Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Mars-Moon Mahalakshmi Rajyog: ಮಂಗಳ-ಚಂದ್ರನಿಂದ ಮಹಾಲಕ್ಷ್ಮೀ ರಾಜಯೋಗ: 3 ರಾಶಿಯವರ ಅದೃಷ್ಟ ಬದಲು
ವೈದಿಕ ಜ್ಯೋತಿಷ್ಯದ ಪ್ರಕಾರ ಎಲ್ಲಾ 9 ಗ್ರಹಗಳು ಕೂಡ ತಮ್ಮ ರಾಶಿ ಬದಲಾಯಿಸಲಿವೆ. ಈ ರೀತಿ ರಾಶಿ ಬದಲಾವಣೆಯು ಬೇರೆ ರಾಶಿಗಳ ಮೇಲೆ ಪರಿಣಾಮ ಬೀರುವುದು ಕೂಡ ನಾವು ನೋಡಬಹುದು. ಹಾಗೆ ಎಲ್ಲಾ ಗ್ರಹಗಳ ಬದಲಾವಣೆಗಳು ಹಲವು ರೀತಿಯ ಯೋಗಕ್ಕೆ ಕಾರಣವಾಗುವುದು ಕೂಡ ನೋಡಬಹುದು. ಎರಡು ಗ್ರಹಗಳ ಸಂಯೋಗವು ಅಪರೂಪದ ಯೋಗಗಳಿಗೆ ಕಾರಣವಾಗುವುದು ಸಹ ನೋಡಬಹುದು.
ಈಗ ಮಂಗಳ ಗ್ರಹವು ತನ್ನ ರಾಶಿ ಬದಲಾಯಿಸುತ್ತಿರುವುದು ಕೂಡ ಅಪರೂಪದ ಯೋಗ ರೂಪುಗೊಳ್ಳಲು ಕಾರಣವಾಗುತ್ತಿದೆ. ಮಂಗಳನು ಜೂನ್ 7ರಂದು ಸಿಂಹ ರಾಶಿ ಪ್ರವೇಶಿಸಿದ್ದಾನೆ. ಆದ್ರೆ ಚಂದ್ರ ಜೂನ್ 9ರಂದು ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾನೆ. ಇದು ಎರಡು ಗ್ರಹಗಳ ನೇರ ನೋಟಕ್ಕೆ ಕಾರಣವಾಗಲಿದೆ. ಈ ಕೋನದಲ್ಲಿ ಎರಡು ಗ್ರಹಗಳ ಚಲನೆಯಿಂದ ಹೊರ ಯೋಗ ರೂಪುಗೊಳ್ಳಲಿದೆ.

ಮಂಗಳ ಹಾಗೂ ಚಂದ್ರನ ಈ ರಾಶಿ ಬದಲಾವಣೆಯು ಮಹಾಲಕ್ಷ್ಮಿ ರಾಜಯೋಗಕ್ಕೆ ಕಾರಣವಾಗಲಿದೆ. ಇದು ಸಂಪತ್ತು, ಆರ್ಥಿಕ ಪ್ರಗತಿ, ಅಭಿವೃದ್ಧಿ, ಆರೋಗ್ಯ ವೃದ್ಧಿಯಂತಹ ಸಮಯ ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಮಹಾಲಕ್ಷ್ಮೀ ರಾಜಯೋಗದಿಂದಾಗಿ ಯಾವ ರಾಶಿಯವರಿಗೆ ಲಾಭದಾಯಕ ದಿನವಾಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ಮಹಾಲಕ್ಷ್ಮೀ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಅದೃಷ್ಟ ತರಲಿದೆ. ಇದು ಮುಖ್ಯವಾಗಿ ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿಗೆ ಕಾರಣವಾಗಲಿದೆ. ನೀವು ಉದ್ಯೋಗ ಬದಲಿಸುವುದು ಅಥವಾ ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಬಹಳ ಅನುಕೂಲಕರ ಪರಿಸ್ಥಿತಿಗಳು ಇರಲಿದೆ. ಕಚೇರಿ ಒತ್ತಡಗಳು ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ. ಸರ್ಕಾರಿ ಉದ್ಯೋಗಿಗಳಲ್ಲಿ ಅಡೆತಡೆಗೆ ಕಾರಣವಾಗಿದ್ದ ಬಡ್ತಿ, ವರ್ಗಾವಣೆಯಂತಹ ಕೆಲಸದಲ್ಲಿ ಶುಭಕರ ಫಲಿತಾಂಶ ಇರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ನೋಡುತ್ತೀರಿ. ಇದರಿಂದ ನಿಮ್ಮ ಮಾನಸಿಕ ಸ್ಥಿತಿ ಕೂಡ ಸುಧಾರಿಸಲಿದೆ. ಉದ್ಯಮಿಗಳಿಗೆ ಇದು ಲಾಭದಾಯಕ ದಿನವಾಗುತ್ತದೆ.
