Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
2026ರ ಆರಂಭದಲ್ಲಿ ಮಾಲವ್ಯ ರಾಜಯೋಗ: ಶುಕ್ರನ ಆಶೀರ್ವಾದ ಪಡೆದರೆ ಸಮಸ್ಯೆಗಳು ದೂರ, ಕನಸುಗಳು ಇನ್ನೂ ಹತ್ತಿರ
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಹಾಗೆ ಆಗಾಗ ನಕ್ಷತ್ರ ಬದಲಾಯಿಸುವುದು ಸಹ ನೋಡಬಹುದು. ಇದು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿ ಜನರ ಜೀವನದಲ್ಲಿ ಪ್ರಭಾವ ಉಂಟು ಮಾಡುವುದು ಕಂಡುಬರುತ್ತದೆ. ಇನ್ನು 2025 ಕೊನೆಯಲ್ಲಿ ಕೆಲವು ಗ್ರಹಗಳ ಸಂಚಾರ ನೋಡಬಹುದು. ಹಾಗೆ 2026ರ ಆರಂಭದಲ್ಲಿಯೇ ಹಲವು ಗ್ರಹಗಳ ಸಂಚಾರವನ್ನು ಗಮನಿಸಬಹುದು.
ಈ ಗ್ರಹಗಳ ಸಂಚಾರದಲ್ಲಿ ಶುಕ್ರನು 2026ರ ಆರಂಭದಲ್ಲಿ ತನ್ನ ಪರಮೋಚ್ಛ ಸ್ಥಾನವಾಗಿರುವ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಶುಕ್ರನ ಆಶೀರ್ವಾದ ಪಡೆಯಲು ಈ ಸಮಯ ಬಹಳ ಅನುಕೂಲಕರ. ಹಾಗೆ ಶುಕ್ರನನ್ನು ನಾವು ಐಷಾರಾಮಿ, ಸೌಂದರ್ಯ, ಸಂಪತ್ತು, ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ. ಈಗ ಶುಕ್ರನ ಚಲನೆಯನ್ನು ನೋಡಬಹದುದು.

ಶುಕ್ರನು ಮೀನ ರಾಶಿಗೆ ಪ್ರವೇಶಿಸಿದಾಗ, ಅದು ಅತ್ಯಂತ ಶುಭವಾದ ಮಾಲವ್ಯ ರಾಜ ಯೋಗವನ್ನು ಸೃಷ್ಟಿಸಲಿದೆ. ಈ ರಾಜ ಯೋಗವು ಮಹಾಪುರುಷ ರಾಜ ಯೋಗಗಳಲ್ಲಿ ಒಂದಾಗಿದೆ. ಈ ಯೋಗವು ಹೊಸ ವರ್ಷದ ಆರಂಭದಲ್ಲಿ ರೂಪುಗೊಳ್ಳುವುದರಿಂದ, ಅದರ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಗೋಚರಿಸುತ್ತದೆ. ಹಾಗಾದ್ರೆ ಈ ಅಪರೂಪದ ಯೋಗದ ಪರಿಣಾಮವಾಗಿ ಯಾರಿಗೆಲ್ಲಾ ಶುಭವಾಗಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೀನ ರಾಶಿ
ಶುಕ್ರನನ ಆಡಳಿತವಿರುವ ಹಾಗೆ ಅಧಿಪತ್ಯದ ಮೀನ ರಾಶಿಗೆ ಚಲಿಸುವುದು ಆತನ ಬಲ ಹೆಚ್ಚಾಗಲು ಹಾಗೆ ಪರಿಣಾಮ ಮತ್ತಷ್ಟು ಪ್ರಬಲವಾಗಲು ಕಾರಣವಾಗಲಿದೆ. ಇದು ಮಹಿಳೆಯರಿಗೆ ಬಹಳ ಉತ್ತಮ ಸಮಯ ತರಲಿದೆ. 2026ರ ಆರಂಭದ ಸಮಯದಲ್ಲಿ ನಿಮ್ಮ ಹಲವು ಕೆಲಸಗಳು ಕೈಗೂಡಲಿವೆ. ನೀವು ಅಂದುಕೊಂಡಿದ್ದ ವಿಚಾರಗಳಲ್ಲಿ ಬಹಳ ಸುಲಭದ ಯಶಸ್ಸು ಪಡೆಯಬಹುದು. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ವಿವಾಹಿತರು ಸಂತೋಷದ ಜೀವನವನ್ನು ನಡೆಸುತ್ತಾರೆ. ಅವಿವಾಹಿತರಿಗೆ ವಿವಾಹ ಸಂಬಂಧಿ ವಿಚಾರಗಳು ಶುಭವಾಗುತ್ತದೆ. ಹೊಸದಾಗಿ ಆರಂಭಿಸಿರುವ ವ್ಯವಹಾರಗಳಲ್ಲಿ ಶುಭವಿದೆ.
ಮಿಥುನ ರಾಶಿ
ಶುಕ್ರನು ಮಿಥುನ ರಾಶಿಯ 10 ನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತಾನೆ. ಇದರಿಂದಾಗಿ ಈ ರಾಶಿಯವರು ತಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಉದ್ಯಮಿಗಳು, ಸ್ವಂತ ಉದ್ಯಮಿಗಳು ಲಾಭ ನೋಡುವ ಸಮಯ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಾಗೆ ಬಹುಸಮಯದಿಂದ ನೀವು ಮನೆ, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಶುಭವಾಗುವುದು ನೋಡಬಹುದು. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಮಕ್ಕಳ ಕುರಿತಾದ ಚಿಂತೆಗಳು ದೂರಾಗಲಿವೆ.
ಧನು ರಾಶಿ
ಶುಕ್ರನು ಧನು ರಾಶಿಯ 4 ನೇ ಮನೆಗೆ ಸ್ಥಳಾಂತರಗೊಂಡು ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತಾನೆ. ಇದರಿಂದಾಗಿ ಈ ರಾಶಿ ಜನರು ಹಲವು ಪ್ರಯೋಜನಗಳ ಪಡೆಯುತ್ತಾರೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳು ಇರುತ್ತವೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೂಡಿಕೆಗಳಿಂದ ನಿಮಗೆ ಉತ್ತಮ ಲಾಭ ಸಿಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಹೋಟೆಲ್‌ಗಳಲ್ಲಿ ಕೆಲಸ ಲಾಭವಿದೆ. ಶುಕ್ರನ ಕೃಪೆಯಿಂದ ಕೌಟುಂಬಿಕ ಸಮಸ್ಯೆಗಳು ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











