Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
300 ವರ್ಷಗಳ ಮಹಾಶಿವರಾತ್ರಿಗೆ ರೂಪುಗೊಂಡಿದೆ ಈ ಯೋಗ: ಈ ಸಮಯದಲ್ಲಿ ಪ್ರಾರಂಭಿಸಿದ ಕೆಲಸದಲ್ಲಿ ಯಸಸ್ಸು ಪ್ರಾಪ್ತಿ
2024ರಲ್ಲಿ ಮಹಾಶಿವರಾತ್ರಿಯನ್ನು ಮಾರ್ಚ್ 8ರಂದು ಆಚರಿಸಲಾಗುವುದು. ಈ ವರ್ಷ ಮಹಾಶಿವರಾತ್ರಿಗೆ ಮೂರು ಪ್ರಮುಖ ಯೋಗಗಳು ಏರ್ಪಟ್ಟಿದೆ, ಸುಮಾರು 300 ವರ್ಷಗಳ ಬಳಿಕ ಇಂಥದ್ದೊಂದು ಯೋಗ ಏರ್ಪಟ್ಟಿದೆ, ಹಾಗಾಗಿ ಈ ಬಾರಿಯ ಶಿವರಾತ್ರಿ ಇನ್ನೂ ವಿಶೇಷವಾಗಿದೆ.
ಈ ವರ್ಷ ಮಹಾಶಿವರಾತ್ರಿಯಂದು ಯಾವೆಲ್ಲಾ ಪ್ರಮುಖ ಯೋಗಗಳು ಉಂಟಾಗಿದೆ, ಏಕೆ ಈ ದಿನ ಮತ್ತಷ್ಟು ವಿಶೇಷವಾಗಿದೆ ಎಂದು ನೋಡೋಣ ಬನ್ನಿ:

300 ವರ್ಷಗಳ ಬಳಿಕ ರೂಪುಗೊಂಡಿದೆ ವಿಶೇಷ ಯೋಗಗಳು
ಈ ದಿನ ಸರ್ವರ್ಥ ಸಿದ್ಧಿ ಯೋಗದೊಂದಿಗೆ ಶಿವಯೋಗ ರೂಪುಗೊಂಡಿದೆ, ಅಲ್ಲದೆ ಕಾಕತಾಳೀಯ ಎಂಬಂತೆ ಇದೇ ದಿನ ಶುಕ್ರ ಪ್ರದೋಷ ವ್ರತ ಕೂಡ ಇದೇ ದಿನ ಬಂದಿದೆ. ಈ ಯೋಗದ ಸಮಯದಲ್ಲಿ ನೀವು ಯಾವುದಾದರು ಹೊಸ ಕೆಲಸ ಪ್ರಾರಂಭಿಸಿದರೆ ಅದು ತುಂಬಾ ಶುಭವಾಗಿದೆ ಎಂದು ಹೇಳಲಾಗುವುದು, ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಹಾಗಾಗಿ ಏನಾದರೂ ಉದ್ಯಮ ಅಥವಾ ವ್ಯವಹಾರ ಪ್ರಾರಂಭಿಸಲು ಬಯಸಿದ್ದರೆ ಈ ದಿನ ಶುರು ಮಾಡಿ, ನಿಮ್ಮ ವ್ಯವಹಾರದಲ್ಲಿ ಈ ಯೋಗದ ಪ್ರಭಾವದಿಂದಾಗಿ ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
300 ವರ್ಷಗಳ ಬಳಿ ಇಂಥದ್ದೊಂದು ಮಹಾ ಯೋಗ ಏರ್ಪಟ್ಟಿದೆ
ಈ ಯೋಗ ಎಲ್ಲಾ ಸಮಯದಲ್ಲಿ ಉಂಟಾಗುವುದಿಲ್ಲ, ಈ ರೀತಿಯ ಯೋಗ ಉಂಟಾಗಿ 300 ವರ್ಷಗಳು ಕಳೆದಿದೆ, ಈ ವರ್ಷದ ಮಹಾಶಿವರಾತ್ರಿಯಂದು ಅಂಥದ್ದೊಂದು ಯೋಗ ಕೂಡಿ ಬಂದಿದೆ. ಈ ಅವಧಿಯಲ್ಲಿ ಶಿವ ಮಂತ್ರಗಳನ್ನು ಪಠಣೆ ಮಾಡುವುದರಿಂದ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಶಿವಯೋಗ ಮಾರ್ಚ್ 7 ಮಧ್ಯರಾತ್ರಿ 12:46ರಿಂದ ಶಿವಯೋಗ ಉಂಟಾಗಲಿದೆ. ಸರ್ವರ್ಥ ಸಿದ್ಧಿ ಯೋಗ ಬೆಳಗ್ಗೆ 06:38ರಿಂದ 10:41ರವರೆಗೆ ಇರಲಿದೆ.