ಮಕರ ರಾಶಿ
ಮಕರ ರಾಶಿಯವರು ಈ ಮಹಾಲಕ್ಷ್ಮೀ ರಾಜಯೋಗದಿಂದ ದಿಢೀರ್ ಲಾಭ ನೋಡಬಹುದು. ನೀವು ವ್ಯಾಪಾರಿಗಳಾಗಿದ್ದರೆ ಅಥವಾ ನಿತ್ಯದ ವ್ಯಾಪಾರ ನಂಬಿ ಬದುಕುತ್ತಿದ್ದರೆ ಈ ಸಮಯದಲ್ಲಿ ಲಾಭಾದಾಯಕ ದಿನಗಳು ಕಾದಿರಲಿವೆ. ನಿಮ್ಮ ಬಯಕೆಯಂತೆ ಅಗತ್ಯ ವಸ್ತುವೊಂದನ್ನು ಖರೀದಿಗೆ ಸಕಾಲವಾಗಿದೆ. ಪ್ರಮುಖ ಕೆಲಸಗಳಿಗೆ ಬೇಕಿದ್ದ ಹಣಕಾಸು ನೆರವು ಸಿಗಲಿದೆ. ಬ್ಯಾಂಕಿಂಗ್ ವ್ಯವಹಾರಗಳು ಸುಖಾಂತ್ಯವಾಗಲಿದೆ. ಈ ಸಮಯದಲ್ಲಿ ಆಧ್ಯಾತ್ಮಿಕ ವಿಚಾರಗಳ ಕಡೆಗೂ ಒಲವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸುದ್ದಿ ತರುವ ಸಮಯವಾಗಿದೆ. ದಾಂಪತ್ಯದಲ್ಲಿ ಯಾವುದೇ ಸಮಸ್ಯೆಗಳಿದ್ದರು ಈ ಸಮಯದಲ್ಲಿ ನಿವಾರಣೆಯಾಗಲಿದ್ದು, ಸಂತಸದ ದಿನಗಳ ನೋಡುವಿರಿ. ಮಕ್ಕಳ ವಿಚಾರದಲ್ಲೂ ಶುಭವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಮಹಾಲಕ್ಷ್ಮೀ ರಾಜಯೋಗವು ತುಂಬಾ ಅದ್ಭುತವಾದ ಲಾಭಗಳಿಗೆ ಕಾರಣವಾಗಲಿದೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಯೋಗದಂತಹ ಅಥವಾ ಶುಭ ಕಾರ್ಯಗಳ ಯೋಗವಿದೆ. ನಿಮ್ಮ ಮನೆ, ವಾಹನ ಸಂಬಂಧಿಸಿದ ವಿಚಾರದಲ್ಲಿ ಸಂತಸದ ದಿನಗಳು ಬರಲಿವೆ. ಪಿತ್ರಾರ್ಜಿತ ಸ್ವಂತ ಉದ್ಯೋಗದಲ್ಲಿರುವವರು ಅಧಿಕ ಲಾಭ ನೋಡುವ ಸಮಯವಿದು. ಮನೆಯ ಹಿರಿಯರಲ್ಲಿ ಇದ್ದ ಅನಾರೋಗ್ಯ ವಿಚಾರದಿಂದ ಉಂಟಾದ ಒತ್ತಡ ಕಡಿಮೆಯಾಗುವ ಸಮಯವಿದು. ಆಸ್ತಿ ಖರೀದಿಗೆ ನೀವು ಮುಂದಾಗಬಹುದು. ಹೊಸ ಆರಂಭಗಳು ಉತ್ತಮ ಪ್ರತಿಫಲಗಳಿಗೆ ಕಾರಣವಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications