Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರ ಆರಂಭದಲ್ಲಿ ಮಹಾಲಕ್ಷ್ಮಿ ರಾಜಯೋಗ; ಈ 3 ರಾಶಿ ಜನರಲ್ಲಿ ಹಣದ ಮಳೆ, ಧನಾತ್ಮಕ ಯೋಗ
ಜ್ಯೋತಿಷ್ಯದ ಪ್ರಕಾರ 2026 ರ ಆರಂಭವು ತುಂಬಾ ಉತ್ತಮ ಲಾಭಗಳ ತರಲಿವೆಯಂತೆ. ಏಕೆಂದರೆ 2026ರಲ್ಲಿ ಹಲವು ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದರಿಂದ ದೊಡ್ಡ ಲಾಭಗಳ ಪಡೆಯಲು ಹಾಗೆ ಅನೇಕ ರಾಶಿಗಳಲ್ಲಿ ಇದು ಪರಿಣಾಮಕಾರಿ ಬದಲಾವಣೆಗಳ ತರುವುದು ನೋಡಬಹುದು. ಹಾಗೆ ಹೊಸ ವರ್ಷದ ಆರಂಭದಿಂದಲೂ ಶುಭ ಹಾಗೂ ಅಶುಭ ಯೋಗಗಳಿಗೆ ಕಾರಣವಾಗುವುದನ್ನು ಸಹ ನಾವು ನೋಡಬಹುದಾಗಿದೆ.
ಇನ್ನು ಎಲ್ಲಾ ಗ್ರಹಗಳ ಸಂಚಾರವು ಮೇಷದಿಂದ ಮೀನ ರಾಶಿವರೆಗಿನ ಎಲ್ಲರಿಗೂ ಶುಭ ಹಾಗೂ ಅಶುಭವಾಗಿ ಪರಿಣಮಿಸುವುದು ಖಚಿತ. ಹಾಗೆ ಈಗ ಹೊಸ ವರ್ಷದ ಆರಂಭದಲ್ಲೇ ಹಲವು ರಾಜಯೋಗಗಳು ಮತ್ತು ಗ್ರಹಗಳ ಸಂಚಾರದಲ್ಲಿನ ಬದಲಾವಣೆಗಳ ನಾವು ನೋಡಬಹುದು. ಜನವರಿಲ್ಲಿ ನಾವು ಗ್ರಹಗಳ ಅಧಿಪತಿ ಮಂಗಳನ ಸಂಚಾರವು ಹಲವರಿಗೆ ಶುಭದಾಯಕವಾಗುತ್ತಿದೆ.

ಜನವರಿಯಲ್ಲಿ ಮಕರ ಸಂಕ್ರಾಂತಿ ಹಬ್ಬವಿದೆ. ಈ ಸಮಯದಲ್ಲಿ ಮಂಗಳನು ತನ್ನ ಸ್ಥಾನ ಬದಲಾಯಿಸುತ್ತಾನೆ. ಜನವರಿ 18ರಂದು ಮಂಗಳನು ಮಕರ ರಾಶಿಯಲ್ಲಿದ್ದಾಗ ಚಂದ್ರನ ಜೊತೆ ಸೇರಿ ಅದ್ಭುತ ಯೋಗ ರೂಪಿಸಲಿದ್ದಾರೆ. ಮಂಗಳ ಹಾಗೂ ಚಂದ್ರನ ಸಂಯೋಗವು ಮಹಾಲಕ್ಷ್ಮಿ ಯೋಗ ರೂಪಿಸಲು ಕಾರಣವಾಗಲಿದೆ. ಇದರಿಂದಾಗಿ ಹಲವು ರಾಶಿಗಳು ಶುಭ ತರಲಿದೆ.