ವಿಶೇಷ ಯೋಗಗಳ ಸಂಯೋಗ
ಮಹಾ ಶಿವರಾತ್ರಿಯಂದು ಶಿವ ಯೋಗ, ಶ್ರವಣ ನಕ್ಷತ್ರ ಜೊತೆಗೆ ಸರ್ವರ್ಥ ಸಿದ್ಧಿ ಯೋಗ ಏರ್ಪಟ್ಟಿದೆ. ಮಹಾಶಿವರಾತ್ರಿಯ ಉಪವಾಸವನ್ನು ಮಾರ್ಚ್ 9 ಸಿದ್ಧಿ ಯೋಗದಲ್ಲಿ ಮುರಿಯಲಾಗುವುದು. ಈ ಯೋಗ ಏರ್ಪಟ್ಟಿದ್ದರಿಂದ ಈ ವರ್ಷ ಉಪವಾಸವಿದ್ದು, ಶಿವ ಮಂತ್ರಗಳನ್ನು ಪಠಣೆ ಮಾಡಿದರೆ ಹೆಚ್ಚಿನ ಫಲ ಸಿಗಲಿದೆ.
ಈ ದಿನದಂದು ಏರ್ಪಟ್ಟಿರುವ ವಿಶೇಷ ಯೋಗಗಳು
ಶಿವ ಯೋಗ
ಶಿವನ ನಾಮ ಪಠಣೆಗೆ ಶ್ರೇಷ್ಠವಾದ ದಿನ. ಶಿವ ಯೋಗದಲ್ಲಿ ಮನೆಯಲ್ಲಿ ಶುಭ ಯೋಗ ಮಾಡಿದರೆ ಒಳ್ಳೆಯದು.
ಸಿದ್ಧಿ ಯೋಗ
ಸಿದ್ಧಿ ಯೋಗ ಗಣೇಶನೊಗೆ ಸಂಬಂಧಿಸಿದೆ. ಈ ಯೋಗದಲ್ಲಿ ನೀವು ಪೂಜೆ ಮಾಡುವುದರಿಂದ ವಿಘ್ನ ನಿವಾರಕ ನಿಮ್ಮೆಲ್ಲಾ ಸಮಸ್ಯೆ ದೂರ ಮಾಡುತ್ತದೆ. ಈ ಅವಧಿಯಲ್ಲಿ ಗಣೇಶ ಹಾಗೂ ಶಿವನ ಮಂತ್ರಗಳನ್ನು ಪಠಿಸಿ.
ಶ್ರವಣ ನಕ್ಷತ್ರ
ಶನಿ ದೇವ ಶ್ರವಣ ನಕ್ಷತ್ರದ ಅಧಿಪತಿ. , ಈ ನಕ್ಷತ್ರದಲ್ಲಿ ಯಾವುದೇ ಕಾರ್ಯ ಮಾಡಿದರೆ ಶುಭವಾಗುವುದು ಎಂದು ಹೇಳಲಾಗುವುದು. ಈ ದಿನ ಮನೆಗೆ ಯಾವುದಾದರೂ ವಸ್ತುಗಳನ್ನು ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
ಶುಕ್ರ ಪ್ರದೋಷ ಮತ್ತು ಮಹಾಶಿವರಾತ್ರಿ ಒಂದೇ ದಿನ ಬಂದಿದೆ
ಮಾರ್ಚ್‌ನಲ್ಲಿ ಪ್ರದೋಷ ವ್ರತ ಮಾರ್ಚ್ 8ಕ್ಕೆ ಬಂದಿದೆ. ಇದೇ ದಿನ ಮಹಾ ಶಿವರಾತ್ರಿ, ಪ್ರದೋಷ ವ್ರತ ಕೂಡ ಶಿವನ ಆರಾಧನೆಗೆ ತುಂಬಾ ವಿಶೇಷವಾದ ದಿನ. ಇದೀಗ ಎರಡು ಜೊತೆಗೆ ಬಂದಿರುವುದರಿಂದ ಈ ದಿನ ಹೊಸ ವೃತ್ತಿ ಆರಂಭಿಸಲು, ಹೊಸ ಉದ್ಯೋಗ ಮಾಡಲು ಈ ದಿನ ಶುಭವಾಗಿದೆ. ಅಲ್ಲದೆ ಈ ದಿನ ಮನೆಗೆ ಯಾವುದಾದರೂ ಗಾಡಿಗಳನ್ನು ಖರೀದಿಸಲು ಈ ದಿನ ಶುಭವಾಗಿದೆ.
ಮಹಾಶಿವರಾತ್ರಿಯಂದು ಶುಭ ಸಮಯ
ಫಲ್ಗುಣ ಚತುರ್ದಶಿ ತಿಥಿ ಪ್ರಾರಂಭ: ಮಾರ್ಚ್ 8, ರಾತ್ರಿ 09:57
ಫಲ್ಗುಣ ಚತುರ್ದಶಿ ತಿಥಿ ಮುಕ್ತಾಯ: ಮಾರ್ಚ್ 9 ಸಂಜೆ 6:17ರವರೆಗೆ
ಮಹಾಶಿವರಾತ್ರಿ ರಾತ್ರಿ ಪೂಜೆಗೆ ಶುಭ ಸಮಯ: ರಾತ್ರಿ12:07ರಿಂದ 12:56ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications