Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಸಿಂಹ ರಾಶಿಗೆ ಮಂಗಳನ ಸಂಚಾರ: ಈ 5 ರಾಶಿಯವರಿಗೆ ಅದೃಷ್ಟಗಳ ಸುರಿಮಳೆ.. ಯಾರಿಗೆ ಸಂಕಷ್ಟ?
ಮಂಗಳ ಗ್ರಹ ಸಂಚಾರಕ್ಕೆ ದಿನಗಣನೆ. ಈ 5 ರಾಶಿಯವರ ಭವಿಷ್ಯದಲ್ಲಿ ಭಾರೀ ಬದಲಾವಣೆ. ಹೌದು, ಇದೇ ಜೂನ್ 7ರಂದು ಶನಿವಾರ ಮಂಗಳ ಗ್ರಹವು (Mangal Gochar 2025) ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಯನ್ನು (Simha Rashi) ಪ್ರವೇಶಿಸುತ್ತದೆ. ಈ ಸಂಚಾರದಿಂದ ಸಿಂಹ ರಾಶಿಯಲ್ಲಿ ಬರೋಬ್ಬರಿ ಎರಡು ತಿಂಗಳ ಕಾಲ (ಜುಲೈ 28, 2025 ರವರೆಗೆ) ತುಂಬಾ ಪರಿಣಾಮಕಾರಿ ಎನ್ನಲಾಗಿದೆ. ಇದೇ ವೇಳೆ ಮಂಗಳನ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆಯೂ ಕಂಡುಬರಲಿದೆ. ಆದರೆ, ಈ ಸಮಯವು ಕೆಲವು ವಿಶೇಷ ರಾಶಿಗಳಿಗೆ ಬಹಳ ಶುಭ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಮಂಗಳ ಗ್ರಹ ಸಂಚಾರದಿಂದ ಯಾವ ರಾಶಿಯವರು ಹೆಚ್ಚು ಲಾಭವನ್ನು ಪಡೆಯಲಿದ್ದಾರೆ? ಯಾರಿಗೆಲ್ಲಾ ಅದೃಷ್ಟ ಇಲ್ಲ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಹಲವು ರಾಶಿಗಳಿಗೆ ಜೂನ್ ತಿಂಗಳು ಬಹಳ ಮುಖ್ಯ. ವಿಶೇಷವಾಗಿ ಜೂನ್ 7ರ ರಾತ್ರಿ ಮಂಗಳನ ಸಂಚಾರವು ಕೆಲವು ರಾಶಿಗಳಿಗೆ ದೊಡ್ಡ ಉಡುಗೊರೆ ತರಬಹುದು. ಈ ದಿನ ಮಧ್ಯಾಹ್ನ 2.28 ಗಂಟೆಗೆ ಮಂಗಳ ಗ್ರಹವು ಸಿಂಹ ರಾಶಿಗೆ (Mangal transit in Simha Rashi) ಎಂಟ್ರಿ ಕೊಡುತ್ತದೆ. ಈವರೆಗೆ ಮಂಗಳ ಗ್ರಹವು ಕರ್ಕ ರಾಶಿಯಲ್ಲಿ ಇತ್ತು. ಇದನ್ನು ಅದರ ಕಡಿಮೆ ರಾಶಿಚಕ್ರ ಎಂದು ಹೇಳಲಾಗಿದೆ. ಆದರೆ, ಮಂಗಳ ಗ್ರಹವು ಅಗ್ನಿ ಅಂಶದ ಸ್ಥಿರ ರಾಶಿ ಸಿಂಹವನ್ನು ಪ್ರವೇಶಿಸಿದ ಕೂಡಲೇ, ಅದರ ಪರಿಣಾಮವು ಕೆಲವು ರಾಶಿಗಳ ಮೇಲೆ ಬಹಳ ಶುಭ ತರಲಿದೆ. ಮಂಗಳವು ಶಕ್ತಿ, ಶೌರ್ಯ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ. ಆದರೆ, ಸಿಂಹವು ಉತ್ಸಾಹ ಮತ್ತು ನಾಯಕತ್ವದ ಸಾಮರ್ಥ್ಯದ ಸಂಕೇತ. ಈ ಎರಡೂ ಒಟ್ಟಿಗೆ ಸೇರಿದಾಗ, ಕೆಲವು ರಾಶಿಗಳಿಗೆ ವರದಾನ ಖಚಿತ.

ಈ 5 ರಾಶಿಯವರಿಗೆ ಭಾರೀ ಅದೃಷ್ಟ
ಮೇಷ ರಾಶಿ
ಮಂಗಳ ಗ್ರಹದ ಸಂಚಾರವು ಮೇಷ ರಾಶಿಯವರಿಗೆ ಲಾಭ ತರಲಿದೆ. ನಿಮ್ಮ ಕೆಲಸ (ವೃತ್ತಿ), ಶಿಕ್ಷಣ ಮತ್ತು ಪ್ರೇಮ ಸಂಬಂಧಗಳಲ್ಲಿ ಶುಭ ಫಲಿತಾಂಶ ನಿರೀಕ್ಷಿಸಬಹುದು. ನೀವು ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುತ್ತೀರಿ. ಪ್ರೀತಿಯಲ್ಲಿ ಸಾಮರಸ್ಯ ಮತ್ತು ಸಂಬಂಧಗಳಲ್ಲಿ ಬಲ ವೃದ್ಧಿಯಾಗಲಿದೆ.
ಸಿಂಹ ರಾಶಿ
ಮೊದಲೇ ಹೇಳಿದರೆ, ಸಿಂಹ ಅಗ್ನಿ ಅಂಶದ ಸ್ಥಿರ ರಾಶಿ. ನಿಮ್ಮ ರಾಶಿಯಲ್ಲಿ ಮಂಗಳ ಗ್ರಹದ ಆಗಮನದಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮಗೆ ಹೆಚ್ಚು ಅವಕಾಶಗಳು ಸಿಗಬಹುದು. ದೈಹಿಕ ಶಕ್ತಿಯೂ ಇರುತ್ತದೆ. ನಾಯಕತ್ವದ ಪಾತ್ರ, ಹೊಸ ಯೋಜನೆ ಅಥವಾ ವ್ಯವಹಾರದಲ್ಲಿ ಪ್ರಗತಿಗೆ ಖಚಿತ.
ವೃಶ್ಚಿಕ ರಾಶಿ
ಮಂಗಳ ಗ್ರಹದ ಸಂಚಾರದಿಂದ ವೃಶ್ಚಿಕ ರಾಶಿ ಹೊಸ ಅವಕಾಶಗಳು ಲಭ್ಯವಾಗುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ, ಬಡ್ತಿ ಮತ್ತು ಸಹೋದ್ಯೋಗಿಗಳಿಂದ ಬೆಂಬಲ ದೊರೆಯುವ ಸಾಧ್ಯತೆ ಹೆಚ್ಚು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ.
ಧನು ರಾಶಿ
ಧನು ರಾಶಿಗೆ ಮಂಗಳ ಗ್ರಹದ ಸಂಚಾರ ವರದಾನವಾಗಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ಧಾರ್ಮಿಕ ಪ್ರವಾಸ ಸಾಧ್ಯತೆ. ನೀವು ಆರ್ಥಿಕವಾಗಿ ಬಲ ಆಗುತ್ತೀರಿ. ನಿಮಗೆ ಹಿರಿಯರು ಮತ್ತು ಶಿಕ್ಷಕರ ಬೆಂಬಲ ಸಿಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ಹೆಚ್ಚಾಗುತ್ತದೆ. ಪಾಲುದಾರಿಕೆಯಲ್ಲಿ ಲಾಭ ಮತ್ತು ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.
ಒಟ್ಟಾರೆಯಾಗಿ, ಸಿಂಹ ರಾಶಿಗೆ ಮಂಗಳನ ಪ್ರವೇಶವು ಸಾಕಷ್ಟು ಬದಲಾವಣೆ ತರುತ್ತದೆ. ಮುಖ್ಯವಾಗಿ, ಈ ಐದು ರಾಶಿಯವರಿಗೆ ಹೊಸ ಶಕ್ತಿ, ಆತ್ಮವಿಶ್ವಾಸ ಮತ್ತು ಯಶಸ್ಸು ತರಲಿದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಮಯ ಉತ್ತಮ. ಆದಾಗ್ಯೂ, ವೈಯಕ್ತಿಕವಾಗಿ ಏನೆಲ್ಲಾ ಲಾಭ ಆಗಬಹುದು ಎನ್ನುವುದನ್ನು ತಿಳಿಯಲು ನಿಮ್ಮ ಜಾತಕವನ್ನು ನೋಡುವುದು ಅಥವಾ ತೋರಿಸುವುದು ಸೂಕ್ತ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











