದ್ದರೂ, ಕೆಲವರಿಗೆ ಸಮಸ್ಯೆಗಳು ಕಾಡಬಹುದು. ಸೇನಾಧಿಪತಿ ಮಂಗಳ ಗ್ರಹವು 2026ರ ಫೆಬ್ರವರಿ 23ರಂದು ಬೆಳಗ್ಗೆ 11:33ಕ್ಕೆ ಕುಂಭ ರಾಶಿ (Mangal Gochar 2026) ಪ್ರವೇಶಿಸಲಿದೆ. ನ್ಯಾಯದ ಅಧಿಪತಿ ಶನಿ ಗ್ರಹದ ಮನೆಯಲ್ಲಿ ಅಗ್ನಿ ತತ್ವದ ಮಂಗಳನ ಇರುವಿಕೆಯು ಜಾಗತಿಕ ಕಾರ್ಯವಿಧಾನಗಳ ಮೇಲೆ ಪ್ರಭಾವ ಬೀರಲಿದೆ.

Mars Transit in Aquarius 2026 impact
Photo Credit: ಸಂಗ್ರಹ ಚಿತ್ರ: ಇಂಟರ್ನೆಟ್

ಕುಂಭದಲ್ಲಿ ರಾಹು ಈಗಾಗಲೇ ಇರುವುದರಿಂದ, ಅಂಗಾರಕ ಯೋಗ ( Angarak Yog 2026) ರೂಪುಗೊಳ್ಳುತ್ತದೆ. ಈ ಅವಧಿಯು ಕೆಲವರಿಗೆ ಒತ್ತಡ, ಕೋಪ, ವಿವಾದ ಹಾಗೂ ಆತುರದ ನಿರ್ಧಾರಗಳನ್ನು ತರಬಹುದು. ಆದರೆ, ಕೆಲವರಿಗೆ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ವ್ಯಾಪಾರದಲ್ಲಿ ಧನಲಾಭ ತರುತ್ತದೆ. ನಿಮ್ಮ ರಾಶಿಯ ಮೇಲಿನ ಪ್ರಭಾವವನ್ನು ಇಲ್ಲಿ ತಿಳಿಯೋಣ.

ಮೇಷ ರಾಶಿ

ನಿಮ್ಮ ಒತ್ತಡ ಹೆಚ್ಚಾಗಬಹುದು, ಆದರೆ ಆದಾಯ ವೃದ್ಧಿಯ ಯೋಗವಿದೆ. ಹೊಸ ವ್ಯಾಪಾರ/ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ, ಮಿತ್ರರಿಂದ ಸಹಕಾರ ಸಿಗುತ್ತದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.

ವೃಷಭ ರಾಶಿ

ವೃತ್ತಿಜೀವನದಲ್ಲಿ ಏರಿಳಿತಗಳು ಸಾಧ್ಯ. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಭೂಮಿ / ಆಸ್ತಿ ವಿಷಯಗಳಲ್ಲಿ ಎಚ್ಚರಿಕೆ ಇರಲಿ. ಹಳೆಯ ಸಂಗತಿಗಳಿಂದ ಮಾನಸಿಕ ಸಂಕಟ ಎದುರಾಗಬಹುದು.

ಮಿಥುನ ರಾಶಿ

ಅದೃಷ್ಟದ ಬೆಂಬಲ ದೊರೆಯಲಿದೆ. ಮಂಗಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಲಭಿಸುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಇದು ಶುಭ ಸಮಯ.

ಕರ್ಕಾಟಕ ರಾಶಿ

ಆರ್ಥಿಕ ವಿಷಯಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ಆಕಸ್ಮಿಕ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಈ ಸಮಯ ಏರಿಳಿತಗಳಿಂದ ಕೂಡಿರಬಹುದು. ಆರೋಗ್ಯದತ್ತ ಗಮನ ನೀಡಿ, ವಿವಾದಗಳಿಂದ ದೂರವಿರಿ.

ಸಿಂಹ ರಾಶಿ

ದಾಂಪತ್ಯ ಜೀವನದಲ್ಲಿ ಸ್ವಲ್ಪ ಒತ್ತಡ ಕಾಣಿಸಬಹುದು. ಸಂಗಾತಿಯೊಂದಿಗೆ ವಾಗ್ವಾದಗಳನ್ನು ತಪ್ಪಿಸಿ. ವ್ಯಾಪಾರದಲ್ಲಿ ಪಾಲುದಾರಿಕೆಯನ್ನು ಚಿಂತಿಸಿ ತೆಗೆದುಕೊಳ್ಳಿ. ಅಪಾಯಕಾರಿ ಆರ್ಥಿಕ ಹೂಡಿಕೆಗಳಿಂದ ದೂರವಿರಿ.

ಕನ್ಯಾ ರಾಶಿ

ಕೆಲಸದ ಸ್ಥಳದಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಶತ್ರುಗಳ ಮೇಲೆ ವಿಜಯ ಸಾಧಿಸುವ ಸಾಧ್ಯತೆ ಇದೆ. ಕೆಲಸಗಳನ್ನು ಮುಂದೂಡುವ ಪ್ರವೃತ್ತಿ ನಿಮ್ಮಲ್ಲಿ ಹೆಚ್ಚಾಗಬಹುದು. ಈ ಅವಧಿಯಲ್ಲಿ ಶುಭ ಸಮಾಚಾರಗಳು ಲಭಿಸುತ್ತವೆ.

ತುಲಾ ರಾಶಿ

ಪ್ರೇಮ ಸಂಬಂಧಗಳಲ್ಲಿ ಏರಿಳಿತಗಳು ಕಂಡುಬರಬಹುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಬಹುದು. ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಮನೆಯಲ್ಲಿ / ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಹೊಸ ಯೋಜನೆಗಳು/ಜವಾಬ್ದಾರಿಗಳು ಸಿಗಬಹುದು.

ಧನು ರಾಶಿ

ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಿರಿಯ ಸಹೋದರ-ಸಹೋದರಿಯರಿಂದ ಸಹಕಾರ ಲಭಿಸುತ್ತದೆ. ಪ್ರಯಾಣ/ದಾಖಲೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಚ್ಚರಿಕೆ ವಹಿಸಿ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಮಕರ ರಾಶಿ

ವ್ಯಾಪಾರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಿರಿ. ಆರ್ಥಿಕ ಸ್ಥಿತಿ ಬಲಗೊಳ್ಳುವ ಸಾಧ್ಯತೆ ಇದ್ದು, ಖರ್ಚುಗಳು ಹೆಚ್ಚಾಗುತ್ತವೆ. ಮಾತಿನ ಮೇಲೆ ಸಂಯಮ ಸಾಧಿಸಿ, ಇಲ್ಲದಿದ್ದರೆ ವಿವಾದಗಳಾಗಬಹುದು.

ಕುಂಭ ರಾಶಿ

ಹೊಸ ಅವಕಾಶಗಳು ಲಭಿಸಲಿವೆ. ಆದರೆ, ಕೋಪದ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ನಿಮ್ಮ ಯೋಜನೆಗಳನ್ನು ಪೂರ್ಣಗೊಳ್ಳುವ ಮೊದಲು ಯಾರೊಂದಿಗೂ ಬಹಿರಂಗಪಡಿಸಬೇಡಿ. ಕಲಾ ಕ್ಷೇತ್ರದಲ್ಲಿ ಮುನ್ನಡೆಯಲು ಅವಕಾಶಗಳಿವೆ.

ಮೀನ ರಾಶಿ

ಅನಗತ್ಯ ಒತ್ತಡ ಮತ್ತು ಖರ್ಚುಗಳು ಹೆಚ್ಚಾಗಬಹುದು. ವಿವಾಹಿತರಿಗೆ ಅತ್ತೆ-ಮಾವನ ಕಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗುವ ಸಾಧ್ಯತೆ ಇದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mangal Gochar 2026: Mars Transit in Aquarius 2026 impact on 12 zodiac sign in Kannada

Mangal Gochar 2026: Mars Transit in Aquarius 2026 impact on 12 zodiac sign in Kannada
Story first published: Sunday, February 22, 2026, 15:55 [IST]
X
Desktop Bottom Promotion