ಈ ರಾಜಯೋಗದಿಂದಾಗಿ ಕೆಲವು ರಾಶಿ ಜನರಿಗೆ ಸಂಪತ್ತಿನ ದೇವತೆ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹವನ್ನು ಪಡೆಯುತ್ತವೆ ಮತ್ತು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾದ್ರೆ 2026ರ ಜನವರಿಯಿಂದ ಯಾವ ರಾಶಿಯವರಿಗೆ ಧನಾತ್ಮಕ ದಿನಗಳಿವೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 10 ನೇ ಮನೆಯಲ್ಲಿ ಮಂಗಳ ಮತ್ತು ಚಂದ್ರರು ಮಹಾಲಕ್ಷ್ಮಿ ರಾಜಯೋಗ ರೂಪಿಸುತ್ತಾರೆ. ಇದರಿಂದಾಗಿ ಈ ರಾಶಿ ಜನರಿಗೆ ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ನೋಡಬಹುದು. ನಿರುದ್ಯೋಗ ಅಥವಾ ವಾಸ್ತವ್ಯ ಸಂಬಂಧಿತ ವಿಚಾರದಲ್ಲಿ ನಿಮಗೆ ಹಲವು ಸಮಯದಿಂದ ಸಮಸ್ಯೆಗಳಿದ್ದರೆ ದೊಡ್ಡ ಮಟ್ಟದ ಶುಭ ಪಡೆಯಬಹುದು. ನಿಮ್ಮ ಜಬಾವ್ದಾರಿ ಸಂಬಂಧವಾಗಿ ಈ ಸಮಯದಲ್ಲಿ ಧನಾತ್ಮಕ ಬದಲಾವಣೆಗಳಿವೆ. ಉದ್ಯೋಗಿಗಳು ವೇತನ ಸಂಬಂಧಿತ ವಿಚಾರದಲ್ಲಿ ಎದುರಿಸುತ್ತಿದ್ದ ಅಡಚಣೆಗಳು ನಿವಾರಣೆಯಾಗಲಿದೆ. ವಾಹನ ಕುರಿತಾದ ವಿಚಾರಗಳಲ್ಲಿ ನಿಮಗೆ ಶುಭವಿದೆ.
ವೃಷಭ ರಾಶಿ
ವೃಷಭ ರಾಶಿಯ 9ನೇ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗ ನೋಡಬಹುದು. ಈ ಮನೆ ನಿಮ್ಮ ಪ್ರಯಾಣಗಳು, ಹಾಗೆ ಐಷಾರಾಮಿ ಜೀವನ ಕುರಿತಾದ ಮನೆಯಾಗಿದೆ. ಈ ಜನವರಿಯಿಂದ ನಿಮ್ಮ ಹಲವು ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ನಿಮ್ಮ ಮುಂದಿಡಬಹುದು. ವಿದೇಶ ಪ್ರಯಾಣದ ಅವಕಾಶಗಳು ಬರುತ್ತವೆ. ಆಧ್ಯಾತ್ಮಿಕವಾಗಿ ಈ ಸಮಯದಲ್ಲಿ ನಿವು ಬಲವಾಗುತ್ತೀರಿ. ನಿಮ್ಮ ಹಲವು ಸಮಸ್ಯೆಗಳು ಈ ಸಮಯದಲ್ಲಿ ದೊಡ್ಡ ಬದಲಾವಣೆ ನೋಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬೇಡಿಕೆಗಳು ಈಡೇರಿಸಿಕೊಳ್ಳುವಿರಿ. ಉಳಿತಾಯ ಹಾಗೂ ಹೂಡಿಕೆ ಲಾಭವೂ ಇದೆ.
ಧನು ರಾಶಿ
ಧನು ರಾಶಿಯ ಎರಡನೇ ಮನೆಯಲ್ಲಿ ಮಂಗಳ ಮತ್ತು ಚಂದ್ರ ಸಂಯೋಗದಿಂದ ಮಹಾಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ. ಇದು ಅನಿರೀಕ್ಷಿತ ಲಾಭಕ್ಕೆ ಕಾರಣವಾಗುವುದು ನೋಡಬಹುದು. ಆರ್ಥಿಕ ಲಾಭದ ವಿಚಾರಗಳಲ್ಲಿ ನೀವು ಅಂದುಕೊಂಡ ಸಮಯ. ವ್ಯವಹಾರಗಳಲ್ಲಿ ನಿಮ್ಮ ಲಾಭಾಂಶಗಳ ಹೆಚ್ಚು ಮಾಡಿಕೊಳ್ಳಬಹುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರುತ್ತದೆ. ಧೈರ್ಯ ಹೆಚ್ಚಾಗುತ್ತದೆ. ಅವರು ಮಾತಿನ ಮೂಲಕ ಅನೇಕ ಪ್ರಮುಖ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ದಾಂಪತ್ಯ ವಿಚಾರವಾಗಿ ನಿಮಗೆ ಶುಭದಾಯಕ ದಿನಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications