Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶುಕ್ರನಿಂದ ಮಾಲವ್ಯ ಮಹಾಪುರುಷ ರಾಜಯೋಗ: 3 ರಾಶಿಯವರ ಅದೃಷ್ಟವೇ ಬದಲು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಶ್ವರ್ಯ, ಸಂಪತ್ತು, ಐಷಾರಾಮಿ, ಪ್ರೀತಿ, ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗಿದೆ. ಹೀಗಾಗಿ ಶುಕ್ರನ ಆಶೀರ್ವಾದವು ಯಾವೆಲ್ಲಾ ರಾಶಿಗಳ ಮೇಲೆ ಇರಲಿದ್ಯೋ ಅವರಲ್ಲಿ ಬಹಳ ಲಾಭಾಯಕ ದಿನಗಳು ಹಾಗೆ ಆತ್ಮ ತೃಪ್ತಿಯ ದಿನಗಳ ನೋಡಬಹುದು. ಇನ್ನು ಶುಕ್ರನು ವೇಗವಾಗಿ ಚಲಿಸುವ ಗ್ರಹ 26 ದಿನಗಳಲ್ಲಿ ಒಂದು ರಾಶಿಯಲ್ಲಿ ಚಲಿಸಲಿದ್ದಾನೆ. ಇದು ಎಲ್ಲಾ ರಾಶಿಗಳ ಮೇಲೆಯೂ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳ ತರುವುದು ಸಹ ನಾವು ನೋಡಬಹುದು.
ಶುಕ್ರನು ತುಲಾ ಮತ್ತು ವೃಷಭ ರಾಶಿಯ ಅಧಿಪತಿಯಾಗಿದ್ದು ಪ್ರಸ್ತುತ ಮೇಷ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದರೆ ಇದೇ ಜೂನ್ 29ರಂದು ವೃಷಭ ರಾಶಿಗೆ ಚಲಿಸಲಿದ್ದಾನೆ. ತನ್ನದೇ ಅಧಿಪತ್ಯ ಇರುವ ವೃಷಭ ರಾಶಿಗೆ ಶುಕ್ರನು ಸಂಚರಿಸುವುದು ಹಲವು ರೀತಿಯ ಯೋಗಗಳ ತರಲಿದೆ. ಅದರಲ್ಲೂ ಮಾಲವ್ಯ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತದೆ.

ಜೂನ್ 29ರಿಂದ ಈ ರಾಜಕೋಗವು ಮುಂದಿನ ಜುಲೈ 26ರ ವರೆಗೂ ಹಲವು ರಾಶಿಯವರಿಗೆ ಅನುಕೂಲಕರ ದಿನಗಳನ್ನು ತರಲಿದೆ. ಅದರಲ್ಲು ಜೂನ್ 29ರಿಂದ ಹಲವು ರಾಶಿಗಳ ಶುಭಕರ ಯೋಗಗಳು ಆರಂಭವಾಗುತ್ತಿವೆ. ಈ ರಾಜ್ಯಯೋಗವು ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಇದರ ಹೊರತಾಗಿ, ಹಂಸ, ರುಚಕ, ಭದ್ರ, ಶಸ ಇತ್ಯಾದಿಗಳು ಸಹ ಮಹಾಪುರುಷ ರಾಜ್ಯಯೋಗಗಳಾಗಿವೆ. ಹಾಗಾದ್ರೆ ಈ ಯೋಗದಿಂದ ಯಾವೆಲ್ಲಾ ರಾಶಿಗೆ ಶುಭವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 2 ನೇ ಮನೆಯಲ್ಲಿ ಮಾಲವ್ಯ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ ಮೇಷ ರಾಶಿಯವರಲ್ಲಿ ಶುಕ್ರನ ಸಂಪೂರ್ಣ ಆಶೀರ್ವಾದ ಪಡೆಯಲಿದ್ದಾರೆ. ನೀವು ಈ ಸಮಯದಲ್ಲಿ ಐಷಾರಾಮಿ ವಸ್ತುಗಳ ಖರೀದಿಸಬಹುದು. ಜೀವನದಲ್ಲಿ ಸುಖಮಯವಾದ ದಿನಗಳ ನೋಡುವಿರಿ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ತೃಪ್ತರಾಗಲಿದ್ದಾರೆ. ನಿಮ್ಮ ಬಡ್ತಿ, ವರ್ಗಾವಣೆ, ವೇತನ ವಿಚಾರದಲ್ಲಿ ಲಾಭ ನೋಡಲಿದ್ದೀರಿ. ನ್ಯಾಯಾಲಯ ವಿಚಾರಗಳು ನಿಮ್ಮ ಪರವಾಗಬಹುದು, ಹಾಗೆ ಆಸ್ತಿ, ವಾಹನ ಖರೀದಿ ಸಂಬಂಧವಾಗಿ ಶುಭ ಫಲ ಸಿಗಬಹುದು. ನಿಮ್ಮ ಕೌಟುಂಬಿಕ ಸಮಸ್ಯೆಗಳು ದೂರಾಗಬಹುದು.
ವೃಷಭ ರಾಶಿ
ವೃಷಭ ರಾಶಿಯ ಮೊದಲ ಮನೆಯಲ್ಲಿ ಮಾಲವ್ಯ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ವೃಷಭ ರಾಶಿಯವರಲ್ಲಿ ಬಹಳ ಬದಲಾವಣೆಗಳ ನೋಡಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧ ಚರ್ಚೆಗಳು ನಡೆಯಲಿದೆ. ಪ್ರತಿಯೊಂದು ಶ್ರಮದಾಯಕ ಕೆಲಸಗಳ ಫಲಿತಾಂಶವು ನಿಮಗೆ ಸಂತಸ ತರಲಿದೆ. ನವವಿವಾಹಿತರಾಗಿದ್ದಾರೆ, ಶುಭ ಸುದ್ದಿಗಳು ಇರಲಿವೆ. ಹಣಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಧನಾತ್ಮಕ ಬದಲಾವಣೆ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಜೀವನದ ಬಹಳ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಹೋದರರೊಂದಿಗೆ ಇದ್ದ ಮನಸ್ತಾಪವೊಂದು ಬಗೆಹರಿಯಲಿದೆ. ಔದ್ಯೋಗಿಕ ಯಶಸ್ಸು ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯ 4 ನೇ ಮನೆಯಲ್ಲಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದು ಕುಂಭ ರಾಶಿಯವರಲ್ಲಿ ಅನೇಕ ಲಾಭಕ್ಕೆ ಕಾರಣವಾಗಲಿದೆ. ಮನೆಗಾಗಿ ನೀವು ಐಷಾರಾಮಿ ವಸ್ತು ಖರೀದಿಸಬಹುದು. ಆರೋಗ್ಯಕರ ಲಾಭಗಳಿಗೆ ಈ ಸಮಯ ಕಾರಣವಾಗಲಿದೆ. ನೀವು ಮನೆ, ಆಸ್ತಿ ಸಂಬಂಧಿಸಿದಂತೆ ಯಾವುದಾದರು ಅಡಚಣೆ ಎದುರಿಸುತ್ತಿದ್ದರೆ ಈ ಸಮಯದಲ್ಲಿ ಅದರಿಂದ ಪರಿಹಾರ ಪಡೆಯಬಹುದು. ಉದ್ಯಮಿಗಳಲ್ಲಿ ಲಾಭದದಾಯಕ ತಿಂಗಳು ಎನ್ನಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇರಲಿದೆ. ಹೊಸ ವ್ಯಾಪಾರ, ಉದ್ಯೋಗ ಆರಂಭಿಸುವ ಸಾಧ್ಯತೆ ಹೆಚ್ಚಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications