Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
Makar Sankranti 2026: ಸೂರ್ಯ ದೇವನ ಆಶೀರ್ವಾದ ಪಡೆಯಲು ಈ ಮಂತ್ರ ಪಠಿಸಿ ಸಾಕು!
ಹಿಂದೂಗಳಿಗೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿಯು ಸೂರ್ಯನು ಪಥ ಬದಲಿಸುವಂತಹ ಮಹತ್ವದ ಕಾಲ. ಪ್ರತೀ ವರ್ಷವು ಮಕರ ಸಂಕ್ರಾಂತಿಯು ಹೆಚ್ಚಾಗಿ ಜನವರಿ 14ರಂದು ಬರುವುದು. ಕೆಲವೊಮ್ಮೆ 14 ಹಾಗೂ 15ರಂದು ಆಚರಿಸಲಾಗುತ್ತದೆ. ಇದು ಸೂರ್ಯ ತನ್ನ ಪಥ ಬದಲಿಸುವ ಕಾಲಘಟ್ಟಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.
ಮಕರ ಸಂಕ್ರಾಂತಿಯ ಹಬ್ಬಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದ ದಿನವನ್ನೇ ಮಕರ ಸಂಕ್ರಮಣ ಎಂದು ಕರೆಯಲಾಗಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಬುಧ, ಗುರು, ಚಂದ್ರ ಮತ್ತು ಶನಿ ಸೇರಿದಂತೆ ಐದು ಗ್ರಹಗಳ ಸಂಯೋಜನೆ ಇರುತ್ತದೆ. ಹೀಗಾಗಿ ಈ ಹಬ್ಬವೂ ಜ್ಯೋತಿಷ್ಯ ಕಾರಣದಿಂದಾಗಿಯೂ ವಿಶೇಷ ಎನಿಸಲಿದೆ.

ಹಾಗೆ ಈ ಮಕರ ಸಂಕ್ರಾಂತಿಯು ಹಲವರ ಜೀವನದಲ್ಲಿ ದೊಡ್ಡ ಶುಭವನ್ನು ತರುವ ಸಮಯ ಆಗಿರಲಿದೆ. ಏಕೆಂದರೆ ವ್ಯಕ್ತಿಯೊಬ್ಬರ ಜೀವನದಲ್ಲಿ ಸೂರ್ಯನ ಸ್ಥಾನ ಪ್ರಮುಖವಾಗುತ್ತದೆ. ಹೀಗಾಗಿ ನಿತ್ಯ ಸೂರ್ಯನಿಗೆ ಪೂಜೆ ಸಲ್ಲಿಸಬೇಕು ಎಂದು ಪುರಾಣಗಳಲ್ಲಿಯೂ ಹೇಳಲಾಗಿದೆ. ಸೂರ್ಯ ಅತೀವ ಶಕ್ತಿ, ಸಮೃದ್ಧಿಯ ಸಂಕೇತವಾಗಿದ್ದಾನೆ. ವಿಶೇಷವಾಗಿ ಮಕರ ರಾಶಿಯಲ್ಲಿದ್ದಾಗ ಸೂರ್ಯ ಉತ್ತುಂಗ ಸ್ಥಿತಿಯಲ್ಲಿರಲಿದ್ದಾನೆ.
ಹಾಗಾದ್ರೆ ನಿಮ್ಮ ಜೀವನದಲ್ಲಿ ಉತ್ತಮ ದಿನಗಳಿಗಾಗಿ ಈ ಸಂಕ್ರಾಂತಿಯಂದು ಏನು ಮಾಡಬೇಕು ಎಂಬುದು ನಿಮಗೆ ಗೊತ್ತಾ? ಈ ದಿನ ಸೂರ್ಯ ದೇವನಲ್ಲಿ ನಿಮ್ಮ ಬೇಡಿಕೆಗಳ ಇಟ್ಟರೆ ಈಡೇರುವುದು ಖಚಿತ ಎಲ್ಲಲಾಗಿದೆ. ಹೀಗಾಗಿ ಮಕರ ಸಂಕ್ರಾಂತಿಯ ಈ ದಿನದಂದು ಯಾವ ಮಂತ್ರ ಪಠಿಸಬೇಕು? ಯಾವುದು ನಿಮಗೆ ಶುಭ ತರುವ ಹಾಗೆ ಜೀವನದಲ್ಲಿ ಸುಖ ತರಲಿದೆ ಎಂಬುದನ್ನು ತಿಳಿದುಕೊಳ್ಳಿ.
ಸೂರ್ಯ ಮೂಲ ಮಂತ್ರ
ಓಂ ಹ್ರಮ್ ಹ್ರಮ್ ಹ್ರಮ್ ಸಃ ಸುರ್ಯಾಯ ನಮಃ''
ಓಂ ಸಹಸ್ರಾ ಶಿರಶ ಪುರುಷ ಪುರುಷ ಸಹಸ್ರಕ್ಷ್ ಶಹಸ್ತ ಪಾಕ್ ಸ ಭೂಮಿ ಗ್ವಾಮ್ ಸಬೈತ್ ಸ್ತಪುತ್ವಾ ಅಯತಿಶ್ತ್ ದರ್ಶಂ ಗುಲಾಮ್.''
ಓಂ ಸೂರ್ಯ ದೇವಂ ನಮಸ್ತೆ ಸ್ತು ಗ್ರಿಹಾನಮ್ ಕರೂನ್ ಕರಮ್ ಅಗ್ರ್ಯಂ ಚಾ ಫಾಲಂ ಸಂಯಕ್ತ ಗಂಧ ಮಾಲಯಾಕ್ಷತಿ ಯುತಂ''
ಭಾಸ್ಕರಾಯೇ ವಿದ್ಮಯೇ ದಿವಕರಾಯೇ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್...ಓಂ ಓಂ ಓಂ.....''
ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ,
ಆಯುರಾರೋಗ್ಯ ಮೈಶ್ವೈರ್ಯಂ ದೇಹಿ ದೇವಃ ಜಗತ್ಪತೇ
ಸೂರ್ಯ ನಮಸ್ಕಾರ ಮಂತ್ರ
ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್
ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್
ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಸಂಕ್ರಾಂತಿ ದಿನದಂದು ಈ ರೀತಿ ಮಾಡಿ
ಸೂರ್ಯ ಸಂಚಾರದಂದು ಸೂರ್ಯೋದಯಕ್ಕೆ ಮುನ್ನ ಏಳಬೇಕು, ಸ್ನಾನ ಮುಗಿಸಿ ಶುದ್ಧ ಕೆಂಪು ವಸ್ತ್ರ ಧರಿಸಬೇಕು. ನಂತರ ಸೂರ್ಯನಿಗೆ ಜಲಾರ್ಪಣೆ ಅಥವಾ ಆರ್ಘ್ಯ ಅರ್ಪಿಸಬೇಕು. ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಸೂರ್ಯ ನಮಸ್ಕಾರದ ಮಂತ್ರವನ್ನು ಪಠಿಸಬೇಕು.



Click it and Unblock the Notifications
