Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
Makar Sankranti 2024 Bhavishya : ಮಕರ ರಾಶಿಗೆ ಸೂರ್ಯ ಸಂಚಾರ: ದ್ವಾದಶಗಳ ಮೇಲೆ ಸಂಕ್ರಮಣದ ಪ್ರಭಾವ ಹೇಗಿದೆ?
ಮಕರ ರಾಶಿಗೆ ಸೂರ್ಯನ ಸಂಚಾರವು 2024 ಜನವರಿ 15ರಂದು ನಡೆಯಲಿದೆ. ಇದೇ ದಿನ ರಾಷ್ಟ್ರದಾದ್ಯಂತ ಜನರು ಮಕರ ಸಂಕ್ರಾಂತಿಯ ಹಬ್ಬವನ್ನು ಸಹ ಆಚರಿಸುತ್ತಾರೆ. ಉತ್ತರಾಯಣದ ಆರಂಭದ ಕಾಲ ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ಈ ವರ್ಷ ವಿಶೇಷ ಮಹತ್ವವಿದೆ.
ಮಕರ ರಾಶಿಯು ಶನಿಯ ಆಡಳಿತ ಮನೆ ಹಾಗೂ ಸೂರ್ಯ ಮತ್ತು ಶನಿ ಶತ್ರುಗಳೆಂದು ನಂಬಲಾಗಿದೆ. ಆದ್ದರಿಂದ, ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮವು ತುಂಬಾ ವಿಶೇಷವಾಗಿರುತ್ತದೆ ಮತ್ತು ಈ ವಿಶೇಷ ಸಂಚಾರ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಮುಂದೆ ನೋಡೋಣ:

ಮೇಷ ರಾಶಿ
ಈ ರಾಶಿಯವರಿಗೆ ಸೂರ್ಯನು ಐದನೇ ಮನೆಯ ಅಧಿಪತಿ. ಜನವರಿ 15ಕ್ಕೆ 10ನೇ ಮನೆಗೆ ಸಂಚರಿಸಲಿದೆ. ಈ ವಧಿಯಲ್ಲಿ ನೀವು ನಿಮ್ಮ ಕೆಲಸದಲ್ಲಿ ಬಡ್ತಿ ಪಡೆಯಬಹುದು. ನಿಮ್ಮ ಎಲ್ಲಾ ಗುರಿಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ಈ ಸಮಯದಲ್ಲಿ, ನಿಮ್ಮ ಮಾತು ಮತ್ತು ಬುದ್ಧಿವಂತಿಕೆಯ ಸಹಾಯದಿಂದ ನೀವು ಅತ್ಯಂತ ಕಷ್ಟಕರವಾದ ಕಾರ್ಯಗಳನ್ನು ಸಹ ಸುಲಭವಾಗಿ ಮಾಡಲು ಸಾಧ್ಯವಾಗುವುದು.
ವೃಷಭ ರಾಶಿ
ನಾಲ್ಕನೇ ಮನೆಯ ಅಧಿಪತಿಯಾಗಿರುವ ಸೂರ್ಯ ನಿಮ್ಮ 9ನೇ ಮನೆಗೆ ಸಾಗಲಿದೆ. ಇದು ಅದೃಷ್ಟದ ಮನೆಯಾಗಿದೆ, ನೀವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ, ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯ ಕೂಡ ಹೆಚ್ಚಾಗಲಿದೆ. ಸೂರ್ಯನ ಈ ಸಾಗಣೆಯೊಂದಿಗೆ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಿಲಿದ್ದೀರಿ.
ಮಿಥುನ ರಾಶಿ
ನಿಮಗೆ ಮೂರನೇ ಮನೆಯ ಅಧಿಒತಿಯಾಗಿರುವ ಸೂರ್ಯ 8ಮೇ ಮನೆಗೆ ಸಾಗಲಿದೆ. ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವು ಶುಭವಲ್ಲ. ಈ ಸಮಯದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಚಾಲನೆ ಮಾಡಿ. ಈ ಸಮಯದಲ್ಲಿ, ನೀವು ಹಣದ ವ್ಯವಹಾರಗಳ ವಿಷಯಗಳಲ್ಲಿ ಜಾಗರೂಕರಾಗಿರಬೇಕು . ಸರ್ಕಾರಿ ಕೆಲಸ ಮಾಡುವವರಿಗೆ ಈ ಅವಧಿ ಒತ್ತಡದಿಂದ ಕೂಡಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಗೆ 2ನೇ ಮನೆಯ ಅಧಿಪತಿಯಾಗಿರುವ ಸೂರ್ಯ 7ನೇ ಮನೆಯಲ್ಲಿರಲಿದೆ. ಸೂರ್ಯನ ಸಂಚಾರದ ಪ್ರಭಾವದಿಂದಾಗಿ, ನೀವು ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುವುದು. ಈ ಸಮಯದಲ್ಲಿ, ಯಾವುದೇ ಅಪಶ್ರುತಿಯು ಉಂಟಾಗದಂತೆ ನೀವು ಕಾಳಜಿ ವಹಿಸಬೇಕು. ಈ ಸಮಯದಲ್ಲಿ, ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ನಿಮಗೆ ಬೆಂಬಲವನ್ನು ನೀಡುತ್ತಾರೆ. ಈ ಸಮಯದಲ್ಲಿ ನಿಮ್ಮ ಅತ್ತೆಯೊಂದಿಗೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ.
ಸಿಂಹ ರಾಶಿ
ನಿಮ್ಮ ಮೊದಲ ಮನೆಯ ಅಧಿಪತಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ. ಆರನೇ ಮನೆಯಲ್ಲಿ ಸೂರ್ಯನನ್ನು ಶತ್ರುಹಂತ ಎಂದು ಹೇಳಲಾಗುವುದು, ಈ ಸಂಚಾರದಿಂದಾಗಿ, ನಿಮ್ಮ ಎಲ್ಲಾ ಶತ್ರುಗಳು ನಾಶವಾಗುತ್ತಾರೆ. ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಈ ಸಮಯದಲ್ಲಿ, ಆಮದು ಮತ್ತು ರಫ್ತಿಗೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಪಡೆಯುತ್ತೀರಿ.
ಕನ್ಯಾ ರಾಶಿ
12ನೇ ಮನೆಯ ಅಧಿಪತಿಯಾಗಿರುವ ಸೂರ್ಯ ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸಂಕ್ರಮಣದ ಪ್ರಭಾವದಿಂದಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಅಪಾರ ಯಶಸ್ಸನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ಲಾಭದ ನಿರೀಕ್ಷೆಯಲ್ಲಿದೆ. ಈ ಸಮಯದಲ್ಲಿ ನೀವು ನಿಮ್ಮ ತಂದೆಯಿಂದ ಬೆಂಬಲವನ್ನು ಪಡೆಯುತ್ತೀರಿ.
ತುಲಾ ರಾಶಿ
ನಿಮ್ಮ 11ನೇ ಮನೆಯ ಅಧಿಪತಿಯಾಗಿರುವ ಸೂರ್ಯನು ನಿಮ್ಮ ನಾಲ್ಕನೇ ಮನೆಗೆ ಸಂಚರಿಸಲಿದೆ. ಈ ಅವಧಿಯಲ್ಲಿ ನೀವು ಕೆಲವು ಮಾನಸಿಕ ಒತ್ತಡವನ್ನು ಎದುರಿಸಬಹುದು. ಈ ಸಮಯದಲ್ಲಿ ನಿಮಗೆ ಕೆಲಸದ ಸ್ಥಳದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಬಹುದು. ಸೂರ್ಯನ ಕಾರಣ, ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರಿಗೆ ಲಾಭವನ್ನು ನಿರೀಕ್ಷಿಸಲಾಗಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಸಮಯವು ಅನುಕೂಲಕರವಾಗಿರುತ್ತದೆ.
ವೃಶ್ಚಿಕ ರಾಶಿ
ನಿಮ್ಮ 10ನೇ ಮನೆಯ ಅಧಿಪತಿಯಾಗಿರುವ ಸೂರ್ಯ ಮೂರನೇ ಮನೆಗೆ ಸಂಚರಿಸಲಿದೆ. ಈ ಸಾಗಣೆಯಿಂದಾಗಿ, ನೀವು ಪ್ರಯಾಣದಿಂದ ಪ್ರಯೋಜನ ಪಡೆಯುತ್ತೀರಿ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಅವಧಿ ಅನುಕೂಲಕರವಾಗಿದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರು ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು.
ಧನು ರಾಶಿ
ಧನು ರಾಶಿಯವರಿಗೆ ಸೂರ್ಯ 9ನೇ ಮನೆಯ ಅಧಿಪತಿ, ಇದೀಗ 2ನೇ ಮನೆಗೆ ಸಂಚರಿಸಲಿದೆ. ಸೂರ್ಯನ ಈ ಸಂಚಾರದಿಂದಾಗಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಚಾಲನೆ ಮಾಡುವಾಗ ಸಂಪೂರ್ಣವಾಗಿ ಜಾಗರೂಕರಾಗಿರಬೇಕು. ನಿಗೂಢ ಜ್ಞಾನದ ಕಡೆಗೆ ನಿಮ್ಮ ಆಕರ್ಷಣೆ ಹೆಚ್ಚಾಗಬಹುದು. ಈ ಸಮಯದಲ್ಲಿ, ನೀವು ಯಾವುದೇ ರೀತಿಯ ಕೌಟುಂಬಿಕ ವಿವಾದಗಳಿಂದ ದೂರವಿರಬೇಕು. ಸೂರ್ಯ ದೇವರ ಈ ಸಂಕ್ರಮಣದಲ್ಲಿ, ನೀವು ಹಣವನ್ನು ಹೂಡಿಕೆ ಮಾಡಲು ಉತ್ತಮ ಅವಕಾಶಗಳನ್ನು ಪಡೆಯಬಹುದು, ಅದರ ಲಾಭವನ್ನು ನೀವು ಪಡೆದುಕೊಳ್ಳಬೇಕು.
ಮಕರ ರಾಶಿ
8ನೇ ಮನೆಯ ಅಧಿಪತಿಯಾಗಿರುವ ಸೂರ್ಯ ನಿಮ್ಮ ಲಗ್ನ ಮನೆಗೆ ಸಂಚರಿಸಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಬಹುದು. ನಿಮ್ಮ ತಂದೆಯೊಂದಿಗೆ ನಿಮಗೆ ಭಿನ್ನಾಭಿಪ್ರಾಯಗಳಿರಬಹುದು. ಮೂಳೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಹೆಂಡತಿಯೊಂದಿಗೆ ಅನಗತ್ಯ ಭಿನ್ನಾಭಿಪ್ರಾಯಗಳನ್ನು ಹೊಂದದಂತೆ ಸಲಹೆ ನೀಡಲಾಗುವುದು.
ಕುಂಭ ರಾಶಿ
ನಿಮ್ಮ 7ನೇ ಮನೆಯ ಅಧಿಪತಿಯಾಗಿರುವ ಸುರ್ಯ 12ನೇ ಮನೆಗೆ ಸಾಗಲಿದೆ. ಈ ಸಮಯದಲ್ಲಿ ನಿಮ್ಮ ಬೆಲೆಬಾಳುವ ವಸ್ತುಗಳನ್ನು ನೀವು ಜಾಗ್ರತೆವಹಿಸಬೇಕು. ನಿಮ್ಮ ಕೆಲಸದಲ್ಲಿ ನೀವು ಬಯಸುತ್ತಿರುವ ಪ್ರಗತಿ ಕಾಣಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಸರ್ಕಾರಿ ಉದ್ಯೋಗಗಳಿಗೆ ತಯಾರಿ ಮಾಡುವ ಜನರು ಸ್ವಲ್ಪ ತೊಂದರೆ ಅನುಭವಿಸಬಹುದು. ಈ ಸಾಗಣೆಯ ಸಮಯದಲ್ಲಿ, ಆಮದು ಮತ್ತು ರಫ್ತಿನಲ್ಲಿ ತೊಡಗಿರುವ ಉದ್ಯಮಿಗಳು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮೀನ ರಾಶಿ
ನಿಮ್ಮ 6ನೇ ಮನೆಯ ಅಧಿಪತಿಯಾಗಿರುವ ಸುರ್ಯ 11ನೇ ಮನೆಗೆ ಸಾಗಲಿದೆ. ಈ ಸಂಕ್ರಮಣದಿಂದ ಮೀನ ರಾಶಿಯವರ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸೂರ್ಯನ ಪ್ರಭಾವದಿಂದಾಗಿ, ನಿಮ್ಮ ಶತ್ರುಗಳು ನಾಶವಾಗುತ್ತಾರೆ, ನೀವು ಪ್ರಯಾಣದಿಂದ ಲಾಭ ಪಡೆಯುತ್ತೀರಿ, ವ್ಯಾಪಾರ ವರ್ಗಕ್ಕೆ ಲಾಭವಾಗುತ್ತದೆ. ಕೆಲಸ ಮಾಡುವವರು ಯಶಸ್ಸನ್ನು ಪಡೆಯುತ್ತಾರೆ, ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯವು ಅನುಕೂಲಕರವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











