Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ತುಲಾ ರಾಶಿಯಲ್ಲಿ ಮಂಗಳ ಗೋಚರ: ಹಲವು ರಾಶಿಗಳಿಗೆ ಸಂಕಷ್ಟ ಕಾಲ, ಏಕೆ ಗೊತ್ತಾ?
ಗ್ರಹಗಳ ಚಲನೆಯನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ಹಾಗೂ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಹಾಗೆ ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ನಾವೀಗ ಮಂಗಳ ಗ್ರಹದ ಚಲನೆಯಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುತ್ತಿರುವುದನ್ನು ನೋಡುತ್ತಿದ್ದೇವೆ.
ಅದ್ರಲ್ಲೂ ಇದೇ ಸೆಪ್ಟೆಂಬರ್ 13ರಂದು ಅಂದರೆ ನಾಳೆ ದಿನ ಮಂಗಳನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಚಲಿಸಲಿದ್ದಾನೆ. ಅಕ್ಟೋಬರ್ 26ರ ವರೆಗೂ ಮಂಗಳ ತುಲಾ ರಾಶಿಯಲ್ಲಿರುತ್ತಾನೆ. ಮಂಗಳನನ್ನು ಧೈರ್ಯ, ಸಂಪತ್ತು, ವೃತ್ತಿ, ಶೌರ್ಯದ ಸಂಕೇತ ಎಂದು ಪರಿಗಣಿಸಲಾಗಿದೆ. ಹಾಗೆ ಯಾರಿಗೆ ಮಂಗಳನ ಆಶೀರ್ವಾದ ಇರಲಿದ್ಯೋ ಅವರು ಜೀವನದಲ್ಲಿ ಯಶಸ್ಸು ಗಳಿಸಲು ಸೂಕ್ತ ದಾರಿಗಳು ಸಿಗುತ್ತವೆ.

ಮಂಗಳ ಗ್ರಹವು ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿ. ಮಂಗಳನ ಪರಿಣಾಮವು ಆತ ಮಕರ ರಾಶಿಯಲ್ಲಿದ್ದಾಗ ಸಂಭವಿಸಲಿದೆ, ಹಾಗೆ ಕರ್ಕ ರಾಶಿಯಲ್ಲಿ ಆತನ ಪ್ರಭಾವವು ದುರ್ಬಲವಾಗುತ್ತದೆ. ಸದ್ಯ ಮಂಗಳನು ತುಲಾ ರಾಶಿಗೆ ಚಲಿಸುವುದು ಅಲ್ಲಿ ಶುಕ್ರನ ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ. ತುಲಾ ರಾಶಿಗೆ ಶುಕ್ರನು ಅಧಿಪತಿಯಾಗಿದ್ದಾನೆ.
ಹಾಗಾದ್ರೆ ಮಂಗಳನ ಈ ಚಲನೆಯು ಯಾವ ರಾಶಿಯವರಿಗೆ ಅಶುಭ ತರಬಹುದು? ಏಕೆಂದರೆ ಶುಕ್ರ ಹಾಗೂ ಮಂಗಳ ಎರಡೂ ಕೂಡ ಸೇನಾಧಿಪತಿ ಗ್ರಹಗಳು ಎಂದು ಕರೆಯಲಾಗಿದೆ. ಹೀಗಾಗಿ ಇಬ್ಬರ ಪ್ರಭಾವ ಹಲವು ರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಹಾಗಾದ್ರೆ ಮಂಗಳನ ಪ್ರಭಾವಕ್ಕೆ ಒಳಗಾಗಿ ಯಾವ ರಾಶಿಗಳಿಗೆ ಅಶುಭವಾಗಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳ ಗ್ರಹದ ಈ ಸಂಚಾರವು ಮೇಷ ರಾಶಿಯ 7ನೇ ಮನೆಯಲ್ಲಿ ಸಂಭವಿಸುತ್ತಿದೆ. ಇದು ಮದುವೆ, ವ್ಯಾಪಾರ, ಸಂಬಂಧಿಸಿದ ಮನೆಯಾಗಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು, ತಪ್ಪು ತಿಳುವಳಿಕೆಗಳು ಮತ್ತು ಉದ್ವಿಗ್ನತೆಗಳು ಹೆಚ್ಚಾಗಬಹುದು. ವ್ಯಾಪಾರ ಪಾಲುದಾರಿಕೆಯಲ್ಲೂ ಇದರ ಪರಿಣಾಮ ಕಂಡುಬರುತ್ತದೆ. ಆರೋಗ್ಯದ ದೃಷ್ಟಿಯಿಂದ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ತೊಂದರೆದಾಯಕವಾಗಬಹುದು. ನಿಮ್ಮ ಕೌಟುಂಬಿಕ ಸಮಸ್ಯೆಗಳು ಜಟಿಲವಾಗಬಹುದು. ಯಾವುದಾದರು ಹಣಕಾಸಿನ ವ್ಯವಹಾರದಲ್ಲಿ ಸಿಲುಕಿದ್ದರೆ ಮತ್ತಷ್ಟು ದೊಡ್ಡದಾಗಬಹುದು. ಅಗತ್ಯ ಸಮಯದಲ್ಲಿ ಹಣಕಾಸಿನ ಕೊರತೆ ಎದುರಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯ ನಾಲ್ಕನೇ ಮನೆಯಲ್ಲಿ ಮಂಗಳ ಚಲಿಸುತ್ತಾನೆ. ಈ ಮನೆ ತಾಯಿ ಮತ್ತು ಮಾನಸಿಕ ಶಾಂತಿಗೆ ಸಂಬಂಧಿಸಿದೆ. ಈ ಸಮಯದಲ್ಲಿ, ಕುಟುಂಬದಲ್ಲಿ ಉದ್ವಿಗ್ನತೆ, ತಾಯಿಯೊಂದಿಗೆ ಭಿನ್ನಾಭಿಪ್ರಾಯಗಳು, ಆಸ್ತಿ ಸಂಬಂಧಿತ ವಿವಾದಗಳ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಪ್ರವೇಶದಂತಹ ಕಾರ್ಯಗಳಲ್ಲಿ ವಿಳಂಬವಾಗಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಾದದ ಪರಿಸ್ಥಿತಿ ಇರಬಹುದು. ಆರೋಗ್ಯದ ದೃಷ್ಟಿಯಿಂದ, ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ತೊಂದರೆದಾಯಕವಾಗಬಹುದು. ಮನೆಯ ಸಮಸ್ಯೆಗಳ ಪರಿಹಾರ ಮತ್ತಷ್ಟು ವಿಳಂಬವಾಗಬಹುದು.
ಮಕರ ರಾಶಿ
ಮಕರ ರಾಶಿಯ ಈ ಸಂಚಾರವು ಹತ್ತನೇ ಮನೆಯಲ್ಲಿ ಸಂಚರಿಸಲಿದೆ. ಇದು ವೃತ್ತಿ ಮತ್ತು ಪ್ರತಿಷ್ಠೆಗೆ ಸಂಬಂಧಿಸಿದ ರಾಶಿ. ನೀವು ಕೆಲಸ ಅಥವಾ ವ್ಯವಹಾರದಲ್ಲಿ ಹೆಚ್ಚಿನ ಒತ್ತಡ, ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳ ಎದುರಿಸಬಹುದು. ನಿರುದ್ಯೋಗಿಗಳಿಗೆ ಈ ಸಮಯ ಮತ್ತಷ್ಟು ಕಷ್ಟಕರವಾಗಬಹುದು. ಕುಟುಂಬದ ವ್ಯಾಪಾರ ಅಥವಾ ಆಸ್ತಿ ಕುರಿತಾದ ಹಿಂದಿನ ವಿವಾದಗಳು ಬಗೆಹರಿಯುವುದು ಮತ್ತಷ್ಟು ವಿಳಂಬವಾಗಬಹುದು. ಹಾಗೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ನಿಮಗೆ ಕಾಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications