Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರ-ಮಂಗಳನ ಸಂಯೋಗದಿಂದ ಮಹಾಲಕ್ಷ್ಮಿ ಯೋಗ: ಯಾರಿಗೆಲ್ಲಾ ಲಾಭವಿದೆ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ರಾಶಿಗಳು ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳ ತರಲು ಕಾರಣವಾಗಿರುತ್ತದೆ. ಹಾಗೆ ಗ್ರಹಗಳ ಚಲನೆಯು ಕೂಡ ನಮ್ಮ
ರಾಶಿಯಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಂದು ಗ್ರಹವು ನಿಗದಿತ ಸಮಯದಲ್ಲಿ ಬೇರೆ ರಾಶಿಯಲ್ಲಿ ಚಲಿಸುತ್ತವೆ. ಯಾವ ರಾಶಿಯಲ್ಲಿ ಯಾವ ಗ್ರಹಗಳು ಚಲಿಸಲಿವೆಯೋ ಆಗೆಲ್ಲಾ ಹೊಸ ರೀತಿಯ ಯೋಗಗಳು, ಸಂಕಷ್ಟ ಎದುರಾಗುವುದನ್ನು ನಾವು ನೋಡಬಹುದಾಗಿದೆ.
ಈಗ ಚಂದ್ರ ತನ್ನ ಚಲನೆಯ ರಾಶಿ ಬದಲಿಸುತ್ತಿದ್ದಾನೆ. ಪ್ರಸ್ತುತ ಚಂದ್ರ ಮಂಗಳನಲ್ಲಿ ಸಂಯೋಗವಾಗಿದ್ದು ಇದು ಮಹಾಲಕ್ಷ್ಮಿ ಯೋಗಕ್ಕೆ ಕಾರಣವಾಗುತ್ತಿದೆ. ಈ ಯೋಗದಿಂದಾಗಿ ಹಲವು ರಾಶಿಯವರಲ್ಲಿ ಲಾಭದಾಯಕ ಬೆಳವಣಿಗಗಳ ನೋಡಬಹುದು. ಈ ಯೋಗದಿಂದಾಗಿ ಕೆಲವು ರಾಶಿ ಜನರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಮಂಗಳ ಗ್ರಹವು ಸದ್ಯ ಕರ್ಕ ರಾಶಿಯಲ್ಲಿ ಚಲಿಸುತ್ತಿದ್ದು, ಜನವರಿ 21ರಂದು ಮಿಥುನ ರಾಶಿಗೆ ಚಲಿಸುತ್ತಿದೆ. ಹಾಗೆ ಸರಿ ಸುಮಾರು 2 ವರ್ಷ ಮಿಥುನ ರಾಶಿಯಲ್ಲಿಯೇ ಉಳಿಯಲಿದೆ. ಆದ್ರೆ ಫೆಬ್ರವರಿಯಲ್ಲಿ ಚಂದ್ರನು ಮಿಥುನ ರಾಶಿಗೆ ಚಲಿಸಲಿರುವುದು ಮಂಗಳ ಹಾಗೂ ಚಂದ್ರನ ಸಂಯೋಗವಾಗುತ್ತಿದೆ. ಹೀಗಾಗಿ ಇದು ಮಹಾ ಲಕ್ಷ್ಮಿ ಯೋಗಕ್ಕೆ ಕಾರಣವಾಗುತ್ತಿದೆ.
ಫೆಬ್ರವರಿ 8 ರಂದು ಮಿಥುನ ರಾಶಿಯಲ್ಲಿ ಮಂಗಳ ಹಾಗು ಚಂದ್ರನ ಸಂಯೋಗವಾಗುತ್ತಿದೆ. ಇದರಿಂದಾಗಿ ಎಲ್ಲಾ 12 ರಾಶಿಗಳಿಗೂ ಲಾಭದಾಯಕವಾಗುತ್ತಿದೆ. ಹಾಗೆ ಈ ಮಹಾಲಕ್ಷ್ಮಿ ಯೋಗ ಈ ಸಮಯದಲ್ಲಿ ಉಂಟಾಗುತ್ತಿದೆ. ಇದು 18 ತಿಂಗಳ ಬಳಿಕ ಉಂಟಾಗುತ್ತಿರುವ ಅಪರೂಪದ ಯೋಗವಾಗಿದೆ. ಹೀಗಾಗಿ ನಾವಿಂದು ಈ ಯೋಗದಿಂದ ಯಾವ 3 ರಾಶಿಯವರಿಗೆ ಅತ್ಯಧಿಕ ಲಾಭವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಮಹಾಲಕ್ಷ್ಮಿ ರಾಜಯೋಗವು ಈ ಕರ್ಕ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನೀವು ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದರೆ ಅಥವಾ ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ನೀವು ಅಂದುಕೊಂಡಿರುವಂತೆಯೇ ನೆರವೇರಲಿದೆ. ವ್ಯಾಪಾರಸ್ಥರು ಭವಿಷ್ಯದ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರ ಅವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಮನೆಯಲ್ಲಿ ನಿಮ್ಮ ನಿರ್ಧಾರಗಳಿಗೆ ಮನ್ನಣೆ ಸಿಗಲಿದೆ. ಹಣಕಾಸು ವಿಚಾರದಲ್ಲಿ ನೀವು ಮತ್ತಷ್ಟು ಪ್ರಗತಿ ಕಾಣಲಿದ್ದೀರಿ. ಹಾಗೆ ಹಲವು ರೀತಿಯಲ್ಲಿ ನೀವು ಆದಾಯ ಗಳಿಸುವ ಅವಕಾಶಗಳ ಪಡೆಯುತ್ತೀರಿ. ನಿಮ್ಮ ದಾಂಪತ್ಯ ಜೀವನದಲ್ಲಿ ಶಾಂತಿ ನೆಲಸಲಿದೆ. ಹಾಗೆ ಸಂಬಂಧಗಳ ವೃದ್ಧಿ ನೋಡಬಹುದಾಗಿದೆ.
ಸಿಂಹ ರಾಶಿ
ಚಂದ್ರ ಮತ್ತು ಮಂಗಳನ ಸಂಯೋಗದಿಂದ ರೂಪುಗೊಂಡ ಮಹಾಲಕ್ಷ್ಮಿ ಯೋಗವು ಸಿಂಹ ರಾಶಿಯ ಜನರಲ್ಲಿ ಅನೇಕ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಆದಾಯ ದುಪ್ಪಟ್ಟಾಗಬಹುದು. ಈ ಸಮಯದಲ್ಲಿ ನೀವು ಆರ್ಥಿಕ ವಿಚಾರದಲ್ಲಿ ದೃಢವಾಗುತ್ತೀರಿ, ಬಹಳ ಕಾಲದಿಂದ ನೀವು ಬಯಸದ್ದ ಹಣಕಾಸು ಸಹಾಯ ಒಲಿಯಲಿದೆ. ಸಾಲ ಮರುಪಾವತಿಯಾಗುವ ಸಾಧ್ಯತೆ ಹೆಚ್ಚಾಗಿಯೇ ಇದೆ. ನಿಮ್ಮ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿಯಾಗಲಿದೆ. ಹಲವು ಸಮಸ್ಯೆಗಳಿಂದ ನೀವು ವಿಮುಕ್ತರಾಗುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯವರ 5ನೇ ಮನೆಯಲ್ಲಿ ಮಹಾಲಕ್ಷ್ಮಿ ಯೋಗವು ಉಂಟಾಗುತ್ತಿದೆ. ಹೀಗಾಗಿ ಕುಂಭ ರಾಶಿಯವರಲ್ಲಿ ಆರ್ಥಕ ಪ್ರಗತಿ ನೋಡಬಹುದು. ಅವಿವಾಹಿತರಲ್ಲಿ ಮದುವೆ ಯೋಗಕ್ಕೆ ಇದು ಕಾರಣವಾಗುತ್ತದೆ. ನಿಮ್ಮ ಜವಾಬ್ದಾರಿಗಳು ಈ ಸಮಯದಲ್ಲಿ ಹೆಚ್ಚಾಗಬಹುದು. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಉತ್ತಮ ಲಾಭ ನೋಡಬಹುದು. ಸಣ್ಣ ಅಂಗಡಿ ಹೊಂದಿರುವವರು, ಸ್ವಂತ ವ್ಯಾಪಾರ, ವ್ಯವಹಾರಸ್ಥರು ಅಧಿಕ ಲಾಭ ನೋಡಬಹುದು. ಬಹಳ ಹಳೆಯ ಸಮಸ್ಯೆಗಳು ನಿವಾರಣೆಯಾಗಲಿವೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಾಗೆ ನೀವು ಮಾಡಬೇಕಿದ್ದ ಕೆಲಸಗಳನ್ನು ಅರ್ಧಕ್ಕೆ ಬಿಟ್ಟಿದ್ದರೆ ಆ ಕೆಲಸಗಳು ಪೂರ್ಣವಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











