Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರನಿಂದ ಮಹಾಲಕ್ಷ್ಮಿ ರಾಜಯೋಗ: ಈ ರಾಶಿಯವರಲ್ಲಿ ಹಣದ ಸಮಸ್ಯೆಗೆ ಕಡಿವಾಣ..ದುಂದು ವೆಚ್ಚ ಅಂತ್ಯ!
ಜ್ಯೋತಿಷ್ಯದ ಪ್ರಕಾರ ಚಂದ್ರನು ಒಂಬತ್ತು ಗ್ರಹಗಳಲ್ಲಿ ವೇಗವಾಗಿ ಚಲಿಸುವ ಗ್ರಹ. ಎಲ್ಲಾ ಗ್ರಹಗಳಲ್ಲೂ ಚಂದ್ರ ಚಲಿಸುವುದು ನೋಡಬಹುದು. ಅದ್ರಲ್ಲೂ ಚಂದ್ರನು ಯಾವುದೇ ರಾಶಿಯಲ್ಲಿ ಚಲಿಸುವಾಗ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಚಂದ್ರನು ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ.
ಇನ್ನು ಚಂದ್ರನ ಚಲನೆಯ ಕಾರಣದಿಂದಾಗಿ ರೂಪುಗೊಂಡ ಯೋಗಗಳು ಬಹುತೇಕ ಶುಭವನ್ನೇ ತರಲಿವೆ. ಹಾಗೆ ಇದೆ ಸೆಪ್ಟೆಂಬರ್ 24ರಂದು ಚಂದ್ರನು ಮಂಗಳನೊಂದಿಗೆ ಸಂಯೋಗವಾಗುತ್ತಿದ್ದಾನೆ. ಈ ಎರಡು ಗ್ರಹಗಳು ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಇದು ಹಲವು ರೀತಿಯಲ್ಲಿ ಶುಭಕರ ಲಾಭಗಳಿಗೆ ಕಾರಣವಾಗುತ್ತಿದೆ.

ಮಂಗಳ ಮತ್ತು ಚಂದ್ರನ ಸಂಯೋಜನೆಯಿಂದಾಗಿ, ಬಹಳ ಶುಭವಾದ ಮಹಾಲಕ್ಷ್ಮಿ ರಾಜ ಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವನ್ನು ಮಹಾಭಾಗ್ಯ ಯೋಗ ಎಂದೂ ಕೂಡ ಕರೆಯಲಾಗುತ್ತದೆ. ಈ ಯೋಗವು ಹಲವು ರಾಶಿಗಳಿಗೆ ಶುಭ ಯೋಗಕ್ಕೆ ಕಾರಣವಾಗಲಿದೆ. ಹಾಗಾದ್ರೆ ನಾವಿಂದು ಈ ಯೋಗದಿಂದಾಗಿ ಯಾರಿಗೆ ಲಾಭವಾಗುತ್ತಿದೆ ತಿಳಿಯೋಣ.
ಈ ಯೋಗದಿಂದಾಗಿ ಕೆಲವು ರಾಶಿ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಜೊತೆಗೆ ನಿಮ್ಮ ಹಲವು ರೀತಿಯ ದೈನಂದಿನ ಸವಾಲುಗಳು, ಹಣಕಾಸು ಸಮಸ್ಯೆಗಳು ನಿವಾರಣೆಯ ಸಂಭವವಿದೆ. ಹಾಗಾದ್ರೆ ಈ ಸಮಯ ಯಾರಿಗೆ ಲಾಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯ 3ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ಈ ರಾಶಿ ಜನರ ಜೀವನದ ಹಲವು ಕ್ಷೇತ್ರಗಳಲ್ಲಿ ಲಾಭಗಳು ದೊರೆಯುತ್ತವೆ. ಕೆಲವರು ದೂರ ಪ್ರಯಾಣ ಮಾಡಬೇಕಾಗಬಹುದು. ಅವರಿಗೆ ಉತ್ತಮ ಭೌತಿಕ ಸುಖಗಳು ಸಹ ಸಿಗಬಹುದು. ಉದ್ಯೋಗಾಕಾಂಕ್ಷಿಗಳು ಉತ್ತಮ ಉದ್ಯೋಗವನ್ನು ಪಡೆಯುತ್ತಾರೆ. ನೀವು ನಿತ್ಯದ ಸಂಬಳ ನಂಬಿ ಬದುಕುವ ಮಂದಿಯಾಗಿದ್ದರೆ ನಿಮಗೆ ಉಳಿತಾಯವಾಗಿ ಒಂದಿಷ್ಟು ಹಣ ಉಳಿಯಬಹುದು. ಬಹಳ ಹಿಂದಿನಿಂದಲೂ ಖರೀದಿಸಬೇಕೆಂದು ಬಯಸಿರುವ ದೊಡ್ಡ ವಸ್ತುವೊಂದನ್ನು ಮನೆಗೆ ತರಬಹುದು. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ.
ತುಲಾ ರಾಶಿ
ತುಲಾ ರಾಶಿಯ ಮೊದಲ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಈ ರಾಶಿ ಜನರಿಗೆ ಐಷಾರಾಮಿ ಜೀವನ ಮಾಡುವ ಸಂಭವ ಅಧಿಕವಾಗುತ್ತಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನಿರುದ್ಯೋಗಿಗಳಿಗೆ ವೃತ್ತಿ ಜೀವನ ಆರಂಭಿಸುವ ಸಾಧ್ಯತೆ ಇರಲಿದೆ. ಅವಿವಾಹಿತರಲ್ಲಿ ಉಳಿತಾಯ ಹೆಚ್ಚಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಹಾಗೆ ನಿಮಗೆ ಸೇರಬೇಕಿದ್ದ ವಸ್ತು ನಿಮ್ಮ ಕೈ ಸೇರಲಿದೆ. ಹಣಕಾಸು ಸಮಸ್ಯೆಯ ಕಾರಣಕ್ಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಮಾಡುವಿರಿ.
ಮಕರ ರಾಶಿ
ಮಕರ ರಾಶಿಯ 10ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿ ಜನರಿಗೆ ಉತ್ತಮ ಪ್ರಯೋಜನಗಳ ಪಡೆಯಲಿದ್ದೀರಿ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ನೆಮ್ಮದಿ ತರುವ ಅವಕಾಶ ಹುಡುಕಿ ಬರಬಹುದು. ಉದ್ಯಮಿಗಳಿಗೆ ಬಹಳ ದೊಡ್ಡ ಲಾಭವಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಾಲದ ಪ್ರಮಾಣ ಇಳಿಕೆಯಾಗಲಿದೆ. ಆಪ್ತರ ಜೊತೆಗೆ ನೀವು ಉತ್ತಮ ಸಮಯ ಕಳೆಯುತ್ತೀರಿ. ಸಂಬಂಧದಲ್ಲಿ ಮಾಧುರ್ಯತೆ ಇರಲಿದೆ. ಸಹೋದರರೊಂದಿಗೆ ಯಾವುದಾದರು ಮನಸ್ತಾಪವಿದ್ದರೆ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications